ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ಪಂಚಮ ಸಂಭ್ರಮ ಮತ್ತು ಎಮ್.ಆರ್.ಪಿ.ಎಲ್ ಕೊಡುಗೆಯಾಗಿ ನೀಡಿದ ‘ಹೋಮ್ ಕೇರ್ ವ್ಯಾನ್’ ಮನೆ ಬಾಗಿಲಿಗೆ ಆರೋಗ್ಯ ಸೇವೆ ವಾಹನದ ಉದ್ಘಾಟನಾ ಕಾರ್ಯಕ್ರಮ ಕಟೀಲು ಆಸ್ಪತ್ರೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾದ ಡಾ. ಎಚ್.ಎಸ್ ಬಲ್ಲಾಳ್ (ಉಪ ಕುಲಪತಿಗಳು, ಮಾಹೆ ಮಣಿಪಾಲ) ಮಾತನಾಡಿ, ಕೇವಲ 5 ವರ್ಷದಲ್ಲಿ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಗಣನೀಯವಾದ ಮೈಲುಗಲ್ಲು ಸ್ಥಾಪಿಸಿದೆ. ಮಾದರಿ ಆಸ್ಪತ್ರೆಯಾಗಿ ಜನರ ಮೆಚ್ಚುಗೆ ಗಳಿಸಿದೆ ಎಂದರು. ವೇದಿಕೆಯಲ್ಲಿ ಕಟೀಲು ದೇವಳದ ಅನುವಂಶಿಕ ಪ್ರಧಾನ ಅರ್ಚಕ ವೇದಮೂರ್ತಿ ವೆಂಕಟರಮಣ ಅಸ್ರಣ್ಣ ಆಶೀರ್ವಚನ ನೀಡಿದರು. ಲೆಫ್ಟಿನೆಂಟ್ ಜನರಲ್ ಡಾ. ಎಮ್.ಡಿ ವೆಂಕಟೇಶ್, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ, ಸಂಜೀವನಿ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ್ ರಾವ್, ಡಾ. ಆನಂದ್ ವೇಣುಗೋಪಾಲ್ (ಮಾಹೆ ಮಣಿಪಾಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ),
ಡಾ. ಅರವಿಂದ್ (ಎಚ್.ಆರ್ – ಎಮ್.ಆರ್.ಪಿ.ಎಲ್), ಕೆ.ಎಮ್.ಸಿ ಆಸ್ಪತ್ರೆಯ ಡೀನ್ ಡಾ. ಉಣ್ಣಿ ಕೃಷ್ಣನ್, ಡಾ. ಪ್ರಸನ್ನ ಮಿತ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಾಧಕ ವೈದ್ಯರಿಗೆ ಗೌರವಾರ್ಪಣೆ ನಡೆಯಿತು ಮತ್ತು ಆಸ್ಪತ್ರೆಯೊಂದಿಗೆ ನಿರಂತರ ಸಂಪರ್ಕದೊಂದಿಗೆ ಇದ್ದ ಸ್ಥಳೀಯ ಸಂಘ ಸಂಸ್ಥೆ ಯ ಮುಖ್ಯಸ್ಥರನ್ನು ವೇದಿಕೆ ಯಲ್ಲಿ ಗೌರವಿಸಲಾಯಿತು. ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಾನಂದ ಪ್ರಭು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.