Author: admin
ಮೇ 26 ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ “ಪಟ್ಲ ಸಂಭ್ರಮ” ನಮ್ಮೆಲ್ಲರ ಮನೆಯ ಕಾರ್ಯಕ್ರಮ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಟ್ಲ ಫೌಂಡೇಶನ್ ನ ಎಲ್ಲಾ ಘಟಕದ ಪದಾಧಿಕಾರಿಗಳು, ಸದಸ್ಯರು ಸಕ್ರೀಯವಾಗಿ ಭಾಗವಹಿಸುವಂತೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು. ಪಟ್ಲ ಸಂಭ್ರಮ ಕಾರ್ಯಕ್ರಮದ ಕುರಿತು ಪತ್ತುಮುಡಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಪಟ್ಲ ಸಂಭ್ರಮ” ಕಲಾವಿದರಿಗೆ ಕಲಾಪೋಷಕರಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ. ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಎಲ್ಲರೂ ದುಡಿಯಬೇಕು. ಹೀಗಾಗಲೇ ಎಲ್ಲಾ ಘಟಕಗಳು ಆಮಂತ್ರಣ ಪತ್ರವನ್ನು ವಿತರಿಸುವ ಕೆಲಸ ಮಾಡಿದೆ. 2024 ರ ಸಾಲಿನ ಯಕ್ಷಧ್ರುವ ಪಟ್ಲ ಪ್ರಶಸ್ತಿಯನ್ನು ಬಡಗುತಿಟ್ಟಿನ ಕಲಾವಿದ ರಾಮಚಂದ್ರ ಹೆಗಡೆ ಕೊಂಡದಕುಳಿ ಪಡೆಯಲಿದ್ದಾರೆ. ಸಮಾರಂಭದಲ್ಲಿ ಚಲನಚಿತ್ರ ನಟ ಕಿಚ್ಚ ಸುದೀಪ್ ಭಾಗವಹಿಸುವುದು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಲಿದೆ ಎಂದರು. ಸಮಾರಂಭದಲ್ಲಿ ಹಿರಿಯ ಅರ್ಥದಾರಿ ಪ್ರಭಾಕರ ಜೋಷಿ ಭಾಗವಹಿಸಿ ಸಲಹೆ ಸೂಚನೆ ನೀಡಿದರು. ಭುಜಬಲಿ ಧರ್ಮಸ್ಥಳ, ಸರಪಾಡಿ ಅಶೋಕ್ ಶೆಟ್ಟಿ, ಚಂದ್ರಹಾಸ…
ಮೂಡುಬಿದಿರೆ: ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಫ್‍ನಲ್ಲಿ ಆಳ್ವಾಸ್ ಕಾಲೇಜು ಪ್ರಶಸ್ತಿ ಜಯಭೇರಿಯಾಗಿದೆ. ಸತತ 18ನೇ ಬಾರಿ ದಿ. ಫ್ಯಾಬಿಯನ್ ಕುಲಾಸೊ ಸ್ಮಾರಕ ಪರ್ಯಾಯ ಫಲಕವನ್ನು ಮುಡಿಗೇರಿಸಿಕೊಂಡಿದೆ. ಫೈನಲ್‍ನಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ತಂಡವನ್ನು 35-05, 35-11 ನೇರ ಸೆಟ್‍ಗಳಿಂದ ಸೋಲಿಸಿದ ಆಳ್ವಾಸ್ ಕಾಲೇಜು ತಂಡವು ಚಾಂಪಿಯನ್ ಆಯಿತು. ಸೆಮಿಫೈನಲ್‍ನಲ್ಲಿ ಕಾರ್ಕಳದ ಎಸ್‍ವಿಟಿ ಕಾಲೇಜು ತಂಡವನ್ನು 35-7, 35-11 ನೇರ ಸೆಟ್‍ಗಳಿಂದ ಸೋಲಿಸಿತ್ತು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ ಮೇ 21, 22 ರಂದು ಸಂಸ್ಥೆಯ ಶಿಕ್ಷಕ ವೃಂದದವರಿಗೆ ತರಗತಿ ನಿರ್ವಹಣೆ ಕೌಶಲ್ಯಗಳ ಕುರಿತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಉಡುಪಿಯ ಪೆÇೀದಾರ್ ಇಂಟರ್‍ನ್ಯಾಷನಲ್ ಸ್ಕೂಲ್‍ನ ಪ್ರಾಂಶುಪಾಲರಾದ ಉದಯ್ ಕುಮಾರ್ ಎ.ಎನ್, ನಿಟ್ಟೆಯ ಎನ್.ಎಸ್.ಎ.ಎಮ್ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ರಾಧಾ ಪ್ರಭು ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಜಿ ಎಮ್‍ನ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಮಕ್ಕಳು ಇಂದು ಚತುರರಾಗಿದ್ದಾರೆ. ಆಧುನಿಕತೆಗೆ ತಕ್ಕಂತೆ ನಮ್ಮ ಜ್ಞಾನ ನವೀಕರಣಗೊಂಡಾಗ ಮಾತ್ರ ಮಕ್ಕಳ ಮನಸ್ಸನ್ನು ಗೆಲ್ಲಲು ಸಾಧ್ಯವೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಜಿ ಎಮ್‍ನ ಧ್ಯೇಯ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಾಗಿದೆ. ಇದಕ್ಕೆ ಸಾಕಷ್ಟು ಪೂರ್ವಸಿದ್ಧತೆ, ಯೋಜನೆಗಳು ಮುಖ್ಯ. ಈ ನಿಟ್ಟಿನಲ್ಲಿ ಶಾಲಾ ಪ್ರಾರಂಭದ ಮೊದಲೇ ಶಿಕ್ಷಕರಿಗೆ ಮತ್ತು ಪೋಷಕರಿಗೆ ಹಲವಾರು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಇದನ್ನು ಎಲ್ಲಾ ಶಿಕ್ಷಕರು ಹಾಗೂ ಪೋಷಕರ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಎರಡು ದಿನಗಳ ಕಾರ್ಯಾಗಾರದಲ್ಲಿ ಪರಿಣಾಮಕಾರಿ ತರಗತಿ…
ಇವತ್ತು ಮಲ್ಯಾಡಿ ಶಿವರಾಮ ಶೆಟ್ಟರ ಹುಟ್ಟಿದ ಹಬ್ಬವಂತೆ. ಮಲ್ಯಾಡಿ ಶಿವರಾಮ ಶೆಟ್ಟರು ನಮ್ಮ ಪರಿಸರದ ಜನಸಾಮಾನ್ಯರ ಪರ ಬಡಿದಾಡುವ ರಾಜಕಾರಣಿ ಮಾತ್ರವೇ ಅಲ್ಲ ಅವರೊಬ್ಬ ಧಾರ್ಮಿಕ ಮುಂದಾಳು, ಇವತ್ತು ಸಂಜೆ ಐದೂವರೆ ಗಂಟೆಗೆ ಮಲ್ಯಾಡಿಯ ಗಣಪತಿ ದೇವಸ್ಥಾನಕ್ಕೆ ಹೋದರೂ ಶಿವರಾಮಣ್ಣ ಈ ಪ್ರಾಯದಲ್ಲಿಯೂ ತನ್ನ ಪಂಚೆಯನ್ನ ಗಟ್ಟಿಯಾಗಿ ಕಟ್ಟಿಕೊಂಡು ಹದಿನೆಂಟರ ಹುಡುಗರನ್ನ ನಾಚಿಸುವಂತೆ ಭಜನೆ ಕುಣಿಯುತ್ತಾರೆ. ಒಮ್ಮೆ ಶಿವರಾಮಣ್ಣನ ಜೊತೆಗೆ ಎಲ್ಲೋ ದೂರ ಹೋಗುವ ಸಂದರ್ಭ ಬಂದಿತ್ತು. ಬರುವಾಗ ತಡವಾಗಿತ್ತು ಊಟ ಮಾಡೋಣ ಶಿವರಾಮಣ್ಣ ಅಂದ್ರೆ ’ಇಲ್ಲ ನೀವೆಲ್ಲ ಊಟ ಮಾಡಿ, ನಾನು ಮನೆಗೆ ಹೋಗಿ ಭಜನೆ ಮಾಡಿದ ಮೇಲೇ ನನ್ನ ಊಟ’ ಎಂದರು. ಈ ಬದ್ಧತೆ ಯಾರಲ್ಲಿದೆ ಹೇಳಿ? ರಾತ್ರಿಯ ಭಜನೆ ಮಾಡದೆ ಊಟವೇ ಮಾಡದಿರುವ ಶಿವರಾಮಣ್ಣನಿಗಿಂತಲೂ ದೊಡ್ಡ ಧಾರ್ಮಿಕ ವ್ಯಕ್ತಿ ಬೇಕಿದೆಯಾ? ಇವತ್ತು ಮಲ್ಯಾಡಿ ಶಿವರಾಮಣ್ಣನನ್ನ ರಾಜಕೀಯದ ಕಾರಣಕ್ಕೆ ದೂರುವವರಿರಬಹುದು. ರಾಜಕಾರಣವೇ ಹಾಗೆ, ಅಲ್ಲಿ ಶತ್ರುಗಳ ಸಾಮ್ರಾಜ್ಯವೇ ವಿನಾಕಾರಣ ಬೆಳೆದು ನಿಲ್ಲುತ್ತದೆ. ರಾಜಕೀಯವಾಗಿ ಅವರ ಮತ್ತು ನನ್ನ ನಿಲುವುಗಳು…
ಶ್ರೀ ನಾಗವನ ಕಲ್ಲುರ್ಟಿ ಪಂಜುರ್ಲಿ ಸಪರಿವಾರ ದೈವಸ್ಥಾನ ಅಂಬ್ಲಮೊಗರು ನೂತನ ಧರ್ಮ ಚಾವಡಿ ಪ್ರವೇಶೋತ್ಸವ ಮತ್ತು ಪಡ್ಯಾರ ಮನೆ ಬ್ರಹ್ಮಕಲಶೋತ್ಸವ ಸಲುವಾಗಿ ಉಳ್ಳಾಲ ತಾಲೂಕು ಪಡ್ಯಾರ ಮನೆಯಲ್ಲಿ ‘ಮಾಗಧ ವಧೆ’ ಯಕ್ಷಗಾನ ತಾಳಮದ್ದಳೆ ಇತ್ತೀಚೆಗೆ ಜರಗಿತು. ದಿ.ಕಲ್ಲಾಯಿ ವಿಠಲ ರೈ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರು. ಗಣೇಶ್ ಕುಮಾರ್ ಹೆಬ್ರಿ, ಹರಿಶ್ಚಂದ್ರ ನಾಯಗ ಮಾಡೂರು, ಜೀತೇಶ್ ಕೋಳ್ಯೂರು, ಸ್ಕಂದ ಕೊನ್ನಾರ್ ಹಿಮ್ಮೇಳದಲ್ಲಿದ್ದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೋ ಸಂಪಾಜೆ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಗಣೇಶ ಶೆಟ್ಟಿ ಕನ್ನಡಿಕಟ್ಟೆ, ಸಂಜೀವ ಶೆಟ್ಟಿ ಬಿ.ಸಿ.ರೋಡು ಅರ್ಥಧಾರಿಗಳಾಗಿದ್ದರು. ಸಮ್ಮಾನ: ತಾಳಮದ್ದಳೆಯನ್ನು ಸಂಯೋಜಿಸಿದ ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರನ್ನು ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ, ಸಂಗಂ ಫೈನಾನ್ಸ್ ನ ವಿಜಯಕುಮಾರ್ ಶೆಟ್ಟಿ ಪಡ್ಯಾರಮನೆ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಪಡ್ಯಾರ ಮನೆ…
ವಿದ್ಯಾಗಿರಿ: ಆಳ್ವಾಸ್ ಹಮ್ಮಿಕೊಂಡಿರುವ ಉಚಿತ ಕಣ್ಣಿನ ತಪಾಸಣಾ ಶಿಬಿರ, ಯಾವುದೇ ನಿರ್ದಿಷ್ಟ ಜಾತಿ, ಧರ್ಮಗಳಿಗೆ ಸೀಮಿತವಾಗಿರದೆ, ಸರ್ವರಿಗೂ ಕಣ್ಣಿನ ಆರೋಗ್ಯ ಸೇವೆ ಲಭಿಸುತ್ತಿದೆ ಎಂಬ ತೃಪ್ತಿ ನನಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಹೆಗ್ಗಡೆ ಸಮಾಜ ಸಂಘ (ರಿ.), ಕೋಟೆಬಾಗಿಲು ಗಾಣಿಗ ಯಾನೆ ಸಪಳಿಗ ಸೇವಾ ಸಂಘ (ರಿ.) ಮೂಡುಬಿದಿರೆ, ಮಿಜಾರು-ಎಡಪದವು ಭಂಡಾರಿ ಸಮಾಜ ಸೇವಾ ಸಂಘ(ರಿ)ಮೂಡುಬಿದಿರೆ ಹಾಗೂ ಮಡಿವಾಳ ಸಮಾಜ ಸೇವಾ ಸಂಘ (ರಿ.), ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 9ನೇ ಉಚಿತ ನೇತ್ರ ತಪಾಸಣಾ ಶಿಬಿರ ಮಂಗಳವಾರ ನಡೆಯಿತು. ಹಲವಾರು ಸಂಘ ಸಂಸ್ಥೆಗಳು ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳುತ್ತಿದ್ದರೂ, ಕಣ್ಣಿನ ಚಿಕಿತ್ಸೆ ಬಗ್ಗೆ ಜಾಗೃತಿ ಜನರಲ್ಲಿ…
ಮೂಡುಬಿದಿರೆ: ಪುತ್ತೂರು ವಿವೇಕಾನಂದ ಸ್ವಾಯತ್ತ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮಾಧ್ಯಮ ಹಬ್ಬ ವಿವೇಕ ಚೇತನದಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟು 13 ಸ್ಪರ್ಧೆಗಳಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳು 6 ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ಒಂದು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು. ಲೋಗೋ ವಿನ್ಯಾಸದಲ್ಲಿ ಸಚಿನ್ ಆಚಾರ್ಯ ಪ್ರಥಮ, ರೇಡಿಯೋ ನಿರೂಪಣೆ ಪ್ರಖ್ಯಾತ ಬೆಳುವಾಯಿ ಪ್ರಥಮ, ಸಪ್ರ್ರೈಸ್ ಇವೆಂಟ್ ರಂಜಿತ್ ಪ್ರಥಮ, ಬೀದಿ ನಾಟಕ ಪ್ರಥಮ, ರಸಪ್ರಶ್ನೆ ಜಡೇಶ್ ಹಾಗೂ ತಬ್ರೀಸ್ ಪ್ರಥಮ, ಪಿ2ಸಿ ಚಿದಾನಂದ ರುದ್ರಪುರಮಠ ಪ್ರಥಮ, ರೀಲ್ಸ್ ಮೇಕಿಂಗ್ ವಿನೀತ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ವಿಜೇತ ತಂಡವನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.
ಮೂಡುಬಿದಿರೆ: ಸೌಂದರ್ಯವರ್ಧಕ ಚಿಕಿತ್ಸಾಲಯಗಳು ಈ ಕಾಲದ ಪ್ರತಿಯೊಬ್ಬರ ಕನಿಷ್ಠ ಅಗತ್ಯೆಯೆ ಹೊರತು ಐಷಾರಾಮಿ ಜೀವನ ಪದ್ದತಿಯಲ್ಲ ಎಂದು ಮುಂಬೈನ ಖ್ಯಾತ ಡೆರ್ಮಟೊ ಕಾಸ್ಮಟಾಲಜಿಸ್ಟ್ ಡಾ ದೀಪಿಕಾ ಶೆಟ್ಟಿ ತಿಳಿಸಿದರು. ಅವರು ಆಳ್ವಾಸ ಶಿಕ್ಷಣ ಪ್ರತಿಷ್ಠಾನದಿಂದ ಮೂಡುಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್ ಪಕ್ಕದಲ್ಲಿ ನೂತನವಾಗಿ ಪ್ರಾರಂಭಗೊಂಡ ಆಳ್ವಾಸ್ ಎಸ್ಥೆಟಿಕ್ ರಿಜುವನೇಶನ್ ಸೆಂಟರ್‍ನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಪ್ರತಿಯೊಬ್ಬರು ತಮ್ಮ ತ್ವಚೆಗೆ ಹಾಗೂ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು, ಇಂತಹ ವೈಯಕ್ತಿಕ ಯೋಗ ಕ್ಷೇಮದ ಸೇವೆಯನ್ನು ನೀಡುವ ಚಿಕಿತ್ಸಾಲಯಗಳು ಈ ಕಾಲದ ಮೂಲಭೂತ ಅಗತ್ಯಗಳಾಗಿ ಮಾರ್ಪಟ್ಟಿವೆ. ತಾನು 3 ದಶಕಗಳ ಹಿಂದೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಸಂಶಯ ದೃಷ್ಟಿಯಿಂದ ನೋಡಿದವರು ಹೆಚ್ಚೇ ಹೊರತು, ಬೆಂಬಲ ನೀಡಿದವರು ಕಡಿಮೆ. ಆದರೆ ಇಂದು ಈ ಕ್ಷೇತ್ರದ ಸೇವೆ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಿಗೂ ಅಗತ್ಯವೆನ್ನುವಷ್ಟು ಬೆಳೆದಿದೆ ಎಂದ ಹರ್ಷ ವ್ಯಕ್ತ ಪಡಿಸಿದರು. ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಮೂಡುಬಿದಿರೆಯ ಪಟ್ಟಣಕ್ಕೆ ಇಂತಹ ಸೌಂದರ್ಯವರ್ಧಕ ಚಿಕಿತ್ಸಾಲಯಗಳ ಅಗತ್ಯ ಹೆಚ್ಚಿದೆ. ಆಳ್ವಾಸ್…
ಅಂತರ್ಜಾಲ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ ಮಾತ್ರವಲ್ಲ, ಸಹಸ್ರಾರು ಬಂಟರ ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸಿದ ‘ಬಂಟ್ಸ್ ನೌ’ ಅಂತರ್ಜಾಲ ಸುದ್ದಿ ಮಾಧ್ಯಮ ಸಂಸ್ಥೆಯ ವತಿಯಿಂದ ಅನುಬಂಧ – 2024 ಕಾರ್ಯಕ್ರಮ ಮೇ 19 ರಂದು ಮಂಗಳೂರು ಪುರಭವನದಲ್ಲಿ ಅಪರಾಹ್ನ 3 ರಿಂದ ರಾತ್ರಿ 10 ರ ತನಕ ನಡೆಯಲಿದೆ. ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಅರ್ಥಪೂರ್ಣ, ಸಮಾಜ ಹಿತ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಫದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀದೇವಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ, ಹಿರಿಯ ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಸಾಂಕೇತಿಕವಾಗಿ ತುಳುನಾಡಿನ ಸಂಪ್ರದಾಯದಂತೆ ವಿವಿಧ ಆಕರ್ಷಕ ಶೈಲಿಗಳಲ್ಲಿ ಉದ್ಘಾಟಿಸಲಿದ್ದಾರೆ. ಈ ಸಂಭ್ರಮದಲ್ಲಿ ಗೌರವ…
ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಆಳ್ವಾಸ್ ಕಾಲೇಜಿನ ಪುರುಷರ ತಂಡ ಸತತ 19ನೇ ಬಾರಿ ಚಾಂಪಿಯನ್
ಮೂಡುಬಿದಿರೆ: ಎಂಪಿಎಂ ಕಾಲೇಜು ಕಾರ್ಕಳದಲ್ಲಿ ಮುಕ್ತಾಯಗೊಂಡ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್‍ನಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ತಂಡ ಸತತ 19ನೇ ಬಾರಿ ದಿವಂಗತ ಎಂಕೆ ಅನಂತ ರಾಜ್ ಮೆಮೋರಿಯಲ್ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿತು. ಸೆಮಿಪೈನಲ್ ಹಣಾಹಣಿಯಲ್ಲಿ ಬೆಳ್ತಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಆಳ್ವಾಸ್ ತಂಡ 35-16,35-13 ನೇರ ಸೆಟ್ ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಪೈನಲ್ ನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಶಾಲನಗರ ತಂಡವನ್ನು 35-09,35-04 ನೇರ ಸೆಟ್ ಗಳಿಂದ ಸೋಲಿಸಿ ಸತತ 19ನೇ ಬಾರಿ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಫ್ ಗೆದ್ದುಕೊಂಡಿತು. ಆಳ್ವಾಸ್‍ನ ಚೇತನ್ ಉತ್ತಮ ದಾಳಿಗಾರ ಹಾಗೂ ನಂದಕುಮಾರ್ ಉತ್ತಮ ರಕ್ಷಣಕಾರ ಪ್ರಶಸ್ತಿಗೆ ಭಾಜನರಾದರು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.