Author: admin

ಕುತ್ಯಾರು ಅಂಜಾರು ಮನೆ ದಿ. ಅಕ್ಕಣಿ ಶೆಡ್ತಿ ಹಾಗೂ ತಾಳಿಪಾಡಿ ದಿ. ಚಂದಯ್ಯ ಶೆಟ್ಟಿಯವರ 7 ಮಕ್ಕಳಲ್ಲಿ ಕೊನೆಯವರಾದ ಶಕುಂತಳಾ ಕೆ ಚೌಟ (77) ರವರು ಅಸೌಖ್ಯದ ಕಾರಣ ಮೇ 28 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಮೃತರು ಪತಿ ಕೊರಂಗ್ರಪಾಡಿ ದೊಡ್ಡಮನೆ ಕುಮಾರ್ ಎನ್. ಚೌಟ, ಮಕ್ಕಳಾದ ಉದಯ ಕೆ ಚೌಟ, ಉಲ್ಲಾಸ್ ಕೆ ಚೌಟ ಹಾಗೂ ಮಗಳು ಉಷಾ ಡಿ ಶೆಟ್ಟಿ, ಅಳಿಯ ದಾಮೋದರ್ ಎನ್. ಶೆಟ್ಟಿ ಮತ್ತು ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು ಹಾಗೂ ಅಪಾರ ಸಂಖ್ಯೆಯ ಬಂಧು ವರ್ಗದವರನ್ನು ಅಗಲಿದ್ದಾರೆ.ಮೃತರ ನಿಧನಕ್ಕೆ ಕರ್ನಾಟಕ ಸಂಘ ಮೀರಾರೋಡ್, ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿ ಮತ್ತು ಮೀರಾ ಭಯಂದರ್ ಕಾಂಗ್ರೆಸ್ ಕಮಿಟಿಯ ಜಿಲ್ಲಾಧ್ಯಕ್ಷ ಪ್ರಮೋದ್ ಸಾಮಂತ್ ಶೋಕವನ್ನು ವ್ಯಕ್ತಪಡಿಸಿದ್ದಾರೆ.

Read More

ಕಾರ್ಕಳ ಎಸ್.ಕೆ.ಎಸ್ ಸಂಸ್ಥೆಯ ಸುಜಯ್‌ ಕುಮಾರ್‌ ಶೆಟ್ಟಿ ಮತ್ತು ಅಮೃತಾ ದಂಪತಿಯ ಪುತ್ರಿ ಸಚಿ ಶೆಟ್ಟಿಯವರು ಎಸ್.ಎಸ್.ಎಲ್.ಸಿಯಲ್ಲಿ 623 ಅಂಕ ಗಳಿಸಿ ರಾಜ್ಯಕ್ಕೆ 3 ನೇ ಸ್ಥಾನ ಗಳಿಸಿದ್ದಾರೆ. ತಂದೆ ಸುಜಯ್ ಶೆಟ್ಟಿಯವರು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅಗ್ರಣಿ ಸಾಧನೆ ಪ್ರತೀಕವಾಗಿ ಅಲ್ಲಲ್ಲಿ ಅದ್ಭುತ ಕಟ್ಟಡಗಳು ಎದ್ದು ನಿಂತಿವೆ. ಕಾರ್ಕಳ ಮಾರಿಗುಡಿ, ಕಾಪು ಹೊಸ ಮಾರಿಗುಡಿ, ದಿಲ್ಲಿಯಲ್ಲಿ ಅದ್ಭುತ ಕರ್ನಾಟಕ ಭವನ ಮೊದಲಾದ ನಿರ್ಮಾಣ ಕಾಮಗಾರಿಯನ್ನು ಯಶಸ್ವಿಯಾಗಿ ಅಪೂರ್ವ ವಾಸ್ತುಶಿಲ್ಪದೊಂದಿಗೆ ನಿರ್ಮಿಸಿದವರು. ಸುಜಯ್ ಶೆಟ್ಟಿಯವರ ಎಸ್‌.ಕೆ.ಎಸ್‌ ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ನುರಿತ ಕೆಲಸಗಾರರು ಇದ್ದಾರೆ. ನೌಕರರ, ಕಾರ್ಮಿಕರ ಮಕ್ಕಳ ಶಾಲೆ ಫೀಸ್‌, ಆರೋಗ್ಯ ರಕ್ಷಣೆ ಹೊಣೆ ಹೊತ್ತಿದ್ದಾರೆ. ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಸಚಿ ಶೆಟ್ಟಿಯವರಿಗೆ ಅಭಿನಂದನೆಗಳು.

Read More

ಉಳ್ತೂರು ಮೋಹನ್ ದಾಸ್ ಶೆಟ್ಟಿಯವರ ವಿಶೇಷ ಮನವಿಯ ಮೇರೆಗೆ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅದೆಷ್ಟೋ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಮತ್ತು ಅಶಕ್ತರಿಗೆ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಾ ಬಂದಿರುವ ಖ್ಯಾತ ಉದ್ಯಮಿ ಮೆರಿಟ್ & ಅರ್ಜುನ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಬೆಳ್ಳಾಡಿ ಅಶೋಕ್ ಶೆಟ್ಟಿಯವರು ಪಟ್ಲ ದಶಮ ಸಂಭ್ರಮಕ್ಕೆ 25 ಲಕ್ಷ ದೇಣಿಗೆಯನ್ನು ನೀಡಿದ್ದಾರೆ. ಅಶೋಕ್ ಶೆಟ್ಟಿ ಹಾಗೂ ಅವರ ಕುಟುಂಬಕ್ಕೆ ಪಟ್ಲ ಫೌಂಡೇಶನ್ ಟ್ರಸ್ಟ್ ನ ಗೌರವಾಧ್ಯಕ್ಷರಾದ ಡಾ| ಕನ್ಯಾನ ಸದಾಶಿವ ಶೆಟ್ಟಿ, ಡಾ| ಕೆ ಪ್ರಕಾಶ್ ಶೆಟ್ಟಿ, ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಮತ್ತು ಪಟ್ಲ ಸತೀಶ್ ಶೆಟ್ಟಿ, ಯಕ್ಷಧ್ರುವ ಪಟ್ಲ ಸಂಭ್ರಮ ದಶಮಾನೋತ್ಸವ ಸಮಿತಿಯ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

Read More

ದಕ್ಷಿಣ ಕನ್ನಡದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಗೆ ಜವಾಹರ್ ನವೋದಯ ವಸತಿ ಶಾಲಾ ಪ್ರವೇಶ ಪರೀಕ್ಷೆ ಸೇರಿದಂತೆ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಲಭಿಸಿದೆ. ಎರಡು ವಸತಿ ಶಾಲೆಗಳ ಪ್ರವೇಶಕ್ಕೆ ಅವಕಾಶ ಪಡೆದ ಇಬ್ಬರು ವಿದ್ಯಾರ್ಥಿಗಳು ಒಂದೇ ಸೂರಿನಡಿ ವಿವಿಧ ಶಾಲೆಗಳ ಪ್ರವೇಶ ಪರೀಕ್ಷೆಗಳ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ನೇಸರ ಬಿ.ಕೆ ಮತ್ತು ತನುಷ್ ರಾಜ್ ತೇಜಸ್ವಿರವರು ಜವಾಹರ್ ನವೋದಯ ಹಾಗೂ ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಎರಡರಲ್ಲೂ ಉತ್ತೀರ್ಣರಾಗಿ ಸದ್ರಿ ಶಾಲೆಗಳ ಪ್ರವೇಶಾತಿ ಪಡೆಯಲು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.ಸುಳ್ಯ ತಾಲೂಕು ಐವರನಾಡು ಗ್ರಾಮದ ಪಂಚಮ ದೇವರಕಾನ ನಿವಾಸಿ ಭರತ್ ಕುಮಾರ್ ಮತ್ತು ಕವಿತಾ ದಂಪತಿಗಳ ಪುತ್ರ ನೇಸರ ಬಿ.ಕೆ, ಮಡಿಕೇರಿ ತಾಲೂಕು ಪೆರಾಜೆ ಗ್ರಾಮದ ದೊಡ್ಡಡ್ಕ ನಿವಾಸಿ ದೀನ್ ರಾಜ್ ಡಿ.ಸಿ ಮತ್ತು ಸುಷ್ಮಾ ದಂಪತಿಗಳ ಪುತ್ರ ದೈವಿಕ್ ಚಂದ್ ಡಿ.ಡಿ, ಕಡಬ ತಾಲೂಕಿನ ಚಾರ್ವಾಕ ಗ್ರಾಮದ ದೇವರಗುಡ್ಡೆ ನಿವಾಸಿ ಡಿ.ಜಿ ರವಿರಾಜ್…

Read More

ತುಳು ಯಕ್ಷಗಾನ ಪ್ರಸಂಗಗಳಿಗೆ ಹೆಬ್ಬಾಗಿಲು ತೆರೆದು ಕೊಟ್ಟ ‘ಕೋಟಿ ಚೆನ್ನಯ’ ಪ್ರಸಂಗವು ತೆಂಕುತಿಟ್ಟಿನ ಹಲವು ಮೇಳಗಳ ಜನಪ್ರಿಯತೆಗೆ ಕಾರಣವಾಗಿದೆ. ನೂರು ವರ್ಷಗಳ ಹಿಂದೆ ಪಂದಬೆಟ್ಟು ವೆಂಕಟರಾಯರು ಬರೆದ ಈ ಪ್ರಸಂಗವು ಇದೀಗ ತಾಳಮದ್ದಳೆ ರೂಪದಲ್ಲಿ ಮಂಗಳೂರು ಆಕಾಶವಾಣಿಯಿಂದ ಈ ವಾರ ಪ್ರಸಾರವಾಗಲಿದೆ. ಕರ್ನಾಟಕ ಯಕ್ಷ ಭಾರತಿ ಪುತ್ತೂರು ತಂಡದ ಕಲಾವಿದರು ಇದನ್ನು ಎರಡು ಕಂತುಗಳಾಗಿ ಪ್ರಸ್ತುತಪಡಿಸುವರು. ನ್ಯಾಯ ಚಾವಡಿ : ತಾಳಮದ್ದಳೆಯ ಮೊದಲನೇ ಭಾಗ ‘ನ್ಯಾಯ ಚಾವಡಿ’ ಮೇ 30 ರಂದು ಶುಕ್ರವಾರ ರಾತ್ರಿ ಗಂಟೆ 9.30ಕ್ಕೆ ಪ್ರಸಾರವಾಗಲಿದೆ. ಅರ್ಥಧಾರಿಗಳಾಗಿ ಭಾಸ್ಕರ ರೈ ಕುಕ್ಕುವಳ್ಳಿ, ಗಣರಾಜ ಕುಂಬ್ಳೆ, ಎಂ.ಕೆ ರಮೇಶ ಆಚಾರ್ಯ, ರಮೇಶ ಸಾಲ್ವಣ್ಕರ್, ಉಮೇಶ ಆಚಾರ್ಯ ಗೇರುಕಟ್ಟೆ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾಗವತರಾಗಿ ಪ್ರಶಾಂತ ರೈ ಪುತ್ತೂರು, ಹಿಮ್ಮೇಳದಲ್ಲಿ ಪಿ.ಟಿ. ಜಯರಾಮ ಭಟ್, ಕೋಳ್ಯೂರು ಭಾಸ್ಕರ ಭಾಗವಹಿಸಿದ್ದಾರೆ. ಅಂಕೊದ ಕಲ : ಪ್ರಸಂಗದ ಎರಡನೇ ಭಾಗ ‘ಅಂಕೊದ ಕಲ’ ಮುಂದಿನ ಶುಕ್ರವಾರ ಜೂನ್ 6…

Read More

ವಿದ್ಯಾಗಿರಿ: ಜರ್ಮನಿಯ ರಿಯಾನ್-ರೋಹೂರ್‌ನಲ್ಲಿ ಜುಲೈ 16ರಿಂದ 27ರ ವರೆಗೆ ನಡೆಯಲಿರುವ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ 2025(ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟ-2025)ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಯೋಜನೆಯ 11 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಇದರೊಂದಿಗೆ ಈ ವರೆಗೆ 32 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು. ಪುರುಷರ ವಿಭಾಗದಲ್ಲಿ ಗಗನ್ (5000 ಮೀಟರ್ಸ್ ಓಟ), ಸಚಿನ್ (20 ಕಿ.ಮೀ ನಡಿಗೆ), ಬಾಲಕೃಷ್ಣ (400 ಮೀ ಓಟ), ತೌಫಿಕ್ ಎನ್ (ಡೆಕತ್ಲಾನ್) ಹಾಗೂ ಮಹಿಳಾ ವಿಭಾಗದಲ್ಲಿ ದೀಕ್ಷಿತಾ (400 ಮೀ ಹರ್ಡಲ್ಸ್), ಬಸಂತಿ ಕುಮಾರಿ (ಹಾಫ್ ಮ್ಯಾರಥಾನ್), ಮಂಜು ಯಾದವ್(ಸ್ಟೀಪಲ್ ಚೇಸ್), ಸಿಂಧುಶ್ರೀ(ಪೋಲ್‌ವರ್ಟ್), ಸಾಕ್ಷಿ(ಈಟಿ ಎಸೆತ), ಜ್ಯೋತಿ (ಹಾಫ್ ಮ್ಯಾರಥಾನ್), ಶಾಲಿನಿ (20 ಕಿಮೀ ನಡಿಗೆ), ಪಾಲ್ಗೊಳ್ಳಲಿದ್ದಾರೆ.ಸಿಲೆಕ್ಷನ್ ಟ್ರಯಲ್ಸ್ ಗೇಮ್ಸ್ ಮೂಲಕ ಆಯ್ಕೆ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಈ ಕ್ರೀಡಾಪಟುಗಳು ಭುವನೇಶ್ವರದ ಕಳಿಂಗ ಇನ್‌ಸ್ಟಿಟ್ಯೂಟ್ ಆಪ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ…

Read More

ಹೋಟೆಲ್ ಉದ್ಯಮದಲ್ಲಿ ತನ್ನದೇ ಆದ ಒಂದು ಹೊಸ ಛಾಪು ಮೂಡಿಸಿ, ಹಲವು ದಶಕಗಳಿಂದ ಹೋಟೆಲ್ ಉದ್ಯಮಿಯಾಗಿದ್ದು, ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸರಳ ಸಜ್ಜನ ವ್ಯಕ್ತಿಯಾಗಿ ದುಡಿದು ನ್ಯಾಯ ಎಂದೆಂದಿಗೂ ಜಯದ ಮೂಲ ಎಂದು ಪರಿಗಣಿಸಿ ನಡೆಯುವ ವ್ಯಕ್ತಿ ಶ್ರೀ ಪಂಜುರ್ಲಿ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ರಾಜೇಂದ್ರ ವಿ ಶೆಟ್ಟಿಯವರು ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ (ರಿ.) ಇವರ ವತಿಯಿಂದ 5 ವರ್ಷಗಳಿಗೊಮ್ಮೆ ಕೊಡುವ ಹೋಟೆಲ್ ಉದ್ಯಮದ ಶ್ರೇಷ್ಠ ಪ್ರಶಸ್ತಿಯಾದ “ಆತಿಥ್ಯ ರತ್ನ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶ್ರೀ ಪಂಜುರ್ಲಿ ಸಮೂಹ ಸಂಸ್ಥೆಯು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಾವಣಗೆರೆ, ಪುಣೆಯಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾ ಪೋಷಕರಾಗಿರುವ ರಾಜೇಂದ್ರ ಶೆಟ್ಟಿಯವರಿಗೆ 2024 ರ ಸಾಲಿನ ಬಂಟ ವಿಭೂಷಣ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಇವರು ಹೋಟೆಲ್ ಉದ್ಯಮದಲ್ಲಿ ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ನಾವೆಲ್ಲರೂ ಹಾರೈಸೋಣ.

Read More

ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ ನಾಡು, ಹೊರನಾಡು ಮತ್ತು ವಿದೇಶಗಳಲ್ಲಿರುವ ವಿವಿಧ ಕ್ಷೇತ್ರಗಳ 74 ಮಂದಿ ಸಾಧಕರನ್ನು ಗುರುತಿಸಿ ಈ ಬಾರಿಯ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನೀಡಿದೆ. ಮೇ 22ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಮೋದ್ ಕುಮಾರ್ ರೈ ಅವರಿಗೆ ಆರ್ಯಭಟ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಳೆದ ಮೂರು ದಶಕಗಳಿಂದ ನೃತ್ಯ ಕಲಾವಿದರಾಗಿ, ನಿರ್ದೇಶಕರಾಗಿ, ವಸ್ತ್ರವಿನ್ಯಾಸ ಸೇರಿದಂತೆ ವಿವಿಧ ಆಯಾಮಗಳಲ್ಲಿ ನಿರಂತರವಾಗಿ ರಂಗಸೇವೆ ಸಲ್ಲಿಸುತ್ತಾ ಬಂದಿರುವ ಪ್ರಮೋದ್ ಕುಮಾರ್ ರೈ ಅವರು ಹಲವಾರು ಜಿಲ್ಲಾ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದು, ಬೆಳ್ಳಾರೆಯಲ್ಲಿ ‘ಕಲಾಮಂದಿರ್’ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದಾರೆ.

Read More

ಸನ್ ಮ್ಯಾಟ್ರಿಕ್ಸ್ ಬ್ಯಾನರಿನಲ್ಲಿ ತಯಾರಾದ ಕೆ.ಸತ್ಯೇಂದ್ರ ಪೈ ನಿರ್ಮಾಣದ ಬಹು ನಿರೀಕ್ಷಿತ ಸ್ಕೂಲ್ ಲೀಡರ್ ಕನ್ನಡ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಮೇ 30ರಿಂದ ಕರಾವಳಿಯಾದ್ಯಂತ ಬೆಳ್ಳಿ ತರೆಯ ಮೇಲೆ ರಾರಾಜಿಸಲಿದೆ. ಚಿತ್ರದ ಟ್ರೇಲರ್ ಹಾಗೂ ಓಟು ಓಟು ಎಂಬ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದ್ದು ಸಿನಿಪ್ರಿಯರಲ್ಲಿ ಬಹಳಷ್ಟು ಕುತೂಹಲ ಮೂಡಿಸಿದೆ. ನಿರ್ಮಾಪಕರಾದ ಕೆ.ಸತ್ಯೇಂದ್ರ ಪೈ ಇವರು ಈ ಹಿಂದೆ “ಗಂಧದ ಕುಡಿ” ಎಂಬ ಚಿತ್ರವನ್ನು ನಿರ್ಮಿಸಿದ್ದು, ಆ ಚಿತ್ರವು ದೇಶ ವಿದೇಶಗಳಲ್ಲಿ 22 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. ಈ ಹಿಂದೆ ಬಿಡುಗಡೆಗೊಂಡು ಯಶಸ್ವಿಯಾದ ಪೆನ್ಸಿಲ್ ಬಾಕ್ಸ್ ಎಂಬ ಚಿತ್ರದ ನಿರ್ದೇಶಕರಾದ ರಝಾಕ್ ಪತ್ತೂರು ಇವರು ಸ್ಕೂಲ್ ಲೀಡರ್ ಚಿತ್ರವನ್ನು ಕಥೆ, ಚಿತ್ರ ಕಥೆ, ಸಂಭಾಷಣೆ ಜೊತೆಗೆ ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಪೆನ್ಸಿಲ್ ಬಾಕ್ಸ್ ಚಿತ್ರದ ಗೀತೆ ರಚನೆಗಾಗಿ ರಝಾಕ್ ಪುತ್ತೂರು ಇವರು 2019 ನೇ ಸಾಲಿನ ಅತ್ಯುತ್ತಮ ಚಿತ್ರ ಸಾಹಿತಿ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಸ್ಕೂಲ್ ಲೀಡರ್…

Read More

ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಕಾಲೇಜು ಆಸ್ಪತ್ರೆ, ಮಂಗಳೂರಿನ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ ಮತ್ತು ವಿವಿಧ ಸಮುದಾಯಗಳ ಸಹಯೋಗದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 2ನೇ ಹಂತದ ಉಚಿತ ನೇತ್ರ ತಪಾಸಣಾ ಶಿಬಿರ ಆಯೋಜಿಸಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೋದ ವರ್ಷ 9 ಬಾರಿ ಉಚಿತ ನೇತ್ರ ತಪಾಸಣಾ ಶಿಬಿರಗಳು ಬೇರೆ ಬೇರೆ ಸಮುದಾಯದ ಜೊತೆಯಲ್ಲಿ ಸೇರಿಕೊಂಡು ಆಳ್ವಾಸ್ ನಡೆಸಿದೆ. ಈ ಉಚಿತ ನೇತ್ರ ತಪಾಸಣಾ ಶಿಬಿರ ನಿರಂತರ ನಡೆದು ಬಹಳಷ್ಟು ಜನರಿಗೆ ಪ್ರಯೋಜನಕಾರಿಯಾಗಲಿ ಎಂದು ಆಶಿಸಿದರು. ಕಾರ್ಯಕ್ರಮಕ್ಕೆ ಸಹಕರಿಸಿದ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ, ಸಂಶೋಧನಾ ಕೇಂದ್ರದ ವೈದ್ಯರಿಗೆ ಹಾಗೂ ಸಹಕಾರ ನೀಡಿದ ವಿವಿಧ ಸಮುದಾಯಗಳ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು. ಎರಡು ಹಂತದ ಶಿಬಿರದಲ್ಲಿ ಒಟ್ಟು 237 ಮಂದಿ ಪಾಲ್ಗೊಂಡು, 116 ಮಂದಿ ಉಚಿತ ಕನ್ನಡಕ ಪಡೆಯಲು, 26 ಮಂದಿ ಶಸ್ತ್ರಚಿಕಿತ್ಸೆಗೆ ಹೆಸರು ನೋಂದಾಯಿಸಿಕೊಂಡರು. ಕಾರ್ಯಕ್ರಮದಲ್ಲಿ…

Read More