Author: admin
ಹುಬ್ಬಳ್ಳಿ ಧಾರವಾಡ ಬಂಟರ ಸಂಘ : ನೂತನ ಅಧ್ಯಕ್ಷರಾಗಿ ವಿಜಯಾನಂದ ಶೆಟ್ಟಿ, ಉಪಾಧ್ಯಕ್ಷರಾಗಿ ರಾಜೇಂದ್ರ ವಿ ಶೆಟ್ಟಿ
ಪ್ರತಿಷ್ಠಿತ ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ವಿಜಯಾನಂದ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ರಾಜೇಂದ್ರ ವಿ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಮಾಜಸೇವಕ, ರಾಜಕೀಯ ಧುರೀಣ ವಿಜಯಾನಂದ ಶೆಟ್ಟಿಯವರು ಧಾರವಾಡದಲ್ಲಿ ಕಾರ್ಪೊರೇಟರ್ ಆಗಿದ್ದಾರೆ. ಸಮಾಜಸೇವೆಯೇ ಸರ್ವಸ್ವ ಎಂದು ನಂಬಿರುವ ರಾಜೇಂದ್ರ ವಿ ಶೆಟ್ಟಿಯವರು ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾಗಿದ್ದಾರೆ. ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಕೊಡಲ್ಪಡುವ 2024 ರ ಸಾಲಿನ ಬಂಟ ವಿಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.
ತುಳುನಾಡು ಅದೆಷ್ಟೋ ಪವಿತ್ರ ದೈವ ದೇವಾಲಯಗಳ ಪುಣ್ಯಭೂಮಿ. ಅವುಗಳಲ್ಲಿ ಎರಡು ಅವಿಸ್ಮರಣೀಯ ದೇವಾಲಯಗಳನ್ನು ಇಲ್ಲಿ ಪ್ರಸ್ತಾವಿಸಲೇಬೇಕು. ಹಿರಿಯರ ನುಡಿಯಂತೆ ಹಿತ್ತಿಲಗಿಡ ಮದ್ದಲ್ಲ ಎಂಬಂತೆ, ಮೇಲೆ ಸೂಚಿಸಿದ ಪುಣ್ಯ ಸ್ಥಳಗಳನ್ನು ಯಾಕೋ ಜಾಣ ಮರೆವಿನಂತೆ ಮರೆತಂತಿದೆ. ಪ್ರತಿನಿತ್ಯ ಭಕ್ತರ ಕೋಟಿಗಟ್ಟಲೆ ಕಾಣಿಕೆ ಹಣ ಹರಿದು ಬರುವ ಶ್ರೀಮಂತ ದೇವಾಲಯಗಳಿಗೆ ಪ್ರತಿವರ್ಷ ಹೋಗಿ ಹಣ ಸುರಿದು ಅಲ್ಲಿನ ಅನ್ನಪ್ರಸಾದಕ್ಕೆ ತಾಸುಗಟ್ಟಲೆ ಕ್ಯೂ ನಿಂತು ಉಂಡವರಾಗಿದ್ದೇವೆ. ಆದರೆ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದಲ್ಲಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಕಮಲಶಿಲೆ ಎಂಬ ಪುರಾತನ ದೇವಾಲಯವಿದೆ. ಇಲ್ಲಿ ಪ್ರತಿದಿನ ಮಧ್ಯಾಹ್ನ 12.30 ರಿಂದ 3ರ ವರೆಗೆ ಹಾಗೂ ರಾತ್ರಿ 8ರಿಂದ 10 ಗಂಟೆಯ ವರೆಗೆ ಬರುವ ಭಕ್ತರೆಲ್ಲರಿಗೂ ಮೃಷ್ಟಾನ್ನ ಭೋಜನ ಬಡಿಸುತ್ತಾರೆ. ಮೃಷ್ಟಾನ್ನ ಭೋಜನ ಎನ್ನುವುದಕ್ಕಿಂತಲೂ ಷಡ್ರಸ ಭೋಜನ ಎನ್ನುವುದು ಉತ್ತಮ. ಆರೋಗ್ಯ ಶಾಸ್ತ್ರ ವಿಧಿಯಂತೆ ಊಟದಲ್ಲಿ ಉಪ್ಪು, ಹುಳಿ, ಖಾರ, ಸಿಹಿ, ಕಹಿ, ಚೊಗರುಗಳೆಂಬ ಆರು ಬಗೆಯೂ ಇಲ್ಲಿನ ಊಟದಲ್ಲಿದೆ. ಆ ಕಮಲಶಿಲೆಯ ತಾಯಿ ತನ್ನಲ್ಲಿಗೆ…
ಮೂಡುಬಿದಿರೆ: ಜೀವಶಾಸ್ತ್ರದ ಶಿಕ್ಷಕರು ಈ ಕಾಲಕ್ಕಾನುಗುಣವಾದ ಕೌಶಲ್ಯಗಳನ್ನು ಆಳವಡಿಸಿಕೊಂಡು, ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಯನ್ನು ಪೂರೈಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ತಿಳಿಸಿದರು. ದ.ಕ ಜಿಲ್ಲಾ ಪದವಿಪೂರ್ವ ಜೀವಶಾಸ್ತ್ರ ಉಪನ್ಯಾಸಕರ ಸಂಘದ ದಶಮನೋತ್ಸವದ ಹಿನ್ನಲೆಯಲ್ಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ದ.ಕ ಜಿಲ್ಲಾ ಪದವಿಪೂರ್ವ ಜೀವಶಾಸ್ತ್ರ ಉಪನ್ಯಾಸಕರ ಸಂಘ ಹಾಗೂ ದಕ್ಷಿಣ ಕನ್ನಡ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಜಂಟಿ ಆಶ್ರಯದಲ್ಲಿ ನಡೆದ ‘’ಬಯೋದಶಕ, ಒಂದು ದಿನದ ಕಾರ್ಯಾಗಾರ’’ವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಹೆಚ್ಚಿನ ವಿದ್ಯಾರ್ಥಿಗಳು ಡಾಕ್ಟರ್ ಅಥವಾ ಇಂಜಿಯರ್ ಆಗುವ ಬಯಕೆಯಿಂದ ಪದವಿಪೂರ್ವ ಹಂತದಲ್ಲಿ ಪಿಸಿಎಂಬಿ ವಿಷಯವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಈ ಹಂತದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಇಂದಿನ ಕಾಲಘಟ್ಟದಲ್ಲಿ ಪದವಿಪೂರ್ವ ಪರೀಕ್ಷೆಯ ಅಂಕಗಳಿಂದ ಸರಕಾರಿ ಕೋಟಾದಲ್ಲಿ ಸೀಟನ್ನು ಪಡೆಯಲು ಸಾಧ್ಯವಿಲ್ಲ. ಈ ಹಂತದಲ್ಲಿ ವಿದ್ಯಾರ್ಥಿಗಳನ್ನು ಎನ್ಸಿಇಆರ್ಟಿ ಪಠ್ಯಕ್ರಮದ ಜೊತೆಯಲ್ಲಿ ನೀಟ್, ಸಿಇಟಿ, ಕ್ಲಾಟ್, ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಬೇಕಾದ ಜವಾಬ್ದಾರಿ…
ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಆಗಸ್ಟ್ 18 ರ ಭಾನುವಾರ ಯುವ ಮೆರಿಡಿಯನ್ ನಲ್ಲಿ ನಡೆಯಲಿರುವ ವಿದ್ಯಾರ್ಥಿ ವೇತನ ಸಮಿತಿಯ ಸಂಚಾಲಕರಾಗಿ ಡಾ.ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲರೂ, ಸಾಹಿತ್ಯಿಕ ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಪ್ರಕರ ವ್ಯಾಗಿಗಳಾದ ಡಾ. ಚೇತನ್ ಶೆಟ್ಟಿ ಕೋವಾಡಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಗೌರವಧ್ಯಕ್ಷರಾದ ಬಿ. ಉದಯ್ ಕುಮಾರ್ ಶೆಟ್ಟಿ ಹಾಗೂ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಬಂಟ ಪ್ರತಿಷ್ಠಾನವು ಡಾ.ಡಿ.ಕೆ. ಚೌಟ ದತ್ತಿನಿಧಿಯಿಂದ ನೀಡುವ 2024 ರ ಸಾಲಿನ ಬಂಟ ಪ್ರತಿಷ್ಠಾನ ಪ್ರಶಸ್ತಿಗೆ ಬಡಗು ತಿಟ್ಟಿನ ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ. ಪ್ರೊ. ಜಿ ಆರ್ ರೈ, ಪಳ್ಳಿ ಕಿಶನ್ ಹೆಗ್ಡೆ ಮತ್ತು ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ‘ಬಂಟ ಪ್ರತಿಷ್ಠಾನ ಪ್ರಶಸ್ತಿ’ಗೆ ಅವರ ಹೆಸರನ್ನು ಶಿಫಾರಸು ಮಾಡಿದೆ. ಪ್ರಶಸ್ತಿಯು ರೂ.25,000/- ನಗದು ಹಾಗೂ ಫಲಕವನ್ನೊಳಗೊಂಡಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಸಿಎ ವೈ ಸುಧೀರ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ಕುಂದಾಪುರ ತಾಲೂಕಿನ ಹಳ್ಳಾಡಿ ಅಣ್ಣಪ್ಪ ಶೆಟ್ಟಿ, ಅಕ್ಕಮ್ಮ ದಂಪತಿಗೆ 1955ರಲ್ಲಿ ಜನಿಸಿದ ಜಯರಾಮ ಶೆಟ್ಟಿಯವರು ಬಡಗು ತಿಟ್ಟಿನಲ್ಲಿ ಮುಂಚೂಣಿಯಲ್ಲಿರುವ ಹಿರಿಯ ಹಾಸ್ಯ ಕಲಾವಿದರಾಗಿದ್ದಾರೆ. ಇವರು ಕಮಲಶಿಲೆ, ಮಂದಾರ್ತಿ, ಪೆರ್ಡೂರು, ಅಮೃತೇಶ್ವರಿ, ಸಾಲಿಗ್ರಾಮವಲ್ಲದದೇ ತೆಂಕಿನ ಕುಂಬಳೆ ಮತ್ತು ಮೂಲ್ಕಿ ಮೇಳಗಳಲ್ಲಿ ಒಟ್ಟು 55 ವರ್ಷಗಳ ತಿರುಗಾಟ ಮಾಡಿದ್ದಾರೆ. ಸಾಲಿಗ್ರಾಮ ಮೇಳವೊಂದರಲ್ಲೇ 25 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ದಾರುಕ, ಬಾಹುಕ,…
ಆಟಿ ತಿಂಗಳ ವಿಶೇಷ ಆಚರಣೆಯಿಂದ ಯುವ ಪೀಳಿಗೆಗೆ ತುಳುನಾಡಿನ ಪುರಾತನವಾದ ಸಂಸ್ಕಾರ ಸಂಸ್ಕೃತಿಯ ಅರಿವು ಮೂಡಿಸಲು ಸಾಧ್ಯವಿದೆ. ತುಳುನಾಡಿನ ಇತಿಹಾಸದ ಬಗ್ಗೆ ಮುಂದಿನ ಜನಾಂಗಕ್ಕೆ ತಿಳಿಯ ಪಡಿಸುವ ಅಗತ್ಯವಿದೆ ಎಂದು ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಹೇಳಿದರು. ಮಾಣಿ ವಲಯ ಬಂಟರ ಸಂಘದ ಆಶ್ರಯದಲ್ಲಿ ಮಾಣಿಯ ಬಾಲವಿಕಾಸ ಆಡಿಟೋರಿಯಂನಲ್ಲಿ ಜರುಗಿದ ಆಟಿಡೊಂಜಿ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮಾಣಿ ವಲಯ ಬಂಟರ ಸಂಘ ಕಳೆದ ಹಲವು ವರ್ಷಗಳಿಂದ ಆಟಿಡೊಂಜಿ ಕೂಟ, ಕ್ರೀಡಾಕೂಟದಂತಹ ಕೆಲವೊಂದು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದು ನಿಜಕ್ಕೂ ಶ್ಲಾಘನೀಯ. ಬಂಟ್ವಾಳ ತಾಲೂಕು ಬಂಟರ ಸಂಘಕ್ಕೆ ಮಾಣಿ ವಲಯ ಬಂಟರ ಸಂಘದ ಕೊಡುಗೆ ಅಪಾರವಾದುದು ಎಂದರು. ಸಾಹಿತಿ ಡಾ.ಮಾಲತಿ ಶೆಟ್ಟಿ ಮಾಣೂರು ಮಾತನಾಡಿ, ಆಟಿ ತಿಂಗಳ ವೈಶಿಷ್ಟ್ಯತೆ, ಸಮಾಜ ಬಾಂಧವರ ಒಗ್ಗೂಡಿಸುವಿಕೆಯ ಅಗತ್ಯತೆ ಮತ್ತು ಮಕ್ಕಳಿಗೆ ಕಲಿಸಬೇಕಾದ ಜೀವನ ಪದ್ಧತಿಯ ಬಗ್ಗೆ ತಿಳಿಯಪಡಿಸಿದರು. ಸಂಘದ ಗೌರವಾಧ್ಯಕ್ಷೆ ಪ್ರಫುಲ್ಲ ಆರ್ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು.…
“ಕೋರಿಡ ಕೇಂದ್ ಸಾಂಬಾರ್ ಕಡೆವೆರಾ” ಪಂದ್ ಒಂಜಿ ಗಾದೆ ಉಂಡು. ಅಂಚ ನಂಕ್ ನರಮಾನಿಗ್ ಬೋಡಾಯಿನದಗ ಕೋರಿದ ನಾಲಿ ಪಿಜೆಂಕುನು. ಅಂಚ ಇಪ್ಪುನಗ ಈ ಕೋರಿಗ್ ಪಂಚಾಂಗ ತೂದು ಜಾತಕ ಮಲ್ಪುವನಾ? ಪಾಪ, ಕೋರಿಲಾ ಭೀಷ್ಮಲೆಕ್ಕ ಇಚ್ಚಾ ಮರಣಿ ಆವೊಡು ಪಂದ್ ಕಠಿಣ ತಪಸ್ಸ್ ಮಲ್ತ್ಂಡ್ ಗೆ. ದೇವೆರ್ ಜೋಗೊಗು ಬತ್ತ್ ದ್ (ಪ್ರತ್ಯಕ್ಷ ಆದ್) ದಾದ ಒರ (ವರ) ಬೋಡು ಪಂದ್ ಕೇಂಡೆರ್. ಕೋರಿ ಪಂಡ್ “ಎಂಕ್ ಎನ್ನಿನದಗ ಮರಣ ಬರೊಡು”. ದೇವೆರ್ ಅಂಚೆನೆ ಆವಡ್ (ತಥಾಸ್ತು) ಪಂಡೆರ್. ಅಂಚ ಇತ್ತೆ ಕೋರ್ಲೆಗ್, ನರಮಾನಿ ಕೋರಿ ಅಡ್ಕ (ಕೈಪು ಮಲ್ಪುಗ) ಪಂದ್ ಎನ್ನಿನದಗ ಮರಣ. ಪಾಪದ ಕೋರಿ, “ಎಂಕ್ ‘ಯಾನ್’ ಎನ್ನಿನದಗ ಮರನ ಬರಡ್” ಪನರೆ ತತ್ತ್ ದ್ ಪೋಂಡು. ಇಪ್ಪಡ್, ಅಂಚ ಇಪ್ಪುನಗ ಕೋರಿ (ಕುಕ್ಕುಟ) ದಲಾ ಪಂಚಾಂಗ ಉಂಡಾ ಪಂದ್ ಕೇನರ್. ಅಂದ್ ಒಂಜಿ ನಲ್ಪ ವರ್ಸ ದುಂಬು, ಮಗ್ಗಿ ಪುಸ್ತಕದಾತೇ ಮಲ್ಲ ಕುಕ್ಕುಟ ಪಂಚಾಂಗ ಬೀಡದ…
ಮೂಡುಬಿದಿರೆ: ಜೀವಶಾಸ್ತ್ರದ ಶಿಕ್ಷಕರು ಈ ಕಾಲಕ್ಕಾನುಗುಣವಾದ ಕೌಶಲ್ಯಗಳನ್ನು ಆಳವಡಿಸಿಕೊಂಡು, ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಯನ್ನು ಪೂರೈಸುವಲ್ಲಿ ಕರ‍್ಯಪ್ರವೃತ್ತರಾಗಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ತಿಳಿಸಿದರು. ದ.ಕ ಜಿಲ್ಲಾ ಪದವಿಪೂರ್ವ ಜೀವಶಾಸ್ತ್ರ ಉಪನ್ಯಾಸಕರ ಸಂಘದ ದಶಮನೋತ್ಸವದ ಹಿನ್ನಲೆಯಲ್ಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ದ.ಕ ಜಿಲ್ಲಾ ಪದವಿಪೂರ್ವ ಜೀವಶಾಸ್ತ್ರ ಉಪನ್ಯಾಸಕರ ಸಂಘ ಹಾಗೂ ದಕ್ಷಿಣ ಕನ್ನಡ ಪದವಿಪೂರ್ವ ಕಾಲೇಜುಗಳ ಪ್ರಾಚರ‍್ಯರ ಸಂಘದ ಜಂಟಿ ಆಶ್ರಯದಲ್ಲಿ ನಡೆದ ‘’ಬಯೋದಶಕ, ಒಂದು ದಿನದ ಕರ‍್ಯಾಗಾರ’’ವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಹೆಚ್ಚಿನ ವಿದ್ಯಾರ್ಥಿಗಳು ಡಾಕ್ಟರ್ ಅಥವಾ ಇಂಜಿಯರ್ ಆಗುವ ಬಯಕೆಯಿಂದ ಪದವಿಪೂರ್ವ ಹಂತದಲ್ಲಿ ಪಿಸಿಎಂಬಿ ವಿಷಯವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಈ ಹಂತದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಇಂದಿನ ಕಾಲಘಟ್ಟದಲ್ಲಿ ಪದವಿಪೂರ್ವ ಪರೀಕ್ಷೆಯ ಅಂಕಗಳಿಂದ ಸರಕಾರಿ ಕೋಟಾದಲ್ಲಿ ಸೀಟನ್ನು ಪಡೆಯಲು ಸಾಧ್ಯವಿಲ್ಲ. ಈ ಹಂತದಲ್ಲಿ ವಿದ್ಯಾರ್ಥಿಗಳನ್ನು ಎನ್ಸಿಇಆರ್ಟಿ ಪಠ್ಯಕ್ರಮದ ಜೊತೆಯಲ್ಲಿ ನೀಟ್, ಸಿಇಟಿ, ಕ್ಲಾಟ್, ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಬೇಕಾದ ಜವಾಬ್ದಾರಿ…
ಮೀರಾ ಭಾಯಂದರ್ ಪರಿಸರದಲ್ಲಿ ಸಾಮಾಜಿಕದೊಂದಿಗೆ ಕಲಾ ಸೇವೆಯನ್ನು ಮಾಡುತ್ತಾ, ಜನಪ್ರಿಯತೆಯನ್ನು ಪಡೆದಿರುವ ಬಂಟ್ಸ್ ಫೋರಮ್ ಮೀರಾ ಭಾಯಂದರ್ ಸಂಸ್ಥೆಯ ಆಯೋಜನೆಯಲ್ಲಿ ಆಗಸ್ಟ್ 7 ರಂದು ಬುಧವಾರ ಅಪರಾಹ್ನ ಗಂಟೆ 3 ರಿಂದ ಭಾಯಂದರ್ ಪೂರ್ವದ ಮೀರಾ ಭಾಯಂದರ್ ರೋಡ್ ಕ್ರೌನ್ ಬಿಜಿನೆಸ್ ಹೋಟೇಲಿನ ಅಶ್ವಿನಿ ಬ್ಯಾಂಕ್ವೆಟ್ ಹಾಲ್ ಇಲ್ಲಿ ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಇವರಿಂದ “ಭೀಷ್ಮ ವಿಜಯ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಈ ಸಂದರ್ಭದಲ್ಲಿ ಭಾಗವತರಾದ ಬಲಿಪ ಶಿವಶಂಕರ್ ಭಟ್, ಅರ್ಥಧಾರಿ ಯಕ್ಷಗಾನ ಕಲಾವಿದ ಜಬ್ಬಾರ್ ಸುಮೋ ಸಂಪಾಜೆ ಇವರನ್ನು ಸನ್ಮಾನಿಸಲಾಗುವುದು ಹಾಗೂ ಪರಿಸರದ ಪ್ರತಿಭೆಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು. ಮೀರಾಗಾಂವ್ ಶ್ರೀ ಮಹಾಲಿಂಗೇಶ್ವರ ಮಂದಿರದ ಪ್ರಧಾನ ಅರ್ಚಕ ಸಾಣೂರು ಸಾಂತಿಂಜ ಜನಾರ್ಧನ ಭಟ್ ಆಶೀರ್ವಚನ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾಜಿ ನಗರ ಸೇವಕ ಅರವಿಂದ್ ಆನಂದ್ ಶೆಟ್ಟಿ, ಸಮಾಜ ಸೇವಕ ಹೋಟೆಲು ಉದ್ಯಮಿ ಮುಂಡಪ್ಪ ಎಸ್. ಪಯ್ಯಡೆ, ಉದ್ಯಮಿ ಕಾಶಿ ಮೀರಾ ಭಾಸ್ಕರ್ ಶೆಟ್ಟಿ, ಬಂಟರ…
ಮಂಗಳೂರು ಮತ್ತು ಮುಂಬಯಿ ಮಧ್ಯೆ ಪ್ರಯಾಣಿಸುವ ಹೆಚ್ಚಿನ ಪ್ರಯಾಣಿಕರ ಆಯ್ಕೆ ಮತ್ಸ್ಯಗಂಧ ಅಥವಾ ಮ್ಯಾಂಗಲೋರ್ ಎಕ್ಸ್ಪ್ರೆಸ್ ರೈಲುಗಳು. ಈ ರೈಲುಗಳಲ್ಲಿ ಪ್ರಯಾಣಿಕರ ಒಡವೆ, ಹಣ ಹಾಗೂ ಮೊಬೈಲ್ ಫೋನ್ ಕಳವಾಗುವ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ. ಇದು ರೈಲ್ವೆ ಪೊಲೀಸರ ಮೂಗಿನ ಅಡಿಯಲ್ಲೇ ನಡೆಯುತ್ತಿದೆ ಅನ್ನೋದು ಸಂಶಯಾತೀತ. ಈಗ ನಾನು ಹೇಳ ಹೊರಟಿರುವುದು ಅದಕ್ಕಿಂತಲೂ ದೊಡ್ಡ ದರೋಡೆಯ ಬಗ್ಗೆ. ನಾನು ಮೊನ್ನೆ ದಿನಾಂಕ ಮೂಲ್ಕಿಯಿಂದ ಮಂಗಳೂರಿಗೆ 3 ಟೈಯರ್ ಎಸಿಯಲ್ಲಿ ಪ್ರಯಾಣಿಸುತ್ತಿದ್ದೆ. ರಾತ್ರಿ ಸುಮಾರು 8:30ರ ಹೊತ್ತಿಗೆ ಮಡ್ಗಾವ್ ನಲ್ಲಿ ಊಟ ಕೊಡುವವರು ಬಂದು ಊಟ ಬೇಕೆ ಅಂತ ಕೇಳುತ್ತಿದ್ದರು. ನಾನು ರೂಪಾಯಿ 95 ಕೊಟ್ಟು ಒಂದು ಎಗ್ ಬಿರಿಯಾನಿ ಖರೀದಿಸಿದೆ. ಎಗ್ ಬಿರಿಯಾನಿ ಕೊಟ್ಟವ ನನ್ನಿಂದ ಹಣ ಪಡೆದು ಅಲ್ಲಿಂದ ಮಾಯವಾದ. ಎಗ್ ಬಿರಿಯಾನಿಯ ಡಬ್ಬಿ ಓಪನ್ ಮಾಡಿದಾಗ ಅದರಲ್ಲಿ ಎರಡು ಬೇಯಿಸಿದ ಮೊಟ್ಟೆ ಹಾಗೂ ಸುಮಾರು 50 ಗ್ರಾಮಿನಷ್ಟು ಹಳದಿ ಬಣ್ಣದ ಅನ್ನ ಇತ್ತು. ಅದರಲ್ಲಿ ಯಾವುದೇ ರೀತಿಯ ಉಪ್ಪು…