Author: admin

ನಾಟಕ ರಂಗಭೂಮಿ ಕಂಡ ಮಹಾನ್ ನಿರ್ದೇಶಕ, ರಂಗಕರ್ಮಿ ಜಗದೀಶ್ ಶೆಟ್ಟಿ ಕೆಂಚನಕೆರೆ ಅವರು ಉಡುಪಿ, ದಕ್ಷಿಣ ಕನ್ನಡ ಹಾಗೂ ಮುಂಬಯಿ ಮಹಾನಗರದಲ್ಲಿ ಸಂಪಾದಿಸಿದ ಜನಪ್ರಿಯತೆ, ಅವರ ನಿರ್ದೇಶನ ಪ್ರತಿಭೆ ಮರೆಯಲಾಗದು. ತುಳು ರಂಗಭೂಮಿ ಹಾಗೂ ಕೆಲವು ಅಪರೂಪದ ಪಾತ್ರ ಚಿತ್ರಣಗಳ ಕನ್ನಡ ನಾಟಕ ನಿರ್ದೇಶನಗಳ ಮೂಲಕ ರಂಗಭೂಮಿಯ ದೈತ್ಯ ಪ್ರತಿಭೆ ಎಂದು ಪ್ರಶಂಸೆ ಪಡೆದವರು. ಇತ್ತೀಚೆಗೆ ತನ್ನ ಹುಟ್ಟೂರಲ್ಲೇ ಇದ್ದುಕೊಂಡು ಅಲ್ಲಿಯೂ ಅನೇಕ ನಾಟಕ ತಂಡಗಳಿಗೆ ನಿರ್ದೇಶಕರಾಗಿ ದುಡಿಯುತ್ತಾ ವ್ಯಾಪಕ ಪ್ರಸಿದ್ಧಿ ಪಡೆದಿರುತ್ತಾರೆ. ಶ್ರೀಯುತರ ನಿರ್ದೇಶನದಲ್ಲಿ ಪಾತ್ರಗಳು ಜೀವ ತಳೆದು ಭಾವತುಂಬಿ ಮಾತಾಡುತ್ತವೆ. ಹೊಸ ಕಲಾವಿದನನ್ನು ತನ್ನ ನಿರ್ದೇಶನ ಸಾಮರ್ಥ್ಯದಿಂದ ಪ್ರಬುದ್ಧತೆಯ ಅಭಿನಯ ಪಡೆದು ಕಲಾವಿದರ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದಾರೆ. ಕಿರಿಯ ಕಲಾವಿದರು ಅವರನ್ನು ನಾಟಕ ಗುರು ಎಂದೇ ಸಂಬೋಧಿಸುತ್ತಾರೆ. ಹುಟ್ಟುತ್ತಲೇ ಒಬ್ಬಾತ ಪರಿಣತ ಕಲಾವಿದನಾಗಿರುವುದಿಲ್ಲ. ಅವನನ್ನು ತಿದ್ದಿ ತೀಡಿ ಒಬ್ಬ ಪರಿಪೂರ್ಣ ಕಲಾವಿದನನ್ನಾಗಿ ರೂಪಿಸಬೇಕಾಗುತ್ತದೆ. ಶಿಲ್ಪಿಯೊಬ್ಬ ಕಾಟುಶಿಲೆಯನ್ನು ಆಕರ್ಷಕ ಮೂರುತಿಯನ್ನಾಗಿ ರೂಪಿಸುವ ರೀತಿ ನಿರ್ದೇಶಕನಲ್ಲೂ ಅಂಥಾ ಮಂತ್ರ ಸ್ಪರ್ಷ ಇರಬೇಕಾಗುತ್ತದೆ.…

Read More

ಕೊರೊನಾದ ಅತ್ಯಂತ ಕ್ಷಿಪ್ರವಾಗಿ ಹರಡಬಲ್ಲ ಹೊಸ ತಳಿ ಜೆಎನ್‌.1 ಸೋಂಕು ಕೇರಳದಲ್ಲಿ ಪತ್ತೆಯಾಗಿರುವುದು ಗಾಬರಿ ಪಡಬೇಕಾದ ವಿಷಯ ಅಲ್ಲ; ಆದರೆ ಮುನ್ನೆಚ್ಚರಿಕೆಯಿಂದ ಇರಬೇಕಾದ, ಸಂಭಾವ್ಯ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಎದುರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. 2019-20ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ಹಾಹಾಕಾರ ಸೃಷ್ಟಿಸಿದ ಕೊರೊನಾ ಮರುವರ್ಷ ಬೇರೆಯದೇ ರೀತಿಯಲ್ಲಿ ಅಪಾರ ತೊಂದರೆಗೆ ಕಾರಣವಾಗಿತ್ತು. ಮೊದಲ ವರ್ಷ ಕಾಯಿಲೆ ಸಂಪೂರ್ಣವಾಗಿ ಅಪರಿಚಿತವಾಗಿದ್ದುದರಿಂದ ಸಾವು ನೋವುಗಳು ಸಂಭವಿಸಿದವು. ಆಗ ಜಗತ್ತಿನಾದ್ಯಂತ ಸೃಷ್ಟಿಯಾದದ್ದು ಮನುಕುಲ ಇತ್ತೀಚೆಗಿನ ದಶಕಗಳಲ್ಲಿ ಅನುಭವಿಸಿರದಂತಹ ಆರೋಗ್ಯ ತುರ್ತುಸ್ಥಿತಿ. ಅದರಿಂದ ಹೇಗೋ ಪಾರಾಗಿ ನಿಟ್ಟುಸಿರು ಬಿಡುವ ವೇಳೆಗೆ ಮರು ವರ್ಷ ಅದೇ ಕೊರೊನಾ ತುಸು ಹೊಸ ರೂಪ ತಳೆದು ಕಂಗೆಡಿಸಿತು. ಆಗ ಆಮ್ಲಜನಕ ಕೊರತೆ ಉಂಟಾದುದು, ಬ್ಲ್ಯಾಕ್‌ ಫ‌ಂಗಸ್‌ ಕಾಟ ಮರೆಯಲಾಗದ್ದು. ಮೊದಲ ವರ್ಷದ ಅನುಭವವನ್ನು ಪಾಠವಾಗಿ ಇರಿಸಿಕೊಂಡು ಮರುವರ್ಷದ ಅಲೆಯನ್ನು ಎದುರಿಸಲು ಮುಂದಾದಾಗ ಅದು ಬೇರೆಯದೇ ರೂಪದಲ್ಲಿ ಕಾಡಿತ್ತು ಎಂಬುದು ಗಮನದಲ್ಲಿ ಇರಿಸಿಕೊಳ್ಳಬೇಕಾದ ಅಂಶ. ನಮ್ಮ ದೇಶದಲ್ಲಿ ದೃಢಪಟ್ಟಿರುವ ಕೊರೊನಾ ಉಪತಳಿ…

Read More

“ಡೋಜಿ’ ಸುಧಾರಿತ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಂಪರ್ಕ ರಹಿತ ಮತ್ತು ರೋಗಿಗಳ ಮೇಲ್ವಿಚಾರಣೆ, ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆ ಹೊಂದಿದ ಅತ್ಯಾಧುನಿಕ ವ್ಯವಸ್ಥೆಯನ್ನು ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಅಳವಡಿಸಲಾಗಿದೆ. ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್‌ ಮಾರ್ಲ ಮಾಹಿತಿ ನೀಡಿ, ಎ.ಜೆ. ಆಸ್ಪತ್ರೆಯಲ್ಲಿ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸುತ್ತಿದ್ದೇವೆ. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಇದು ನೆರವಾಗಲಿದೆ. ಕೋವಿಡ್‌ ಸಮಯದಲ್ಲೇ ಪರೀಕ್ಷಾರ್ಥವಾಗಿ ಈ ಉಪಕರಣವನ್ನು ಅಳವಡಿಸಿದ್ದೆವು. ಅನೇಕ ತಿಂಗಳ ಪ್ರಯೋಗದ ಬಳಿಕ ಸುಸಜ್ಜಿತವಾಗಿ ಸ್ಥಾಪನೆಯಾಗುತ್ತಿದೆ. ಸದ್ಯ 50 ಖಾಸಗಿ ಬೆಡ್‌ಗಳಿಗೆ ಅಳವಡಿಸುತ್ತೇವೆ. ರೋಗಿಗಳಲ್ಲಿ ಹೃದಯ ಸಂಬಂಧಿ, ಮಧುಮೇಹ, ರಕ್ತದೊತ್ತಡ, ದೇಹದ ಉಷ್ಣತೆ, ಇಸಿಜಿ ಸಹಿತ ವಿವಿಧ ಮಾಹಿತಿಗಳ ಮೇಲೆ ದೂರದಿಂದಲೇ ನಿಗಾ ಇರಿಸಲು ಆರೋಗ್ಯ ಕಾರ್ಯಕರ್ತರಿಗೆ ಈ ಯಂತ್ರ ನೆರವಾಗುತ್ತದೆ. ಮುಂಚಿತವಾಗಿ ಎಚ್ಚರಿಕೆ ನೀಡುವ ಸೌಲಭ್ಯ ಇದರಲ್ಲಿದ್ದು, ರೋಗಿಯ ಆರೋಗ್ಯದಲ್ಲಾಗುವ ಬದಲಾವಣೆಯನ್ನು ಮೊದಲೇ ತಿಳಿಸುತ್ತದೆ ಎಂದರು. ಡೋಜಿಯ ಪರಿಹಾರವು ಕ್ಲೌಡ್ ಆಧಾರಿತ…

Read More

ಸಾಧಾರಣವಾಗಿ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನಾವು ಓದುವ ಅಂಶಗಳು ಹುಡುಗ ಹುಡುಗಿಯ ಹಿರಿಯರ, ಕುಟುಂಬಿಕರ ಮನೆ ಯಾವುದು? ಯಾವ ಮನೆತನದವರು ಎಂಬಿತ್ಯಾದಿ ಅಂಶವನ್ನು. ಆದರೆ ಇತ್ತೀಚಿಗಿನ ಮದುವೆ ಆಮಂತ್ರಣದ ಪತ್ರಿಕೆಯಲ್ಲಿ ಕೇವಲ ತಂದೆ ತಾಯಿಯ ಹೆಸರು ಮಾತ್ರ ಇದ್ದಲ್ಲಿ ಆಗ ನಾವು ಊಹಿಸಬಹುದಾಗಿದೆ ಇದು ಅಂತರ್ಜಾತಿ ವಿವಾಹ ಎಂದು. ಇಂದಿನ ಈ ದಿನಗಳಲ್ಲಿ ಇದೇನು? ಅಂತರ್ಜಾತಿ ವಿವಾಹಗಳು ಏಕೆ ಹೆಚ್ಚುತ್ತಿವೆ? ಇದಕ್ಕೆ ಮೂಲ ಕಾರಣರಾರು? ಪಾಲಕರಿಗೆ ಮಕ್ಕಳ ಮೇಲೆ ಇರುವ ಅತೀ ಪ್ರೀತಿ, ಮಮತೆ, ಇದಕ್ಕೆ ದಾರಿ ಮಾಡಿಕೊಟ್ಟೀತೇ? ಅಥವಾ ಮಿತಿಮೀರಿ ಕೊಟ್ಟ ಸ್ವಾತಂತ್ರ್ಯದ ದುರುಪಯೋಗವೇ? ಹೆಚ್ಚಿನ ವಿದ್ಯಾಭ್ಯಾಸ, ಉನ್ನತ ವ್ಯಾಸಂಗದ ಪ್ರಭಾವವೋ? ವಿದೇಶಗಳ ಸಂಸ್ಕೃತಿಯನ್ನು ನಾವು ಅನುಕರಣೆ ಮಾಡುತ್ತಿದ್ದೇವೆಯೋ? ಎಂಬಿತ್ಯಾದಿ ಪ್ರಶ್ನೆಗಳ ಸರಮಾಲೆಯೇ ಉದ್ಭವವಾಗುತ್ತಿದೆ. ಆದರೆ ಇದಕ್ಕೆಲ್ಲಾ ಉತ್ತರವನ್ನು ನಾವು ಕಂಡುಕೊಂಡಲ್ಲಿ ಪರಿಹಾರವೂ ಅದರ ಜತೆಗಿದೆ. ನಮ್ಮ ಮಕ್ಕಳು ಅಂತರ್ಜಾತಿ ವಿವಾಹ ಎಂದೊಡನೆ ಮೊದ ಮೊದಲು ಸಂಬಂಧಿಕರು ಸಿಕ್ಕರೆ ಮುಜುಗರ, ಏನು ಹೇಳಿ ಬಿಡುತ್ತಾರೋ ಎಂಬ ಅಂಜಿಕೆ. ಇದೀಗ ಎಲ್ಲರ…

Read More

ವಿದ್ಯಾಗಿರಿ: ಮಂಗಳೂರು ಮ್ಯಾಪ್ಸ್ ಕಾಲೇಜಿನಲ್ಲಿ ಬುಧವಾರ ನಡೆದ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಲಲಿತಕಲಾ ಸ್ಪರ್ಧೆಗಳಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದು, ಸಮಗ್ರ ಪ್ರಶಸ್ತಿ ಪಡೆದಿಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನ ಮೆಲ್ರೋಯ್ ಪೋಸ್ಟರ್ ಮೇಕಿಂಗ್‍ನಲ್ಲಿ ಪ್ರಥಮ ಸ್ಥಾನ, ಮಾಡೆಲಿಂಗ್ ನಲ್ಲಿ ಶ್ರೀಧರ್ ಬಡಿಗೇರ್ ಪ್ರಥಮ ಸ್ಥಾನ, ಕಾರ್ಟೂನಿಂಗ್‍ನಲ್ಲಿ ನಂದನ್ ದ್ವಿತೀಯ ಸ್ಥಾನ ಮತ್ತು ಇನ್ಸ್ಟಾಲೇಶನ್‍ನಲ್ಲಿ ಅಕ್ಷಿತ, ಮಣಿಕಂಠ, ಮಹೇಶ್, ರಿಫಾಯಿ ತಂಡ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಈ ಮೂಲಕ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ‘ಸಮಗ್ರ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆಳ್ವಾಸ್ ಬಿವಿಎ ವಿಭಾಗದ ಉಪನ್ಯಾಸಕ ಪರಮೇಶ್ವರ್ ಇದ್ದರು. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.

Read More

ಮೀರಾ ಭಾಯಂದರ್ ಅವಳಿ ನಗರ ಮಹಾರಾಷ್ಟ್ರದಲ್ಲೊಂದು ಪುಟ್ಟ ಮಂಗಳೂರು ಎಂದೂ, ಥಾಣೆ ಜಿಲ್ಲೆಯ ಸಾಂಸ್ಕೃತಿಕ ನಗರವೆಂದೂ ಪ್ರಸಿದ್ಧಿ ಪಡೆದಿದೆ. ಇಲ್ಲಿ ನಮ್ಮೂರ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸ್ತವ್ಯ ಹೂಡಿದ್ದು, ಸಂಬಂಧಿಸಿದ ಸಂಘ ಸಂಸ್ಥೆಗಳ ಸಂಖ್ಯೆಯೂ ಇನ್ನೂರು ಮೀರುತ್ತಿದೆ. ನಮ್ಮ ಸಮುದಾಯದ ಹೆಚ್ಚಿನ ಸಂಘಟಕರು, ಸಮಾಜ ಸೇವಕರು, ರಾಜಕೀಯ ನಾಯಕರು, ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರದ ಮುಂದಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಹಾಗೂ ಸಾಕಷ್ಟು ಪ್ರಭಾವಿಗಳೂ ಇರುವುದರಿಂದ ಇಲ್ಲಿ ನಾಯಕತ್ವಕ್ಕೆ ಸ್ಫರ್ಧಿಗಳೂ ಹೆಚ್ಚು. ಒಂದಕ್ಕಿಂತ ಹೆಚ್ಚು ಸಮಾನ ಯೋಗ್ಯತೆ ಇರುವ ಈ ಪ್ರದೇಶದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಕೇಂದ್ರ ಸಮಿತಿಯ ಮುಖ್ಯಸ್ಥರು ಹಾಗೂ ಸ್ಥಾನೀಯ ಮುಖ್ಯಸ್ಥರೊಂದಿಗೆ ಸೌಹಾರ್ದದ ಸಮಾಲೋಚನೆ ನಡೆಸಿ ನಾಯಕತ್ವದ ಆಯ್ಕೆಯಾಗುತ್ತದೆ. ಹಾಗೆ ತುಸು ವಿಳಂಬವಾದರೂ ಕೊನೆಗೂ ಸಮಿತಿಗೆ ಸಮರ್ಥ ನಾಯಕತ್ವದ ಆಯ್ಕೆಯಾಗಿದೆ. ಬಂಟರ ಸಂಘ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಈ ಸಾಲಿನ ಮೂರು ವರ್ಷಗಳ ಅವಧಿಗೆ ಗುತ್ತಿನಾರ್ ರವೀಂದ್ರ ಶೆಟ್ಟಿ ಬಳ್ಕುಂಜೆ ಗುತ್ತು ಅವರು ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯದ ಉಡುಪಿ…

Read More

ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ (ಐಆರ್‌ಸಿ ಎಸ್‌)ಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ರಕ್ತ ನಿಧಿಯನ್ನು ನಿರ್ವಹಿಸಿ ಅತಿ ಹೆಚ್ಚು ಬಡ ರೋಗಿಗಳಿಗೆ ರಕ್ತ ಪೂರೈಸಿದ ರಾಜ್ಯದ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಬೆಂಗಳೂರಿನ ರಾಜಭವನದಲ್ಲಿ ನಡೆದ ರೆಡ್‌ಕ್ರಾಸ್‌ ರಾಜ್ಯ ಘಟಕದ ಮಹಾಸಭೆಯಲ್ಲಿ ರಾಜ್ಯಪಾಲ ಹಾಗೂ ಐಆರ್‌ಸಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಥಾವರ್‌ ಚಂದ್‌ ಗೆಹ್ಲೋಟ್ ಅವರಿಂದ ಜಿಲ್ಲಾ ಘಟಕದ ಚೇರ್ಮನ್‌ ಚೇರ್ಮನ್‌ ಸಿಎ ಶಾಂತಾರಾಮ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯ ಘಟಕದ ದ.ಕ. ಜಿಲ್ಲಾ ಪ್ರತಿನಿಧಿ ಯತೀಶ್‌ ಬೈಕಂಪಾಡಿ, ಜಿಲ್ಲಾ ಘಟಕದ ನಿರ್ದೇಶಕರಾದ ಡಾ. ಸಚ್ಚಿದಾನಂದ ರೈ, ಗುರುದತ್‌ ಎಂ. ನಾಯಕ್‌, ಪಿ.ಬಿ. ಹರೀಶ್‌ ರೈ, ರಾಜ್ಯ ಘಟಕದ ಉಪಾಧ್ಯಕ್ಷ ಗೋಪಾಲ್‌ ಹೊಸೂರು, ಚೇರ್ಮನ್‌ ವಿಜಯಕುಮಾರ್‌ ಪಾಟೀಲ್‌ ಉಪಸ್ಥಿತರಿದ್ದರು. ರೆಡ್‌ಕ್ರಾಸ್‌ ದ.ಕ. ಶಾಖೆಯ ಬ್ಲಿಡ್‌ ಬ್ಯಾಂಕ್‌ನಿಂದ ಸರಕಾರಿ ಲೇಡಿಗೋಷನ್‌ ಆಸ್ಪತ್ರೆಗೆ ಪ್ರತೀ ತಿಂಗಳು 450ಕ್ಕೂ ಅಧಿಕ ಯೂನಿಟ್‌ ರಕ್ತವನ್ನು ಉಚಿತವಾಗಿ ನೀಡುತ್ತಿದೆ. ಈಗ ಅತ್ಯುತ್ತಮ ರಕ್ತ ನಿಧಿ ಪ್ರಶಸ್ತಿ…

Read More

ಮೆಲೋಡಿ ಹಾಡುಗಳು ಎಂದಿಗೂ ಜನರ‌ ಜೀವನದ ಅವಿಭಾಜ್ಯ ಅಂಗವಾಗಿರುತ್ತವೆ. ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಆಕರ್ಷಿಸುವ ಹಲವಾರು ಮೆಲೋಡಿ ಹಾಡುಗಳ ಗುಂಪಿಗೆ “ರವಿಕೆ ಪ್ರಸಂಗ” ಚಿತ್ರದ “ಮನಸಲಿ ಜೋರು ಕಲರವ” ಎಂಬ ಅದ್ಭುತವಾದ ಮೆಲೋಡಿ ಹಾಡನ್ನು ನೂರಾರು ಎವರ್ ಗ್ರೀನ್ ಸೂಪರ್ ಹಿಟ್ ಮೆಲೋಡಿ ಹಾಡುಗಳನ್ನು ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ ಅವರು ಬಿಡುಗಡೆ‌ ಮಾಡಿದ್ದಾರೆ. ಈ ವರ್ಷದ ಅತ್ಯುತ್ತಮ ಮೆಲೋಡಿ ಹಾಡುಗಳ ಪಟ್ಟಿಯಲ್ಲಿ ಅಗ್ರಸ್ಥಾನ‌ ಪಡೆಯುವ ಎಲ್ಲಾ ಅಂಶಗಳನ್ನು ಹೊಂದಿರುವ ಈ ಹಾಡಿಗೆ ಕಿರಣ್ ಕಾವೇರಪ್ಪ ಅವರ ಅದ್ಭುತ ಸಾಹಿತ್ಯ, ಮಾನಸ ಹೊಳ್ಳ ಅವರು ಮಧುರವಾದ ಧ್ವನಿ ಹಾಗೂ ವಿನಯ್ ಶರ್ಮಾ ಅವರ ಇಂಪಾದ ಸಂಗೀತ ಇದೆ. ಸಂತೋಷ್ ಕೊಡಂಕೇರಿ ಅವರ ಚಿತ್ರಕಥೆ ನಿರ್ದೇಶನದಲ್ಲಿ, ಪಾವನ ಸಂತೋಷ್ ಅವರ ಕಥೆ ಸಂಭಾಷಣೆ ಇರುವ “ರವಿಕೆ ಪ್ರಸಂಗ” ಚಿತ್ರವನ್ನು “ದೃಷ್ಟಿ ಮಿಡಿಯಾ & ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿಲಾಗಿದೆ. ಚಿತ್ರದ ಎಲ್ಲಾ ಕೆಲಸಗಳು ಮುಕ್ತಾಯವಾಗಿದ್ದು ಬಿಡುಗಡೆಯ ಹೊಸ್ತಿಲಲ್ಲಿ ಜನರನ್ನು ರಂಜಿಸಲಿದೆ.

Read More

“ಕರಾವಳಿಯಲ್ಲಿ 17,000 ಕೋಟಿ ರೂ. ಮೊತ್ತದ ಯೋಜನೆಯಲ್ಲಿ ಸದ್ಯ 3,000 ಕೋಟಿ ರೂ. ವಿನಿಯೋಗದಲ್ಲಿ ಕಾಮಗಾರಿಗಳು ನಡೆದಿವೆ. ನದಿ ಮತ್ತು ಸೇತುವೆಯಲ್ಲಿ ಪೈಪ್ ಅಳವಡಿಸಲು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಮುಂದಿನ ಮೂರು ತಿಂಗಳಲ್ಲಿ ಮನೆ ಮನೆಗೆ ಗೇಲ್ ಇಂಡಿಯಾ ಗ್ಯಾಸ್ ಪೂರೈಕೆ ಮಾಡಲಿದೆ” ಎಂದು ಗೇಲ್ ಇಂಡಿಯಾದ ಆರ್ಥಿಕ ವಿಭಾಗ ನಿರ್ದೇಶಕ ರಾಕೇಶ್ ಕುಮಾರ್ ಜೈನ್ ಹೇಳಿದರು. ಅವರು ಸುರತ್ಕಲ್ ನ ವಿಜಯ ಫ್ಯೂಲ್ ಪಾರ್ಕ್ ನಲ್ಲಿ 22ನೇ ಸಿಎನ್ ಜಿ ಸ್ಟೇಷನ್ ಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದರು. ಬಳಿಕ ಮಾತಾಡಿದ ಹೆಚ್ ಪಿಸಿಲ್ ರಿಟೇಲ್ ವಿಭಾಗದ ಡಿಜಿಎಂ ನವೀನ್ ಕುಮಾರ್ ಮಾತನಾಡಿ, “ಮಂಗಳೂರಿನಲ್ಲಿ ಪ್ರಪ್ರಥಮ ಆನ್ ಲೈನ್ ಸಿಎನ್ ಜಿ ಸ್ಟೇಷನ್ ಸುರತ್ಕಲ್ ನಲ್ಲಿ ಪ್ರಾರಂಭಗೊಂಡಿರುವುದು ಸಂತಸದ ವಿಚಾರ. ಹೆಚ್ ಪಿಸಿ ಎಲ್ ಸಹಯೋಗದಲ್ಲಿ ಸಿಎನ್ ಜಿ ಸ್ಟೇಷನ್ ಶುಭಾರಂಭಗೊಂಡಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿ ವರ್ಷದ ಹಿಂದೆ ಪ್ರಾರಂಭಗೊಂಡಿರುವ ಫ್ಯೂಲ್ ಸ್ಟೇಷನ್ ಹೆಚ್ಚಿನ…

Read More

ಒಬ್ಬನೇ ವ್ಯಕ್ತಿಯಲ್ಲಿ ಅನೇಕ ಪ್ರತಿಭಾ ಸಾಮರ್ಥ್ಯಗಳು ಮೇಳವಿಸಿದರೆ ಆತ ಸಮಾಜದಲ್ಲಿ ಭಿನ್ನ ಪಂಕ್ತಿಯಲ್ಲಿ ಗೌರವಿಸಲ್ಪಡುತ್ತಾನೆ. ಅಂಥವರಲ್ಲಿ ವಿರಳಾತಿ ವಿರಳ ವ್ಯಕ್ತಿ ವಿಶೇಷ ನಮ್ಮ ಅಶೋಕ ಪಕ್ಕಳರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಸನ್ನಿಧಿ ಗುತ್ತು ಮನೆತನದ ಸಂಜಾತ ಎಂ ಎ ಪಕ್ಕಳ ಮತ್ತು ಶ್ರೀಮತಿ ನಾಗಮ್ಮ ಪಕ್ಕಳ ದಂಪತಿಯರಿಗೆ ಮೂರನೆಯ ಹಾಗೂ ಕಿರಿಯ ಮುದ್ದಿನ ಮುದ್ದು ಮುದ್ದಾದ ಮಗನಾಗಿ ಜನಿಸಿದವರು ಅಶೋಕ್. ಪ್ರಾಥಮಿಕ ಹಂತದ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿ ಮುಗಿಸಿದ ಬಳಿಕ ಜೈನಕಾಶಿ ಎಂಬ ಪ್ರಸಿದ್ಧಿ ಪಡೆದ ಮೂಡಬಿದಿರೆಯ ಧವಳ ಕಾಲೇಜಿನ ಮುಖಾಂತರ ಪದವಿಪೂರ್ವ ಹಾಗೂ ಪದವಿ ಶಿಕ್ಷಣ ಪೂರೈಸಿಕೊಂಡರು. ತನ್ನ ಶಾಲಾ ಕಾಲೇಜು ದಿನಗಳಲ್ಲಿ ದೈನಂದಿನ ಪಾಠ ವಿಷಯಗಳ ಜೊತೆಗೆ ಪಾಠೇತರ ಚಟುವಟಿಕೆಗಳಲ್ಲಿ ಸದಾ ಮುಂದಿದ್ದು ಶಿಕ್ಷಕರ ಪ್ರಾಧ್ಯಾಪಕರ ಅಚ್ಚು ಮೆಚ್ಚಿನ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದರು. ಮುಂದೆ ಈ ಕನಸು ಕಂಗಳ ಯುವಕ ಹಿರಿಯಣ್ಣನ ಕರೆಯನ್ನು ಗೌರವಿಸಿ ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬಯಿಗೆ ಆಗಮಿಸಿ ಅಣ್ಣನ ಜೊತೆಗೆ…

Read More