ಪುಣೆಯ ಕಂಟಾನ್ಮೆಂಟ್ ಪುಸ್ತಕ್ ಪೇಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಣೆಯ ಖ್ಯಾತ ಮಕ್ಕಳ ತಜ್ಞ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಡುಬಿದಿರೆ ಮೂಲದ ಡಾ. ಸುಧಾಕರ ಶೆಟ್ಟಿಯವರಿಗೆ ‘ಸಮಾಜ ಭೂಷಣ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪುಣೆಯ ಮುನ್ಸಿಪಲ್ ಕಾರ್ಪೊರೇಶನ್ ನ ಮಹಾತ್ಮ ಪುಲೆ ಆಡಿಟೋರಿಯಂನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸರಕಾರದ ಮಾಜಿ ಸಚಿವ ಬಾಲಾಸಾಹೇಬ್ ಶಿವಾರ್ಕರ್, ಹೈಕೋರ್ಟ್ ಹಿರಿಯ ನ್ಯಾಯವಾದಿ ಗಿರೀಶ್ ಡಾಂಗೆ, ಕಂಟಾನ್ಮೆಂಟ್ ನ ಮಾಜಿ ಉಪಾಧ್ಯಕ್ಷರಾದ ಅರ್ಜುನ್ ಕುರ್ಪೆ, ಬಾಪು ಗಾನ್ಲ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.