Author: admin
ಕಡಂದಲೆ ಎಂದರೆ ನೆನಪಾಗುತ್ತಾರೆ ಹೆಸರಾಂತ ಸಾಹಿತಿಗಳು, ರಾಜಕಾರಣಿಗಳು, ಗುತ್ತಿನ ಗತ್ತಿನ ಬಂಟ ಮನೆತನದ ಉದ್ಯಮಿಗಳು, ಶಿಕ್ಷಣ ತಜ್ಞರು. ಸುಬ್ರಹ್ಮಣ್ಯ ಸ್ವಾಮಿ ನೆಲೆ ನಿಂತ ತುಳುನಾಡಿನ ಪವಿತ್ರ ನೆಲ ತುಳುವ ತುಂಡರಸರು ವೈಭವದಿಂದ ಆಳಿದ ನೆಲ. ಇಲ್ಲಿನ ಕಡಂದಲೆ ಪರಾರಿ ಎಂಬ ಕೂಡು ಕುಟುಂಬದ ಬಂಟರ ಐತಿಹಾಸಿಕ ಹಿನ್ನೆಲೆಯ ಸದಸ್ಯರೆಲ್ಲರೂ ಮೇಧಾವಿಗಳು, ಕಾನೂನು ಜ್ಞಾನವುಳ್ಳ ನ್ಯಾಯ ತೀರ್ಮಾನ ಸಮರ್ಥರು, ಪರಿಶ್ರಮಿಗಳು, ಕೃಷಿ ಬೇಸಾಯ ನಿರತರು, ಕೆಲವರು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು. ಅಂಥಹ ಪ್ರತಿಷ್ಠಿತ ಕುಟುಂಬದಲ್ಲಿ ಜನ್ಮ ತಾಳಿ ಇಂದು ಹತ್ತಾರು ಕ್ಷೇತ್ರಗಳಲ್ಲಿ ಶಾಶ್ವತ ಕೀರ್ತಿ ಪಡೆದ ಮಹನೀಯರಲ್ಲಿ ಆದರಣೀಯ ಕಡಂದಲೆ ಪರಾರಿ ಪ್ರಕಾಶ್ ಎಲ್ ಶೆಟ್ಟರು ಕೂಡಾ ಒಬ್ಬರು. ಬೊಡಂತಿಲ ಪಡು ದಿವಂಗತ ಲೋಕಯ್ಯ ಶೆಟ್ಟಿ ಹಾಗೂ ಪುತ್ತಿಗೆ ಗುತ್ತು ಕಡಂದಲೆ ಪರಾರಿ ಶ್ರೀಮತಿ ಜಲಜಾ ಎಲ್ ಶೆಟ್ಟಿ ದಂಪತಿಯರ ಕೀರ್ತಿ ವರ್ಧನ ಸಂತಾನವಾಗಿ ಜನಿಸಿದ ಶೆಟ್ಟರು ಬಾಲ್ಯದ ದಿನಗಳಿಂದಲೇ ಆಳ ಚಿಂತನೆಯ ಹೊಳೆವ ಕಂಗಳ ಪ್ರತಿಭಾವಂತ ಬಾಲಕರಾಗಿದ್ದರು. ಪ್ರಕಾಶ್…
ಬಂಟ್ಸ್ ನೌ ಮಾಧ್ಯಮ ಸಂಸ್ಥೆಯು ಕಳೆದ 15 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿದ್ದು, ಕೇವಲ ಮಾಧ್ಯಮ ರಂಗದಲ್ಲಿ ಸಕ್ರಿಯವಾಗಿರದೆ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಕಳೆದ ವರ್ಷ ಸಂಸ್ಥೆಗೆ 15 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹಲವಾರು ನಮ್ಮ ಸಮಾಜದ ದಾನಿಗಳ ನೆರವಿನಿಂದ 15 ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಂಪೂರ್ಣವಾಗಿ ಅವರ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇವೆ. ನಮ್ಮ ಸಮಾಜದ 15 ಸಹೋದರಿಯರಿಗೆ ಕರಿಮಣಿ ಸರವನ್ನೂ ವಿತರಿಸಿದ್ದೇವೆ. ಸುಮಾರು 700 ಮಂದಿಗೆ ಉದ್ಯೋಗವನ್ನು ದೊರಕಿಸಿಕೊಟ್ಟಿದ್ದೇವೆ. ಕಳೆದ ತಿಂಗಳು ನಮ್ಮ ಕಚೇರಿಗೆ ಮಂಜೇಶ್ವರ ಮೂಲದ ಮೋನಪ್ಪ ರೈ ಎಂಬವರು ತನ್ನ ಮಗಳ ಮದುವೆಗೆ ಸಹಾಯ ಮಾಡಲು ಕೋರಿದ್ದರು. ಅವರನ್ನು ದಿನಾಂಕ 3-1-2024 ರಂದು ಕಚೇರಿಗೆ ಕರೆಯಿಸಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾದ ಶ್ರೀ ಬಿ ವಿವೇಕ್ ಶೆಟ್ಟಿ ( ಮಾಜಿ ಅಧ್ಯಕ್ಷರು, ಬಂಟರ ಸಂಘ ಮುಂಬಯಿ )ಹಾಗೂ ದಯಾನಂದ ಶೆಟ್ಟಿ ( ಅಧ್ಯಕ್ಷರು, ಬಂಟರ ಸಂಘ ಆಸ್ಟ್ರೇಲಿಯಾ )ಅವರ ಸಹಕಾರದಿಂದ ಕರಿಮಣಿ ಸರವನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ…
ಆಕೆ ಮನೆ ನಿರ್ಮಾಣ ಆರಂಭಿಸಿದ ನಂತರ ಒಂದಲ್ಲ ಒಂದು ತೊಂದರೆ ಆಗುತ್ತಲೇ ಇತ್ತು. 6 ತಿಂಗಳು ಆಗುವಾಗ ಅಪಘಾತ ಒಂದರಲ್ಲಿ ಗಂಡ ತೀರಿಕೊಂಡ. 3 ತಿಂಗಳಿರುವಾಗ ಹಾರ್ಟ್ ಅಟ್ಯಾಕ್ ಆಗಿ ತಂದೆ ತೀರಿಕೊಂಡರು. ಆಕೆ ಒಳ್ಳೆಯ ಉದ್ಯೋಗದಲ್ಲಿದ್ದರೂ ಮನೆ ನಿರ್ಮಾಣ ಮುಂದುವರಿಸುವುದು ಕಷ್ಟವಾದಾಗ ನಾದಿನಿ, ಸೊಸೆ, ಅತ್ತೆ, ಭಾವoದಿರು ಮನೆ ಕೆಲಸ ಸದ್ಯ ಸ್ಥಗಿತಗೊಳಿಸಲು ಹೇಳಿದ್ದರು. ನಿನ್ನ ಮನೆ ಅನಿಷ್ಟ ಆ ಕೆಲಸ ನಿಲ್ಲಿಸು ಎಂದು ಪದೇ ಪದೇ ಹೇಳುತ್ತಿದ್ದರು. ಆಕೆಗೂ ಮಾನಸಿಕವಾಗಿ ಕಿರಿ ಕಿರಿ ಅನ್ನಿಸುತ್ತಿತ್ತು. ಯಾರೋ ಹೇಳಿದ್ದು ಕೇಳಿ ಊರ ಹೊರವಲಯಕ್ಕೆ ಬಂದಿದ್ದ ಆ ಮಹಾತ್ಮರನ್ನು ಭೇಟಿ ಮಾಡಲು ಬಂದಳು ತನ್ನ ನಾದಿನಿ, ಸೊಸೆ, ಅತ್ತೆ, ಭಾವಂದಿರೊಂದಿಗೆ. ಕಾರು ಅವರ ಆಶ್ರಮದ ಸಮೀಪ ನಿಂತಿತು. ಭಾವ ಹೇಳಿಯೇ ಬಿಟ್ಟರು “ನಿನಗೆ ಹುಚ್ಚು ಇವರೆಲ್ಲ ಕಳ್ಳ ಸನ್ಯಾಸಿಗಳು ಇವರಿಂದ ಏನು ನಿರೀಕ್ಷಿಸುತ್ತಿ?” ಎಂದು. “ಇರ್ಲಿ ಭಾವ ನೋಡೋಣ” ಎಂದು ಆಶ್ರಮ ಪ್ರವೇಶಿಸಿದರು. ಅಲ್ಲಿ ಮಹಾತ್ಮರ ಬಳಿ ತನ್ನ ಎಲ್ಲಾ ನೋವನ್ನೂ…
2023 ವರ್ಷಾಂತ್ಯದ ಕೊನೆಯ ದಿನ ಡಿಸೆಂಬರ್ 30ನೇ ತಾರೀಕು ಬೆಳಗಿನ ಜಾವ 5.30 ಕ್ಕೆ ಜನಾನುರಾಗಿಯಾಗಿದ್ದ ಆತ್ಮೀಯರು ಶ್ರೀ ದೇವೆಶ್ ಆಳ್ವರವರು ಕೊನೆಯುಸಿರೆಳೆದ ಸುದ್ದಿ ಕ್ಷಣಾರ್ಧದಲ್ಲಿ ಯು.ಎ.ಇ.ಯ ಉದ್ದಗಲಗಳಲ್ಲಿ ಸ್ನೇಹಿತರೆಲ್ಲರಿಗೂ ದಿಗ್ರಭಮೆ ಮೂಡಿಸಿಸು. ಕೆಲವು ದಿನಗಳಿಂದ ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದರು. ಮೂಲತ ಕರಾವಳಿ ಕರ್ನಾಟಕದ ತುಳುನಾಡಿನವರಾದ ದೇವೆಶ್ ಆಳ್ವ ಪ್ರತಿಷ್ಠಿತ ಕೆನರಾ ಕಾಲೇಜು ಮತ್ತು ಎಸ್.ಡಿ.ಎಂ.ಸಿ.ಇ.ಟಿ. ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದವರು. ದುಬಾಯಿಗೆ ಬಂದು ಸೋಲಾಸ್ ಮರೀನ್ ಸರ್ವಿಸಸ್ ನಲ್ಲಿ ಮ್ಯಾನೆಜರ್ ಆಗಿ ಸೇವೆ ಸಲ್ಲಿಸುತಿದ್ದರು. ಸ್ವಂತ ಉಧ್ಯಮ ಪಯೋನಿರ್ ಮರೈನ್ ಸಂಸ್ಥೆಯನ್ನು ಸ್ಥಾಪಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಸುರದ್ರೂಪಿಯಾಗಿದ್ದು ಸುಂದರ ವ್ಯಕ್ತಿತ್ವ ಹೊಂದಿದ್ದ ದೇವೆಶ್ ಆಳ್ವರು ಜನಮಾನಸದಲ್ಲಿ ಸದಾ ನಗುಮುಖದ ವ್ಯಕ್ತಿಯಾಗಿದ್ದು ಸದಾ ಚೈತನ್ಯದ ಚಿಲುಮೆಯಂತೆ ಇದ್ದವರು. ಗಲ್ಫ್ ರಾಷ್ಟ್ರದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟ, ಸ್ನೇಹಮಿಲನಗಳಿಗೆ ಸದಾ ಬೆಂಬಲ ನೀಡುತ್ತಾ ಪ್ರಾಯೋಜಕರಾಗಿ ಪ್ರೋತ್ಸಾಹ ನೀಡುತಿದ್ದ ಹೃದಯವಂತ ಅಗಲಿರುವುದು ಎಲ್ಲಾ ಬಂದುಬಳಗ ಸ್ನೇಹಿತ ವರ್ಗದವರಿಗೆ ಅತೀವ ನೋವಾಗಿದೆ. ಯು.ಎ.ಇ.…
ಬಂದರು, ವಿಮಾನಯಾನ, ರೈಲ್ವೇ, ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನೊಳಗೊಂಡ ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ, ಆರೋಗ್ಯ, ಧಾರ್ಮಿಕ, ಉದ್ಯಮ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಮುಂದುವರಿದಿದ್ದು, ಈ ರೀತಿಯಾಗಿ ಸಮಗ್ರ ಅಭಿವೃದ್ಧಿ ಕಂಡ ನಗರ ದೇಶದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಈ ವಿಭಿನ್ನತೆಯಿಂದ ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ನಗರದ ಓಷಿಯನ್ ಪರ್ಲ್ ಹೊಟೇಲ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜ.5 ರಿಂದ ಅಡ್ಯಾರ್ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಕ್ಯಾ. ಪ್ರಾಂಜಲ್ ಗೌರವಾರ್ಥ ನಡೆಯಲಿರುವ ‘ಕೆಯುಡಬ್ಲ್ಯುಜೆ ಬ್ರ್ಯಾಂಡ್ ಮಂಗಳೂರು ರೋಹನ್ ಕಪ್’ ಟ್ರೋಪಿ ಅನಾವರಣಗೊಳಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ವಿಭಿನ್ನತೆಯೇನೆಂದರೆ ಸಾಂಸ್ಕೃತಿಕ, ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳು ಮುಂದುವರಿದಿದ್ದು, ದೇಶದಲ್ಲಿ ಇಂತಹ ಸ್ವಚ್ಛ, ಸೌಹಾರ್ದತೆಯ ಮತ್ತೊಂದು ನಗರವನ್ನು ಕಾಣಲು ಸಾಧ್ಯವಿಲ್ಲ. ಇಂತಹ ನಾಡಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ ನಡೆಯುತ್ತಿರುವುದು ಬ್ರ್ಯಾಂಡ್ ಮಂಗಳೂರಿಗೆ ಮತ್ತಷ್ಟು…
ಮೂಡುಬಿದಿರೆ: ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಸಾಧನೆಯ ಮೂಲಕ ಅನನ್ಯವಾಗಿ ಗುರುತಿಸಿಕೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಕಾಲೇಜು 2023-24ನೇ ಶೈಕ್ಷಣಿಕ ವರ್ಷದಿಂದ ಸ್ವಾಯತ್ತ ಸ್ಥಾನಮಾನ ಪಡೆದಿದೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಕಾಲೇಜಿಗೆ 2023-24ರಿಂದ ಮುಂದಿನ ಹತ್ತು ವರ್ಷಗಳಿಗೆ ಅನ್ವಯವಾಗುವಂತೆ ಸ್ವಾಯತ್ತ ಸ್ಥಾನಮಾನ ನೀಡುವ ಕುರಿತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು (ಯುಜಿಸಿ) 2023ರ ಮೇ 31ರಂದು ಮಂಗಳೂರು ವಿಶ್ವವಿದ್ಯಾಲಯಕ್ಕೆ ಶಿಫಾರಸ್ಸು ಮಾಡಿತ್ತು. ಈ ಶಿಫಾರಸ್ಸಿನ ಅನ್ವಯ ಮಂಗಳೂರು ವಿಶ್ವವಿದ್ಯಾಲಯವು ವಿದ್ಯಾವಿಷಯಕ ಪರಿಷತ್ ಸಮಾಲೋಚನೆಯೊಂದಿಗೆ ಸಿಂಡಿಕೇಟ್ ಮಾಡಿರುವ ಶಿಫಾರಸ್ಸು ಅನುಸರಿಸಿ ಸ್ವಾಯತ್ತ ಸ್ಥಾನಮಾನವನ್ನು ನೀಡಲು ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಸಹಮತ ಸೂಚಿಸಿ ಆದೇಶಿಸಿದೆ ಎಂದು ತಿಳಿಸಿದರು. ಮೌಲ್ಯಾಧಾರಿತ ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಆಳ್ವಾಸ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ದೊರೆಯುವ ಕಾರಣ ಪದವಿ, ಸ್ನಾತಕೋತ್ತರ ಹಾಗೂ ವೃತ್ತಿಪರ ಪದವಿಗಳನ್ನು ಇನ್ನಷ್ಟು ಕಾಲಬದ್ಧ…
ಯಕ್ಷಗಾನ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಅಜೆಕಾರು ಕಲಾಭಿಮಾನಿ ಬಳಗ ಇದೀಗ ಇಪ್ಪತ್ತೊಂದು ವರ್ಷಗಳನ್ನು ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಇದರ ಸ್ಥಾಪಕ ಸಂಚಾಲಕ, ಕಲಾವಿದ, ಸಂಘಟಕ ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರನ್ನು ಮಾತಾಡಿಸಿದಾಗ ಅವರಿಂದ ದೊರೆತ ಉತ್ತರಗಳ ಸಾರವೇ ಪ್ರಸ್ತುತ ಲೇಖನ. ಮುಂಬಯಿ ನಗರ ಸೇರಿದ ಶೆಟ್ಟರು ಕ್ಯಾಂಟೀನ್ ನಡೆಸಿಕೊಂಡು, ಹಲವಾರು ಕಡೆ ಕೆಲಸ ಮಾಡಿಕೊಳ್ಳುತ್ತಲೇ ತನ್ನ ಆಸಕ್ತಿಯ ಯಕ್ಷಗಾನವನ್ನೂ ಬಿಟ್ಟಿರಲಾಗದೆ ಅವಕಾಶ ಸಿಕ್ಕಾಗಲೆಲ್ಲಾ ಇಲ್ಲಿನ ಮೇಳಗಳಲ್ಲಿ ವೇಷ ಮಾಡತೊಡಗಿದರು. ಬಾಲ್ಯದಿಂದಲೂ ಯಕ್ಷಗಾನ ಕಲೆಯ ಕುರಿತಂತೆ ತೀವ್ರ ಸೆಳೆತ ಒಲವು ಹೊಂದಿದ್ದ ಬಾಲಕೃಷ್ಣ ಶೆಟ್ಟರು ಊರಿಗೆ ಬರುತ್ತಿದ್ದ ಯಕ್ಷಗಾನ ಮೇಳಗಳ ಪ್ರದರ್ಶನಗಳನ್ನು ನೋಡುತ್ತಲೇ ಹಿರಿಯ ಕಲಾವಿದರನೇಕರ ಸಂಪರ್ಕ ಹೊಂದಿ ಯಕ್ಷಗಾನ ಕುರಿತಂತೆ ಅನುಭವ ಸಂಪಾದಿಸಿ ಯಕ್ಷಗಾನ ಕಲಾವಿದನಾಗಬೇಕೆಂಬ ಅದಮ್ಯ ಆಸೆಯನ್ನು ಅದುಮಿಟ್ಟಕೊಳ್ಳಲಾಗದೆ ಪ್ರೌಢ ಶಿಕ್ಷಣ ಮುಗಿಯುತ್ತಲೆ ಊರಿನ ಪ್ರಸಿದ್ಧ ಮೇಳದಲ್ಲಿ ಗೆಜ್ಜೆ ಕಟ್ಟಿ ಕಲಾವಿದನೆಂಬಂತೆ ಗುರುತಿಸಿಕೊಂಡು ಒಂದು ವರ್ಷ ಊರಿನಲ್ಲೆ ತಿರುಗಾಟ ನಡೆಸಿದರು. ಆದರೆ ಆ ಸಮಯದಲ್ಲಿ ಯಕ್ಷಗಾನವನ್ನೇ ನಂಬಿಕೊಂಡು…
ಮುಂಬಯಿ ವಿಶ್ವವಿದ್ಯಾಲಯವು ಕಳೆದ ಜೂನ್ ತಿಂಗಳಲ್ಲಿ ನಡೆಸಿದ ಎಂ.ಎ. ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕನ್ನಡ ವಿಭಾಗದ ವಿದ್ಯಾರ್ಥಿ ಸವಿತಾ ಅರುಣ್ ಶೆಟ್ಟಿ ಅವರು ಸರ್ವಾಧಿಕ ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ನೂತನ ಪಠ್ಯ ಕ್ರಮದಂತೆ ಸವಿತಾ ಅರುಣ್ ಶೆಟ್ಟಿ ಅವರು ವಿಭಾಗದ ಮುಖ್ಯಸ್ಥರಾದ ಪ್ರೊ. ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ “ಬೆಳಕಿಂಡಿ (ಮಿತ್ರಾ ವೆಂಕಟ್ರಾಜ್ ಅವರ ಸಾಹಿತ್ಯ ಅವಲೋಕನ )” ಎಂಬ ಸಂಪ್ರಬಂಧವನ್ನು ಮುಂಬಯಿ ವಿಶ್ವವಿದ್ಯಾನಿಲಯಕ್ಕೆ ಸಾದರ ಪಡಿಸಿರುತ್ತಾರೆ. ಅವರು ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನದಿಂದ ಕೊಡಮಾಡುವ ‘ವ್ಯಾಸರಾಯ ಬಲ್ಲಾಳ ಶ್ರೇಷ್ಠ ವಿದ್ಯಾರ್ಥಿ’ ಚೊಚ್ಚಲ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಮೂಲತಃ ಕಾರ್ಕಳ ತಾಲೂಕಿನ ಬೋಳ ಗ್ರಾಮದವರಾದ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯ ಸ್ನಾತಕ ಪದವಿಯನ್ನು ಪಡೆದಿದ್ದಾರೆ. ಸವಿತಾ ಅರುಣ್ ಶೆಟ್ಟಿ ಅವರು ನಂದಿಕೂರು ಹೊಸಮನೆ ದಿ. ಪಾಂಡು ಎಂ. ಶೆಟ್ಟಿ ಮತ್ತು ಬೋಳ ಕುರೇದು ದಿ. ಜಾನಕಿ ಶೆಡ್ತಿ ಅವರ ಪುತ್ರಿ ಹಾಗೂ ನವಿಮುಂಬಯಿಯ ಉದ್ಯಮಿ ಅರುಣ್ ಶೆಟ್ಟಿ ಅವರ ಪತ್ನಿ. ಮುಂಬಯಿ ವಿವಿ ಕೊಡಮಾಡುವ…
ಯುವ ಕ್ರಿಕೆಟಿಗ, ಕ್ರೀಡಾ ಸಂಘಟಕ ನಿತೇಶ್ ಶೆಟ್ಟಿ ಇವರ ಸಾರಥ್ಯದಲ್ಲಿ ರಾಷ್ಟ್ರೀಯ ಮಟ್ಟದ ಅದ್ಧೂರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಪಾಂಚಜನ್ಯ ಟ್ರೋಫಿ-2023 ಇತ್ತೀಚಿಗೆ ಕೋಟ ಗಿಳಿಯಾರು ಶಾಂಭವಿ ಶಾಲಾ ಮೈದಾನದಲ್ಲಿ ಜರುಗಿತು. ಕುಂದಾಪುರ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಹಾಗೂ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಗೌತಮ್ ಶೆಟ್ಟಿ, “ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ಬದುಕಿನಲ್ಲಿ ಎಂತಹ ಪರಿಸ್ಥಿತಿಯಲ್ಲೂ ಧೃತಿಗೆಡದೆ ಸಮರ್ಥವಾಗಿ ನಿಭಾಯಿಸುತ್ತಾರೆ. ಪಾಂಚಜನ್ಯದ ನಿತೇಶ್ ಶೆಟ್ಟಿ ಉತ್ತಮ ಸಂಘಟಕರು. ಕ್ರಿಕೆಟ್ ಗೆ ಹೊಸ ಆಯಾಮ ನೀಡುವುದರಲ್ಲಿ ನಿಸ್ಸೀಮರು. ಈ ಬಾರಿಯೂ ಪಂದ್ಯಾವಳಿಗೆ ಹೊಸ ಸ್ಪರ್ಶ ನೀಡಿದ್ದಾರೆ.” ಸಂಘಟಕರಾದ ನಿತೇಶ್ ಹಾಗೂ ಪಾಂಚಜನ್ಯದ ತಂಡವನ್ನು ಅಭಿನಂದಿಸಿ ಶುಭ ಹಾರೈಸಿದರು.
ಪುಣೆಯ ತುಳು ಕನ್ನಡಿಗರ ಸ್ವಾಭಿಮಾನಿ ಸಂಘಟನೆ ತುಳುನಾಡ ಪೌಂಡೇಶನ್ ಪುಣೆ ಇದರ ಗೌರವಾಧ್ಯಕ್ಷರಾಗಿ ತಾರಾನಾಥ ರೈ ಮೇಗಿನಗುತ್ತು, ಸ್ಥಾಪಕಾಧ್ಯಕ್ಷರಾಗಿ ಖ್ಯಾತ ಸಮಾಜಸೇವಕ, ನ್ಯಾಯವಾದಿ ರೋಹನ್ ಪುರುಷೋತ್ತಮ ಶೆಟ್ಟಿಯುವರು ಆಯ್ಕೆಯಾಗಿದ್ದು, ಅವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ನೂತನ ಸಂಸ್ಥೆಯ ಉಪಾಧ್ಯಕ್ಷರಾಗಿ ವಿಕೇಶ್ ರೈ ಶೇಣಿ , ಅಕ್ಷಿತ್ ಸಾಲ್ಯಾನ್ , ಸುಪ್ರೀತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುಜಯ್ ದಿನೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ರತನ್ ಸಾಲ್ಯಾನ್ ಮತ್ತು ಸಮೀಕ್ಷಾ ಪೂಜಾರಿ, ಕೋಶಾಧಿಕಾರಿಯಾಗಿ ಕಿರಣ್ ಮೂಲ್ಯ, ಜೊತೆ ಕೋಶಾಧಿಕಾರಿಯಾಗಿ ಸೂರಜ್ ಬಂಗೇರ ಮತ್ತು ಪ್ರೀತಮ್ ಶೆಟ್ಟಿ, ಸಾಮಾಜಿಕ ಸಮಿತಿ ಸದಸ್ಯರಾಗಿ ಪೂಜಾ ಜಹಗೀರದಾರ್, ಸಂತೋಷ್ ಶೆಟ್ಟಿ ಹಾಗೂ ಅಹಾನ್ ದೇವಾಡಿಗ ಆಯ್ಕೆಯಾಗಿದ್ದಾರೆ. ಶೈಕ್ಷಣಿಕ ಸಮಿತಿಗಾಗಿ ವಿಂದಿ ಪೂಜಾರಿ, ಮಲ್ಲಣ್ಣ ಲಿಂಗಾಯತ್, ಪ್ರತೀಕ್ ಪೂಜಾರಿ ಮತ್ತು ಸಮೀಕ್ಷಾ ಶೆಟ್ಟಿ, ಕ್ರೀಡಾ ಸಮಿತಿಗಾಗಿ ವಿನೀತ್ ಪೂಜಾರಿ, ದೀಕ್ಷಾ ಶೆಟ್ಟಿ, ರಾಜೇಂದ್ರ ಕೋಟ್ಯಾನ್ ಮತ್ತು ಕೌಶಿಕ್ ಶೆಟ್ಟಿ, ಸಾಂಸ್ಕೃತಿಕ ಸಮಿತಿಗಾಗಿ ರವಿರಾಜ್ ಶೆಟ್ಟಿ, ರೇಷ್ಮಾ ನಾಯ್ಕ್, ಸ್ವಾತಿ…