Author: admin

ದಿನಾಂಕ 26/04/2025 ಶನಿವಾರದಂದು N.S.S ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು. ಸಭೆಯನ್ನುದ್ದೇಶಿಸಿ ಸಂಸ್ಥಾಪಕರಲ್ಲಿ ಓರ್ವರಾದ ಡಾ. ಗಣನಾಥ ಶೆಟ್ಟಿ. ಬಿ. ಮಾತನಾಡುತ್ತ N.S.S ಜೀವನ ಪಾಠವನ್ನು ಕಲಿಸುತ್ತದೆ. ಈ ಅನುಭವ ಜೀವನದುದ್ದಕ್ಕೂ ಸಹಕಾರಿಯಾಗುತ್ತದೆ ಎಂದರು. ಇನ್ನೋರ್ವ ಸಂಸ್ಥಾಪಕರಾದ ಅಶ್ವತ್.ಎಸ್.ಎಲ್. N.S.S . ನ ವಿಶೇಷ ಶಿಬಿರಗಳು ಹಾಗೂ ಇತರೆ ಸಮಾಜಮುಖಿ ಸೇವೆಗಳು ನಮ್ಮನ್ನು ಶ್ರೇಷ್ಠ ವ್ಯಕ್ತಿಗಳಾಗಿ ರೂಪಿಸಬಲ್ಲದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥಾಪಕರಲ್ಲಿ ಓರ್ವರು ಹಾಗೂ ಪ್ರಾಂಶುಪಾಲರೂ ಆದ ವಿದ್ವಾನ್ ಗಣಪತಿ ಭಟ್ ಮಾತನಾಡುತ್ತ ಸೇವಾ ಮನೋಭಾವ ಶ್ರೇಷ್ಠವಾದುದ್ದು, ಈ ವ್ಯಕ್ತಿತ್ವ ಬದುಕಿನುದ್ದಕ್ಕೂ ಸಹಕಾರಿ ಎಂದರು. ಕಾರ್ಯಕ್ರಮದಲ್ಲಿ N.S.S ಚಟುವಟಿಕೆಗಳಲ್ಲಿ ಸಾಧನೆ ಗೈದ ಸ್ವಯಂ ಸೇವಕರಿಗೆ ಫಲಕ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಸಂಯೋಜನಾಧಿಕಾರಿ ಉಮೇಶ್, ಉಪನ್ಯಾಸಕರಾದ ರಾಘವೇಂದ್ರ ಬಿ. ರಾವ್. ಚಂದ್ರಕಾಂತ ಹಾಗೂ ಬೋಧಕೇತರು ಹಾಗೂ ಓ.S.S ಸ್ವಯಂ ಸೇವಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಧ್ಯ ಪಡ್ರೆ ಕಾರ್ಯಕ್ರಮ ನಿರೂಪಿಸಿ, ಕುಮಾರಿ ಹಿತ ವಂದಿಸಿದರು.

Read More

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ವತಿಯಿಂದ ಯಡಾಡಿ- ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪಿ.ಯು.ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಮಂಥನ ಬೇಸಿಗೆ ಶಿಬಿರ ಐದನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಂಕರನಾರಾಯಣ ವಲಯದ ಅರಣ್ಯಾಧಿಕಾರಿಗಳಾಗಿರುವ ಶ್ರೀಮತಿ ಜ್ಯೋತಿ ಕೆ.ಸಿಯವರು ಮಾತನಾಡಿ, ಯಾವುದೇ ಒಂದು ದೇಶದ ಪ್ರಾಕೃತಿಕ ಸಮತೋಲನ ಕಾಪಾಡುವಲ್ಲಿ ಅರಣ್ಯಗಳ ಪಾತ್ರ ಬಲು ದೊಡ್ಡದು. ಇಂದು ನಮ್ಮ ದೇಶದಲ್ಲಿ ಅರಣ್ಯ ಪ್ರದೇಶಗಳು ಕಡಿಮೆಯಾಗುತ್ತಿದ್ದು ಅದನ್ನು ಉಳಿಸುವ ಜವಾಬ್ದಾರಿ ಎಲ್ಲರದ್ದಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಅರಣ್ಯ ಸಂರಕ್ಷಣೆಯ ಮಹತ್ವ ತಿಳಿಸುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ. ಪಠ್ಯದ ಅಧ್ಯಯನದ ಜೊತೆಗೆ ಪಠ್ಯೇತರ ವಿಷಯದಲ್ಲಿ ಮಕ್ಕಳಿಗೆ ಪರಿಸರ ಸಂರಕ್ಷಣೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ. ಬೇಸಿಗೆ ಶಿಬಿರಗಳಲ್ಲಿ ಚಿತ್ರಕಲೆ, ಕ್ರಾಫ್ಟ್ ತಯಾರಿಕೆ ಮೂಲಕ ಪರಿಸರ ಸಂರಕ್ಷಣೆ ಕುರಿತಾದ ಚಟುವಟಿಕೆಗಳು ಮಕ್ಕಳಿಗೆ ಹೆಚ್ಚು ಉಪಯುಕ್ತವಾವುತ್ತದೆ ಎಂದರು. ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ ಶೆಟ್ಟಿ ಮಾತನಾಡಿ, ನಮ್ಮ ಇಂದಿನ ಯುವ ಜನತೆ ದಾರಿ ತಪ್ಪಲು ಮತ್ತು…

Read More

ಪ್ರಪಂಚದ ಚಿತ್ರರಂಗದ ಇತಿಹಾಸದಲ್ಲಿ ಪ್ರಥಮ ಬಾರಿ, ಕರಾವಳಿ ಕರ್ನಾಟಕದ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಯಕ್ಷಗಾನವನ್ನು ‘ವೀರ ಚಂದ್ರಹಾಸ’ ಚಿತ್ರದ ಮೂಲಕ ಬೆಳ್ಳಿಪರದೆಗೆ ತರಲಾಗಿದೆ. ಏಪ್ರಿಲ್ 18ರಂದು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಕರವಾಳಿಯಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಕಡೆಗಳಲ್ಲೂ ಹಂತಹಂತವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಖ್ಯಾತ ಸಂಗೀತ, ಚಲನಚಿತ್ರ ನಿರ್ದೇಶಕ ರವಿ ಬಸ್ರೂರು ಹೇಳಿದರು. ಅವರು ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ನನ್ನ ಅಜ್ಜ ಯಕ್ಷಗಾನ ಕಲಾವಿದರಾಗಿದ್ದು, ಒಮ್ಮೆಲೆ ಐದು ವಾದ್ಯಗಳನ್ನು ನುಡಿಸಬಲ್ಲ ಸಾಮರ್ಥ್ಯದವರು. ನನ್ನ ತಂದೆ ಸೇರಿ ಇಡೀ ಕುಟುಂಬದಲ್ಲಿ ಎಲ್ಲರೂ ಯಕ್ಷಗಾನ ಕಲಾವಿದರಾಗಿದ್ದಾರೆ. ಯಕ್ಷಗಾನವನ್ನು ಎಲ್ಲೋ ಮಿಸ್ ಮಾಡುತ್ತಿದ್ದೇನೆ ಎಂದೆನಿಸಿತು. ಸುಮಾರು ಹನ್ನೆರಡು ವರ್ಷಗಳ ಮುಂಚೆ ಪ್ರಯತ್ನಿಸಿದ್ದೆ. ಆದರೆ ಆಗ ನನ್ನ ಕಿಸೆಯಲ್ಲಿ ದುಡ್ಡಿರಲಿಲ್ಲ, ಅನುಭವವೂ ಇರಲಿಲ್ಲ. ಆದರೆ ಈ ವರ್ಷ ಅದಕ್ಕೆ ಕಾಲ ಕೂಡಿ ಬಂದಿತು ಎಂದರು. ಎಲ್ಲರೂ ಇದನ್ನು ಸಿನಿಮಾ ಆಂಗಲ್‌ನಲ್ಲಿ ನೋಡುತ್ತಿದ್ದರು. ಆದರೆ ಇದು…

Read More

ಮೂಡುಬಿದಿರೆ: ತುಳುನಾಡು ಸರ್ವಧರ್ಮೀಯರ ನಾಡು. ಇಲ್ಲಿ ಜಾತಿ ಮತ ಪಂಥವೆಂಬ ಭೇದವಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ನುಡಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ತುಳು ಸಂಘದ ಸಹಯೋಗದಲ್ಲಿ ತುಳು ಬಾಷೆ ಬದ್ಕ್ ಗೇನದ ಪೊಲಬು ತುಲಿಪು ಕಾರ್ಯಕ್ರಮ ಶುಕ್ರವಾರ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆಯಿತು. ಶೈಕ್ಷಣಿಕ ಕ್ಷೇತ್ರಕ್ಕೆ ಯಾವ ಭಾಷೆ ಪ್ರವೇಶಿಸುತ್ತದೆಯೋ ಆ ಭಾಷೆಯ ಮೌಲ್ಯ ಮತ್ತು ವಿಸ್ತಾರಗೊಳ್ಳುತ್ತದೆ. ಇಂತಹ ಕಾರ್ಯಕ್ರಮಗಳು ತುಳು ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸಬಲ್ಲದು. ತುಳುನಾಡಿನಲ್ಲಿ 160ಕ್ಕೂ ಹೆಚ್ಚಿನ ಕ್ರೀಡೆಗಳಿವೆ. ತುಳುನಾಡಿನ ಔಷದೋಪಚಾರ ವಿಶಿಷ್ಟವಾಗಿದೆ. ಪ್ರತಿಯೊಂದು ಊರಿನ ಹೆಸರಿಗೂ ಪ್ರಾಚೀನ ಇತಿಹಾಸವಿದೆ. ಇದರ ಬಗ್ಗೆ ಅಧ್ಯಯನ ಮಾಡಿ ತುಳುವನ್ನು ಸಮಗ್ರ ನೆಲೆಯಲ್ಲಿ ಕಟ್ಟುವ ಕೆಲಸವಾಗಬೇಕಿದೆ. ಸುಮಾರು 5,000 ಕ್ಕೂ ಹೆಚ್ಚಿನ ತುಳು ಪುಸ್ತಕಗಳು ತುಳು ಸಾಹಿತ್ಯ ಅಕಾಡೆಮಿಯಲ್ಲಿ ಲಭ್ಯವಿದೆ. ಇದರ ಮೂಲಕ ತುಳುನಾಡಿನ ಪರಂಪರೆಯನ್ನು ತಿಳಿದುಕೊಳ್ಳಬಹುದಾಗಿದೆ. ತಾಯಿ ಭಾಷೆ ಮತ್ತು…

Read More

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ(NTA) ನಡೆಸುವ ರಾಷ್ಟೃಮಟ್ಟದ NIFT ಪರೀಕ್ಷೆಯಲ್ಲಿ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಾರ್ಕಳದ 13 ವಿದ್ಯಾರ್ಥಿಗಳು ಮೊದಲ ಹಂತದ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.ಸೃಜನ್ ಆರ್ ಗುರಿಕಾರ್, ಯಶ್ಮಿತಾ ಕೆ, ಚರಣ್ ಜಿಎಂ, ಚಿನ್ಮಯಿ ಆರ್, ಹರ್ಷ ಎಸ್ ಗೌಡ, ಜೀವಿತ ಜಿ ಆರ್, ಮಾನಸಿ ಪಿ, ನವ್ಯ ಕೆ.ಆರ್, ಪೂರ್ವಿಕ್ ಕೆ.ಸಿ, ಪ್ರಾಪ್ತಿ ಎಂ.ಗೌಡ, ರಕ್ಷಾ, ಸುಖಿ ಆರ್. ಗೌಡ, ವಿಕಾಸ್ ಡಿ. ಸಿ. ಆಯ್ಕೆಯಾದ ವಿದ್ಯಾರ್ಥಿಗಳು. ಪಿಯು ವಿದ್ಯಾರ್ಥಿಗಳು ಎದುರಿಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಅತ್ಯುತ್ತಮ ತರಬೇತಿಯನ್ನು ನೀಡುತ್ತಾ ಬಂದಿದ್ದು ಎಲ್ಲಾ ವಿಭಾಗದಲ್ಲೂ ಯಶಸ್ವೀ ಫಲಿತಾಂಶ ನೀಡುತ್ತಿದೆ.ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕರು, ಪ್ರಾಂಶುಪಾಲರು, NIFT ಪರೀಕ್ಷೆಯ ಸಂಯೋಜಕರಾದ ರಕ್ಷಿತ್, ಸುಮಂತ್ ದಾಮ್ಲೆ, ಶರತ್ ಅಭಿನಂದಿಸಿದ್ದಾರೆ.

Read More

ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜು ಕಳೆದ 26 ವರ್ಷಗಳಿಂದ ಕಲಿಕೆಗೆ ಮತ್ತು ಫಲಿತಾಂಶಕ್ಕೆ ಒತ್ತು ನೀಡುವ ಮೂಲಕ ಇದುವರೆಗ 63 ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿಧ್ಯಾಭ್ಯಾಸ ನೀಡಿದ ಹೆಗ್ಗಳಿಕೆ ಪಡೆದಿದೆ. ಈಗಾಗಲೇ ಸಂಸ್ಥೆಯಲ್ಲಿ  2025-26ನೇ ಸಾಲಿನ  ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ  ಪಿಯು ಪ್ರವೇಶಾತಿ ಆರಂಭಗೊಂಡಿದ್ದು,  ಎಸ್‌ಎಸ್‌ಎಲ್‌ಸಿ ಫಲಿತಾಂಶ ಮೇ ತಿಂಗಳ ಮೊದಲ ವಾರದಲ್ಲಿ ಬರುವ ನಿರೀಕ್ಷೆಯಿದೆ. ವಿದ್ಯಾರ್ಥಿಗಳು ತಮ್ಮ 9ನೇ ತರಗತಿ  ಅಥವಾ ಪ್ರಿಪರೇಟರಿ ಪರೀಕ್ಷಾ ಅಂಕಗಳ ಆಧಾರದ ಮೇಲೆ  ಕಾಲೇಜಿನಲ್ಲಿ  ತಮ್ಮ ಸೀಟುಗಳನ್ನು ಕಾಯ್ದಿರಿಸಬಹುದು.ಹತ್ತನೇ ತರಗತಿಯ ನಂತರದ ಎರಡು ವರ್ಷಗಳು, ವಿದ್ಯಾರ್ಥಿ ಜೀವನದ ಪ್ರಮುಖ ಕಾಲಘಟ್ಟ. ಈ ಎರಡು ವರ್ಷಗಳಲ್ಲಿ ವಿದ್ಯಾರ್ಥಿಗಳು ತಮ್ಮ ಓದಿನ ಕಡೆಗೆ ಹಾಗೂ ಅಂಕಗಳಿಸುವ ಕಡೆಗೆ ಹೆಚ್ಚು ಒತ್ತು ಕೊಟ್ಟು ಕಲಿಯಬೇಕಾಗುತ್ತದೆ. ಅವರ ಜೀವನದ ಗುರಿ ಸಾಧನೆಯು  ಪಿಯುಸಿಯಲ್ಲಿ ಅವರು ಪಡೆಯುವ ಅಂಕಗಳ ಮೇಲೆ  ನಿರ್ಧಾರಿತವಾಗಿರುತ್ತದೆ. ಹೆತ್ತವರು ಸಾಧಾರಣವಾಗಿ ಮಕ್ಕಳನ್ನು ಇತರ ಚಟುವಟಿಕೆಗಳಿಂದ ಮುಕ್ತಗೊಳಿಸಿ ಓದಿನ ಕಡೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು…

Read More

ಇತ್ತಿಚೆಗ್ ಒಂಜಿ ಹಿರಿಯಾರೆಡ ಪಾತೆರ್ನಗ ಪಂಡೆರ್ ನಮ್ಮ ದೈವಾರಾಧನೆ ಜೋಕುಲು ಗೊಬ್ಬು ದಕ್ಕಿನ ಗೊಂಬೆದಲೆಕ ಅತಿಂದ್ ಪಂಡ್ದು! ಅಂಡ ಈ ಸರಿಕಟ್ಟು ಮೀಸೆ ಬರಂದಿನ ಜವಾನೆರ್ ದೈವೋಲೆಗ್ ಮದಿಪುನ ತೂನಗ ಅನ್ನಿಸಾಂಡ್ ಜೋಕುಲು ಗೊಬ್ಬುದಕ್ಕಿನ ಗೊಂಬೆ ಅತಿಜಿ, ಜೋಕುಲು ಗೊಬ್ಬುನ ಮೈದಾನ ಅತಿಂಡ್ ದೈವದ ಕಲ ಪಂಡ್ದು. ಕಾರಣ, ಯೂಟ್ಯೂಬ್ ತೂದು ಬೈಪಾಟ ಮಾಲ್ತ್ ಮದಿಪುನ, ನಿಮಿಷಗಟ್ಲೆ ದೈವದ ಕಥೆ ಪಂನ್ಪುನ, ಮದಿಪು ಪಂನ್ಪುನವು ದೈವನ್ ಮಾನವುನವು ಅಂಡ ದೈವ ನುಡಿ ಕೊರ್ಪೂನ ಧಾಟಿಡ್, ಯಕ್ಷಗಾನದ ಧಾಟಿಡ್ ಮದಿಪುನ! ಉಂದೆತ ಅಗತ್ಯ ಉಂಡ?! ನನಲ ಪರಶುರಾಮ ಸೃಷ್ಟಿ, ಪರಶುರಾಮ ಸೃಷ್ಟಿ ಪನೊಂದು ತಿರ್ಗೊಂದುಲ್ಲೆರ್, ನಮನ್ ಬರೆತಿ ಬೆಮ್ಮೆರೆನ ನೆಂಪೆ ಇಜ್ಜಿ ಮೊಕ್ಲೆಗ್! ಕುಡ ಮೊಕ್ಲೆಗ್ ಕ್ಯಾಮೆರಾ ಮ್ಯಾನ್, ಆವೆನ್ ಎಡಿಟ್ ಮಲ್ಪರೆ ನನೊರಿ! ಈ ವಿಡಿಯೋಗ್ರಾಫಿದ ಶೋಕಿ ಇಪ್ಪುನಕ್ಲೆನ್ ಲೆಪ್ಪುನಗ ನಮ ಯೋಚನೆ ಮಲ್ಪೊಡ್! ಆಂಕರಿಂಗ್ ಮಲ್ಪುನಕುಲು ಮದಿಪುನ ಖಂಡಿತ ತಪ್ಪತ್ತು, ಅಂಡ ದೈವಗು ಮದಿಪುಣ ಕೆಲವು ವಿಚಾರನು ಬಾಕಿದ ವೇದಿಕೆಡ್…

Read More

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಹವ್ಯಾಸಿ ಘಟಕದ ಸಭೆ ಬಲ್ಲಾಲ್ ಬಾಗ್‌ನಲ್ಲಿರುವ ಪತ್ತುಮುಡಿ ಸೌಧದಲ್ಲಿ ನಡೆಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹವ್ಯಾಸಿ ಘಟಕದ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ಗೌರವಾಧ್ಯಕ್ಷರಾಗಿ ಮಧುಕರ ಭಾಗವತ ಕುಳಾಯಿ, ಅಧ್ಯಕ್ಷರಾಗಿ ರಾಜಾರಾಮ ಹೊಳ್ಳ ಕೈರಂಗಳ, ಉಪಾಧ್ಯಕ್ಷರಾಗಿ ತೋನ್ಸೆ ಪುಷ್ಕಳ ಕುಮಾರ್, ದಿವಾಕರ ಆಚಾರ್ಯ ಗೇರುಕಟ್ಟೆ, ಕಾರ್ಯದರ್ಶಿಯಾಗಿ ವಿನಯ ಆಚಾರ್ ಹೊಸಬೆಟ್ಟು, ಸಂಚಾಲಕರಾಗಿ ಸದಾಶಿವ ಆಳ್ವ ತಲಪಾಡಿ, ಕೋಶಾಧಿಕಾರಿಯಾಗಿ ವಿಜಯ ಶಂಕರ ಆಳ್ವ ಮಿತ್ತಳಿಕೆ, ಸಹ ಕಾರ್ಯದರ್ಶಿಗಳಾಗಿ ಮಧುಸೂಧನ ಅಲೆವೂರಾಯ ಮತ್ತು ಕುಂಜತ್ತೂರು ಗಣೇಶ್, ಸಹ ಸಂಚಾಲಕರಾಗಿ ಚಂದ್ರಶೇಖರ ಕೊಂಕಣಾಜೆ ಮತ್ತು ಹರಿಶ್ಚಂದ್ರ ನಾಯ್ಕ ಮಾಡೂರು ಆಯ್ಕೆಯಾದರು. ಗೌರವ ಸಲಹೆಗಾರರಾಗಿ ಡಾ ಎಂ ಪ್ರಭಾಕರ ಜೋಶಿ, ಜಬ್ಬಾರ್ ಸಮೋ ಸಂಪಾಜೆ, ಹರೀಶ್ ಬಳಂತಿಮೊಗರು, ಸುಬ್ರಹ್ಮಣ್ಯ ಬೈಪಡಿತ್ತಾಯ, ಪ್ರೊ ಭಾಸ್ಕರ್ ರೈ ಕುಕ್ಕುವಳ್ಳಿ, ಸುಂದರ ಶೆಟ್ಟಿ ಬೆಟ್ಟಂಪಾಡಿ ಆಯ್ಕೆಯಾದರು.ಇದೇ ಸಂದರ್ಭದಲ್ಲಿ ಜೂನ್ 1 ರಂದು…

Read More

ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ದಿಲ್ ರಾಜ್ ಆಳ್ವ ಆಯ್ಕೆಯಾಗಿದ್ದಾರೆ. ದಿಲ್ ರಾಜ್ ಆಳ್ವ ಅವರು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಕ್ರೀಯರಾಗಿದ್ದಾರೆ. ಅವರು ದ.ಕ. ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಸಮಾಜಪರ ಚಿಂತನೆಯುಳ್ಳ ದಿಲ್ ರಾಜ್ ಆಳ್ವರವರು ಧಾರ್ಮಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈಗ ಕದ್ರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

Read More

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ವತಿಯಿಂದ ಯಡಾಡಿ- ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪಿ.ಯು ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಮಂಥನ ಬೇಸಿಗೆ ಶಿಬಿರದ ಆರನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಉಡುಪಿ ಜಿಲ್ಲಾ ಮುಖ್ಯ ಆಯುಕ್ತಾಗಿರುವ ಶ್ರೀಯುತ ಬಿ. ಜಯಕರ ಶೆಟ್ಟಿಯವರು ಮಾತನಾಡಿ, ಮಕ್ಕಳು ಶಾಲೆಯಲ್ಲಿ ಪಠ್ಯದ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿಯನ್ನು ಬೆಳೆಸಿಕೊಂಡರೆ ಉತ್ತಮ ಪ್ರಗತಿ ಕಾಣಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯ ಅನಾವರಣಕ್ಕಾಗಿ ಸರಕಾರವು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮವನ್ನು ಆರಂಭಿಸಿದೆ. ಪ್ರತಿಯೊಂದು ಮಗುವಿನಲ್ಲಿಯೂ ಒಂದೊಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಅನಾವರಣಗೊಳಿಸುವ ಪ್ರಯತ್ನ ಆಗಬೇಕು. ಪಠ್ಯೇತರ ಚಟುವಟಿಕೆಗಳು ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಸಹಕಾರಿಯಾಗುತ್ತದೆ. ಬೇಸಿಗೆ ಶಿಬಿರಗಳು ಕೂಡ ಮಕ್ಕಳಿಗೆ ಉತ್ತಮ ವೇದಿಕೆಯಾಗಿದ್ದು ಅಲ್ಲಿ ಕಲಿಸಿಕೊಡುವ ಕೌಶಲಗಳು, ಸಂಸ್ಕಾರವನ್ನು ಮಕ್ಕಳು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಭವಿಷ್ಯದ ಉತ್ತಮ ಪ್ರಜೆಗಳಾಗಿ ಬಾಳುವಂತಾಗಬೇಕು ಎಂದರು. ರಘುಸನ್ ಟೈಲ್ಸ್…

Read More