ರೈತಾಪಿ ವರ್ಗ ಭಗವಂತನ ಮೇಲೆ ಇರಿಸಿದ ನಂಬಿಕೆ ಮತ್ತು ಭಕ್ತಿ ಭಾವದ ಪ್ರತೀಕವೇ ಕಂಬಳ ಎಂದು ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು. ಬೈಂದೂರು ತಾಲೂಕಿನ ಮುಳ್ಳಿಕಟ್ಟೆಯ ನಗುಸಿಟಿಯಲ್ಲಿ ರೈತ ಸಂಘ ಬೈಂದೂರು ತಾಲೂಕು ಘಟಕದ ಆಶ್ರಯದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ, ಬೈಂದೂರು ತಾಲೂಕು ಕಂಬಳ ಸಮಿತಿ ಮರಾಠಿ ಹಾಗೂ ಗೊಂಡ ಸಮಾಜದ ಸಹಯೋಗದಲ್ಲಿ ನಡೆಯುವ ರಾಜ್ಯಮಟ್ಟದ ಕೋಟಿ ಚೆನ್ನಯ ಜೋಡುಕರೆ ಕಂಬಳ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕತೆಯ ಹೊಡೆತಕ್ಕೆ ಅನೇಕ ಪಾರಂಪರಿಕ ಹಾಗೂ ಸಾಂಸ್ಕೃತಿಕ ಆಚರಣೆಗಳು ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲೂ ಕಂಬಳ ಆಧುನಿಕತೆಗೆ ತೆರೆದುಕೊಂಡಿರುವುದು ಸಂತೋಷದ ಸಂಗತಿ ಬೇಸಾಯ ಉತ್ತಮವಾಗಿರಲಿ, ಮನೆ ವ್ಯವಸ್ಥೆ ಚೆನ್ನಾಗಿರಲಿ ಎಂದು ಪ್ರಾರ್ಥಿಸಿ ಕಂಬಳ ನಡೆಸುವುದು ಸಂಪ್ರದಾಯ. ದಕ್ಷಿಣ ಕನ್ನಡ ಹಾಗೂ ಉಡುಪಿ, ಕಾರ್ಕಳ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಜೋಡುಕರೆ ಕಂಬಳ, ದೀಪಕ್ ಕುಮಾರ ಶೆಟ್ಟಿ ಅವರ ನೇತೃತ್ವದಲ್ಲಿ ಈ ಭಾಗದಲ್ಲಿಯೂ ಆಯೋಜನೆಗೊಂಡಿರುವುದು ಕಮಲದ ಉಳಿವಿನ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಕೋಣಗಳ ಮಾಲೀಕರಿಗೆ ಹಾಗೂ ಓಡಿಸುವವರಿಗೆ ನಮ್ಮಲ್ಲಿ ವಿಶೇಷ ಗೌರವವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರೈತ ಸಂಘ ಬೈಂದೂರು ತಾಲೂಕು ಘಟಕದ ಅಧ್ಯಕ್ಷ ದೀಪ ಕುಮಾರ್ ಶೆಟ್ಟಿ ‘ಈ ಭಾಗದಲ್ಲಿ ಕಂಬಳ ಆಯೋಜನೆ ಮಾಡಬೇಕೆನ್ನುವುದು ಬಹುದಿನಗಳ ಕನಸಾಗಿತ್ತು. ಅದು ಈಗ ನನಸಾಗಿದೆ. ಮುಂಬರುವ ದಿನಗಳಲ್ಲಿ ಕುಂದಾಪುರ – ಬೈಂದೂರು ಭಾಗದಲ್ಲಿ ಶಾಶ್ವತ ಜೋಡುಕರೆ ಕಂಬಳ ನಡೆಸುವು ಯೋಜನೆಯಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು. ಕಂಬಳ ಸಮಿತಿ ಕಾರ್ಯಾಧ್ಯಕ್ಷ ಕೆ. ಗುಣಪಾಲ ಕಡಂಬ ಮಾತನಾಡಿ, ಈ ಭಾಗದಲ್ಲಿ ಹಿಂದೆ ದೊಡ್ಡ ಸಾಗುವಳಿದಾರರ ಮನೆಗಳಲ್ಲೂ ಕಮಲಗದ್ದೆ ಇರುತ್ತಿತ್ತು. ಅದು ಈಗ ಕಡಿಮೆಯಾಗುತ್ತಿದೆ. ಆದರೂ ಹಲವೆಡೆಗಳಲ್ಲಿ ಭಕ್ತಿ ಪ್ರಧಾನ, ಸಾಂಪ್ರದಾಯಿಕವಾಗಿ ಕಂಬಳವನ್ನು ನಡೆಸುತ್ತಿದ್ದಾರೆ ಎಂದರು.
ಅರ್ಚಕ ಶ್ರೀನಿವಾಸ ಭಟ್, ಹೊಸಾಡು ದೀವಳಿ ಕಂಬಳ ಆರಂಭಕ್ಕೂ ಮುನ್ನ ಧಾರ್ಮಿಕ ಪೂಜಾ ವಿಧಿಗಳನ್ನು ನೆರವೇರಿಸಿದರು. ಜಿಲ್ಲಾ ಕಂಬಳ ಸಮಿತಿ ಕಾರ್ಯದರ್ಶಿ ಕೆ. ಲೋಕೇಶ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಇರ್ವತ್ತೂರು ಉದಯ ಕೋಟ್ಯಾನ್ ತಾಲೂಕು ಪಂಚಾಯತ್ ಮಾಜಿ ಸದಸ್ಯ ಮಹೇಂದ್ರ ಪೂಜಾರಿ, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಹೊಸಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಅರಾಟೆ, ಪ್ರಮುಖರಾದ ಅಶೋಕ್ ಕುಮಾರ ಶೆಟ್ಟಿ ಉಪ್ಪುಂದ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಪ್ರಜ್ವಲ್ ಶೆಟ್ಟಿ ಕಾಲ್ತೋಡು, ಸದಾನಂದ ಉಪ್ಪಿನಕುದ್ರು, ಶೇಖರ್ ಶೆಟ್ಟಿ ಗಾಯಾಡಿ, ಗೋಕುಲ್ ಶೆಟ್ಟಿ ಉಪ್ಪುಂದ, ಕೃಷ್ಣ ದೇವಾಡಿಗ ಬೈಂದೂರು, ರವೀಂದ್ರ ಶೆಟ್ಟಿ ಶಿರೂರು, ಆನಂದ ಖಾರ್ವಿ, ಪುಷ್ಪರಾಜ್ ಶೆಟ್ಟಿ ಶಿರೂರು, ಸುಜೇಂದ್ರ ಡಿ ಶೆಟ್ಟಿ, ಅನೂಪ್ ದೇವಾಡಿಗ ಬೈಂದೂರು, ನಿಶ್ಚಿತ್ ಶೆಟ್ಟಿ, ರಾಘವೇಂದ್ರ ಶೆಟ್ಟಿ ಮುಳ್ಳಿಕಟ್ಟೆ ಇದ್ದರು. ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು. ಉದಯ್ ಕುಮಾರ್ ಶೆಟ್ಟಿ ಪಡುಕೆರೆ ಹಾಗೂ ಪ್ರವೀಣ್ ಯಕ್ಷೀಮಠ ಕಾರ್ಯಕ್ರಮ ಸಂಘಟಿಸಿದರು.
ದೀಪಕ್ ಕುಮಾರ್ ಶೆಟ್ಟಿ ಅವರು ಬೈಂದೂರಿನಲ್ಲಿ ಇತಿಹಾಸ ನಿರ್ಮಿಸಿದ್ದಾರೆ’ ಎಂದು ಉಪ್ಪುಂದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಪ್ರವರ್ತಕ ಯು.ಬಿ. ಹೇಳಿದರು. ಅವರು ಮುಳ್ಳಿಕಟ್ಟೆಯ ನಗು ಸಿಟಿಯಲ್ಲಿ ಬೈಂದೂರು ತಾಲೂಕು ರೈತ ಸಂಘದ ಆಶ್ರಯದಲ್ಲಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ, ಬೈಂದೂರು ತಾಲೂಕು ಕಂಬಳ ಸಮಿತಿ, ಮರಾಠಿ ಸಮಾಜ, ಗೊಂಡ ಸಮಾಜದ ಸಹಯೋಗದಲ್ಲಿ ನಡೆದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರಾವಳಿ ಜಿಲ್ಲೆಯ ಇತಿಹಾಸದೊಂದಿಗೆ ಮುನ್ನಡೆಯುತ್ತಿರುವ ಕಂಬಳ ಧಾರ್ಮಿಕ ಹಿನ್ನೆಲೆಯೊಂದಿಗೆ, ಸಾಂಸ್ಕೃತಿಕ ಪರಿಕಲ್ಪನೆ, ಪರಂಪರೆ ಹೊಂದಿದೆ. ಎಲ್ಲರನ್ನೂ ಹೊಂದಿಸಿಕೊಂಡು, ಜೋಡಿಸಿಕೊಂಡು ಹೋಗುವುದೇ ಜೋಡುಕರೆ ಕಂಬಳದ ವಿಶೇಷತೆ ಎಂದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ದೀಪಕ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಜೋಡುಕರೆ ಕಂಬಳ, ಬೆಂಗಳೂರಿನಲ್ಲಿ ನಡೆದ ಕಂಬಳದಷ್ಟೇ ಯಶಸ್ಸನ್ನು ಕಂಡಿದೆ. ಪರಿಸರದ ಜನರಿಗೆ ಹಬ್ಬದ ವಾತಾವರಣ ನೀಡಿದೆ ಎಂದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ ಮಾತನಾಡಿ, ಧಾರ್ಮಿಕ ಸೇವೆಗಳ ಹಿನ್ನೆಲೆಯಲ್ಲಿ ನಡೆಯುವ ಕಂಬಳದ ಮನೆಗಳಲ್ಲಿ ನಮ್ಮದೂ ಒಂದು ಮೊದಲ ಬಾರಿಗೆ ಈ ಭಾಗದ ಜನರಿಗೆ ಜೋಡುಕರೆ ಕಂಬಳ ನೋಡುವ ಭಾಗ್ಯ ದೊರಕಿದೆ ಎಂದರು.ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಉದ್ಯಮಿ ಗೋಕುಲ್ ಶೆಟ್ಟಿ ಉಪ್ಪುಂದ, ಗಣ್ಯರಾದ ಇರ್ವತ್ತೂರು ಉದಯ ಎಸ್. ಕೋಟ್ಯಾನ್ ಸುಪ್ರೀತ ದೀಪಕ್ ಕುಮಾರ್ ಶೆಟ್ಟಿ, ಗೀತಾಂಜಲಿ ಸುವರ್ಣ, ಮಹೇಂದ್ರ ಪೂಜಾರಿ, ಪ್ರದೀಪ್ ಕುಮಾರ ಶೆಟ್ಟಿ ಗುಡಿಬೆಟ್ಟು, ಬಾಬಣ್ಣ ಶೆಟ್ಟಿ, ಜಗದೀಶ್ ಪೂಜಾರಿ ಹರ್ಕಾಡಿ, ವೀಣಾ ಶೆಟ್ಟಿ ಕಾಪು, ಜಿಲ್ಲಾ ಕಂಬಳ ತೀರ್ಮಾನಕಾರರ ಸಮಿತಿಯ ಸಂಚಾಲಕ ವಿಜಯ್ ಕುಮಾರ್ ಕಂಗಿನಮನೆ ರವೀಂದ್ರ ಕಾರ್ಕಳ ಅಶೋಕ್ ಕುಮಾರ್ ಶೆಟ್ಟಿ ಉಪ್ಪುಂದ, ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಹರೀಶ್ ತೋಳಾರ್ ಕೊಲ್ಲೂರು, ಪ್ರಜ್ವಲ್ ಶೆಟ್ಟಿ ಕಾಲ್ತೋಡು, ಸುಜೇಂದ್ರ ಡಿ. ಶೆಟ್ಟಿ, ದೀಶನ್ ಡಿ. ಶೆಟ್ಟಿ, ನಿಕ್ಷಿತ್ ಶೆಟ್ಟಿ, ಪ್ರಕಾಶ್ ಪೂಜಾರಿ ನಂದನವನ, ಅನೂರ್ ಮೆಂಡನ್, ಅನೂಪ್ ದೇವಾಡಿಗ ಬೈಂದೂರು ಭಾಗವಹಿಸಿದ್ದರು. ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಕೆ.ಸಿ. ನಿರೂಪಿಸಿದರು.