ತುಳುವರ ಹೊಸ ವರ್ಷ ಬಿಸುವಿನ ಸಂಭ್ರಮದ ಬಗ್ಗೆ ಪ್ರಖ್ಯಾತ ಕವಿ, ವಾಗ್ಮಿ ಭಾಸ್ಕರ್ ರೈ ಕುಕ್ಕುವಳ್ಳಿ ಇವರ ಅದ್ಭುತ ಸಾಹಿತ್ಯದ ಬಿಸುವಿನ ಹಾಡು ”ಬಿಸುತ ದಿನ” ಏಪ್ರಿಲ್ ಹದಿಮೂರು ರಾತ್ರಿ ಎಂಟು ಗಂಟೆಗೆ ಝೂಮ್ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ತುಳುನಾಡಿನ ಹೆಮ್ಮೆಯ ಚಲನ ಚಿತ್ರ ಸಂಗೀತ ನಿರ್ದೇಶಕ ವಿ ಮನೋಹರ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡು ಇಂಪಾಗಿ ಮೂಡಿ ಬಂದಿದ್ದು ಬಿಸುವಿನ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಭಾಸ್ಕರ ರೈ ಕುಕ್ಕುವಳ್ಳಿಯವರ ಸಾಹಿತ್ಯ ಎಲೆ ಎಳೆಯಾಗಿ ವಿವರಿಸಲಿದೆ. ಹಾಡನ್ನು ಖ್ಯಾತ ಹವ್ಯಾಸಿ ಹಿಂದೂಸ್ತಾನಿ ಸಂಗೀತ ಕಲಾವಿದ, ತಬಲಾ ವಾದಕ ವಿಪ್ರೊ ಸಂಸ್ಥೆಯ ಉನ್ನತ ಉದ್ಯೋಗಿ ಹರಿದಾಸ್ ಎಸ್ ಪಿ ಆಚಾರ್ಯ ಬಿಡುಗಡೆಗೊಳಿಸಲಿದ್ದು ಮನೋಹರ್ ನಿರ್ದೇಶನದಲ್ಲಿ ಮುಂಬೈಯ ಉದಯೋನ್ಮುಖ ಗಾಯಕಿ ಐಲೇಸಾ ತುಳು ಸಿರಿ ಪ್ರಶಸ್ತಿ ವಿಜೇತೆ ಶ್ರದ್ಧಾ ಬಂಗೇರಾ ಹಾಡಿದ್ದು, ಸುಮಾರು ಏಳು ಜನ ಸಮೂಹ ಗಾಯಕಿಯರಿಂದ ವಿಶಿಷ್ಟವಾಗಿ ಧ್ವನಿಗ್ರಹಿಸಲಾಗಿದೆ. ಬೆಂಗಳೂರಿನ ಅಶ್ವಿನಿ ರೆಕಾರ್ಡಿಂಗ್ ಮ್ಯೂಸಿಕ್ ಕಂಪೆನಿಯಲ್ಲಿ ಧ್ವನಿಗ್ರಹಣಗೊಂಡ ಈ ಹಾಡನ್ನು ಬೆಂಗಳೂರು ಮೂಲದ ಉದ್ಯಮಿ ಅರುಲ್ ಹೆಗ್ಡೆಯವರು ನಿರ್ಮಿಸಿದ್ದು ಉಡುಪಿಯ ರಿಧಿ ಕ್ರಿಯೇಷನ್ಸ್ ವಿಡಿಯೋ ನಿರ್ಮಾಣ ಮಾಡಿದೆ. ಕಾರ್ಯಕ್ರಮವನ್ನು ಅನಂತ್ ರಾವ್ ಸಂಯೋಜಿಸಲಿದ್ದಾರೆ .
ಎಂದಿನಂತೆ ಹಾಡನ್ನು ಐಲೇಸಾ ಝೂಮ್ ಡಿಜಿಟಲ್ ವೇದಿಕೆಯಲ್ಲಿ ಐಲೇಸಾ ದಿ ಮ್ಯೂಸಿಕ್ ಚಾನೆಲ್ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡುತ್ತಿದ್ದು, ಸಂಗೀತ ಪ್ರೇಮಿಗಳು ಝೂಮ್ ಐಡಿ: 5340283988 ಪಾಸ್ ಕೋಡ್ 0324 ಮೂಲಕ ವೇದಿಕೆಯನ್ನು ಬಳಸಿಕೊಳ್ಳಲು ಐಲೇಸಾದ ತಾಂತ್ರಿಕ ತಜ್ಞ ಗೋಪಾಲ್ ಪಟ್ಟೆ ವಿನಂತಿಸಿದ್ದಾರೆ.

ತುಳುವಿನ ಯುಗಾದಿಗೆ ಈ ಹಾಡು ಒಂದು ವಿಶಿಷ್ಟ ಕೊಡುಗೆಯಾಗಿದ್ದು ತುಳುವರ ಮನ ಗೆಲ್ಲುವಲ್ಲಿ ಖಂಡಿತವಾಗಿಯೂ ಯಶಸ್ವಿ ಯಾಗುತ್ತದೆ ಎಂದು ಐಲೇಸಾದ ಮುಂಬೈ ಸಂಚಾಲಕ ಸುರೇಂದ್ರ ಕುಮಾರ್ ಮಾರ್ನಾಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.