Author: admin

ತುಳುನಾಡ ಪೌಂಡೇಶನ್ ಪುಣೆ ವತಿಯಿಂದ ಮಾರ್ಚ್ 3ರಂದು ಕ್ರಾಸ್ ಬಾರ್ ಮಲ್ಟಿಸ್ಪೋರ್ಟ್ಸ್ ಮೈದಾನ ಸಿಂಹಘಡ್ ರೋಡ್ ಪುಣೆ ಇಲ್ಲಿ ತುಳು ಕನ್ನಡಿಗರಿಗಾಗಿ ಆಯೋಜಿಸಿದ ಪ್ರಥಮ ಬಾಕ್ಸ್ ಕ್ರಿಕೆಟ್ ಪಂದ್ಯಾಟದಲ್ಲಿ ಅಭಿಜಿತ್ ಶೆಟ್ಟಿ ನೇತೃತ್ವದ ಕಟೀಲ್ ವಾರಿಯರ್ಸ್ ತಂಡ ಜಯಗಳಿಸಿ ಟ್ರೋಫಿ ಹಾಗೂ ನಗದು ಬಹುಮಾನ ಪಡೆದುಕೊಂಡಿತು. ಅಂತಿಮ ಹಣಾಹಣಿಯಲ್ಲಿ ಸಾಯಿ ಕ್ರಿಕೆಟರ್ಸ್ ಹಾಗೂ ಕಟೀಲ್ ವಾರಿಯರ್ಸ್ ತಂಡಗಳು ಸೆಣಸಿದ್ದು ವಸಂತ್ ಶೆಟ್ಟಿ ನೇತೃತ್ವದ ಸಾಯಿ ಕ್ರಿಕೆಟರ್ಸ್ ತಂಡ ದ್ವಿತೀಯ ಸ್ಥಾನಿಯಾಗಿ ರನ್ನರ್ ಆಫ್ ಪ್ರಶಸ್ತಿ ಹಾಗೂ ನಗದು ಬಹುಮಾನವನ್ನು ಪಡೆದುಕೊಂಡಿತು. ಪಂದ್ಯಾವಳಿಯಲ್ಲಿ ಬೆಸ್ಟ್ ಬ್ಯಾಟರ್ ಆಗಿ ವೈಬಿಪಿ ವಾರಿಯರ್ಸ್ ತಂಡದ ಅಭಿನಂದನ್ ಶೆಟ್ಟಿ ಹಾಗೂ ಆರ್ ಕೆ ತಂಡದ ಜಯಲಕ್ಷ್ಮೀ, ಬೆಸ್ಟ್ ಬೌಲರ್ ಆಗಿ ಕಟೀಲ್ ವಾರಿಯರ್ಸ್ ತಂಡದ ಅಖಿಲ್ ಮತ್ತು ತುಳುನಾಡು ತಂಡದ ಖುಷಿ ಶೆಟ್ಟಿ, ಬೆಸ್ಟ್ ಫೀಲ್ಡರ್ ಬಹುಮಾನವನ್ನು ಕಟೀಲ್ ವಾರಿಯರ್ಸ್ ತಂಡದ ಸುವಿತ್ ಶೆಟ್ಟಿ ಹಾಗೂ ಚಾನೆಲ್ ತಂಡದ ಶ್ರೇಯಾ ಶೆಟ್ಟಿ ಪಡೆದುಕೊಂಡರೆ ಸಾಯಿ ಕ್ರಿಕೆಟರ್ಸ್ ತಂಡದ…

Read More

ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಠೇವಣಾತಿಯು 2024 ಫೆಬ್ರವರಿ ತಿಂಗಳಾಂತ್ಯಕ್ಕೆ ರೂ.503 ಕೋಟಿಗೂ ವಿiÁರಿದೆ. ಇದು ಸಹಕಾರ ಸಂಘದ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು. ಸ್ಥಾಪನೆಯ 30 ವರ್ಷದ ಅವಧಿಯಲ್ಲಿ ಒಂದು ಸಹಕಾರ ಸಂಸ್ಥೆಯು ರೂ.500 ಕೋಟಿ ಮೀರಿದ ಠೇವಣಾತಿ ಹೊಂದಿರುವುದು ಅನುಪಮ ಸಾಧನೆಯಾಗಿದೆ. 2024ರ ಫೆಬ್ರವರಿ ತಿಂಗಳ ಅಂತ್ಯಕ್ಕೆ ಠೇವಣಿ ಮತ್ತು ಸಾಲ ಸೇರಿ ರೂ.943 ಕೋಟಿಯನ್ನು ಮೀರಿದ ವ್ಯವಹಾರವನ್ನು ದಾಖಲಿಸಿ, ವರ್ಷಾಂತ್ಯ ಮಾರ್ಚ್‍ಗೆ ರೂ.1000 ಕೋಟಿ ಒಟ್ಟು ವ್ಯವಹಾರವನ್ನು ಸಾಧಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನಿರಿಸಿದೆ. ಸಂಘವು ವರ್ಷಾಂತ್ಯ 31.03.2024ಕ್ಕೆ ರೂ.10 ಕೋಟಿ ಮೀರಿದ ನಿವ್ವಳ ಲಾಭ ಗಳಿಸುವ ನಿರೀಕ್ಷೆಯಲ್ಲಿದೆ. ಸಂಘದ ವ್ಯವಹಾರ ದಕ್ಷತೆಯ ಇನ್ನೊಂದು ಪ್ರಮುಖ ಅಂಶವೆಂದರೆ ಕಳೆದ 16 ವರ್ಷಗಳಿಂದ ನಿವ್ವಳ ಅನುತ್ಪಾದಕ ಆಸ್ತಿಯು ಶೂನ್ಯ ಪ್ರಮಾಣದಲ್ಲಿರುವುದು ಹಾಗೂ ಸಂಘದ ಸದಸ್ಯರಿಗೆ ಸ್ಥಾಪನೆಯಿಂದ ನಿರಂತರವಾಗಿ ಡಿವಿಡೆಂಡ್ ನೀಡುತ್ತಾ ಬಂದಿದ್ದು, ಕಳೆದ…

Read More

ಖ್ಯಾತ ಹೋಟೆಲ್ ಉದ್ಯಮಿ, ಸಮಾಜಸೇವಕ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ಸ್ ನ ಸಿಎಂಡಿ ರಾಜೇಂದ್ರ ವಿಶ್ವನಾಥ್ ಶೆಟ್ಟಿ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಮತ್ತು ಒಕ್ಕೂಟದಲ್ಲಿ ನಡೆಯುವ ಜನಪರ ಕಾಳಜಿಯ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುವ ಸಲುವಾಗಿ ಒಕ್ಕೂಟಕ್ಕೆ ಮಹಾ ನಿರ್ದೇಶಕರಾಗಿ ಸೇರುವುದಾಗಿ ಭರವಸೆ ನೀಡಿದ್ದಾರೆ. ಇವರು ಈ ಹಿಂದೆ ಒಕ್ಕೂಟದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ಮುಂದೆ ಮಹಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾಜೇಂದ್ರ ವಿ ಶೆಟ್ಟಿಯವರನ್ನು ಅವರ ಪುಣೆಯ ವಿಶ್ವನಾಥ್ ಪ್ಯಾಲೇಸ್ ಹೋಟೆಲಿನಲ್ಲಿ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನದಾಸ್ ಶೆಟ್ಟಿ ಮತ್ತು ಪೋಷಕ ಸದಸ್ಯ ಗಿರೀಶ್ ಶೆಟ್ಟಿ ತೆಳ್ಳಾರ್ ಉಪಸ್ಥಿತರಿದ್ದರು.

Read More

ದೆಹಲಿಯ ಬಾಲಕಟೋರ ಸ್ಟೇಡಿಯಂ ನಲ್ಲಿ ದಿನಾಂಕ 27-02-2024 ರಂದು ಗ್ಲೋಬಲ್ ಇಂಡಿಯಾ ಎಂಟರ್‌ ಟೈನ್ ಮೆಂಟ್ ಪ್ರೊಡಕ್ಷನ್ ಮತ್ತು ಆಲಿ ಶರ್ಮಾ ಜಂಟಿಯಾಗಿ ಪ್ರಸ್ತುತ ಪಡಿಸಿರುವ ಮಿಸ್ಸಸ್ /ಮಿಸ್ಟರ್‌ ಮತ್ತು ಮಿಸ್ ಹಾಗೂ ಮಿಸ್ ಟೀನ್ ಗ್ಲೋಬಲ್ ವಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಕುಮಾರಿ ಈಶಿಕಾ ಶೆಟ್ಟಿ “ಗ್ಲೋಬಲ್ ಮಿಸ್ ಟೀನ್ ವರ್ಲ್ಡ್  ಇಂಡಿಯಾ ಓಶಿಯಾನ 2024” ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿರುತ್ತಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತಾಡಿದ ಇಶಿಕಾ ಶೆಟ್ಟಿ, “ತಂದೆ ತಾಯಿಯ ಸಹಕಾರದಿಂದ ನಾನು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲ್ಲಲು ಸಾಧ್ಯವಾಯಿತು. ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್, ರವೀಶ್ ನಾಯಕ್ ಅವರ ಸಹಕಾರಕ್ಕೆ ಧನ್ಯವಾದಗಳು” ಎಂದರು. ತಂದೆ ಶರತ್ ಶೆಟ್ಟಿ ಮಾತಾಡಿ “ಇಶಿಕಾ ಕುರಿತು ಮಾತಾಡಲು ಹೆಮ್ಮೆ ಆಗ್ತಾ ಇದೆ. ಸೌಂದರ್ಯ ಸ್ಪರ್ಧೆಯಲ್ಲಿ ದೇಶದ ನಾನಾ ಭಾಗಗಳಿಂದ 65ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು ಅವರಲ್ಲಿ ನನ್ನ ಮಗಳು ಪ್ರಥಮ ಸ್ಥಾನಿಯಾಗಿ ಗೆದ್ದಿರುವುದು ಅತೀವ ಸಂತಸ ಉಂಟುಮಾಡಿದೆ. ನನಗೆ ಪೊಲೀಸ್…

Read More

ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಇದರ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ಸಂಘಟನೆಯ ಮಹಾಪೋಷಕರಾದ ಎಸಿಪಿ ಎಸ್. ಮಹೇಶ್ ಕುಮಾರ್ ಅವರಿಗೆ ಅಭಿನಂದನಾ ಸಮಾರಂಭ ಇಲ್ಲಿನ ಗೋವಿಂದ ದಾಸ್ ಕಾಲೇಜ್ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಖ್ಯಾತ ಜ್ಯೋತಿಷಿ ನಾಗೇಂದ್ರ ಭಾರಧ್ವಾಜ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ಬಾಲ್ಯ ಕಾಲದ ನೆನಪುಗಳು ಜೀವನದ ಕೊನೆಯ ತನಕ ನೆನಪಲ್ಲಿ ಉಳಿಯುವಂತದ್ದು. ಅದನ್ನು ಮತ್ತೆ ನೆನಪಿಸುತ್ತಿರುವ ಲೆಜೆಂಡ್ಸ್ ಕ್ರಿಕೆಟ್ ಲೀಗ್ ನಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ಸುರತ್ಕಲ್ ಸ್ಪೋರ್ಟ್ಸ್ ಕಲ್ಚರಲ್ ಕ್ಲಬ್ ಈ ಮೂಲಕ ಪ್ರಶಂಸಾರ್ಹ ಕೆಲಸವನ್ನು ಮಾಡಿದೆ. ಹಿರಿಯರ ಕ್ರಿಕೆಟ್ ಪಂದ್ಯಾವಳಿಯನ್ನು ಪ್ರೋತ್ಸಾಹಿಸುತ್ತಿರುವ ಎಸಿಪಿ ಮಹೇಶ್ ಕುಮಾರ್ ಅವರಿಗೆ ಅಭಿನಂದನೆಗಳು. ಇಂತಹ ಕಾರ್ಯಕ್ರಮ ಇನ್ನಷ್ಟು ಆಯೋಜನೆಗೊಳ್ಳಲಿ” ಎಂದು ಶುಭ ಹಾರೈಸಿದರು. ಸಂಘಟನೆಯ ಮಹಾಪೋಷಕರಾಗಿದ್ದುಕೊಂಡು ಮಂಗಳೂರಿನಿಂದ ಮಡಿಕೇರಿಗೆ ವರ್ಗಾವಣೆಗೊಂಡಿರುವ ಎಸಿಪಿ ಮಹೇಶ್ ಕುಮಾರ್ ಅವರನ್ನು ವೇದಿಕೆಯಲ್ಲಿ ಅತಿಥಿಗಳು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತಾಡಿದ ಅವರು, “ಹಿರಿಯರಾದ ಮಹಾಬಲ ಪೂಜಾರಿ ಕಡಂಬೋಡಿ ಅವರ…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲ್ಕಿ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಸoಕೀರ್ಣದಲ್ಲಿ ಒಕ್ಕೂಟದ ಮಹಾ ನಿರ್ದೇಶಕರಾದ ಶ್ರೀ ತೋನ್ಸೆ ಆನಂದ ಶೆಟ್ಟಿಯವರು ಕೊಡುಗೆಯಾಗಿ ನಿರ್ಮಿಸುತ್ತಿರುವ ಶ್ರೀಮತಿ ಶಶಿರೇಖಾ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್ ಇದರ ಕಾಮಗಾರಿಯನ್ನು ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರು ವೀಕ್ಷಣೆ ಮಾಡಿದರು. ಕಾಮಗಾರಿಯ ಕಂಟ್ರಾಕ್ಟರ್ ಶ್ರೀ ಗುರುಪ್ರಸಾದ್ ಶೆಟ್ಟಿ, ಇಂಜಿನಿಯರ್ ಶ್ರೀ ಹರೀಶ್ ಶೆಟ್ಟಿ ಹಾಗೂ ಒಕ್ಕೂಟದ ಇಂಜಿನಿಯರ್ ಶ್ರೀ ಜೀವನ್ ಕೆ. ಶೆಟ್ಟಿ ಮುಲ್ಕಿಯವರ ಉಪಸ್ಥಿತಿಯಲ್ಲಿ ಶ್ರೀ ಐಕಳ ಹರೀಶ್ ಶೆಟ್ಟಿಯವರು ಪರಿಶೀಲನೆ ನಡೆಸಿ ನಿರ್ಮಾಣಗಾರರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡು ಕಾಮಗಾರಿ ವೇಗ ಪಡೆದುಕೊಳ್ಳಲು ಸಲಹೆ ನೀಡಿದರು.

Read More

ಮೂಡಬಿದಿರೆ: ದೇಶದ ಪ್ರತಿಯೊಬ್ಬ ನಾಗರಿಕನಿಗೂ ತನಗಾದ ಅನ್ಯಾಯದ ವಿರುದ್ಧ ನ್ಯಾಯ ಪಡೆದುಕೊಳ್ಳುವ ಅವಕಾಶವನ್ನು ನಮ್ಮ ಸಂವಿಧಾನ ನೀಡಿದೆ. ಅದನ್ನು ಸರಿಯಾದ ಮಾರ್ಗದಲ್ಲಿ ಪಡೆದುಕೊಳ್ಳಲು ಜ್ಞಾನದ ಕೊರತೆ ನಮ್ಮ ಜನರಲ್ಲಿದೆ ಎಂದು ಉಡುಪಿ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ್ ಶ್ಯಾನುಭಾಗ್ ನುಡಿದರು. ಆಳ್ವಾಸ್‍ನ ರೊಸ್ಟ್ರಮ್ ಸ್ಪೀಕರ್ಸ್ ಕ್ಲಬ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತರ್ತುಪರಿಸ್ಥಿತಿ ಸಂದರ್ಭದಲ್ಲಿ ಯಾವುದೇ ತಪ್ಪು ಮಾಡದೇ ಜೈಲು ಶಿಕ್ಷೆ ಅನುಭಸುತ್ತಿರುವಾಗ ಸಂವಿಧಾನ, ಕಾನೂನು ಹಾಗೂ ಹಕ್ಕುಗಳ ಕುರಿತು ಅರಿತುಕೊಳ್ಳುವಂತಾಯಿತು. ಮುಂದೆ ಅದೇ ಹಿನ್ನಲೆ ಶೋಷಿತರ ಕೂಗಿಗೆ ಧ್ವನಿಯಾಗಲು ನೆರವಾಯಿತು ಎಂದರು. ಪ್ರತಿಯೊಂದು ನೌಕರರ ಹಿತರಕ್ಷಣೆಗೂ ಒಂದೊಂದು ಸಂಘಟನೆಗಳಿವೆ. ಆದರೆ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಅಧಿಕೃತ ವೇದಿಕೆಗಳಿಲ್ಲ. ಆದುರಿಂದ ಪ್ರತಿಯೊಬ್ಬರೂ ಕಾನೂನಿನ ಜ್ಞಾನಪಡೆದು ಹೋರಾಟ ಮಾಡಿದರೆ ಪ್ರಜಾತ್ರಭುತ್ವದ ಅರ್ಥ ನಿಜವಾಗಿ ಸಾಕಾರಗೊಳ್ಳಲಿದೆ ಎಂದು ತಿಳಿಸಿದರು. ನಾಗರಿಕರ ಹಕ್ಕು ಹಾಗೂ ಹಿತರಕ್ಷಣೆಗೆ ಜನಜಾಗೃತಿಯಲ್ಲದೆ ಅನ್ಯ ಮಾರ್ಗಗಳಿಲ್ಲ. ಕಾನೂನು , ಕಾಯ್ದೆಗಳ ಕುರಿತು ಜನಸಾಮಾನ್ಯನಲ್ಲಿ ಸಾಕಷ್ಟು ಮಾಹಿತಿ ಇಲ್ಲ.…

Read More

ಬಾಂಬೆ ಬಂಟ್ಸ್ ಆಸೋಸಿಯೇಶನ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ಇಂದು ಉತ್ತಮವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಉತ್ತಮ ಪ್ರದರ್ಶನಗಳನ್ನು ನೀಡುವುದರೊಂದಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಸಂಸ್ಥೆಯು ದಶಮಾನೋತ್ಸವವನ್ನು ಆಚರಿಸಿರುವುದು ಹೆಮ್ಮೆಯ ವಿಷಯವಾಗಿದೆ. ಸಂಸ್ಥೆಯ ಅಭಿವೃದ್ಧಿಯಲ್ಲಿ ಪ್ರಾಂಶುಪಾಲರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ. ತಂದೆ-ತಾಯಿ ಮತ್ತು ಶಿಕ್ಷಕರು ವಿದ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನತ್ತ ಕೊಂಡೊಯ್ಯುವವರು. ಆದ್ದರಿಂದ ಗುರುಗಳು ಮತ್ತು ತಂದೆ-ತಾಯಿಯನ್ನು ಅತ್ಯಂತ ಗೌರವದಿಂದ ಕಾಣುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದು ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ಅವರು ನುಡಿದರು. ಫೆಬ್ರವರಿ 5 ರಂದು ಜೂಯಿ ನಗರದ ಬಾಂಬೆ ಬಂಟ್ಸ್ ಅಸೋಸಿಯೇಶನ್ ಇದರ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ ಶೆಟ್ಟಿ ಕಾಂಪ್ಲೆಕ್ಸ್‌ನ ಸೌಮ್ಯಲತಾ ಸದಾನಂದ ಶೆಟ್ಟಿ ಅಡಿಟೋರಿಯಂನಲ್ಲಿ ನಡೆದ ಆಸೋಸಿಯೇಶನ್‌ನ ಉನ್ನತ ಶಿಕ್ಷಣ ಸಂಸ್ಥೆಯ ರಾತ್ರಿ ಶಾಲೆಯ ದಶಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ…

Read More

ತುಳುನಾಡಿನಲ್ಲಿ ಜಾನಪದೀಯ ಆಚರಣೆಗಳಿವೆ. ಈ ನಾಡಿನ ಜನರಿಗೆ ಧರ್ಮ ಮುಖ್ಯ. ಧರ್ಮ ಬಿಟ್ಟು ತುಳುನಾಡಿನವರು ಬದುಕಲಾರರು. ನಾಗಾರಾಧನೆಗೆ ತುಳುನಾಡಿನಲ್ಲಿ ಬಹಳ ಮಹತ್ವವಿದೆ. ಇದು ಜನಪದೀಯವಾಗಿ ಬೆಳೆದು ಬಂದಿದೆ. ಇದರಿಂದ ಜೀವನ ಮೌಲ್ಯ, ನಂಬಿಕೆ, ಶ್ರದ್ಧೆ, ಭಕ್ತಿ ವೃದ್ಧಿಯಾಗಿ ಮಾನಸಿಕವಾಗಿ ಬಲಿಷ್ಠರಾಗುವೆವು ಎಂದು ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ನುಡಿದರು. ಅವರು ಅಡ್ವೆ ಕೆಳಗಿನಮನೆ ಕುಟುಂಬಸ್ಥರ ಮೂಲ ನಾಗಬನದಲ್ಲಿ ನಡೆದ ಏಕ ಪವಿತ್ರ ನಾಗಮಂಡಲೋತ್ಸವ ನಿಮಿತ್ತ ಜರಗಿದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ನಾಗರಾಧನೆಯಲ್ಲಿ ಭಕ್ತಿಯ ಪ್ರಧಾನ, ನಾಗದೇವರ ಋಣ ತೀರಿಸಲು ಸಾಧ್ಯವಿಲ್ಲ. ನಾಗಮಂಡಲ ಉತ್ಸವ ಪವಿತ್ರ ಕಾರ್ಯ. ಎಲ್ಲರಿಗೂ ನಾಗದೇವರು ಅನುಗ್ರಹಿಸಲಿ ಎಂದರು. ಪಂಜ ಭಾಸ್ಕರ್ ಭಟ್ ಧಾರ್ಮಿಕ ಉಪನ್ಯಾಸವನ್ನು ನೀಡಿ, ನಾಗರಾಧನೆ ತುಳುನಾಡಿನ ಅವಿಭಾಜ್ಯ ಅಂಗ. ಕೃಷಿ ಭೂಮಿಯು ನಾಗಭೂಮಿಯಿಂದ ವಿರಹಿತವಾಗಿದ್ದು ಉಳದೇ ಇದ್ದಲ್ಲಿ ಅದು…

Read More

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆ, ರಾಜ್ಯದ ನಂ. 1 ಕನ್ನಡ ಮಾಧ್ಯಮ ಶಾಲೆಯಾಗಿ ಗುರುತಿಸಿಕೊಂಡಿರುವ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2024-25ನೇ ಸಾಲಿನ, 6ರಿಂದ 9ನೇ ತರಗತಿಯ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆಸುವ ಪ್ರವೇಶ ಪರೀಕ್ಷೆ, ಮೂಡುಬಿದಿರೆಯ ವಿದ್ಯಾಗಿರಿ ಹಾಗೂ ಪುತ್ತಿಗೆ ಆವರಣದಲ್ಲಿ ಭಾನುವಾರ ನಡೆಯಿತು. ರಾಜ್ಯಾದ್ಯಂತ 32 ಶೈಕ್ಷಣಿಕ ಜಿಲ್ಲೆಗಳ 19244 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 15986 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 6ನೇ ತರಗತಿಗೆ 11795, 7ನೇ ತರಗತಿಗೆ 1438, 8ನೇ ತರಗತಿಗೆ 1889 ಹಾಗೂ 9ನೇ ತರಗತಿಗೆ 864 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದರು. ಬೆಳಗಾವಿ ಜಿಲ್ಲೆಯಿಂದ 5237 ವಿದ್ಯಾರ್ಥಿಗಳು, ಬಾಗಲಕೋಟೆ ಹಾಗೂ ವಿಜಯಪುರದಿಂದ ಕ್ರಮವಾಗಿ 2783 ಹಾಗೂ 1554 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.ಪರೀಕ್ಷಾ ಅರ್ಜಿ ಸಲ್ಲಿಕಾ ವ್ಯವಸ್ಥೆಯು ಕಳೆದ ವರ್ಷದವರೆಗೆ ಕೈಬರಹದಲ್ಲಿ ಸಲ್ಲಿಕೆಯಾಗುತ್ತಿ ದ್ದು, ಪ್ರತಿಭಾನ್ವಿತ ಮಕ್ಕಳನ್ನು ತಲುಪುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ಆನ್‍ಲೈನ್‍ನಲ್ಲಿ ಅರ್ಜಿ ನಮೂನೆಯನ್ನು ಕ್ಯೂಆರ್ ಕೋಡ್ ಸಹಿತವಾಗಿ ವ್ಯವಸ್ಥೆಗೊಳಿಸಿಲಾಗಿತ್ತು.…

Read More