Author: admin

ಕೇರಳದಲ್ಲಿ ನಡೆದ 46 ನೇ ಜೆಎಸ್ ಕೆಎ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಮಾರ್ಷಲ್ ಆರ್ಟ್ಸ್ ಬೆನಕ ಸಭಾಭವನ ಪದವಿನಂಗಡಿ ಶಾಖೆಯ ತ್ರಿಶೂಲ್ ಶೆಟ್ಟಿ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ, ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಅವರು ಸಂಸ್ಥೆಯ ಮುಖ್ಯ ಶಿಕ್ಷಕ ನಿತಿನ್ ಸುವರ್ಣ ಮಾರ್ಗದರ್ಶನದಲ್ಲಿ, ಹಿರಿಯ ಶಿಕ್ಷಕ ಶಿವಪ್ರಸಾದ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.ತ್ರಿಶೂಲ್ ಅವರು ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ. ಖ್ಯಾತ ನಿರೂಪಕಿ ಡಾ. ಪ್ರಿಯಾ ಹರೀಶ್ ಶೆಟ್ಟಿ ಅವರ ಪುತ್ರ.

Read More

ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಮಂಗಳೂರು ಇವರ ವತಿಯಿಂದ ಮಂಗಳೂರಿನ ಕೊಟ್ಟಾರ ಅಬ್ಬಕ್ಕ ನಗರದಲ್ಲಿರುವ ನಿಗಮದ ಕಚೇರಿಯಲ್ಲಿ ಜೂನ್ 7 ರಂದು ರೈತರ ತರಬೇತಿ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಪುತ್ತೂರು ತಾಲೂಕಿನ ವೈಜ್ಞಾನಿಕ ಗೇರು ಕೃಷಿಕ, ಗೇರು ಕೃಷಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡಿರುವ ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಚಿನ್ನದ ಪದಕ ವಿಜೇತ ಕೃಷಿಕ ಕಡಮಜಲು ಸುಭಾಸ್ ರೈಯವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತಮ್ಮ ಗೇರು ಕೃಷಿಯ ಬಗ್ಗೆ ಅನುಭವದ ಬಗ್ಗೆ ಮಾತನಾಡಲಿದ್ದಾರೆ.ಸಮಾರಂಭದ ಅಧ್ಯಕ್ಷತೆಯನ್ನು ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಬಳಿಕ ಡಿಸಿಆರ್ ನ ನಿರ್ದೇಶಕ ಡಾ. ದಿನಕರ ಅಡಿಗ ಮತ್ತು ಡಿಸಿಆರ್ ವಿಜ್ಞಾನಿ ಟಿ.ಎನ್. ರವಿಪ್ರಸಾದ್ ರವರಿಂದ ತಾಂತ್ರಿಕ ತರಬೇತಿ ನಡೆಯಲಿದೆ. ಅಪರಾಹ್ನ ‘ಮಾನವ ಸಂಪನ್ಮೂಲ’ ಮತ್ತು ‘ಮಾನಸಿಕ ಒತ್ತಡ ಮತ್ತು ನಿವಾರಣೆ’ ವಿಷಯಗಳಲ್ಲಿ ತರಬೇತಿ ನಡೆಯಲಿದೆ.

Read More

ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ಜೂನ್ 7 ಮತ್ತು 8 ರಂದು “ಆಳ್ವಾಸ್‌ ಪ್ರಗತಿ-2024 ಉದ್ಯೋಗ ಮೇಳ” ನಡೆಯಲಿದ್ದು, 20 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಉದ್ಯೋಗ ಮೇಳದಲ್ಲಿ ಐಟಿ ವಲಯ, ಉತ್ಪಾದನಾ ವಲಯ, ಬಿಎಫ್‌ಎಸ್‌ಐ, ಐಟಿಇಎಸ್‌, ಫಾರ್ಮಾ, ಆರೋಗ್ಯ, ಮಾರಾಟ, ಮಾಧ್ಯಮ, ನಿರ್ಮಾಣ, ಹಾಸ್ಪಿಟಾಲಿಟಿ ವಲಯದ ಕಂಪೆನಿಗಳು ಭಾಗವಹಿಸಲಿವೆ. ರಾಜ್ಯದವರ ಜತೆಗೆ ಹೊರ ರಾಜ್ಯದವರೂ ಭಾಗವಹಿಸಲಿದ್ದಾರೆ ಎಂದರು. ಕಳೆದ 13 ಆಳ್ವಾಸ್‌ ಪ್ರಗತಿ ಹಾಗೂ 7 ಉದ್ಯೋಗ ಮೇಳಗಳಲ್ಲಿ ಒಟ್ಟು 31,896 ಮಂದಿಗೆ ಉದ್ಯೋಗಾವಕಾಶ ನೀಡಲಾಗಿದೆ. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ತನ್ನ ಸಿಎಸ್‌ಆರ್‌ ಚಟುವಟಿಕೆಯಡಿ ಉದ್ಯೋಗ ಮೇಳವನ್ನು ಉಚಿತವಾಗಿಯೇ ಆಯೋಜಿಸಿದ್ದು, ನೇಮಕಾತಿ ನಡೆಸುವ ಕಂಪೆನಿಗಳಿಗೆಗೂ ಇದು ಉಚಿತವಾಗಿದೆ. ಈವರೆಗೆ 300 ಕ್ಕೂ ಅಧಿಕ ಕಂಪೆನಿಗಳು ನೋಂದಾಯಿಸಿದ್ದು, 10 ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿದ್ದಾರೆ. ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್‌, ಎಂಜಿನಿಯರಿಂಗ್‌,…

Read More

ಪ್ರತಿ ಜೀವಿಗಳಲ್ಲೂ ಒಂದಲ್ಲ ಒಂದು ವಿಶೇಷ ಗುಣವಿದ್ದೆ ಇರುತ್ತದೆ. ಆ ವಿಶೇಷ ಗುಣವನ್ನು ಗುರುತಿಸುವ ಮನಸ್ಥಿತಿ, ಶಕ್ತಿ, ಸಾಮರ್ಥ್ಯ ನಮ್ಮಲ್ಲಿರಬೇಕು. ಅಂತಹ ಉದಾಹರಣೆಗಳಲ್ಲಿ ಈ ನಾಗಲಿಂಗ ಪುಷ್ಪ ಮತ್ತು ಜೇನುನೊಣದ ಚಿತ್ರಪಟ ವಿಶೇಷ ಅಂಶವೊಂದನ್ನು ತಿಳಿಸುತ್ತದೆ. ಈ ಪುಷ್ಪ ತನ್ನದೇ ಆದ ವಿಶೇಷ ಸೌಂದರ್ಯ, ಸುವಾಸನೆಯೊಂದಿಗೆ ಮಕರಂಧವನ್ನು ಹೊಂದಿದೆ. ಆ ಸೌಂದರ್ಯ, ಸುವಾಸನೆ ಹಾಗೂ ಮಕರಂಧಕ್ಕೆ ಆಕರ್ಷಣೆಗೊಂಡ ಸಾವಿರಾರು ಜೇನುನೊಣಗಳು ಹೂವಿನತ್ತ ಲಗ್ಗೆ ಇಡುತ್ತವೆ. ಮಕರಂಧವನ್ನು ಹೀರಿದ ಆ ಜೇನುನೊಣಗಳು ಜೇನುಗೂಡನ್ನು ಕಟ್ಟಿ ಜೇನುತುಪ್ಪ ತಯಾರಿಸುತ್ತವೆ.ಆ ಜೇನುನೊಣಗಳು ಏಕಭಾವದಿಂದ ಜೇನುಗೂಡಿನ ರೂಪದಲ್ಲಿ ತಮ್ಮ ಕುಟುಂಬವನ್ನು ರೂಪಿಸಿಕೊಂಡಿರುತ್ತವೆ. ಜೇನುತುಪ್ಪದ ಆಸೆಗಾಗಿ ಮನುಷ್ಯರು ತಮ್ಮ ಕುಟುಂಬವನ್ನೇ ಅಲ್ಲೋಲ ಕಲ್ಲೋಲ ಮಾಡುವರೆಂಬ ಸಣ್ಣ ಅನುಮಾನವು ಅವುಗಳಿಗೆ ಇರುವುದಿಲ್ಲ. ಕಾರಣ ನಂಬಿಕೆಯೇ ಜೀವನ ಅಂತಾರಲ್ಲ ಹಾಗೆ. ಅದೇ ನಂಬಿಕೆ ಮೇಲೆಯೇ ಅಲ್ಲವೇ ಜೇನುನೊಣಗಳು ಮನುಷ್ಯರು ಅದೆಷ್ಟೇ ಸಾರಿ ಗೂಡು ಹಾಳು ಮಾಡಿದರೂ ಪುನಃ ಗೂಡು ನಿರ್ಮಿಸಿ, ಜೇನುತುಪ್ಪ ತಯಾರಿಸುವುದು ಅವುಗಳ ಕಾಯಕವನ್ನಾಗಿಸಿಕೊಂಡಿರುವುದು. ಇನ್ನೂ ಹೂವಿನ ವಿಚಾರಕ್ಕೆ ಬರುವುದಾದರೆ…

Read More

ಪರಿಸರ ಎಂದರೆ ನಾವು ವಾಸಿಸುವ ಪ್ರದೇಶ, ಉಸಿರಾಡುವ ವಾಯು, ಉಪಯೋಗಿಸುವ ನೀರು, ಫಲ ಪುಷ್ಪ ಆಹಾರ ವಸ್ತುಗಳ ಉತ್ಪತ್ತಿ ಯೋಗ್ಯ ಜಮೀನು, ಸೂರ್ಯನ ಶಾಖ, ಕಾಡು ಗುಡ್ಡ ಬೆಟ್ಟ, ವನ್ಯ ಜೀವಿಗಳು, ಪಕ್ಷಿ ಸಂಕುಲ ಜಲಚರಾದಿಗಳು ಎಲ್ಲವೂ ಸೇರುತ್ತದೆ. ಇವೆಲ್ಲವುಗಳ ಸಮತೋಲನ ಹೊಂದಾಣಿಕೆ ಪೃಥ್ವಿಯನ್ನು ರಕ್ಷಿಸುತ್ತದೆ. ಪರಿಸರವನ್ನು ನಾವು ರಕ್ಷಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಶುದ್ಧ ಗಾಳಿ, ಶುದ್ಧ ನೀರು, ಶಾಖ ಫಲವಸ್ತುಗಳು, ಆಹಾರ ವಾಣಿಜ್ಯ ಬೆಳೆಗಳು ಇವೆಲ್ಲಾ ನಮಗೆ ಈ ಪ್ರಕೃತಿಯಿಂದ ದೊರೆಯುತ್ತದೆ.ಆದರೆ ನಾವು ಈ ಪ್ರಕೃತಿಗೆ ಎಷ್ಟು ಕೃತಜ್ಞರಾಗಿದ್ದೇವೆ ಎನ್ನುವುದು ದೊಡ್ಡ ಪ್ರಶ್ನೆ. ಉಸಿರಾಡಲು ಆಮ್ಲಜನಕ, ಉರಿಸಲು ಇಂದನ, ಬಗೆ ಬಗೆ ಖನಿಜಗಳು, ಮುತ್ತು ರತ್ನಗಳು ಎಲ್ಲವೂ ನಮಗೆ ಪ್ರಕೃತಿಯ ಕೊಡುಗೆಗಳು. ಆದರೆ ಇಂದು ಈ ಪ್ರಕೃತಿಯ ಸಮತೋಲನ ತಪ್ಪಿ ಬರಗಾಲ, ಅಕಾಲ ವೃಷ್ಠಿ, ಅತಿವೃಷ್ಠಿ, ಅನಾವೃಷ್ಠಿಗಳಿಂದ ಭೂಮಿ ತತ್ತರಿಸಿದೆ. ಜೀವ ಸಂಕುಲಕ್ಕೆ ಆಪತ್ತು ಕಾದಿದೆ. ಭೂಮಿಯ ಅಂತರ್ಜಲ ಕುಸಿಯುತ್ತಿದೆ. ಕಾಡುಗಳು ನಾಶವಾಗುತ್ತಿವೆ. ಅತೀ ಕೈಗಾರಿಕರಣಗಳಿಂದ ವಾಯು, ಜಲ…

Read More

ಮೈಸೂರು ಜ್ಞಾನ ಸರೋವರ ಅಂತರರಾಷ್ಟ್ರೀಯ ವಸತಿ ಶಾಲೆಯಲ್ಲಿ ದಿನಾಂಕ 05/06/2025 ರಂದು 54 ನೇಯ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಶಾಲೆಯ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀ ಪವನ್ ಕುಮಾರ್ ಶೆಟ್ಟಿ ಅವರು ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಅಲ್ಲದೇ ಪರಿಸರದ ಸಂರಕ್ಷಣೆಗೆ ಹೆಚ್ಚಿನ ಕಾಣಿಕೆಯನ್ನು ನೀಡಿದ ಸಾಲುಮರದ ತಿಮ್ಮಕ್ಕ, ಸಲೀಂ ಅಲಿ ಇವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಗನ್ನಾಥ ವೆಂಕಟರಾಮಯ್ಯ ರವರು, ಪರಿಸರವನ್ನು ನಾಶ ಮಾಡುತ್ತಾ ಹೋದರೆ ಮುಂದಿನ 54 ವರ್ಷಕ್ಕೆ ಜಗತ್ತು ಹೇಗಿರುತ್ತದೆ ಎಂಬುದನ್ನು ಕೆಲವು ಉದಾಹರಣೆಗಳ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ವಿಜ್ಞಾನ ಎಂಬುದು ನಿರಂತರ ಸತ್ಯ. ಪರಿಸರದಿಂದ ನಾವು ಕಲಿಯಬೇಕಾದದ್ದು ಬಹಳ ಇದೆ. ಹಾಗೆ ನಾವು ಸರಳವಾಗಿ ಬದುಕುವುದರ ಜೊತೆಗೆ ನಾವು ಮಾಡಿದ ಕೆಲಸವನ್ನು ಇತರರು ನೆನಪಿನಲ್ಲಿ ಇಟ್ಟುಕೊಳ್ಳುವ ರೀತಿ ಬಾಳಬೇಕು. ವ್ಯಕ್ತಿಯು ಯಾವಾಗಲೂ ಏಕಾಂಗಿಯಾಗಿರದೆ ಯಾವುದಾದರೂ ಒಂದು ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು.…

Read More

ಮೂಡುಬಿದಿರೆ: ಅಖಿಲ ಭಾರತ ಮಟ್ಟದ ಯುಜಿ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಒಂದೇ ಕ್ಯಾಂಪಸನ ಕ್ಲಾಸ್‍ರೂಮ್ ವ್ಯವಸ್ಥೆಯಲ್ಲಿ 600 ಅಂಕಗಳ ಮೇಲೆ 181 ವಿದ್ಯಾರ್ಥಿಗಳು ಅಂಕ ಪಡೆಯುವ ಮೂಲಕ ಆಳ್ವಾಸ್ ಸಾರ್ವಕಾಲಿಕ ಸಾಧನೆಯನ್ನು ಮೆರೆದಿದೆ.ಆಳ್ವಾಸ ಪ,ಪೂ ಕಾಲೇಜಿನ ವಿದ್ಯಾರ್ಥಿಗಳು 670ಕ್ಕೂ ಅಧಿಕ 11 ವಿದ್ಯಾರ್ಥಿಗಳು, 650ಕ್ಕೂ ಅಧಿಕ 51 ವಿದ್ಯಾರ್ಥಿಗಳು, 600ಕ್ಕೂ ಅಧಿಕ 181 ವಿದ್ಯಾರ್ಥಿಗಳು, 550ಕ್ಕೂ ಅಧಿಕ 371 ವಿದ್ಯಾರ್ಥಿಗಳು ಹಾಗೂ 500ಕ್ಕೂ ಅಧಿಕ 686 ವಿದ್ಯಾರ್ಥಿಗಳು ಅಂಕಗಳನ್ನು ಪಡೆಯುವ ಮೂಲಕ ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್‍ನಿಂದ ಅಗ್ರಪಂಕ್ತಿಯ ಸಾಧನೆ ನಿರ್ಮಾಣವಾಗಿದೆ. ಆಕಾಶ್ ಬಸವರಾಜ್ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ 55ನೇ ರ್ಯಾಂಕ್ ಪಡೆದುಕೊಂಡಿದ್ದಾರೆ. ಪ್ರೀತಮ್ ಎಂ- 691, ಸದಾನಂದ ಗೌಡ ಕುಲಕರ್ಣಿ- 676, ಗೌಸ ಈ ಅಝಾಮ್-673, ಶುಭಾ ವೈ ಬಿ-673, ವಿವೇಕ್ ಎಸ್‍ಬಿ-671, ತರುಣ್ ಜಿ ಎನ್-671, ಮೊಹಮ್ಮದ್ ಓವೈಸ್ ನಿಸಾರ್ ಖಾನ್- 671, ಆಕಾಶ್ ಬಸವರಾಜ್-670, ನಮಿತ್ ಎಪಿ-670, ನಂದೀಷ್ ಆರ್ ಎಸ್-670, ದರ್ಶನ್…

Read More

ಬ್ರಹ್ಮಾವರ ಜೂನ್ 5: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಚೈತನ್ಯ ಎಚ್. ಎಸ್. ರವರು ಆಗಮಿಸಿದ್ದರು. ಅವರು ಮಾತನಾಡಿ ಇಂದು ಎಲ್ಲಾ ಕಡೆಗಳಲ್ಲೂ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಂತರದ ದಿನಗಳಲ್ಲಿ ಅದನ್ನು ಮರೆತುಬಿಡುತ್ತಾರೆ. ಇದರಿಂದ ಪರಿಸರದ ಉಳಿವು ಸಾಧ್ಯವಿಲ್ಲ ಪರಿಸರ ಕಾಳಜಿ ನಿತ್ಯ ನಿರಂತರವಾಗಿರಬೇಕು, ಎಲ್ಲರೂ ತಮ್ಮ ಹುಟ್ಟುಹಬ್ಬದ ದಿನದಂದು ಗಿಡವನ್ನು ನೆಟ್ಟು ಅದರ ಆರೈಕೆಯನ್ನು ಮಾಡಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಮಾತನಾಡಿ ನಾವೆಲ್ಲರೂ ನಮ್ಮ ಸುತ್ತಮುತ್ತಲಿನ ಹಾಗೂ ಮನೆಯ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದರು ಹಾಗೂ ಇತರರಲ್ಲೂ ಪರಿಸರ ಜಾಗೃತಿಯನ್ನು ಮೂಡಿಸಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಕ್ಕಳಿಂದ ಪರಿಸರ ಸಂರಕ್ಷಣೆಯ ಪ್ರತಿಜ್ಞೆಯನ್ನು ಸ್ವೀಕರಿಸಿ ಮಾತನಾಡಿ ಪರಿಸರ ವ್ಯವಸ್ಥೆ ಹಾಗೂ ಅದರ ಸಮರ್ಪಕ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು…

Read More

ಮಹಿಳಾ ಸಾಹಿತ್ಯವನ್ನು ಸಂಪೂರ್ಣ ಕಡೆಗಣಿಸಿದ್ದ ಕಾಲದಲ್ಲಿ ಹೆಚ್ಚಿನ ಪ್ರೋತ್ಸಾಹದ ನಿರೀಕ್ಷೆಯೂ ಸಾಧ್ಯವಿರಲಿಲ್ಲ. ಕಳೆದ ಶತಮಾನದ ನಾಲ್ಕು, ಐದರ ದಶಕದಲ್ಲಿ ಮಹಿಳೆಯರು ಬರೆಯುತ್ತಿದ್ದುದೇ ಅಪರೂಪ. ಆಗ ಬಂಟರಲ್ಲಿ ಬರೆಯುತ್ತಿದ್ದವರು ಚಂದ್ರಭಾಗಿ ರೈ ಮತ್ತು ದೇವಕಿ ಎಂ. ಶೆಟ್ಟಿ ಇಬ್ಬರೇ ಎಂದು ಹೇಳಬಹುದು. ಆಗಿನ ಸಾಹಿತ್ಯವನ್ನು ಈಗಿನಂತೆ ವರ್ಗಿಕರಣ ಮಾಡುವುದಾದರೆ ದೇವಕಿಯವರು ಬರೆದದ್ದನ್ನು ದಲಿತ ಬಂಡಾಯ ಸಾಹಿತ್ಯವೆಂದು ಪರಿಗಣಿಸಬಹುದು. ಕೆಳವರ್ಗದ ಜನರ ಜೀವನವನ್ನೂ ಅವರು ಹತ್ತಿರದಿಂದ ನೋಡಿದ್ದರಿಂದ ಅದನ್ನೇ ಅವರು ತಮ್ಮ ಸಾಹಿತ್ಯದಲ್ಲಿ ಬಿಂಬಿಸಿದ್ದಾರೆ. 20 ನೇ ಶತಮಾನದ ಪ್ರಾರಂಭದಲ್ಲಿ ಹುಟ್ಟಿ ಎರಡು ಮಹಾಯುದ್ಧಗಳ ಬೇಗೆಯಲ್ಲಿ ಬೆಂದು, ಸ್ವಾತಂತ್ರ್ಯ ಸಿಕ್ಕಿದ ಸಂಭ್ರಮವನ್ನು ಅನುಭವಿಸಿ, ಮನೆಯಲ್ಲಿದ್ದುಕೊಂಡೇ ಗಾಂಧೀತತ್ವಗಳಿಗೆ ಮನಸೋತು ಅವರ ಆದರ್ಶಗಳಲ್ಲಿ ಬದುಕುವ ಪಣತೊಟ್ಟ ಹುಡುಗಿ ಲೇಖನಿ ಹಿಡಿದಾಗ ಹರಿದು ಬಂದದ್ದು ಅಂದಿನ ಬದುಕಿನ ಚಿತ್ರಣಗಳೇ. ಬಾಲ್ಯದಲ್ಲಿ ದೇವಕಿಯವರನ್ನು ಕಾಡಿದ್ದು ಸಾಮಾಜಿಕ ಅವ್ಯವಸ್ಥೆ, ಜಾತಿ ವ್ಯವಸ್ಥೆ, ದೇಶಭಕ್ತಿ, ಪಾಕಿಸ್ತಾನದ ವಿಭಜನೆ ಇತ್ಯಾದಿ. ಅವರ ಕಥೆಗಳಲ್ಲಿ ನಿರೂಪಿತವಾದದ್ದು ಜನರನ್ನು ಕಾಡುತ್ತಿದ್ದ ಮೂಢನಂಬಿಕೆಗಳು, ಅಸ್ಪೃಶ್ಯತಾ ನಿವಾರಣೆ, ಜಾತಿ ಪದ್ಧತಿಯ…

Read More

ಕರ್ನಾಟಕ ಕರಾವಳಿಯ ಕಮನೀಯ ಕಲೆ ಯಕ್ಷಗಾನಕ್ಕೆ ಆಕರ್ಷಣೆ ಹೊಂದದ ತುಳು ಕನ್ನಡಿಗರಿರಲಾರರು. ಸಂಗೀತ, ಸಾಹಿತ್ಯ, ನಾಟ್ಯ, ಬಣ್ಣಗಾರಿಕೆ ಹೀಗೆ ಹಲವಾರು ಕಲೆಗಳು ಏಕತ್ರಗೊಂಡು ಪಂಡಿತ ಪಾಮರರನ್ನು ಏಕಕಾಲಕ್ಕೆ ರಂಜಿಸುವ ಕಲೆಯೊಂದಿದ್ದರೆ ಅದು ನಮ್ಮ ಹೆಮ್ಮೆಯ ಯಕ್ಷಗಾನ. ಸಚ್ಚೇರಿ ಗುತ್ತು ಜಗನ್ನಾಥ ಶೆಟ್ಟಿ ಅವರು ಕೃಷಿ ಪ್ರಧಾನ ಕುಟುಂಬದ ಹಿನ್ನೆಲೆ ಹೊಂದಿದವರಾದರೂ ತನ್ನ ಬಾಲ್ಯದ ದಿನಗಳಿಂದಲೇ ಯಕ್ಷಗಾನ ಕಲೆಯ ಕುರಿತಂತೆ ತೀವ್ರ ಆಸಕ್ತಿ ಹೊಂದಿದವರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದ ದಿವಂಗತ ಬಾಬು ಶೆಟ್ಟಿ ಹಾಗೂ ದಿವಂಗತೆ ಬಾಗಿ ಶೆಟ್ಟಿ ದಂಪತಿಯರಿಗೆ ಸುಪುತ್ರರಾಗಿ 1945 ಅಗಸ್ಟ್ 1 ರಂದು ಮಿಜಾರಿನ ಪ್ರತಿಷ್ಠಿತ ಕಿಜನೊಟ್ಟು ಮನೆತನದಲ್ಲಿ ಜನಿಸಿದ ಶೆಟ್ಟರು ಐದನೇ ತರಗತಿ ತನಕ ಶಾಲಾ ಶಿಕ್ಷಣ ಪಡೆದ ಬಳಿಕ ಯಕ್ಷಗಾನ ನೋಡುವ ಕಲಿಯುವ ಆಸಕ್ತಿ ಹೆಚ್ಚಾದ ಪರಿಣಾಮ ವಿದ್ಯಾಭ್ಯಾಸ ವಿಭಾಗದಲ್ಲಿ ಹಿನ್ನಡೆ ಅನುಭವಿಸಿದರಾದರೂ ಕೃಷಿ ಮತ್ತು ಯಕ್ಷಗಾನ ಕುರಿತು ವಿಶೇಷ ಆಸಕ್ತಿ ಕಾಳಜಿ ತಳೆದು ಕಾಲಾಂತರದಲ್ಲಿ ಓರ್ವ ಉತ್ತಮ ಕೃಷಿಕ ಹಾಗೂ ಓರ್ವ ಹವ್ಯಾಸಿ ಕಲಾವಿದರಾಗಿ…

Read More