Author: admin
ಯುವ ಬಂಟರ ಸಂಘ (ರಿ) ಕಂಬಳಕಟ್ಟ ಕೊಡವೂರು ಆಯೋಜಿಸಿದ್ದ “ಆಟಿ ಒಂಜಿ ನೆಂಪು – ವನಸ್ ತಿನಸ್ ಪಿರಾಕುದ ಗೊಬ್ಬುಲು ಕಾರ್ಯಕ್ರಮವು ಆಗಸ್ಟ್ 11 ರಂದು ರವಿವಾರ ಕಂಬಳಕಟ್ಟ ಕಂಬಳಮನೆ ಹಾಗೂ ತೆಂಕುಮನೆ ವಠಾರದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ) ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಇವರು ಗಿಡ ನೆಡುವುದರ ಮುಖೇನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಕೃತೀಯ ವಸ್ತುಗಳೆಲ್ಲವೂ ಉಪಯೋಗಕ್ಕೆ ಬಾರದೇ ಇರದು. ಪ್ರಕೃತಿಯಲ್ಲಿ ದೊರೆಯುವ ವಸ್ತುಗಳ ಔಷಧೀಯ ಗುಣಗಳನ್ನು ನಾವು ತಿಳಿಯುವುದೇ ಈ ಆಟಿ ತಿಂಗಳಿನ ಆಹಾರ ಪದ್ಧತಿಯಿಂದ. ಆದರೇ ನಮ್ಮ ಈಗಿನ ಪ್ರಕೃತಿ ಬಗೆಗಿನ ನಿರ್ಲಕ್ಷ್ಯವೇ ಈಗ ನಡೆಯುತ್ತಿರುವ ಹಲವು ಪ್ರಕೃತಿ ವಿಕೋಪಗಳಿಗೆ ಕಾರಣ ಎಂದರು. ಇನ್ನೋರ್ವ ಮುಖ್ಯ ಅತಿಥಿ ಡಾ| ಕೆ.ಆರ್. ಶೆಟ್ಟಿ ತುಳು ಅಧ್ಯಯನ ಕೇಂದ್ರ ನಿಟ್ಟೆ ಪರಿಗಣಿತ ವಿಶ್ವ ವಿದ್ಯಾನಿಲಯ ಇದರ ಪ್ರಭಾರ ಮುಖ್ಯಸ್ಥರಾದ ಡಾ| ಸಾಯಿ ಗೀತಾ ಅವರು, ತುಳು ಸಂಸ್ಕೃತಿ…
ಸಿನಿಮಾ ರಂಗದ ಸಂಗೀತ ಕ್ಷೇತ್ರದಲ್ಲಿ ಯುವ ಸಂಗೀತ ನಿರ್ದೇಶಕರೊಬ್ಬರು ಸದ್ದಿಲ್ಲದೆ ಮಿಂಚುತ್ತಿದ್ದಾರೆ. ಅವರು ಬೇರೆ ಯಾರೂ. ಅಲ್ಲ ಮೂಲತಃ ಸಂಪ್ಯ ಕುಕ್ಕಾಡಿ ನಿವಾಸಿಯಾಗಿದ್ದು, ಪ್ರಸ್ತುತ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಕಲ್ಲಾಜೆ ಎಂಬಲ್ಲಿ ನೆಲೆಸಿರುವ ಪ್ರಸಾದ್ ಕೆ ಶೆಟ್ಟಿ. ಬಾಲ್ಯದಿಂದಲೇ ಸಂಗೀತ ಕ್ಷೇತ್ರದ ಬಗ್ಗೆ ವಿಪರೀತ ಆಸಕ್ತಿ ಹೊಂದಿದ್ದ ಇವರು ವಿಜ್ಞಾನ ವಿಭಾಗದಲ್ಲಿ ತನ್ನ ಪದವಿ ಪೂರ್ವ ಶಿಕ್ಷಣವನ್ನು ಪಡೆದಿದ್ದರೂ, ಸಂದೇಶ ಲಲಿತ ಕಲಾ ಕಾಲೇಜು, ಮಂಗಳೂರಿನಲ್ಲಿ ವೆಸ್ಟರ್ನ್ ಹಾಗೂ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ನಲ್ಲಿ ಪದವಿಯನ್ನು ಮಾಡಿದ್ದಾರೆ. ಹೆಚ್ಚುವರಿ ಸಂಗೀತ ಶಿಕ್ಷಣಕ್ಕಾಗಿ ಚೆನ್ನೈನಲ್ಲಿ ಮ್ಯೂಸಿಕ್ ಪ್ರೊಡಕ್ಷನ್ ಮತ್ತು ಸೌಂಡ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕರಾದ ಮಣಿಕಾಂತ್ ಕದ್ರಿ ಅವರ ಸಹಾಯಕರಾಗಿ 2 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ನಂತರ ತೆಲುಗು ಸಿನಿಮಾ ಸಂಗೀತ ನಿರ್ದೇಶಕ ಶಕ್ತಿಕಾಂತ್ ಕಾರ್ತಿಕ್ ಅವರೊಂದಿಗೆ 3 ವರುಷ ಹಲವಾರು ತೆಲುಗು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಆನಂತರ ಇನ್ನಷ್ಟು ಸಂಗೀತ ಜ್ಞಾನವನ್ನು ಪಡೆದುಕೊಂಡು…
ಮೂಡುಬಿದಿರೆ: ಅಂತಾರಾಷ್ಟ್ರೀಯ ಕ್ರೀಡಾ ಭೂಪಟದಲ್ಲಿ ಮೊದಲ ಬಾರಿಗೆ ಭಾರತ ಮಿನುಗುವಂತೆ ಮಾಡಿದ, ಸ್ವಾತಂತ್ರ್ಯ ಪೂರ್ವದಲ್ಲೇ ಭಾರತಕ್ಕೆ ಮೂರು ಒಲಿಂಪಿಕ್ಸ್ ಚಿನ್ನದ ಪದಕವನ್ನು ಗೆದ್ದುಕೊಟ್ಟ ಕ್ರೀಡಾ ಲೋಕದ ದಿಗ್ಗಜ ಮೇಜರ್ ಧ್ಯಾನ್‍ಚಂದ್ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ನುಡಿದರು. ಅವರು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ, ಗುರುವಾರ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಹಾಗೂ ಆಳ್ವಾಸ್ ಕಾಲೇಜು ಜಂಟಿಯಾಗಿ ರಾಷ್ಟೀಯ ಕ್ರೀಡಾ ದಿನದ ಹಿನ್ನಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶವೇ ಹೆಮ್ಮೆ ಪಡುವಂಥ ಸಾಧನೆ ತಮ್ಮ ಅದ್ಭುತ ಕ್ರೀಡಾ ಕೌಶಲದ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂಥ ಸಾಧನೆಯನ್ನು ಮಾಡಿದ ಹಿನ್ನೆಲೆಯಲ್ಲಿ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಮುಖ್ಯ ಉದ್ದೇಶ ಕ್ರೀಡೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವುದಾಗಿದೆ ಎಂದರು. ಆಳ್ವಾಸ್‍ನಲ್ಲಿ ಕ್ರೀಡಾಪಟುಗಳಿಗೆ ಪ್ರತೀ ದಿನ ಹಬ್ಬ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ತನ್ನ ಅಸ್ತಿತ್ವ ಹೊಂದುವ ಮೊದಲೇ ಆಳ್ವಾಸ್‍ನಲ್ಲಿ ಏಕಲವ್ಯ ಸ್ಪೋಟ್ಸ್ ಕ್ಲಬ್‍ನ…
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗೋವಾ ತುಳುಕೂಟದ ಸ್ಥಾಪಕಾಧ್ಯಕ್ಷರಾಗಿ ಹೋಟೆಲ್ ಉದ್ಯಮಿ ಕಾರ್ಕಳ ಇರ್ವತ್ತೂರಿನ ಗಣೇಶ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಗೋವಾದಲ್ಲಿ ಸುಮಾರು 2 ಸಾವಿರ ಮಂದಿ ತುಳುವರು ವಿವಿಧ ಉದ್ಯಮ, ಉದ್ಯೋಗದಲ್ಲಿದ್ದು ಅವರೆಲ್ಲರನ್ನೂ ಒಟ್ಟು ಸೇರಿಸುವ ನಿಟ್ಟಿನಲ್ಲಿ ತುಳುಕೂಟ ರಚನೆಯಾಗಿದೆ. ಗೋವಾದ ರಾಜಧಾನಿ ಪಣಜಿಯಲ್ಲಿ ಆಗಸ್ಟ್ 27 ರಂದು ನಡೆದ ಸಭೆಯಲ್ಲಿ ಗಣೇಶ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಗಣೇಶ್ ಶೆಟ್ಟಿ ಅವರು ಕಾರ್ಕಳ ಹಾಗೂ ಗೋವಾದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪಟ್ಲ ಫೌಂಡೇಶನ್ ಗೋವಾ ಇದರ ಅಧ್ಯಕ್ಷರಾಗಿರುವ ಇವರು ಗೋವಾ ಬಂಟರ ಸಂಘದ ಮಾಜಿ ಕಾರ್ಯದರ್ಶಿಯಾಗಿ, ಇರ್ವತ್ತೂರು ಶಾಲಾ ಶತಮಾನೋತ್ಸವ ಸಮಿತಿ ಮುಂಬಯಿಯ ಕಾರ್ಯದರ್ಶಿಯಾಗಿ, ಸಾಣೂರು ಗರಡಿ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ 27 ವರ್ಷಗಳಿಂದ ಮುರತ್ತಂಗಡಿ ಭಕ್ತವತ್ಸಲ ಸಮಿತಿಯ ಅಧ್ಯಕ್ಷರಾಗಿ ಪ್ರತೀ ವರ್ಷ ಸಾಧಕರಿಗೆ ಸನ್ಮಾನ, ಶಾಲಾ ಮಕ್ಕಳಿಗೆ ಶೈಕ್ಷಣಿಕ ನೆರವು, ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಮತ್ತಿತರ ಸಮಾಜಮುಖಿ ಕಾರ್ಯಗಳನ್ನು…
ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನ ಎರಡನೇ ತರಗತಿಯ ವಿದ್ಯಾರ್ಥಿ ವಿಹಾನ್ ಹತ್ವಾರ್ ಚೆಸ್ ಪಂದ್ಯದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹುಬ್ಬಳ್ಳಿ ಚೆಸ್ ಅಕಾಡೆಮಿ ಹಾಗೂ ಬಿಜಿಎಸ್-ಎನ್‍ಪಿಎಸ್ ಸ್ಕೂಲ್ ಬೆಂಗಳೂರು ಇದರ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನಡೆದ ಏಳು ವರ್ಷದೊಳಗಿನ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಯ ಈ ಸಾಧನೆಗೆ ಜಿ ಎಮ್ ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಸಂಸ್ಥೆಯ ಪರವಾಗಿ ಅಭಿನಂದಿಸಿ ಶುಭಹಾರೈಸಿದರು. ಇವರು ಉಡುಪಿಯ ಶಿಶಿರ್ ಹಾಗೂ ಶ್ರೀದೇವಿಯವರ ಪುತ್ರರಾಗಿದ್ದಾರೆ.
ಮೂಡುಬಿದಿರೆ: ಓರ್ವ ಸಮಾಜ ಸುಧಾರಕರಾಗಿ ನಾರಾಯಣ ಗುರು ಒಂದು ಜಾತಿ ಧರ್ಮದ ಗುರುವಲ್ಲ. ಅವರು ಹೇಳಿದ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವುದು ಮನುಷ್ಯ ಧರ್ಮದ ಸಾರ. ಚತುರ್ವರ್ಣ ಕರಾಳ ವ್ಯವಸ್ಥೆಯ ವಿರುದ್ಧದ ಹೋರಾಟವೇ ನಾರಾಯಣ ಗುರುಗಳ ಸಮಾಜ ಸುಧಾರಣೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ನುಡಿದರು. ಯುವವಾಹಿನಿ ಮೂಡುಬಿದಿರೆ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಆಯೋಜಿಸಿದ್ದ ಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಮೂಡುಬಿದಿರೆ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಶ್ರೀ ನಾರಾಯಣ ಗುರುಗಳ ಭಾವಚಿತ್ರ ರಚನೆ, ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯ 'ಗುರು ಸ್ಮರಣೆ ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾರಾಯಣ ಗುರುಗಳ ಧಾರ್ಮಿಕ ಸುಧಾರಣಾ ಚಳುವಳಿಗಳು ಬೇರೆ ಚಳುವಳಿಗಾರರ ಚಳುವಳಿಗಿಂತ ಭಿನ್ನವಾಗಿದ್ದವು. ಯುದ್ಧಕ್ಕೆ ಬಂದವರನ್ನು ಶಾಸ್ತ್ರವಿಲ್ಲದೆ ಹಿಮ್ಮೆಟ್ಟಿದ ಕೀರ್ತಿ ಅವರದು. ಪೂಜೆಗಾಗಿ ಕೆಳಜಾತಿಯವರನ್ನು ನೇಮಿಸಿದ ಅವರು, ವಿವಾಹಗಳನ್ನು ಸರಳಗೊಳಿಸಿ, ಮಧ್ಯಪಾನದ ವಿರುದ್ಧ ಹೋರಾಟ ನಡೆಸಿದರು. ಅವರ ಜೀವನದಲ್ಲಿ…
ಪ್ರಪಂಚವನ್ನು ನಡೆಸುವ ನಿಯಮಗಳ ಹಾಗೆ ಅಧ್ಯಾತ್ಮದಲ್ಲೂ ಧರ್ಮ ತತ್ವಗಳಿವೆ. ಸನಾತನ ಧರ್ಮದ ಪ್ರಕಾರ ಆಧ್ಯಾತ್ಮಿಕ ಎಂದರೆ ಆತ್ಮಕ್ಕೆ ಆಧ್ಯತೆಯನ್ನು ನೀಡುವ ಜೊತೆಯಲ್ಲಿ ಪ್ರೀತಿಯನ್ನು ಕೊಡುತ್ತದೆ. ಶರೀರದ ಪಂಚೇದ್ರಿಯಾ ಮೂಲಕ ಷಡ್ವೈರಿಗಳನ್ನು ಹೊಡೆದೋಡಿಸಿ ಸನ್ಮಾರ್ಗದ ಮೂಲಕ ಸತ್ಕರ್ಮಗಳನ್ನೂ ಮಾಡುವುದರಿಂದ ಆತ್ಮ ಶುದ್ದಿಕರಣವಾಗುತ್ತದೆ. ಕರ್ಮ ಸಿದ್ದಾಂತದ ಪ್ರಕಾರ ನಾವು ಮಾಡುವ ಯಾವುದೇ ಕಾರ್ಯವಿರಲಿ ಅದಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಹೊರತು ನಾವು ಎಣಿಸಿದಂತೆ ಸಿಗಲು ಸಾದ್ಯವಿಲ್ಲ. ಧರ್ಮದ ನೆಲೆಯಲ್ಲಿ ವಿವೇಕವನ್ನು ಬಳಸಿ ಮಾಡಿದ ಕರ್ಮಕ್ಕೆ ಪೂರ್ಣತೆ ಬರುವುದು ದೈವೀ ಕೃಪೆಯಿಂದ ಮಾತ್ರ. ಧರ್ಮ ಮಾರ್ಗ, ಕರ್ಮ ಮಾರ್ಗ, ಜ್ಞಾನ ಮಾರ್ಗ, ಭಕ್ತಿ ಮಾರ್ಗದಿಂದ ದೇವರನ್ನು ಒಲಿಸಬಹುದು ಎಂಬುವುದೇ ಶ್ರೀನಿವಾಸ ಕಲ್ಯಾಣೋತ್ಸವ ಮಾಡುವ ಚಿಂತನೆಯ ನಮ್ಮ ಈ ಆರಾಧನೆಯ ಮೂಲ ಉದ್ದೇಶ. ನಿರ್ಮಲ ಮನಸ್ಸಿನಿಂದ, ಶ್ರದ್ದೆ ಭಕ್ತಿಯಿಂದ ದೇವರನ್ನು ಅರಾದಿಸಿದರೆ ನಮ್ಮ ಸಕಲ ಇಷ್ಟಾರ್ಥ ಸಿದ್ದಿಗಳು ಫಲಿಸಬಹುದು ಎಂದು ಆಧ್ಯಾತ್ಮಿಕ ಚಿಂತಕ, ಧಾರ್ಮಿಕ ಪ್ರವಚನಕಾರ ಮುಲುಂಡ್ ಬಂಟ್ಸ್ ನ ಮಾಜಿ ಅಧ್ಯಕ್ಷ ಡಾ. ಸತ್ಯಪ್ರಕಾಶ್ ಶೆಟ್ಟಿ…
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಇದರ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಸಹ ಸಂಸ್ಥೆ ಯುವ ಬಂಟರ ಸಂಘ ಪುತ್ತೂರು ತಾಲೂಕು ಇದರ ನೇತೃತ್ವದಲ್ಲಿ ಮಹಿಳಾ ಮತ್ತು ವಿದ್ಯಾರ್ಥಿ ಬಂಟರ ಸಂಘದ ಸಹಕಾರದೊಂದಿಗೆ ಆಗಸ್ಟ್ 25 ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದ ದೋಣಿಂಜೆಗುತ್ತು ಸರೋಜಿನಿ ಟಿ.ಶೆಟ್ಟಿ ಮತ್ತು ಮೂಡಂಬೈಲು ತಿಮ್ಮಪ್ಪ ಯಾನೆ ಉಗ್ಗಪ್ಪ ಶೆಟ್ಟಿ ವೇದಿಕೆಯಲ್ಲಿ ಬಂಟೆರೆ ಚಾವಡಿಡ್ ಅಷ್ಟಮಿದ ಗೊಬ್ಬುಲು ಕಾರ್ಯಕ್ರಮ ಜರಗಿತು. ಇದೇ ವೇಳೆ ಯುವ ಬಂಟರ ಸಂಘದಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಡ್ರಾಯಿಂಗ್ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ದೀಪ ಬೆಳಗಿಸಿ, ಬಂಟೆರೆ ಚಾವಡಿಡ್ ಅಷ್ಟಮಿದ ಗೊಬ್ಬುಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಂದು ಉತ್ತಮವಾದ ಕಾರ್ಯಕ್ರಮವನ್ನು ಯುವ ಬಂಟರ ಸಂಘ ಹಮ್ಮಿಕೊಂಡಿದೆ. ಇದಕ್ಕೆ ನಮ್ಮ ಪೂರ್ಣ ಬೆಂಬಲವಿದೆ. ಯುವಕರಿಗೆ ಸ್ಪೂರ್ತಿಯನ್ನು ತುಂಬುವ…
ಮೂಲ್ಕಿ ಬಂಟರ ಸಂಘದ ಕಟ್ಟಡ ನವೀಕರಣದ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಮೂಲ್ಕಿ ಸೀಮೆ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಿತು. ಕ್ಷೇತ್ರದ ಅರ್ಚಕರಾದ ನರಸಿಂಹ ಭಟ್ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಅಭಿವೃದ್ಧಿ ಕಾರ್ಯಗಳಿಗೆ ಶುಭ ಹಾರೈಸಿದರು. ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮೂಲ್ಕಿ ಬಂಟರ ಸಂಘದ ಕಟ್ಟಡ ನವೀಕರಣದ ಮನವಿ ಪತ್ರ ಬಿಡುಗಡೆ ಮಾಡಿ ಮಾತನಾಡಿ ಸಂಘದ ಹಾಗೂ ಸಮಾಜದ ಎಲ್ಲಾ ಸದಸ್ಯರು ಅಭಿವೃದ್ಧಿ ಕಾರ್ಯಗಳಲ್ಲಿ ಒಗ್ಗಟ್ಟಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು. ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಮಾಜಿ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ಹಿರಿಯರಾದ ದೆಪ್ಪುಣಿ ಗುತ್ತು ಸುಧಾಕರ ಶೆಟ್ಟಿ, ಮುರಳಿಧರ ಭಂಡಾರಿ, ಗಂಗಾಧರ ಶೆಟ್ಟಿ ಬರ್ಕೆ ತೋಟ, ಸಾಯಿನಾಥ ಶೆಟ್ಟಿ ಮುಂಡ್ಕೂರು, ಸ್ವರಾಜ್ ಶೆಟ್ಟಿ…
ಮೂಡುಬಿದಿರೆ: ಎಲ್ಲರೂ ಒಂದೇ ಮನಸ್ಸಿನಿಂದ ಒಂದು ನಿಗದಿತ ಗುರಿಯೆಡೆಗೆ ಹೆಜ್ಜೆ ಹಾಕಿದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಮಾಜಿ ವಿಧಾನ ಪರಿಷತ ಸದಸ್ಯ ಗಣೇಶ್ ಕಾರ್ಣಿಕ್ ತಿಳಿಸಿದರು. ಅವರು ಸೋಮವಾರ, ಆಳ್ವಾಸ್‍ನ ಶಿವರಾಮ್ ಕಾರಂತ ವೇದಿಕೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ- ದಿ ಮ್ಯಾಟ್ರಿಕ್ಸ್ ಗ್ರೂಪ್ ಆಯೋಜಿಸಿದ್ದ- ‘’ಒನ್ ಟೀಮ್, ಒನ್ ಡ್ರೀಮ್’’- ಸಾಮೂಹಿಕ ಯಶಸ್ಸಿನ ಹಾದಿ ವಿಷಯದ ಕುರಿತು ಮಾತನಾಡಿದರು. ಪ್ರತಿಯೊಬ್ಬರು ತಮ್ಮ ಸಾಮಾಥ್ರ್ಯ ಹಾಗೂ ದೌರ್ಬಲ್ಯಗಳನ್ನು ಅರಿತು, ತಮ್ಮಲ್ಲಿರುವ ನ್ಯೂನತೆಗಳನ್ನು ಮಣಿಸಲು ಆರಂಬಿಸಿದಾಗ ಸಾಧಿಸಲು ಹೊರಟ ಕೆಲಸದಲ್ಲಿ ಜಯ ಲಭಿಸಲು ಸಾಧ್ಯ. ಇದರ ಜೊತೆಗೆ ಪ್ರತಿಯೊಬ್ಬರು ತಂಡದಲ್ಲಿ ಕೆಲಸಮಾಡುವ ಅಗತ್ಯತೆಯನ್ನು ಅರಿಯಬೇಕು. ಇಲ್ಲಿ ವೈಯಕ್ತಿಕ ಹಿತಾಸಕ್ತಿಗಳಿಗೆ ಪ್ರಾಶಸ್ತ್ಯವಿರುವುದಿಲ್ಲ. ತಂಡದ ಶ್ರೇಯಸ್ಸೇ ಪ್ರತಿಯೊಬ್ಬರ ಗುರಿಯಾಗಿರುತ್ತದೆ. ಈ ಹಂತದಲ್ಲಿ ನಾವು ಪಡೆಯುತ್ತಿರುವ ಶಿಕ್ಷಣ ಈ ಪ್ರಕ್ರಿಯೆಗೆ ಎಷ್ಟು ಪರಿಣಾಮಕಾರಿಯಾಗಿ ಸ್ಪಂದಿಸುತ್ತಿದೆ ಎಂಬುದು ಮುಖ್ಯ. ಶಿಕ್ಷಣ ನಮ್ಮನ್ನು ಜವಾಬ್ದಾರಿಯುತ ಹಾಗೂ ಉತ್ತರದಾಯಿತ್ವದ ವಿದ್ಯಾರ್ಥಿಗಳನ್ನಾಗಿಬೇಕು. ಈ ಹಂತದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಂಡು ಬೆಳವಣಿಗೆ ಹೊಂದುವತ್ತಾ ಶ್ರಮಿಸಬೇಕು ಎಂದರು.…