ಹೈನಾ ಚಿತ್ರದ ಮೂಲಕ ಬಾಂಗ್ಲಾದೇಶದಿಂದ ನಡೆಯುವ ಗಡಿ ಮೀರಿ ಅಕ್ರಮ ಪ್ರವೇಶದಂತಹ ಗಂಭೀರ ವಿಷಯವನ್ನ ಎತ್ತಿಹಿಡಿದ ನಿರ್ದೇಶಕ ವೆಂಕಟ್ ಭಾರದ್ವಾಜ್, ಇದೀಗ ಹೇ ಪ್ರಭು ಚಿತ್ರದ ಮೂಲಕ ಮತ್ತೊಂದು ಸಮಾಜಮುಖಿ ಹಾಗೂ ಪ್ರಸ್ತುತ ಸನ್ನಿವೇಶಕ್ಕೆ ಸೂಕ್ತವಾದ ವಿಷಯವನ್ನು ಓಲೈಸಿದ್ದಾರೆ. ಈ ಬಾರಿ ಅವರು ಸ್ಪರ್ಶಿಸಿರುವ ವಿಷಯ ಫಾರ್ಮ ಲಾಬಿ ಮತ್ತು ವೈದ್ಯರ ಜೀವನ. ಹೇ ಪ್ರಭು ಎಂಬ ಚಿತ್ರವು ನಮ್ಮ ಗ್ರಾಮಗಳು ಮತ್ತು ಗ್ರಾಮಸ್ಥರು ದೇಶದ ಆರ್ಥಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ನೀಡುತ್ತಿರುವ ನಿರಂತರ ಬೆಂಬಲವನ್ನು ಮತ್ತು ಅವರ ಮಹತ್ವವನ್ನ ತೀವ್ರವಾಗಿ ಒತ್ತಿಹೇಳುತ್ತದೆ. ಹೇ ಪ್ರಭು ಚಿತ್ರ ವೀಕ್ಷಕರನ್ನು ನಗೆಯ ಕಡಲಲ್ಲಿ ಮುಳುಗಿಸುತ್ತದೆ ಎಂದು ನಿರ್ದೇಶಕರು ಹೇಳುತ್ತಾರೆ . ಪ್ರಚಲಿತ ಸೋಶಿಯಲ್ ಮೀಡಿಯಾ ಎಂಬ ಮಾಯೆಯ ಅಲೆಯಲ್ಲಿ ಮೇಲೆದ್ದು ಹೆಸರು ಮಾಡಿರುವ ವ್ಯಕ್ತಿಗಳ ಪರಿಚಯ ಸಿನಿಮಾದಲ್ಲಿ ತೋರಿಸಲಾಗಿದೆ. “from scratch to success” ಎಂಬಂತೆ ಕೆಲವು ನಿಜ ಘಟನೆ ಸಾರಾಂಶವನ್ನು ಇಲ್ಲಿ ಹೇ ಪ್ರಭು ಹೇಳುತ್ತಾನೆ.

ಇಂದು ಸಾಮಾಜಿಕ ಜಾಲತಾಣಗಳಲ್ಲಿ “ಹೇ ಪ್ರಭು” ಎಂಬ ಶಬ್ದವೇ ಟ್ರೆಂಡ್ ಆಗಿದೆ. ಹಿಂದೆ ನಾವು “ಹೇ ರಾಮಾ… ದೇವ್ರೆ ಕಾಪಾಡು” ಎಂಬುದನ್ನು ಕೂಗುತ್ತಿದ್ದೆವು. ಆದರೆ ಇಂದು “ಹೇ ಪ್ರಭು” ಎಂಬ ಶಬ್ದವು ಜಾಗತಿಕವಾಗಿ ಹರಡಿರುವ, ಹೃದಯಸ್ಪರ್ಶಿ ಪದ. ಇದು ನಂಬಿಕೆಯೂ ಹೌದು, ಒಬ್ಬೊಬ್ಬ ವ್ಯಕ್ತಿಯ ಸಂಕಟದ ಕೂಗೂ ಹೌದು.
ಚಿತ್ರವು ಶೀಘ್ರದಲ್ಲಿ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ, ಪ್ರಚಾರ ಕಾರ್ಯಗಳು ಜೋರಾಗಿ ನಡೆಯುತ್ತಿವೆ. ಬೆಂಗಳೂರಿನಲ್ಲಿ ಮಹತ್ವದ ವಿಶ್ವ ಪ್ರಿಮಿಯರ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಇದೇ ವೇಳೆ ಪ್ರಮುಖ ಸಚಿವರು, ವೈದ್ಯರು ಮತ್ತು ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಅಮೃತ ಫಿಲ್ಮ್ ಸೆಂಟರ್ ಮತ್ತು 24 ರೀಲ್ಸ್ ಸಹಯೋಗದಲ್ಲಿ ನಿರ್ಮಾಣವಾಗಿರುವ ಈ ಚಿತ್ರ.
ಕಥೆ, ಚಿತ್ರಕಥೆ, ನಿರ್ದೇಶನ: ವೆಂಕಟ್ ಭಾರದ್ವಾಜ್
ಛಾಯಾಗ್ರಹಣ: ಪ್ರಮೋದ ಭಾರತೀಯ
ಸಂಗೀತ: ಡ್ಯಾನಿ ಅಂಡರ್ಸನ್
ಸಂಕಲನ : ಶಮೀಕ್ ಭಾರದ್ವಾಜ್
ನಟರು: ಜಯ್, ಸಮ್ಹಿತಾ ವಿನ್ಯಾ, ಯಮುನಾ ಶ್ರೀನಿಧಿ, ಗಜಾನನ ಹೆಗಡೆ, ಡಾ. ಸೂರ್ಯ, ಡಾ. ಸುಧಾಕರ್ ಶೆಟ್ಟಿ ಡಾ ಆದರ್ಶ್ ಗೌಡ , ಲಕ್ಷ್ಮಣ ಶಿವಶಂಕರ್, ಅಕೀಲ ತಂಡೂರು, ಹರಿಧನಂಜಯ, ದಿಲೀಪ್ ರಾಜ್, ನಿರಂಜನ್ ಮತ್ತು ಇತರರು.
ಹೇ ಪ್ರಭು – ಇದು ನಗೆಯ ಕುಂಭ ಮೇಳ





































































































