ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯದ ಕೀರ್ತಿ ಪತಾಕೆ ಹಾರಿಸಿದ, ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಕೊಡಗಿನ ದೀಪಾ ಭಾಸ್ತಿ ಅವರಿಗೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಬೃಹತ್ ಗೌರವ ಸನ್ಮಾನ ‘ಅಭಿವಂದನಾ ದೀಪಾ’ ಕಾರ್ಯಕ್ರಮ ಜೂನ್ 29 ರಂದು ಮಡಿಕೇರಿಯಲ್ಲಿ ನಡೆಯಿತು. ಸತ್ಕಾರ್ ಸಭಾಂಗಣದಲ್ಲಿ ನಡೆದ ಈ ಅಪರೂಪದ ಕಾರ್ಯಕ್ರಮದಲ್ಲಿ ಜಿಲ್ಲೆಯ 50 ಸಂಘ ಸಂಸ್ಥೆಗಳು ದೀಪಾ ಅವರನ್ನು ಸನ್ಮಾನಿಸಿ ಗೌರವಿಸಿದವು.


ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದಲೂ ಪೇಟ, ಹಾರ ತೊಡಿಸಿ ಯಕ್ಷಗಾನ ಕಿರೀಟದ ಪ್ರತಿರೂಪವನ್ನು ನೀಡಿ ಗೌರವಿಸಲಾಯಿತು. ಅಧ್ಯಕ್ಷ ಜಗದೀಶ್ ರೈ ನೇತೃತ್ವದಲ್ಲಿ ನಡೆದ ಗೌರವ ಸಮರ್ಪಣೆ ಸಂಧರ್ಭ ಜಿಲ್ಲಾ ಸಂಘ, ತಾಲೂಕು ಘಟಕ, ನಗರದ ಮಹಿಳಾ ಘಟಕ, ತಾಲೂಕು ಮಹಿಳಾ ಘಟಕ, ಯುವ ಬಂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.





































































































