Author: admin
ವಿದ್ಯಾಗಿರಿ: ಜೈಪುರದ ಸುರೇಶ್ ಗ್ಯಾನ್ ವಿಹಾರ್ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಲ್ಲಕಂಬ ಪಂದ್ಯಾವಳಿಯಲ್ಲಿ ಮಂಗಳೂರು ವಿವಿಯ ಮಹಿಳಾ ತಂಡ 5ನೇ ಸ್ಥಾನ ಹಾಗೂ ಪುರುಷರ ತಂಡವು 6ನೇ ಸ್ಥಾನ ಪಡೆದಿದ್ದು, ಖೇಲೊ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ. ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದ 12 ಜನರ ಪುರುಷರ ಹಾಗೂ ಮಹಿಳೆಯರ ತಂಡದ ಎಲ್ಲಾ ಸದಸ್ಯರು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಗೌವಾಹಟಿಯಲ್ಲಿ ನಡೆಯಲಿರುವ ಖೇಲೊ ಇಂಡಿಯಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಕರ್ನಾಟಕದಿಂದ ಆಯ್ಕೆಯಾದ ಎರಡು ವಿವಿಗಳಲ್ಲಿ ಮಂಗಳೂರು ವಿವಿಯು ಒಂದು. ವೈಯಕ್ತಿಕ ನೇತಾಡುವ ಮಲ್ಲಕಂಬ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ದೀಪಕ್ ಗೌಳಿ ಕಂಚಿನ ಪದಕ ಪಡೆದಿದ್ದಾರೆ. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
ವಿದ್ಯಾಗಿರಿ: ‘ಆಧುನಿಕ ವಿಜ್ಞಾನವು ಸಂಶೋಧನೆಯಲ್ಲಿ ಮುಂದುವರಿದಿದ್ದು, ರೋಗದ ಮೂಲ ಪತ್ತೆಗೆ ಕ್ಷ ಕಿರಣದ ಕೊಡುಗೆ ಅಪಾರ’ ಎಂದು ಕೇರಳದ ಕೊತ್ತಮಂಗಲಂ ಕಲಾರಿಕ್ಕಲ್ ಆಯುರ್ವೇದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶಿಬು ವರ್ಗೀಸ್ ಹೇಳಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸ್ನಾತಕೋತ್ತರ ರೋಗನಿದಾನ, ಕಾಯಾಚಿಕಿತ್ಸೆ ಮತ್ತು ಮನಸರೋಗ ವಿಭಾಗವು ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ‘ಕ್ಷ- ಕಿರಣದ ಮೂಲಲಕ್ಷಣ ಹಾಗೂ ವ್ಯಾಖ್ಯಾನ ಕುರಿತ ರಾಷ್ಟ್ರ ಮಟ್ಟದ ಕಾರ್ಯಾಗಾರ ‘ಜ್ಞಾನಚಾಕ್ಷು- 2023’ನ್ನು ಉದ್ಘಾಟಿಸಿ ಮಾತನಾಡಿದರು. ‘ಆಯುರ್ವೇದದಲ್ಲೂ ಸಾಮಾನ್ಯವಾಗಿ ಮೂಳೆಚಿಕಿತ್ಸೆ, ಉಸಿರಾಟದ ಪ್ರಕರಣಗಳ ಪತ್ತೆ ಮಾಡಲು ಮೂಲವು ಕ್ಷ -ಕಿರಣವೇ ಆಗಿದೆ. ಆದರೆ ಸಾಮಾನ್ಯವಾಗಿ ಜನರು ಆಯುರ್ವೇದದ ಚಿಕಿತ್ಸಾ ಪದ್ದತಿಯನ್ನು ದ್ವಿತೀಯ ಶ್ರೇಣಿಯ ಚಿಕಿತ್ಸಾ ಕ್ರಮವೆಂದು ಭಾವಿಸುವುದನ್ನು ತಪ್ಪಿಸಬೇಕು. ಅವರಲ್ಲಿ ಭರವಸೆಯನ್ನು ಮೂಡಿಸುವ ಕೆಲಸವನ್ನು ಮಾಡಬೇಕು. ಈ ಕಾರ್ಯಾಗಾರದ ಮೂಲಕ ಕ್ಷ- ಕಿರಣ ಕ್ಷೇತ್ರದ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು. ರೋಗಿಗೆ ಚಿಕಿತ್ಸೆ ನೀಡುವ ಮೊದಲು ರೋಗ ಪತ್ತೆ ಹಚ್ಚುವಿಕೆಯು ಬಹುಮುಖ್ಯ, ಆಯುರ್ವೇದ…
ನಮ್ಮ ಬಂಟ ಬಾಂಧವರು ತಮ್ಮ ಸಂಸಾರ ನಿರ್ವಹಣೆಯ ಜೊತೆ ಜೊತೆಗೇ ಸಮಾಜ ಸೇವೆ, ಕಲಾಪೋಷಣೆ ಮಾಡುತ್ತಾ ಸಾರ್ವಜನಿಕವಾಗಿ ಗುರುತಿಸಿಕೊಳ್ಳುತ್ತಾ ತಮ್ಮ ಪ್ರಸಿದ್ಧಿ ಪ್ರತಿಷ್ಠೆಗಳನ್ನು ಹೆಚ್ಚಿಸಿಕೊಂಡು ಸಮಾಜದ ಆದರ ಅಭಿಮಾನಗಳಿಗೆ ಪಾತ್ರರಾಗಿದ್ದಾರೆ. ಅಂಥವರಲ್ಲಿ ಹೊಟೇಲ್ ಉದ್ಯಮಿ, ಕಲಾಪ್ರೇಮಿ, ಸಮಾಜ ಸೇವಕ ಕರ್ನೂರು ಶಂಕರ ಆಳ್ವರೂ ಒಬ್ಬರು. ಇವರೊಬ್ಬ ನಯವಿನಯ ತುಂಬಿದ ಸಜ್ಜನರು. ತಾನು ನುಡಿದಂತೆ ನಡೆವ ಸತ್ಯನಿಷ್ಠರು. ತುಂಬಾ ಯೋಚಿಸಿ ಮಾತನಾಡುವವರು. ಯಾರೊಬ್ಬರ ಮನಸ್ಸಿಗೆ ನೋವಾಗದಂತೆ ಎಚ್ಚರ ವಹಿಸುತ್ತಾರೆ. ಯಕ್ಷಗಾನ, ಸಮಾಜ ಸೇವೆ, ಧಾರ್ಮಿಕ ಚಟುವಟಿಕೆಯ ಕ್ಷೇತ್ರಗಳಲ್ಲಿ ಪ್ರಚಲಿತವಿರುವ ಹೆಸರುಗಳಲ್ಲಿ ಇವರೂ ಒಬ್ಬರು. ಇವೆಲ್ಲವುದಕ್ಕೆ ಕಲಶ ಪ್ರಾಯವೆಂಬಂತೆ ಕಲಾ ಸಂಘಟನೆಗಳಿಗೆ ಧಾರ್ಮಿಕ ಕ್ಷೇತ್ರಗಳಿಗೆ ಉದಾರ ಮನಸ್ಸಿನಿಂದ ಗುಪ್ತದಾನ ನೀಡುವ ಪುಣ್ಯಾತ್ಮರು. ಇವರ ವ್ಯಕ್ತಿತ್ವ ಜನಮಾನ್ಯವಾದುದು. ಅಹಮಿಕೆಯ ಲವಲೇಶವೂ ಇಲ್ಲದ ಸಹಜ ಸರಳ ಹಾಗೂ ಹೇಳಬೇಕಾದುದನ್ನು ಸ್ಪಷ್ಟವಾಗಿ ಯಾವುದೇ ಮುಜುಗರವಿಲ್ಲದೆ ಹೇಳುವವರು. ಆಳ್ವರು ಒಬ್ಬ ಸರಸ ಭಾಷಣಗಾರ. ತಾಳಮದ್ದಳೆ ಯಕ್ಷಗಾನ ಕ್ಷೇತ್ರಗಳ ವಾಗ್ಮಿ. ಹವ್ಯಾಸಿ ಕಲಾವಿದ. ಇವರ ಕೆಲವು ಪಾತ್ರಗಳನ್ನು ಪಾತ್ರದ ಠೀವಿ ಹೆಜ್ಜೆಗಳನ್ನು…
ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶದ ಮನವಿ ಪತ್ರವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಬಿಡುಗಡೆ ಮಾಡಿದರು. ಒಕ್ಕೂಟದ ಮೂಲಕ ಈ ಧಾರ್ಮಿಕ ಕಾರ್ಯಕ್ಕೆ ಸಹಕಾರ ನೀಡುವುದಾಗಿ ಐಕಳ ಹರೀಶ್ ಶೆಟ್ಟಿ ನುಡಿದರು. ಈ ಸಂದರ್ಭದಲ್ಲಿ ವೇದವ್ಯಾಸ ಉಡುಪ, ಮುಂಬಯಿ ಸಮಿತಿ ಗೌರವಾಧ್ಯಕ್ಷರಾದ ರಾಜೇಂದ್ರ ಶೆಟ್ಟಿ ಮಾಗಂದಡಿ, ನಿತಿನ್ ಶೆಟ್ಟಿ ದೇವಸ್ಯ ಕೊಡೆತ್ತೂರುಗುತ್ತು, ಶ್ರೀಧರ ಆಳ್ವ ಮಾಗಂದಡಿ, ಶ್ರೀ ಜಯರಾಮ ಮುಕ್ಕಾಲ್ದಿ, ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಬ್ರಹ್ಮಕಲಶದ ಸಮಿತಿಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ, ಮೋಹನ್ ಶೆಟ್ಟಿ ಮೂಡು ದೇವಸ್ಯ, ಬ್ರಹ್ಮಕಲಶ ಸಮಿತಿಯ ಕೋಶಾಧಿಕಾರಿ ಶೈಲೇಶ್ ಅಂಚನ್ ಉಪಸ್ಥಿತರಿದ್ದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಪುಂಜಾಲಕಟ್ಟೆ ಘಟಕದ 6ನೇ ವಾರ್ಷಿಕೋತ್ಸವ ಕಾರ್ಯಕ್ರಮ ಡಿ.25 ರಂದು ಸಂಜೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು. ಉಡುಪಿ ಜಿಲ್ಲಾ ನ್ಯಾಯಾಧೀಶರಾದ ದಿನೇಶ್ ಹೆಗ್ಡೆ ಬದ್ಯಾರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿರುವ ಪಟ್ಲ ಸತೀಶ್ ಶೆಟ್ಟಿ ಅವರು ಕಲಾವಿದರಿಗೊಂದು ಶಕ್ತಿಯಾಗಿದ್ದಾರೆ. ಯಕ್ಷಗಾನದಿಂದ ಜ್ಞಾನದ ವೃದ್ಧಿಯಾಗುತ್ತಿದ್ದು, ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಪೋಷಕರು ಪ್ರೋತ್ಸಾಹಿಸಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲಗುತ್ತು ಸತೀಶ್ ಶೆಟ್ಟಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯಕ್ಷಗಾನದಲ್ಲಿ ಸಾಕಷ್ಟು ಪರಿವರ್ತನೆ ಕಂಡಿದೆ. ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯದ ಅವರಣದಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಪಟ್ಲ ಪೌಂಡೇಶನ್ನ ಪುಂಜಾಲಕಟ್ಟೆ ಘಟಕ ಯಕ್ಷ ಶಿಕ್ಷಣದ ಮೂಲಕ ಮಕ್ಕಳನ್ನು ಯಕ್ಷಗಾನದಲ್ಲಿ ತೊಡಗಿಸಿರುವುದು ಶ್ಲಾಘನೀಯವಾಗಿದೆ ಎಂದರು. ಸರಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 40 ಶಾಲೆಗಳ ನಾಲ್ಕು ಸಾವಿರ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣದ ಮೂಲಕ…
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಬಯೋಟೆಕ್ನಾಲಜಿ ಹಾಗೂ ಸಂಶೋಧನಾ ಕೇಂದ್ರದ ಮೊದಲ ಡಾಕ್ಟರೇಟ್ ಪದವೀಧರೆಯಾಗಿ ಗಗನ ಬಿ ಪಿಎಚ್ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಗಗನ ಬಿ ಮಂಡಿಸಿದ ‘’ಸ್ಕ್ರೀನಿಂಗ್ ಆಫ್ ಪೈಟೋಕೆಮಿಕಲ್ ಕಾನ್ಟ್ಟಿಟ್ಯೂಯೆಂಟ್ಸ್ ಆ್ಯಂಡ್ ಇವ್ಯಾಲ್ಯೇವೇಷನ್ ಆಫ್ ಆ್ಯಂಟಿಕ್ಯಾನ್ಸ್ರಸ್ ಪ್ರೋರ್ಪಾಟೀಸ್ ಆಫ್ ಜಿಮ್ನಾಕ್ರಾಂಥೆರಾ ಫರ್ಕೋಹೆರಿಯನಾ (ಹುಕ್. ಎಫ್ ಆ್ಯಂಡ್ ಥಾಮ್ಸ್) ವಾರ್ಬ್’’ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ನೀಡಿದೆ. ಮೂಲತಃ ತರೀಕೆರೆಯವರಾದ ಇವರು ಬಿವಿ ಬಸವರಾಜ್ ಹಾಗೂ ಹೆಚ್ಒ ಪ್ರಭಾವತಿ ದಂಪತಿಗಳ ಪುತ್ರಿ. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಬಯೋಟೆಕ್ನಾಲಜಿ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ ರಾಮ ಭಟ್ ಪಿ ಯವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಮಂಡಿಸಿದ್ದರು. ಸಂಶೋಧನೆಯ ಹಂತದಲ್ಲಿ ಇವರು ಮೌಖಿಕವಾಗಿ ಪ್ರಸ್ತುತ ಪಡಿಸಿದ 6 ಅಂತರಾಷ್ಟ್ರೀಯ ಹಾಗೂ ಒಂದು ರಾಷ್ಟ್ರೀಯ ಪೇಪರ್ಗಳಿಗೆ ಅತ್ಯುತ್ತಮ ಪ್ರಸ್ತುತಿಯ ಗೌರವಕ್ಕೆ ಪಾತ್ರವಾಗಿದ್ದು, ಮೂರು ಸಂಶೋಧನಾ ಪೇಪರ್ಗಳು ಪ್ರಕಟಗೊಂಡಿವೆ.
ಏಣಗುಡ್ಡೆಯ ಬಹು ಕಾರಣಿಕದ ಕ್ಷೇತ್ರವೆನಿಸಿದ ದುರ್ಗಾ ನಗರ ಚೌಡೇಶ್ವರಿ ದೇವಸ್ಥಾನದಲ್ಲಿ ಇದೇ ಬರುವ 30.12.2023 ರ ಶನಿವಾರದಂದು ಚೌಡೇಶ್ವರಿ ದೇವಿಗೆ ಹೂವಿನ ಪೂಜೆ ಹಾಗೂ ದರ್ಶನ ಸೇವೆ ವಿಜೃಂಭಣೆಯಿಂದ ಊರ ಹಾಗೂ ಪರವೂರ ಭಕ್ತಾದಿಗಳ ಸಮಕ್ಷಮದಲ್ಲಿ 11 ಫಂಟೆಯ ಶುಭಮುಹೂರ್ತದಲ್ಲಿ ಜರಗಲಿದ್ದು, ಆ ಪ್ರಯುಕ್ತ 12.00 ಘಂಟೆಗೆ ಚಪ್ಪರ ಮುಹೂರ್ತ 12.30 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಬಳಿಕ ಸಂಜೆ 5.00ಘಂಟೆಗೆ ಭಂಡಾರ ಇಳಿಯುವುದು. ತದ ನಂತರ 6.00 ಘಂಟೆಗೆ ಕುಣಿತ ಭಜನೆ ಕಾರ್ಯಕ್ರಮ ನಡೆಯಲಿದೆ. ಅದೇದಿನ ರಾತ್ರಿ 8.00 ಗಂಟೆಗೆ ಕಲ್ಕುಡ ವರ್ತೆ ಕಾಳಮ್ಮ ದೈವಗಳಿಗೆ ನೇಮೋತ್ಸವ ಜರುಗಲಿದೆ. ಮತ್ತು ಮರುದಿನ ದಿನಾಂಕ 31.12.2023 ರ ಭಾನುವಾರ ಬೆಳಿಗ್ಗೆ 9.00 ಘಂಟೆಗೆ ಗುಳಿಗ ದೈವಕ್ಕೆ ನೇಮೋತ್ಸವ ಜರಗಲಿರುವುದು. ಅದೇ ರೀತಿ 3.1.2024 ರ ಬುಧವಾರ ದೈವಗಳಿಗೆ ತಂಬಿಲ ಸೇವೆಯೊಂದಿಗೆ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪ ನಡೆಯಲಿದ್ದು, ಆಸ್ತಿಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೈವಗಳ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕೆಂದು ಶ್ರೀ…
ಬ್ರಹ್ಮಾವರ ಡಿ. 28: ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಡಿ. 28 ರಿಂದ 30 ರವರೆಗೆ ಮೂರು ದಿನಗಳ ಬೃಹತ್ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತರು, ಲೇಖಕರು ಹಾಗೂ ಕಾದಂಬರಿಕಾರರಾದ ಶ್ರೀಮತಿ ಸೌಮ್ಯ ಪುತ್ರನ್ರವರು ರಿಬ್ಬನ್ ಕತ್ತರಿಸುವ ಮೂಲಕ ಪುಸ್ತಕ ಮೇಳವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ನಾವು ಸ್ವತಂತ್ರವಾಗಿ ಬದುಕಲು ಮತ್ತು ಬದುಕುವ ದಾರಿಯನ್ನು ಕಂಡುಕೊಳ್ಳಲು ಶಿಕ್ಷಣ ಬೇಕು. ಉತ್ತಮವಾದ ಓದುವ ಹವ್ಯಾಸವನ್ನು ಇಟ್ಟುಕೊಂಡವರು ಮಾತ್ರ ಉತ್ತಮ ಲೇಖಕರಾಗಲು ಸಾಧ್ಯ. ಬರವಣಿಗೆಯ ಮೂಲಕ ಮನುಷ್ಯನ ಮನಸ್ಸಿನ ಭಾವನೆಯನ್ನು ಅಕ್ಷರಗಳ ಮೂಲಕ ಬಿತ್ತರಿಸಲು ಸಾಧ್ಯ. ಅದರ ಜೊತೆಗೆ ಪುಸ್ತಕಗಳನ್ನು ಓದುವುದರಿಂದ ನಮ್ಮಲ್ಲಿ ನಾವು ಧನಾತ್ಮಕ ಗುಣಗಳನ್ನು ಹೆಚ್ಚಿಸಿಕೊಳ್ಳಬಹುದು ಹಾಗಾಗಿ ಮೊಬೈಲ್ಗಳಿಗೆ ಮಾರುಹೋಗದೆ ಪುಸ್ತಕವನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಿ ಎಂದರು. ಹಾಗೆಯೆ ದಸರಾ ರಜೆಯಲ್ಲಿ ಜಿ ಎಮ್ ಶಾಲೆಯಲ್ಲಿ ಹಮ್ಮಿಕೊಂಡ “ಬುಕ್ ರಿವ್ಯೂ” ಬಗ್ಗೆ ಪ್ರಶಂಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಇಂದಿನ…
ತಾನು ಕೈಗೆತ್ತಿಕೊಂಡ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿಯೇ ನೆಮ್ಮದಿಯ ಉಸಿರು ಬಿಡುವ ಛಲವಂತ. ಸಮುದಾಯದ ಸೇವೆಗೆಂದೇ ಜನ್ಮ ತಳೆದರೋ ಎಂಬಂತೆ ಅರ್ಪಣಾ ಭಾವದಿಂದ ತನ್ನವರ ಏಳಿಗೆಗಾಗಿ ಟೊಂಕಕಟ್ಟಿ ದುಡಿಯುತ್ತಿರುವ ಸಂತೋಷ್ ವಿ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅವರನ್ನು ಅಪರೂಪದ ಅಪರಂಜಿ ಎಂದರೂ ತಪ್ಪಾಗಲಾರದು. ಸಮಸ್ತ ಸಮುದಾಯ ಬಾಂಧವರ ಅಸ್ಮಿತೆಯ ಕೇಂದ್ರವಾಗಿ ಗುರುತಿಸಲ್ಪಡುವ ಮಹಾರಾಷ್ಟ್ರದ ಸಾಂಸ್ಕೃತಿಕ ನಗರವೆಂದೇ ಖ್ಯಾತಿವೆತ್ತ ಪುಣೆ ನಗರದಲ್ಲಿ ಇಂದು ತಲೆಯೆತ್ತಿ ನಿಂತ ಸುಂದರ ಸುಸಜ್ಜಿತ ಬಂಟರ ಭವನ ಆದರಣೀಯ ಸಂತೋಷ್ ಶೆಟ್ಟಿ ಅವರ ಸಂಘರ್ಷ, ಛಲ, ಪರಿಶ್ರಮ ಅರ್ಪಣಾ ಭಾವದ ಕತೆಯನ್ನು ಸಾರಿ ಹೇಳುತ್ತಿದೆ. ಹೀಗೆ ಸಿಧ್ಧಿ ಸಾಧನೆಗಳೆರಡೂ ಸಮನ್ವಯಗೊಂಡು ಪ್ರಖರ ತೇಜ ಹೊಂದಿದ ಬಂಟ ನಾಯಕ ಸಂತೋಷ್ ಶೆಟ್ಟಿಯವರು ಇಂದು ಮಹಾನಗರ ಹಾಗೂ ಹುಟ್ಟೂರಿನ ಹೆಮ್ಮೆಯ ಸಮಾಜ ಸೇವಕ, ಸಂಘಟಕ, ಸರ್ವ ಸಮಾಜ ಬಾಂಧವರೊಂದಿಗೆ ಸೌಹಾರ್ದ ಭಾವ ಹೊಂದಿರುವ ಪ್ರಭಾವಿ ನಾಯಕರಾಗಿ ನಿರ್ವಿವಾದಿತ ವ್ಯಕ್ತಿಯಾಗಿ ಆಕರ್ಷಿಸುತ್ತಾರೆ. ನೂರು ಜನರ ನಡುವೆ ಎದ್ದು ಕಾಣುವ ಗಟ್ಟಿ ಧೃಢ…
ಯುವ ಬಂಟ ಸಂಘ ಪುತ್ತೂರು ಇದರ ವತಿಯಿಂದ ಜನವರಿಯಲ್ಲಿ ನಡೆಯಲಿರುವ ಪುತ್ತೂರ್ದ ಬಂಟ ಜವನೆರೆ ಗೊಬ್ಬು ದಿ| ಅಗರಿ ಜೀವನ್ ಭಂಡಾರಿ ಸ್ಮರಣಾರ್ಥ ಜನವರಿ 6 ಮತ್ತು 7 ರಂದು ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ “ಬಂಟ್ಸ್ ಪ್ರೀಮಿಯರ್ ಲೀಗ್” ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಆವರಣದಲ್ಲಿ ನಡೆಯಿತು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಯುವ ಬಂಟರ ಸಂಘದ ಅಧ್ಯಕ್ಷ ಮುಂಡಾಳಗುತ್ತು ಶಶಿರಾಜ್ ರೈ, ಪ್ರಧಾನ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಉಪಾಧ್ಯಕ್ಷರಾದ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಕೋಶಾಧಿಕಾರಿ ಕೆ ಸಿ ಅಶೋಕ್ ಶೆಟ್ಟಿ, ಕ್ರೀಡಾ ಸಂಚಾಲಕ ನವೀನ್ ರೈ ಪಂಜಳ, ಬಿಪಿಎಲ್ ಸಂಚಾಲಕ ಸಂದೇಶ್ ರೈ ಸಂಪ್ಯ, ಕ್ರಿಕೆಟ್ ಸಂಯೋಜಕರಾದ ಕಾರ್ತಿಕ್ ರೈ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮನ್ಮಥ ಶೆಟ್ಟಿ, ಬೊಳಿಂಜಗುತ್ತು ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.