Author: admin
ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ “ತುಡರ್” ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಯಿತು. ನಗರದ ಭಾರತ್ ಸಿನೆಮಾಸ್ ನಲ್ಲಿ ಜರುಗಿದ ಸಮಾರಂಭದಲ್ಲಿ ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಬಳಿಕ ಮಾತಾಡಿದ ಕರಾವಳಿ ಗ್ರೂಪ್ ಆಫ್ ಎಜುಕೇಷನ್ ಸಂಸ್ಥೆಯ ಛೇರ್ಮನ್ ಗಣೇಶ್ ರಾವ್ ಅವರು, “ತುಡರ್ ಅಂದರೆ ಕನ್ನಡದಲ್ಲಿ ಬೆಳಕು ಅಂತ ಅರ್ಥ. ಒಂದು ಬೆಳಕಿನಿಂದ ಎಷ್ಟೋ ದೀಪಗಳನ್ನು ಬೆಳಗಿಸಬಹುದು. ಅದೇ ರೀತಿ ಬಿಡುಗಡೆಯಾಗಿರುವ ತುಳು ಸಿನಿಮಾ ತುಡರ್ ಚಿತ್ರರಂಗದಲ್ಲಿ ಹೊಸ ಬೆಳಕಾಗಿ ಮೂಡಿಬರಲಿ. ಸಿನಿಮಾ ತಂಡವನ್ನು ನೋಡಿದರೆ ಖಂಡಿತ ಈ ಸಿನಿಮಾ ಗೆಲ್ಲುವ ವಿಶ್ವಾಸವಿದೆ. ಸಮಾಜಕ್ಕೆ ಮನೋರಂಜನೆಯ ಜೊತೆಗೆ ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಬರಲಿ. ಚಿತ್ರ ತಂಡದಿಂದ ಇನ್ನಷ್ಟು ಸದಭಿರುಚಿಯ ಸಿನಿಮಾಗಳು ಬರಲಿ. ಸಂಸ್ಕೃತಿಗೆ ಪೂರಕವಾದ ಜಾತಿ ಧರ್ಮ ದ್ವೇಷವನ್ನು ಪಸರಿಸದೆ ಜನರನ್ನು ಒಂದುಮಾಡುವ ಸಿನಿಮಾಗಳು ಬರಲಿ” ಎಂದು ಶುಭ ಹಾರೈಸಿದರು. ಬಳಿಕ ಮಾತಾಡಿದ ಅರವಿಂದ್ ಬೋಳಾರ್, “ತುಳು ಸಿನಿಮಾ ಬಿಡುಗಡೆ ಎಂದರೆ ಭಯವಾಗುತ್ತದೆ.…
ದರ್ಶನ್ ಜನ್ಮತ ದುಷ್ಟ ಖಂಡಿತ ಅಲ್ಲ! ಆತನನ್ನ ಬಲ್ಲವರನ್ನ ಮಾತಾಡಿಸಿದ್ದೇನೆ. ಯಶಸ್ಸು ಮತ್ತು ದುಡ್ಡು ಬರತೊಡಗಿದಾಗ ಅದರ ಜೊತೆಗೇ ಇನ್ನೊಂದೂ ಬಂದೇ ಬಿಡೋತ್ತೆ! ಅದರ ಹೆಸರು “ದುರ್ಮದ”. ಅದು ಬಂದು ಹೆಗಲೇರಿದಾಗ ಭುಜ ಕೊಡವಿಕೊಂಡು ನೀವು ಹೊರಟಿರೋ? ಫೈನ್. ನೀವು ಬಚಾವ್! ಅದನ್ನ ಬಿಟ್ಟು ಆ ದುಷ್ಟ ಮದದ ನೆತ್ತಿ ಸವರಿದರೆ ಅದು ತಲೆ ಏರಿ ಕುಳಿತು ಬಿಡುತ್ತದೆ. ಮನುಷ್ಯನೊಳಗಿನ ಮನುಷ್ಯತ್ವ ನಾಶವಾಗಲು ಅದು ಕಾರಣವಾಗುತ್ತದೆ. ದರ್ಶನ್ ಯಶಸ್ವಿಯಾಗುತ್ತಿದ್ದ ಹಾಗೇ ಆತನ ಸುತ್ತ ನೆರೆದ ಮಿತ್ರಕೂಟವೇ ಒಂದು ದುಷ್ಟಕೂಟ. ಕುಡಿತ, ಅಮಲು, ಹೆಣ್ಣು ಮತ್ತು ಕ್ರೈಮ್ ವ್ಯಸನಿಗಳನ್ನ ನಾನು ಎಂದಿಗೂ ಒಂದು ಅನುಮಾನದಲ್ಲೇ ನೋಡುತ್ತೇನೆ. ಓರ್ವ ಪರಮ ಕುಡುಕ ಮತ್ತು ಕ್ರೈಮ್ ಥ್ರಿಲ್ ಇರುವವ ಎಷ್ಟೇ ಮುಗ್ಧನಾಗಿದ್ದರೂ ಆತನೊಳಗೆ ರಾಕ್ಷಸ ಆರಾಮಾಗಿ ಬಂದು ಕೂಡುತ್ತಾನೆ. ಆತನ ಒಳ ಮನದ ಬಾಗಿಲಿಗೆ ಚಿಲಕವೇ ಇಲ್ಲ! ದರ್ಶನ್ ಮಾಡಿದ ತಪ್ಪೇ ಇದು. ಆತ ಹುಟ್ಟಾ ದುಷ್ಟನಲ್ಲ. ದುಷ್ಟರ ಸಹವಾಸಕ್ಕೆ ಬಿದ್ದವ. ದುಷ್ಟ ಸಾಹಸದ ಹುಚ್ಚು…
ಕಾಸರಗೋಡು ನಿವಾಸಿ ಸಾತ್ವಿಕ್ ಎಸ್. ರೈ ಅವರು ಭಾರತೀಯ ಭೂ ಸೇನೆಗೆ ಲೆಫ್ಟಿನೆಂಟ್ ಆಗಿ ನೇರ ನೇಮಕಾತಿ ಮೂಲಕ ಆಯ್ಕೆಗೊಂಡಿದ್ದಾರೆ. ಜೂನ್ 8 ರಂದು ಗಯಾ ಬಿಹಾರದ ಆಫೀಸರ್ಸ್ ಟೈನಿಂಗ್ ಅಕಾಡೆಮಿಯಲ್ಲಿ ವರ್ಷ ಕಾಲದ ಕಠಿನ ತರಬೇತಿಯ ಬಳಿಕ ಭೂ ಸೇನೆಯ ಮುಖ್ಯಸ್ಥ ಲೆ| ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಭೂ ಸೇನೆಯ ಹುದ್ದೆಯನ್ನು ಸ್ವೀಕರಿಸಿದರು. ಈ ಸುಸಂಧರ್ಭದಲ್ಲಿ ಅವರ ಹೆತ್ತವರಾದ ಕಾಸರಗೋಡಿನ ಹಿರಿಯ ನ್ಯಾಯವಾದಿ ಹಾಗೂ ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಸದಾನಂದ ರೈ ಹಾಗೂ ಕಾಸರಗೋಡು ಚಿನ್ಮಯ ವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕಿ ಶರಣ್ಯಾ ಎಸ್. ರೈ, ಸಹೋದರ ರಿತ್ವಿಕ್ ರೈ ಭಾಗವಹಿಸಿದ್ದರು.ಸಾತ್ವಿಕ್ ಅವರು ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಮತ್ತು ಪದವಿಪೂರ್ವ ವಿದ್ಯಾಭ್ಯಾಸವನ್ನು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆನಲ್ಲಿ ಮುಗಿಸಿ ಗಯಾ ಬಿಹಾರದ ಮಿಲಿಟರಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ ಸೇರಿಕೊಂಡರು. ತರಬೇತಿಯೊಂದಿಗೆ ಎಂಜಿನಿಯರಿಂಗ್ ಬಿ.ಟೆಕ್ ಎಲೆಕ್ಟ್ರಾನಿಕ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡರು. ಬಳಿಕ…
ಜಪ್ಪು ಬಂಟರ ಸಂಘದ ಅಧ್ಯಕ್ಷರಾಗಿ ಉದ್ಯಮಿ ವಸಂತ ಶೆಟ್ಟಿ ಆಯ್ಕೆಯಾಗಿದ್ದಾರೆ. ಮಾತ್ರವಲ್ಲದೇ ಉಪಾಧ್ಯಕ್ಷರಾಗಿ ರಾಜ್ಕುಮಾರ್ ಶೆಟ್ಟಿ ಪಿ., ರೇಖಾ ಆರ್., ಕಾರ್ಯದರ್ಶಿಯಾಗಿ ರಾಜ ಶೆಟ್ಟಿ, ಜತೆ ಕಾರ್ಯದರ್ಶಿಗಳಾಗಿ ಶರತ್ ಶೆಟ್ಟಿ ಎಂ.ಎಸ್., ಪೂರ್ಣಿಮಾ ಎನ್.ಶೆಟ್ಟಿ, ಕೋಶಾಧಿಕಾರಿಯಾಗಿ ಜೆ.ಜೀವನ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರದೀಪ್ ಶೆಟ್ಟಿ, ಶ್ರೀಶಾ ಶೆಟ್ಟಿ, ಸಾಂಸ್ಕೃತಿಕ ಅಧ್ಯಕ್ಷ ವಸಂತ ಶೆಟ್ಟಿ ಕಾರ್ಯದರ್ಶಿಗಳಾಗಿ ವಿದ್ಯಾ ಎಸ್.ರೈ, ಸುಜಾತಾ ಎಸ್. ಶೆಟ್ಟಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಬಿ.ಲೋಕಯ್ಯ ಶೆಟ್ಟಿ, ಸದಸ್ಯತನ ಅಭಿಯಾನದ ಸಂಚಾಲಕರಾಗಿ ಕೃಷ್ಣರಾಜ ಸುಲಾಯ ಆಯ್ಕೆಯಾಗಿದ್ದಾರೆ.
ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಎಚ್.ಪಿ.ಆರ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಸಾದ್ ರೈ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಹಾಗೂ ಗೌರವ ಕಾರ್ಯದರ್ಶಿ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿಯವರ ವಿಶೇಷ ಮನವಿಗೆ ಸ್ಪಂದಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪೋಷಕ ಸದಸ್ಯರಾಗಿ ಸೇರ್ಪಡೆಗೊಂಡರು.ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಸಮಾಜ ಸೇವಕ ಹರಿಪ್ರಸಾದ್ ರೈ ಅವರನ್ನು ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೂಗುಚ್ಚ ನೀಡಿ ಒಕ್ಕೂಟಕ್ಕೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ ಮತ್ತು ಗೌರವ ಕಾರ್ಯದರ್ಶಿ ಜಯಕರ್ ಶೆಟ್ಟಿಯವರು ಉಪಸ್ಥಿತರಿದ್ದರು.
ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯರಾದ ಶಿವನಾಥ ರೈ ಮೇಗಿನ ಗುತ್ತುರವರು ಭೇಟಿ ನೀಡಿ ದೇವಳದ ಹೊರ ಸುತ್ತಿನ ಅಂಗಳದ ಈಶಾನ್ಯ ಭಾಗದಲ್ಲಿ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ತೊಂದರೆಯನ್ನು ಎಲಿಯ ದೇವಳದ ಸಮಿತಿ ಸದಸ್ಯರೊಂದಿಗೆ ಇದ್ದು ಪರಿಶೀಲನೆ ನಡೆಸಿದರು. ಆಗಿರುವ ನಷ್ಟಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರ ಕ್ರಮಗೊಳ್ಳುವ ಬರವಸೆಯನ್ನು ನೀಡಿದರು. ಎಲಿಯ ಶ್ರೀ ವಿಷ್ಣುಮೂರ್ತಿ ದೇವಳದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಎಲಿಯ ಕರುಣಾಕರ ಗೌಡರವರು ನಷ್ಟ ಪರಿಹಾರದ ಬಗ್ಗೆ ಧಾರ್ಮಿಕ ದತ್ತಿ ಪರಿಷತ್ ಗೆ ಮನವಿ ಪತ್ರ ನೀಡಿದರು. ದೇವಳದ ಪ್ರಧಾನ ಅರ್ಚಕ ನಾಗೇಶ ಕಣ್ಣಾರಾಯರವರು ಶಿವನಾಥ ರೈ ಮೇಗಿನ ಗುತ್ತುರವರಿಗೆ ಶಾಲು ಹಾಕಿ, ದೇವರ ಪ್ರಸಾದ ನೀಡಿ ಹರಸಿದರು. ಈ ಸಂದರ್ಭದಲ್ಲಿ ಎಲಿಯ ಶ್ರೀ ವಿಷ್ಣುಮೂರ್ತಿ ದೇವಳದ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್ ರೈ ಕೆದಂಬಾಡಿ ಗುತ್ತು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಉದಯಕುಮಾರ್ ರೈ ಬಾಕುಡ, ಎಲಿಯ ಶ್ರೀ ವಿಷ್ಣುಮೂರ್ತಿ ದೇವಳದ…
ವಿದ್ಯಾಗಿರಿ: ಇಡೀ ಜಗತ್ತು ಮುಂದುವರಿಯುವುದು ದೊಡ್ಡ ಮಾತುಗಳಿಂದ ಹಾಗೂ ದೊಡ್ಡ ದೊಡ್ಡ ಕಟ್ಟಡಗಳಿಂದ ಅಲ್ಲ. ಮನುಷ್ಯನ ಮನಸ್ಸಿನಲ್ಲಿರುವ ಸಣ್ಣ ಸಣ್ಣ ಆಸೆಗಳು ಹಾಗೂ ಆಸೆಗಳನ್ನು ಈಡೇರಿಸುವುದಕ್ಕೆ ಆ ಸಮುದಾಯ ಹಾಗೂ ಲಕ್ಷಾಂತರ ಜನ ಮಾಡುವ ಸಣ್ಣ ಸಣ್ಣ ಚಟುವಟಿಕೆಗಳಿಂದ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು. ಆಳ್ವಾಸ್ ತುಳು ಸಂಸ್ಕøತಿ ಅಧ್ಯಯನ ಕೇಂದ್ರ ಮತ್ತು ಇಂಗ್ಲೀಷ್ ಸ್ನಾತಕೋತ್ತರ ವಿಭಾಗದ ವತಿಯಿಂದ ನಡೆದ ಪ್ರಥಮ ಪಣಿಯಾಡಿ ಪ್ರಶಸ್ತಿ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ‘ನಾಣಜ್ಜೆರ್ ಸುದೆ ತಿರ್ಗಾಯೆರ್’ ತುಳು ಕಾದಂಬರಿಯ ಪುನರ್ ಮುದ್ರಿತ ಇಂಗ್ಲೀಷ್ ಅನುವಾದಿತ ಕೃತಿಯ ಅವಲೋಕನ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿದರು. ಅಂತಃಸತ್ವಗಳು ನಮ್ಮನ್ನು ಬೆಳೆಸುತ್ತವೆ ಹೊರತು ಬಾಹ್ಯವಾಗಿ ನಾವು ಕಟ್ಟಿ ಬೆಳೆಸಿದ ಯಾವುದೇ ರಚನೆಗಳಲ್ಲ ಎಂದರು. ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಅಜಕ್ಕಳ ಗಿರೀಶ್ ಭಟ್ ಮಾತನಾಡಿ, ಪ್ರಾದೇಶಿಕ ಕಾದಂಬರಿಗಳ ಸೊಬಗನ್ನು ಇಂಗ್ಲೀಷ್ ಅನುವಾದಿಸುವುದು ಕಷ್ಟ. ಹಾಗೆಯೇ…
ಎರಡನೇ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜಾರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ಗೌರವಿಸಿದರು. ವಿಧಾನ ಪರಿಷತ್ ಸದಸ್ಯರಾಗಿ ನಿಮ್ಮ ಸೇವಾ ಅವಧಿಯಲ್ಲಿ ಸಮಾಜಕ್ಕೆ ಉತ್ತಮ ಕೆಲಸ ಕಾರ್ಯಗಳು ನಡೆಯಲಿ ಎಂದು ಐಕಳ ಹರೀಶ್ ಶೆಟ್ಟಿ ಶುಭ ಹಾರೈಸಿದರು.ಈ ವೇಳೆ ಮಾತನಾಡಿದ ಐವನ್ ಡಿ ಸೋಜಾ ಅವರು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಬಡವರ ಕಷ್ಟಗಳನ್ನು ನಿವಾರಿಸುವ ಕೆಲಸದಲ್ಲಿ ತೊಡಗಿದೆ. ವಿಧಾನ ಪರಿಷತ್ ಸದಸ್ಯನಾಗಿ ತಾನು ಬಂಟರ ಯಾವುದೇ ಕೆಲಸ ಕಾರ್ಯ ಇದ್ದರೂ ಸ್ಪಂದಿಸಿ ಕೆಲಸ ಮಾಡುವುದಾಗಿ ತಿಳಿಸಿದರು. ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ನಿಯೋಗದಲ್ಲಿ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಕೊಲ್ಲಾಡಿ ಬಾಲಕೃಷ್ಣ ರೈ, ಹೇಮಂತ್ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.
ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರಿಗೆ ರಕ್ಷಣಾಪುರ ಕಾಪುವಿನ ಅಮ್ಮ ರಕ್ಷೆಯಾಗಿದ್ದಾಳೆ : ಕೇರಳ ಕೈಮುಕ್ಕು ನಾರಾಯಣನ್ ನಂಬೂದರಿ
ಕರಾವಳಿಯ ಬಹುತೇಕ ದೈವಜ್ಞರು, ಜ್ಯೋತಿಷಿಗಳಿಗೆ ಗುರುಗಳಾಗಿ ಪ್ರಸಿದ್ಧರಾಗಿರುವ ಕೇರಳ ಕೈಮುಕ್ಕು ನಾರಾಯಣನ್ ನಂಬೂದರಿ ಅವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇಗುಲದ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕಾಪು ಶ್ರೀ ಮಾರಿಯಮ್ಮ ದೇವಿಯ ಸನ್ನಿಧಾನವು ಅತ್ಯಂತ ಜಾಗೃತ ಸಾನಿಧ್ಯವಾಗಿದ್ದು ಕ್ಷೇತ್ರ ವೈಭವೋಪೇತವಾಗಿ ಬೆಳಗುತ್ತಿದೆ. ಪ್ರಪಂಚದಾದ್ಯಂತ ನೆಲೆಸಿರುವ ಭಕ್ತರಿಗೆ ರಕ್ಷಣಾಪುರ ಕಾಪುವಿನಲ್ಲಿ ನೆಲೆಸಿರುವ ಮಾರಿಯಮ್ಮ ರಕ್ಷೆಯಾಗಿದ್ದಾಳೆ ಎಂದು ಹೇಳಿದರು. ಕಾಪು ಮಾರಿಗುಡಿ ಅತ್ಯುತ್ತಮ ರೀತಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದೆ. ಕೆಂಪು ಇಳಕಲ್ ಶಿಲೆಯೊಂದಿಗೆ ನಿರ್ಮಾಣಗೊಳ್ಳುತ್ತಿರುವ ದೇವಸ್ಥಾನವು ದೇಶ ವಿದೇಶಗಳ ಭಕ್ತರನ್ನು ತನ್ನತ್ತ ಸೆಳೆಯುತ್ತಿದ್ದು ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ, ಉಡುಪಿ ಕ್ಷೇತ್ರ ವನ್ನು ಸಂದರ್ಶಿಸುವ ಭಕ್ತರು ಕಾಪು ಮಾರಿಯಮ್ಮನ ಸನ್ನಿದಿಗೂ ಭೇಟಿ ನೀಡುವ ಪುಣ್ಯಕಾಲ ನಮ್ಮ ಮುಂದಿದೆ ಎಂದರು. ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕ್ಷೇತ್ರದ ಪ್ರಧಾನ ತಂತ್ರಿ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿ ಜೀರ್ಣೋದ್ಧಾರ ಕಾಮಗಾರಿ ನಡೆದು…
ರಡ್ಡ್ ಕವುಲೆ – ಇದೊಂದು ತುಳು ಅಂಕಣ ಬರಹಗಳ ಸಂಗ್ರಹ. ಲೇಖಕಿ ರಾಜಶ್ರೀ ಟಿ ರೈಯವರು “ಟೈಮ್ಸ್ ಆಫ್ ಕುಡ್ಲ” ಅನ್ನುವ ತುಳು ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನಗಳನ್ನೆಲ್ಲಾ ಒಟ್ಟಾಗಿಸಿ ಕೃತಿಯಾಗಿಸಿದ್ದಾರೆ. ತುಳು ಭಾಷೆ, ಸಂಸ್ಕೃತಿ, ತುಳುನಾಡಿನ ಆಚರಣೆಗಳು, ದೈವಾರಾಧನೆ, ನಾಗಾರಾಧನೆ ಇವೆಲ್ಲಾ ತುಳುನಾಡಿನ ಸಂಸ್ಕೃತಿಯೊಳಗೆ ಬರುತ್ತವೆ. ಈ ಆಚರಣೆಗಳು ಬಹಳ ವಿಶಿಷ್ಟ ಹಾಗೂ ವಿಭಿನ್ನವಾದದ್ದು. ನನಗೂ ತುಳು ಭಾಷೆಯ ಮೇಲೆ ಅಷ್ಟೊಂದು ಹಿಡಿತವೇನಿಲ್ಲ. ಆದರೂ ಸ್ವಲ್ಪ ಸಮಯ “ಟೈಮ್ಸ್ ಆಫ್ ಕುಡ್ಲ” ಪತ್ರಿಕೆಯಲ್ಲಿ ನನ್ನ ತುಳು ಭಾಷೆಯಲ್ಲಿ ಬರೆದ ಹನಿಗವನಗಳು ಪ್ರಕಟಗೊಂಡಿದ್ದವು. ಹೊಸ ಬರಹಗಾರರಿಗೆ ಈ ಪತ್ರಿಕೆ ಬಹಳಷ್ಟು ಪ್ರೋತ್ಸಾಹ ಹಾಗೂ ಅವಕಾಶಗಳನ್ನು ನೀಡುತಿತ್ತು. ನಮ್ಮ ನೆರೆಮನೆಯ ಹುಡುಗನೊಬ್ಬ ಒತ್ತಾಯ ಮಾಡಿ, ಪ್ರೋತ್ಸಾಹಿಸಿ “ಅಕ್ಕ ಈರ್ ಪನಿಗಬಿತೆ ಬರೆಲೆ, ಬರೆದ್ ಎನಟ ಕೊರ್ಲೆ, ಐನ್ ಕಡಪುಡುನ ವ್ಯವಸ್ಥೆ ಯಾನ್ ಮಲ್ಪುವೆ” ( ಅಕ್ಕ ನೀವು ಹನಿಗವನ ಬರೆಯಿರಿ, ಬರೆದು ನನ್ನ ಹತ್ತಿರ ಕೊಡಿ, ಅದನ್ನು ಪತ್ರಿಕೆಗೆ ಕಳುಹಿಸುವ ವ್ಯವಸ್ಥೆ ನಾನು ಮಾಡುತ್ತೇನೆ)…