Author: admin
ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಮುಂಬೈ 19ನೇ ವಾರ್ಷಿಕ ಯಕ್ಷೋತ್ಸವ ಸಂಭ್ರಮದ ಪ್ರಯುಕ್ತ ಯಕ್ಷ ಪಲ್ಲವಿ ಟ್ರಸ್ಟ್ ಯಕ್ಷಗಾನ ಮಂಡಳಿ ಮಾಳಕೋಡ್ ಇವರಿಂದ ಮಹೇಂದ್ರ ಶಪಥ ಯಕ್ಷಗಾನ ಪ್ರದರ್ಶನ ನವಂಬರ್ 1 ರಂದು ಅಪರಾಹ್ನ 2:30 ರಿಂದ ಪುಣೆಯ ಶಿವಾಜಿ ನಗರದ ಜಂಗ್ಲಿ ಮಹಾರಾಜ್ ಮಂದಿರದ ಎದುರುಗಡೆಯ ಪಾಸನ್ಕರ್ ರೋಡ್ ನಲ್ಲಿನ ಸಿಟಿ ಓಟೆಲ್ ನ ಸಭಾ ಭವನದಲ್ಲಿ ಜರಗಲಿದೆ. ಗಾನ ಕೋಗಿಲೆ, ಯಕ್ಷಮಾಣಿಕ್ಯ ಬಿರುದಾಂಕಿತ ಉದಯೋನ್ಮುಖ ಭಾಗವತೆ ಚಿಂತನಾ ಹೆಗಡೆ ಮಾಳಕೋಡ್ ಅವರು ಪುಣೆಯಲ್ಲಿ ಪ್ರಥಮ ಬಾರಿಗೆ ಭಾಗವತಿಕೆಯ ಗಾನಸುಧೆ ಹರಿಸಲಿದ್ದಾರೆ. ಮುಮ್ಮೇಳದಲ್ಲಿ ಗೋಪಾಲ್ ಆಚಾರ್ಯ ತೀರ್ಥಹಳ್ಳಿ, ಉದಯ ಕುಮಾರ್ ಮಾಳಕೋಡ್, ನಾಗೇಶ್ ಕುಲಿಮನೆ, ರವಿಕೊಂಡ್ಲಿ ಸಹಿತ ಮಂಜುನಾಥ್ ಕೆರವಳ್ಳಿ ಸ್ತ್ರೀ ಪಾತ್ರದಲ್ಲಿ, ಶ್ರೀಧರ ಭಟ್ ಹಾಸ್ಯ ಪಾತ್ರದಲ್ಲಿ ಮೊದಲಾದ ಖ್ಯಾತ ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ಭಾಗವಹಿಸಲಿದ್ದಾರೆ. ಉಚಿತ ಪ್ರವೇಶವಿರುವ ಈ ಯಕ್ಷಗಾನ ಪ್ರದರ್ಶನಕ್ಕೆ ಪುಣೆಯ ಯಕ್ಷ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಯಕ್ಷಗಾನ ಪ್ರದರ್ಶನದ…
ಕುಂದಾಪುರ ತಾಲೂಕು ಯುವ ಬಂಟರ ಸಂಘ (ರಿ) ಕುಂದಾಪುರ ಸಾರಥ್ಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್, ಡಾ.ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ಉದ್ಘಾಟನಾ ಮಾತುಗಳನ್ನಾಡಿದ ವಿನಯ ಆಸ್ಪತ್ರೆ ಕುಂದಾಪುರದ ಆಡಳಿತ ನಿರ್ದೇಶಕರಾದ ಡಾ. ರಂಜಿತ್ ಕುಮಾರ್ ಶೆಟ್ಟಿಯವರು ದಾನ ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ. ಇಂತಹ ಶ್ರೇಷ್ಠ ರಕ್ತದಾನ ಶಿಬಿರವನ್ನು ಕುಂದಾಪುರ ತಾಲೂಕು ಯುವ ಬಂಟರ ಸಂಘ ನಿರಂತರವಾಗಿ ಸಂಘಟಿಸುತ್ತಿರುವುದು ಶ್ಲಾಘನೀಯ ಎಂದರು. ಸಂಘದ ಅಧ್ಯಕ್ಷರಾದ ನಿತೀಶ್ ಶೆಟ್ಟಿ ಬಸ್ರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಮಾತೃ ಸಂಘ ಕುಂದಾಪುರ ತಾಲೂಕು ಸಮಿತಿಯ ಸಂಚಾಲಕರಾದ ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ, ಕುಂದಾಪುರದ ಹಿರಿಯ ವಕೀಲರಾದ ಟಿ.ಬಿ.ಶೆಟ್ಟಿ, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರದ ಸಭಾಪತಿಗಳಾದ ಎಸ್ ಜಯಕರ ಶೆಟ್ಟಿ, ಉದ್ಯಮಿಗಳಾದ ಶಾನಾಡಿ ಸಂಪತ್…
ವಿದ್ಯಾಗಿರಿ: ‘ಭವಿಷ್ಯದ ನಿಧಿಯ ಹಣದ ಬಳಕೆಯ ಬಗ್ಗೆ ಉದ್ಯೋಗಿಗಳು ಸಮರ್ಪಕ ಮಾಹಿತಿ ಹೊಂದಿರಬೇಕು’ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮಂಗಳೂರು ಆಯುಕ್ತ ಎ.ಪಿ. ಉಣ್ಣಿಕೃಷ್ಣ ತಿಳಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ವ್ಯಾಪ್ತಿಯ ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸೋಮವಾರ ವಿದ್ಯಾಗಿರಿಯ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ‘ಜಂಟಿ ಸಾರ್ವಜನಿಕ ಮುಖಾಮುಖಿ- ಸಂವಾದಾತ್ಮಕ ವೇದಿಕೆ ಮತ್ತು ಮಾಹಿತಿ ವಿನಿಮಯ ಕಾರ್ಯಕ್ರಮ-‘ನಿಧಿ ಆಪ್ಕೆ ನಿಕಟ್ 2.0 ಕರ‍್ಯಕ್ರಮ’ ದಲ್ಲಿ ಅವರು ಮಾತನಾಡಿದರು. ಭವಿಷ್ಯ ನಿಧಿಯಲ್ಲಿರುವ ಹಣವನ್ನು ನಾವು ಹೇಗೆ ಉಪಯೋಗ ಮಾಡಿಕೊಳ್ಳಬೇಕು. ಅದರಿಂದ ಆಗುವ ಲಾಭಗಳು ಏನು ಎಂಬ ಬಗ್ಗೆ ತಿಳಿದಿರಬೇಕು ಮತ್ತು ಭವಿಷ್ಯದ ನಿಧಿಯ ಹಣವನ್ನು ಬಹಳ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ತೆಗೆಯಬೇಕು ಎಂದು ಅವರು ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ ಹಿಂದೆ ಕೃಷಿ…
ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ ಅನ್ನು ಆಳ್ವಾಸ್ (ಸ್ವಾಯತ್ತ) ಕಾಲೇಜು ತಂಡವು ಮುಡಿಗೇರಿಸಿಕೊಂಡಿದೆ. ಆಳ್ವಾಸ್(ಸ್ವಾಯತ್ತ) ಕಾಲೇಜಿನ ಪುರುಷರ ತಂಡವು ಸತತ 25ನೇ ಬಾರಿಗೆ ಹಾಗೂ ಮಹಿಳೆಯರ ತಂಡವು 20ನೇ ಬಾರಿಗೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಅಕ್ಟೋಬರ್ 29 ಮತ್ತು 30ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಕ್ರಾಸ್ ಕಂಟ್ರಿ ಪುರುಷರ ವಿಭಾಗದಲ್ಲಿ ಆಳ್ವಾಸ್‌ನ ಚಂದನ್ ಯಾದವ್, ಗಗನ್, ರೋಹಿತ್ ಝಾ, ನವರತನ್, ಅಮಾನ್ ಕುಮಾರ್ ಮತ್ತು ಸಾಹಿಲ್ ಕುಂಬೋಜ್ ಮೊದಲ ಆರು ಸ್ಥಾನಗಳನ್ನು ಪಡೆದರು. ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಬಸಂತಿ ಕುಮಾರಿ, ಜ್ಯೋತಿ, ಖುಷ್ಬೂ ಪಟೇಲ್, ಅನೇಹಲ್ ಜೈಸ್ವಾಲ್, ದಿಶಾ ಬೋರ್ಸೆ ಮತ್ತು ರೂಪಾಶ್ರೀ ಮೊದಲ ಆರು ಸ್ಥಾನಗಳನ್ನು ಪಡೆದರು. ಪುರುಷರ ವಿಭಾಗದಲ್ಲಿ 10 ಅಂಕಗಳನ್ನು ಪಡೆದು ಆಳ್ವಾಸ್ ಕಾಲೇಜು ಪ್ರಥಮ ಸ್ಥಾನ ಪಡೆದರೆ, 34 ಅಂಕಗಳನ್ನು ಪಡೆದ ಉಜಿರೆಯ ಎಸ್‌ಡಿಎಮ್…
ಬಂಟ್ಸ್ ಓಮಾನ್ ಸಾಂಸ್ಕೃತಿಕ ಸಂಘದ (BOSS) ನೆರಳಲ್ಲಿ “ಸಾಂಸ್ಕೃತಿಕ ಸಮ್ಮಿಲನ”, ಕೆಸರು ಗದ್ದೆ ಗೋಲ್ಡ್ ಫೀಲ್ಡ್ (KGF) ಗ್ರಾಮೀಣ ಕ್ರೀಡೋತ್ಸವವು ಮಸ್ಕತ್ ನ “ಬರ್ಕ ಗುತ್ತಿ”ನ ಅಗೋಳಿ ಮಂಜಣ್ಣ ಅಂಗಣದಲ್ಲಿ ಜರಗಿತು. ತುಳುನಾಡಿನ ಬಂಟರ ಸಂಸ್ಕೃತಿ, ನಂಬಿಕೆ, ಆಚರಣೆಗಳ, ನಡವಳಿಕೆಗಳ ನೆನಪಿನ ಮೆಲುಕು ಹಾಕಲು “ತುಳುನಾಡಿನ ಪ್ರತಿಕೃತಿ” ಸೃಷ್ಟಿಸಲಾಗಿತ್ತು. ಮಸ್ಕತ್ ಹೊರವಲಯದಲ್ಲಿರುವ ಉದ್ಯಮಿ ಅಶ್ವಿನಿ ದರಂಸಿ ಭಾಯ್ ಅವರ ಫಾರ್ಮ್ ಹೌಸ್ ನಲ್ಲಿ ದಿವಾಕರ ಶೆಟ್ಟಿ ಮಲ್ಲಾರ್ ಅವರ ಪರಿಕಲ್ಪನೆಯಲ್ಲಿ “ಬರ್ಕ ಗುತ್ತು ಮನೆ”, ಸಾವಿರ ಮಂದಿ ಕುಳಿತುಕೊಳ್ಳಬಹುದಾದ “ಬಂಟರ ಭವನ” ನಿರ್ಮಿಸಲಾಗಿತ್ತು. ಗುತ್ತಿನ ಪಡಸಾಲೆ, ರಾಟೆ ಅಳವಡಿಸಿದ ಬಾವಿ, ಸಿರಿ ತುಪ್ಪೆ – ಭತ್ತದ ಕಣಜ, ಪಡಿ ಮಂಚ, ಭತ್ತ ಕುಟ್ಟುವ “ಬಾರ ಕಲ”ದಲ್ಲಿರಿಸಿದ ಒನಕೆಗಳು, ಮಡಲು ತಟ್ಟಿಯ ಹಳ್ಳಿಯ ಬಚ್ಚಲು ಮನೆ, ಉತ್ತು ಹದಗೊಳಿಸಿದ ಸುಮಾರು 60 ಮೀಟರ್ ಉದ್ದದ ಕೆಸರು ನೀರು ತುಂಬಿದ ವಿಶಾಲವಾದ ಕಂಬಳ ಗದ್ದೆ, ಸೆಗಣಿ ಸಾರಿಸಿದ ವಿಸ್ತರವಾದ ಅಂಗಳ, ತೆಂಗಿನ ಸೋಗೆ ಹೆಣೆದು…
ಬಂಟರ ಯಾನೆ ನಾಡವರ ಸಂಘ ಬೈಂದೂರು 30 ರ ಸಂಭ್ರಮ ಕಾರ್ಯಕ್ರಮ ಹೆಮ್ಮಾಡಿ ಜಯಶ್ರೀ ಸಭಾಭವನದಲ್ಲಿ ಭಾನುವಾರ ನಡೆಯಿತು. ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆ ಅಧ್ಯಕ್ಷತೆ ವಹಿಸಿದ್ದರು. ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಶಕ್ತರಿಗೆ ನೆರವು ನೀಡುವುದರ ಮುಖೇನ ಸಮಾಜದಲ್ಲಿನ ಹಿಂದುಳಿದ ವರ್ಗವನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದರು. ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿಎ ಅಶೋಕ ಕುಮಾರ್ ಶೆಟ್ಟಿ, ನಿವೃತ್ತ ಪ್ರಿನ್ಸಿಪಾಲ್ ರಾಧಾಕೃಷ್ಣ ಶೆಟ್ಟಿ, ಬೆಂಗಳೂರು ಬಂಟರ ಸಂಘದ ವಿದ್ಯಾರ್ಥಿ ವೇತನ ಹಾಗೂ ಪ್ರಶಸ್ತಿ ಸಮಿತಿಯ ಛೇರ್ಮನ್ ಉಮೇಶ್ ಕುಮಾರ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಗೌರವ ಕಾರ್ಯದರ್ಶಿ ವಿಜಯ ಶೆಟ್ಟಿ ಹಾಲಾಡಿ, ಉದ್ಯಮಿ ಜಗದೀಶ ಶೆಟ್ಟಿ ಕುದ್ರುಕೋಡು, ಉದ್ಯಮಿ ಜಯಶೀಲ ಶೆಟ್ಟಿ ಘಟಪ್ರಭ, ಮಂಜುನಾಥ ಶೆಟ್ಟಿ ಗಂಟೆಹೊಳೆ, ಸುಭಾಶ್ಚಂದ್ರ ಶೆಟ್ಟಿ ಸಾಲ್ಗದ್ದೆ, ಕೋಶಾಧಿಕಾರಿ ಜಯರಾಮ ಶೆಟ್ಟಿ, ಕಾರ್ಯದರ್ಶಿ ನಿತಿನ್ ಶೆಟ್ಟಿ, ಗೌರವಾಧ್ಯಕ್ಷ…
ದೀಪಾವಳಿ ಅಂಗವಾಗಿ ಅಕ್ಟೋಬರ್ 30ರಂದು ಆಯೋಜಿಸಿರುವ ‘ನಮ್ಮ ಕುಡ್ಲ ಗೂಡುದೀಪ’ ಸ್ವರ್ಧೆ ಸಂದರ್ಭದಲ್ಲಿ ನೀಡುವ ನಮ್ಮ ತುಳುವೆರ್’ ಪ್ರಶಸ್ತಿಯನ್ನು ದುಬೈಯಲ್ಲಿ ವಿಶ್ವ ತುಳು ಸಮ್ಮೇಳನ ನಡೆಸಿದ ಸಂಘಟಕ, ಉದ್ಯಮಿ ಸರ್ವೋತ್ತಮ್ ಶೆಟ್ಟಿ ಅಬುಧಾಬಿ ಅವರಿಗೆ ನೀಡಲಾಗುವುದು ಎಂದು ಕದ್ರಿ ನವನೀತ ಶೆಟ್ಟಿ ಹೇಳಿದರು. ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
‘ಮನೋರಂಜನೆಯೊಂದಿಗೆ ವಿವಿಧ ಭಾರತೀಯ ಜ್ಞಾನ ಶಾಖೆಗಳನ್ನು ಪರಿಚಯಿಸುವ ಯಕ್ಷಗಾನ ತಾಳಮದ್ದಳೆ ಬಹಳ ವಿಚಾರ ಪ್ರಚೋದಕವಾದ ಕಲಾ ಪ್ರಕಾರ. ಪ್ರತೀ ವರ್ಷ ಸಪ್ತಾಹದ ರೂಪದಲ್ಲಿ ಇದನ್ನು ನವೆಂಬರ ತಿಂಗಳ ನುಡಿ ಹಬ್ಬವಾಗಿ ಆಚರಿಸುತ್ತಿರುವ ಯಕ್ಷಾಂಗಣದ ಕಾರ್ಯವನ್ನು ಕಲಾಭಿಮಾನಿಗಳು ಬೆಂಬಲಿಸಬೇಕು’ ಎಂದು ಎಜೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹಾಗೂ ಯಕ್ಷಾಂಗಣದ ಗೌರವಾಧ್ಯಕ್ಷ ಡಾ.ಎ.ಜೆ. ಶೆಟ್ಟಿ ಹೇಳಿದ್ದಾರೆ. ಯಕ್ಷಾಂಗಣ ಮಂಗಳೂರು ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಜರಗುವ ಕರ್ನಾಟಕ ರಾಜ್ಯೋತ್ಸವ ಕಲಾಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ ಹನ್ನೆರಡನೇ ವರ್ಷದ ನುಡಿ ಹಬ್ಬ ದ್ವಾದಶ ಸರಣಿಯ ಆಮಂತ್ರಣ ಪತ್ರಿಕೆಯನ್ನು ಕದ್ರಿ ಶ್ರೀ ಮಂಜುನಾಥ ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮಹೇಶ್ ಮೋಟರ್ಸ್ ಮಾಲಕ ಎ.ಕೆ ಜಯರಾಮ ಶೇಖ ಮತ್ತು ಉದ್ಯಮಿ, ಲೋಟಸ್ ಬಿಲ್ಡರ್ಸ್ ನ ಜಿತೇಂದ್ರ ಕೊಟ್ಟಾರಿ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ ‘ಕದ್ರಿ ದೇವಾಲಯದ ರಾಜಾಂಗಣದಲ್ಲಿ…
ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಆಶ್ರಯದಲ್ಲಿ ನೂತನ ಮಹಿಳಾ ಘಟಕವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ನೂತನ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿ, ಸೂಕ್ತ ಕಾರ್ಯ ಯೋಜನೆ ರೂಪಿಸಿ, ಮಹಿಳೆಯರಿಗೆ ಉಪಯುಕ್ತವಾದ ಪುಟ್ಟ ಪುಟ್ಟ ಕಾರ್ಯಕ್ರಮಗಳ ಮೂಲಕ ಮಹಿಳಾ ಘಟಕ ಮುನ್ನಡೆಯಲಿ ಎಂದರು. ನೂತನ ಮಹಿಳಾ ಘಟಕಕ್ಕೆ ಮಾತೃ ಸಂಘದ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಘಟಕದ ಗೌರವ ಸಲಹೆಗಾರರಾದ ಡಾ. ಆಶಾ ಜ್ಯೋತಿ ರೈ ಅವರು ಮಾತನಾಡಿ, ಪರಸ್ಪರ ಸಹಕಾರದಿಂದ ಯಶಸ್ಸು ಸಾಧ್ಯ. ನೂತನ ಮಹಿಳಾ ಘಟಕಕ್ಕೆ ಶುಭವಾಗಲಿ ಎಂದು ಹಾರೈಸಿದರು. ಮಹಿಳಾ ಘಟಕದ ಅಧ್ಯಕ್ಷೆ ಸಬಿತಾ ಆರ್.ಶೆಟ್ಟಿ ಅವರು ನೂತನ ಮಹಿಳಾ ಘಟಕಕ್ಕೆ ಸರ್ವ ಮಹಿಳೆಯರ ಸಹಕಾರ ದೊರೆಯಲಿ ಎಂದರು. ವೀಣಾ ಟಿ. ಶೆಟ್ಟಿ ಅವರು ಬಂಟರ ಉಡುಗೆ ತೊಡುಗೆಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಸ್ತೂರಿ ಶೆಟ್ಟಿ…
ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಸಂಸ್ಥೆಗಳು ‘ಆಧುನಿಕ ನಲಂದಾ ವಿಶ್ವವಿದ್ಯಾಲಯ’.ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಬಣ್ಣಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾನೂನು ಕಾಲೇಜಿನ ‘ಕಾನೂನು ಕಾರ್ಯಕ್ರಮ’ವನ್ನು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಆಳ್ವಾಸ್ ಆವರಣ ಕಂಡಾಗ ನಲಂದಾ ವಿಶ್ವವಿದ್ಯಾಲಯದ ನೆನಪು ಅನುರಣಿಸಿತು. ಆಳ್ವಾಸ್ ನಲ್ಲಿ ನಡೆಸುವ ಪ್ರತಿ ಕಾರ್ಯಕ್ರಮ ಅಭೂತಪೂರ್ವ, ಅದ್ವಿತೀಯ ಎಂದು ಶ್ಲಾಘಿಸಿದರು. ದೀಪಾವಳಿ ಸನಿಹದಲ್ಲಿ ಸಂಕ್ರಾಂತಿ ಬಂದ ಹಾಗೆ, ಈ ಕಾರ್ಯಕ್ರಮ ಉದ್ಘಾಟನೆಗೆ ಅವಕಾಶವನ್ನು ನೀಡಿದ್ದಾರೆ. ಇದು ನನ್ನ ಬದುಕಿನ ಅನನ್ಯ ಅವಕಾಶ, ಆನಂದ ಭರಿತ ಸಂಭ್ರಮ ಎಂದರು. ಕಾನೂನು ಕಾಲೇಜು ಸ್ಥಾಪನೆಯಿಂದ ಕಾನೂನು ಜ್ಯೋತಿ ಬೆಳಗಲಿ, ಸರ್ವರಿಗೂ ಕೀರ್ತಿ ತರಲಿ. ಎಲ್ಲರಿಗೂ ಭರವಸೆ ಮತ್ತು ಅವಕಾಶ ಹೆಚ್ಚಿದೆ ಎಂದರು. ಯಶಸ್ಸು ಆಕಸ್ಮಿಕ ಅಲ್ಲ. ಅಧ್ಯಯನ, ಶ್ರದ್ಧೆ, ತಪಸ್ಸಿನ ಕಾಯಕದ ಫಲಶ್ರುತಿ. ಗುರಿ ಸಾಧಿಸಲು ಏಕಾಗ್ರತೆ ಮುಖ್ಯ ಎಂದರು. ಭಾರತ ಸಂಸ್ಕೃತಿ- ನಾಗರಿಕತೆ ತೊಟ್ಟಿಲು. ನಾವು…