ಬೈಂದೂರು ಬಂಟರ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ಶಶಿಧರ್ ಶೆಟ್ಟಿ ಅವರ ನೇತೃತ್ವದ ಪದಾಧಿಕಾರಿಗಳ ನಿಯೋಗವು 2024-25 ರ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ 592 ಅಂಕ ಪಡೆದ ಕುಮಾರಿ ಸನ್ನಿಧಿ ಎಂ ಶೆಟ್ಟಿಯವರ ಸಾಧನೆ ಪರಿಗಣಿಸಿ ಅಭಿನಂದಿಸಿತು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ನಿತಿನ್ ಬಿ ಶೆಟ್ಟಿ, ಉಪಾಧ್ಯಕ್ಷ ಎನ್ ಕರುಣಾಕರ ಶೆಟ್ಟಿ, ಬಂಟರ ಭವನದ ಸಂಚಾಲಕ ವಾದಿರಾಜ ಶೆಟ್ಟಿ, ಪದಾಧಿಕಾರಿಗಳಾದ ಸಂತೋಷ್ ಶೆಟ್ಟಿ, ಗೌರವ್ ಗಾರ್ಮೆಂಟ್ಸ್ ನ ಮನೋಹರ್ ಶೆಟ್ಟಿ ಉಪ್ಪುಂದ, ಜಯರಾಮ್ ಶೆಟ್ಟಿ ಗಂಟೆಹೊಳೆ, ಉದಯ ಕುಮಾರ್ ಶೆಟ್ಟಿ ಬಿಜೂರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸನ್ನಿಧಿ ಶೆಟ್ಟಿ ಕಾಲ್ತೋಡು ಗ್ರಾಮದ ಹಳೆ ಕಾಲ್ತೋಡು ನಿವಾಸಿ ವಿನೋದ ಮತ್ತು ಮಂಜುನಾಥ್ ಶೆಟ್ಟಿ ದಂಪತಿಗಳ ಪುತ್ರಿ.