Author: admin
ಪ್ರಪಂಚವನ್ನು ನಡೆಸುವ ನಿಯಮಗಳ ಹಾಗೆ ಅಧ್ಯಾತ್ಮದಲ್ಲೂ ಧರ್ಮ ತತ್ವಗಳಿವೆ. ಸನಾತನ ಧರ್ಮದ ಪ್ರಕಾರ ಆಧ್ಯಾತ್ಮಿಕ ಎಂದರೆ ಆತ್ಮಕ್ಕೆ ಆಧ್ಯತೆಯನ್ನು ನೀಡುವ ಜೊತೆಯಲ್ಲಿ ಪ್ರೀತಿಯನ್ನು ಕೊಡುತ್ತದೆ. ಶರೀರದ ಪಂಚೇದ್ರಿಯಾ ಮೂಲಕ ಷಡ್ವೈರಿಗಳನ್ನು ಹೊಡೆದೋಡಿಸಿ ಸನ್ಮಾರ್ಗದ ಮೂಲಕ ಸತ್ಕರ್ಮಗಳನ್ನೂ ಮಾಡುವುದರಿಂದ ಆತ್ಮ ಶುದ್ದಿಕರಣವಾಗುತ್ತದೆ. ಕರ್ಮ ಸಿದ್ದಾಂತದ ಪ್ರಕಾರ ನಾವು ಮಾಡುವ ಯಾವುದೇ ಕಾರ್ಯವಿರಲಿ ಅದಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ ಹೊರತು ನಾವು ಎಣಿಸಿದಂತೆ ಸಿಗಲು ಸಾದ್ಯವಿಲ್ಲ. ಧರ್ಮದ ನೆಲೆಯಲ್ಲಿ ವಿವೇಕವನ್ನು ಬಳಸಿ ಮಾಡಿದ ಕರ್ಮಕ್ಕೆ ಪೂರ್ಣತೆ ಬರುವುದು ದೈವೀ ಕೃಪೆಯಿಂದ ಮಾತ್ರ. ಧರ್ಮ ಮಾರ್ಗ, ಕರ್ಮ ಮಾರ್ಗ, ಜ್ಞಾನ ಮಾರ್ಗ, ಭಕ್ತಿ ಮಾರ್ಗದಿಂದ ದೇವರನ್ನು ಒಲಿಸಬಹುದು ಎಂಬುವುದೇ ಶ್ರೀನಿವಾಸ ಕಲ್ಯಾಣೋತ್ಸವ ಮಾಡುವ ಚಿಂತನೆಯ ನಮ್ಮ ಈ ಆರಾಧನೆಯ ಮೂಲ ಉದ್ದೇಶ. ನಿರ್ಮಲ ಮನಸ್ಸಿನಿಂದ, ಶ್ರದ್ದೆ ಭಕ್ತಿಯಿಂದ ದೇವರನ್ನು ಅರಾದಿಸಿದರೆ ನಮ್ಮ ಸಕಲ ಇಷ್ಟಾರ್ಥ ಸಿದ್ದಿಗಳು ಫಲಿಸಬಹುದು ಎಂದು ಆಧ್ಯಾತ್ಮಿಕ ಚಿಂತಕ, ಧಾರ್ಮಿಕ ಪ್ರವಚನಕಾರ ಮುಲುಂಡ್ ಬಂಟ್ಸ್ ನ ಮಾಜಿ ಅಧ್ಯಕ್ಷ ಡಾ. ಸತ್ಯಪ್ರಕಾಶ್ ಶೆಟ್ಟಿ…
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಇದರ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಸಹ ಸಂಸ್ಥೆ ಯುವ ಬಂಟರ ಸಂಘ ಪುತ್ತೂರು ತಾಲೂಕು ಇದರ ನೇತೃತ್ವದಲ್ಲಿ ಮಹಿಳಾ ಮತ್ತು ವಿದ್ಯಾರ್ಥಿ ಬಂಟರ ಸಂಘದ ಸಹಕಾರದೊಂದಿಗೆ ಆಗಸ್ಟ್ 25 ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದ ದೋಣಿಂಜೆಗುತ್ತು ಸರೋಜಿನಿ ಟಿ.ಶೆಟ್ಟಿ ಮತ್ತು ಮೂಡಂಬೈಲು ತಿಮ್ಮಪ್ಪ ಯಾನೆ ಉಗ್ಗಪ್ಪ ಶೆಟ್ಟಿ ವೇದಿಕೆಯಲ್ಲಿ ಬಂಟೆರೆ ಚಾವಡಿಡ್ ಅಷ್ಟಮಿದ ಗೊಬ್ಬುಲು ಕಾರ್ಯಕ್ರಮ ಜರಗಿತು. ಇದೇ ವೇಳೆ ಯುವ ಬಂಟರ ಸಂಘದಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಡ್ರಾಯಿಂಗ್ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ದೀಪ ಬೆಳಗಿಸಿ, ಬಂಟೆರೆ ಚಾವಡಿಡ್ ಅಷ್ಟಮಿದ ಗೊಬ್ಬುಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಂದು ಉತ್ತಮವಾದ ಕಾರ್ಯಕ್ರಮವನ್ನು ಯುವ ಬಂಟರ ಸಂಘ ಹಮ್ಮಿಕೊಂಡಿದೆ. ಇದಕ್ಕೆ ನಮ್ಮ ಪೂರ್ಣ ಬೆಂಬಲವಿದೆ. ಯುವಕರಿಗೆ ಸ್ಪೂರ್ತಿಯನ್ನು ತುಂಬುವ…
ಮೂಲ್ಕಿ ಬಂಟರ ಸಂಘದ ಕಟ್ಟಡ ನವೀಕರಣದ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಮೂಲ್ಕಿ ಸೀಮೆ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಿತು. ಕ್ಷೇತ್ರದ ಅರ್ಚಕರಾದ ನರಸಿಂಹ ಭಟ್ ಶ್ರೀ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಅಭಿವೃದ್ಧಿ ಕಾರ್ಯಗಳಿಗೆ ಶುಭ ಹಾರೈಸಿದರು. ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮೂಲ್ಕಿ ಬಂಟರ ಸಂಘದ ಕಟ್ಟಡ ನವೀಕರಣದ ಮನವಿ ಪತ್ರ ಬಿಡುಗಡೆ ಮಾಡಿ ಮಾತನಾಡಿ ಸಂಘದ ಹಾಗೂ ಸಮಾಜದ ಎಲ್ಲಾ ಸದಸ್ಯರು ಅಭಿವೃದ್ಧಿ ಕಾರ್ಯಗಳಲ್ಲಿ ಒಗ್ಗಟ್ಟಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು. ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಮಾಜಿ ಅಧ್ಯಕ್ಷ ಪುರುಷೋತ್ತಮ್ ಶೆಟ್ಟಿ, ಹಿರಿಯರಾದ ದೆಪ್ಪುಣಿ ಗುತ್ತು ಸುಧಾಕರ ಶೆಟ್ಟಿ, ಮುರಳಿಧರ ಭಂಡಾರಿ, ಗಂಗಾಧರ ಶೆಟ್ಟಿ ಬರ್ಕೆ ತೋಟ, ಸಾಯಿನಾಥ ಶೆಟ್ಟಿ ಮುಂಡ್ಕೂರು, ಸ್ವರಾಜ್ ಶೆಟ್ಟಿ…
ಮೂಡುಬಿದಿರೆ: ಎಲ್ಲರೂ ಒಂದೇ ಮನಸ್ಸಿನಿಂದ ಒಂದು ನಿಗದಿತ ಗುರಿಯೆಡೆಗೆ ಹೆಜ್ಜೆ ಹಾಕಿದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಮಾಜಿ ವಿಧಾನ ಪರಿಷತ ಸದಸ್ಯ ಗಣೇಶ್ ಕಾರ್ಣಿಕ್ ತಿಳಿಸಿದರು. ಅವರು ಸೋಮವಾರ, ಆಳ್ವಾಸ್‍ನ ಶಿವರಾಮ್ ಕಾರಂತ ವೇದಿಕೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ- ದಿ ಮ್ಯಾಟ್ರಿಕ್ಸ್ ಗ್ರೂಪ್ ಆಯೋಜಿಸಿದ್ದ- ‘’ಒನ್ ಟೀಮ್, ಒನ್ ಡ್ರೀಮ್’’- ಸಾಮೂಹಿಕ ಯಶಸ್ಸಿನ ಹಾದಿ ವಿಷಯದ ಕುರಿತು ಮಾತನಾಡಿದರು. ಪ್ರತಿಯೊಬ್ಬರು ತಮ್ಮ ಸಾಮಾಥ್ರ್ಯ ಹಾಗೂ ದೌರ್ಬಲ್ಯಗಳನ್ನು ಅರಿತು, ತಮ್ಮಲ್ಲಿರುವ ನ್ಯೂನತೆಗಳನ್ನು ಮಣಿಸಲು ಆರಂಬಿಸಿದಾಗ ಸಾಧಿಸಲು ಹೊರಟ ಕೆಲಸದಲ್ಲಿ ಜಯ ಲಭಿಸಲು ಸಾಧ್ಯ. ಇದರ ಜೊತೆಗೆ ಪ್ರತಿಯೊಬ್ಬರು ತಂಡದಲ್ಲಿ ಕೆಲಸಮಾಡುವ ಅಗತ್ಯತೆಯನ್ನು ಅರಿಯಬೇಕು. ಇಲ್ಲಿ ವೈಯಕ್ತಿಕ ಹಿತಾಸಕ್ತಿಗಳಿಗೆ ಪ್ರಾಶಸ್ತ್ಯವಿರುವುದಿಲ್ಲ. ತಂಡದ ಶ್ರೇಯಸ್ಸೇ ಪ್ರತಿಯೊಬ್ಬರ ಗುರಿಯಾಗಿರುತ್ತದೆ. ಈ ಹಂತದಲ್ಲಿ ನಾವು ಪಡೆಯುತ್ತಿರುವ ಶಿಕ್ಷಣ ಈ ಪ್ರಕ್ರಿಯೆಗೆ ಎಷ್ಟು ಪರಿಣಾಮಕಾರಿಯಾಗಿ ಸ್ಪಂದಿಸುತ್ತಿದೆ ಎಂಬುದು ಮುಖ್ಯ. ಶಿಕ್ಷಣ ನಮ್ಮನ್ನು ಜವಾಬ್ದಾರಿಯುತ ಹಾಗೂ ಉತ್ತರದಾಯಿತ್ವದ ವಿದ್ಯಾರ್ಥಿಗಳನ್ನಾಗಿಬೇಕು. ಈ ಹಂತದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಂಡು ಬೆಳವಣಿಗೆ ಹೊಂದುವತ್ತಾ ಶ್ರಮಿಸಬೇಕು ಎಂದರು.…
ಮಂಗಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ 40,000 ಮಂದಿಗೆ ಉದ್ಯೋಗವಕಾಶ ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದ್ದು, ಪ್ರಥಮ ಹಂತದಲ್ಲಿ 10,000 ಮಂದಿಗೆ ಉದ್ಯೋಗ ನೀಡುವ ಯೋಜನೆಯನ್ನು ಶೀಘ್ರದಲ್ಲಿ ಕಾರ್ಯಗತ ಮಾಡಲಾಗುವುದು ಎಂದು ಎಂಆರ್ ಜಿ ಗ್ರೂಪ್ ಸಿಎಂಡಿ ಡಾ| ಕೆ. ಪ್ರಕಾಶ್ ಶೆಟ್ಟಿಯವರು ಹೇಳಿದರು. ಪಡುಬಿದ್ರಿ ಬಂಟರ ಸಂಘ ಮತ್ತು ಸ್ಕಿಲ್ ಡೆವಲಪ್ಮೆಂಟ್ ಸೆಂಟರ್, ಉಡುಪಿ ಗ್ರಾಮೀಣ ಬಂಟರ ಸಂಘ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಪಡುಬಿದ್ರಿ ಬಂಟರ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಯುವಕರಿಗೆ, ಯುವತಿಯರಿಗೆ ಒಂದು ದಿನದ ವೃತ್ತಿ ಅಭಿವೃದ್ಧಿ ಮತ್ತು ಉದ್ಯಮಶೀಲತಾ ನಾವೀನ್ಯತೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಎಂ.ಆರ್ ಜಿ ಗ್ರೂಪ್ ನಲ್ಲಿ 4 ಸಾವಿರ ಮಂದಿ ಉದ್ಯೋಗಿಗಳಿದ್ದು, 4 ವರ್ಷದಲ್ಲಿ 8 ಸಾವಿರಕ್ಕೆ ಏರಿಸುವ ಗುರಿ ಹೊಂದಲಾಗಿದೆ. ದೇಶದ ಆಸ್ತಿಯಾಗಿರುವ ಯುವ ಪೀಳಿಗೆ ವಿದ್ಯೆಯೊಂದಿಗೆ ಪ್ರಜ್ಞಾವಂತಿಗೆ ಬೆಳೆಸಿಕೊಳ್ಳಬೇಕು. ಸವಾಲು ಸ್ವೀಕರಿಸಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು ಎಂದರು. ಮಂಗಳೂರಿನ ಉದ್ಯಮಿ ಮೈತ್ರಿ ಮಲ್ಲಿ,…
ಬೆಂಗಳೂರಿನ ಉದ್ಯಮಿ, ಚಲನಚಿತ್ರ ನಿರ್ಮಾಪಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಕುಂಬ್ರ ರಘುನಾಥ ರೈ (71 ವರ್ಷ)ರವರು ಹೃದಯಾಘಾತದಿಂದ ಆಗಸ್ಟ್ 26 ರಂದು ನಿಧನರಾದರು. ಬಾಳಿಲ ಗ್ರಾಮದ ದೋಳ್ತೋಡಿ ದಿ. ಸುಬ್ಬಯ್ಯ ರೈಯವರ ಪುತ್ರ ಕುಂಬ್ರ ರಘುನಾಥ ರೈ ಅವರು ‘ಕಂಚಿಲ್ದ ಬಾಲೆ’, ‘ಮಾರಿ ಬಲೆ’ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಕುಂಬ್ರ ರಘುನಾಥ ರೈ ಅವರ ನಿಧನಕ್ಕೆ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಸಮಾಜಸೇವಕ ಅಗರಿ ನವೀನ್ ಭಂಡಾರಿ, ಬೆಂಗಳೂರು ಬಂಟರ ಸಂಘದ ಮಹಿಳಾ ಉಪಾಧ್ಯಕ್ಷೆ ಕಾಂತಿ ಶೆಟ್ಟಿಯವರು ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಸಹೋದರರನ್ನು ಅಗಲಿದ್ದಾರೆ.
ಮೂಡುಬಿದಿರೆ: ಎಲ್ಲರೂ ಒಂದೇ ಮನಸ್ಸಿನಿಂದ ಒಂದು ನಿಗದಿತ ಗುರಿಯೆಡೆಗೆ ಹೆಜ್ಜೆ ಹಾಕಿದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಮಾಜಿ ವಿಧಾನ ಪರಿಷತ ಸದಸ್ಯ ಗಣೇಶ್ ಕಾರ್ಣಿಕ್ ತಿಳಿಸಿದರು. ಅವರು ಸೋಮವಾರ, ಆಳ್ವಾಸ್‍ನ ಶಿವರಾಮ್ ಕಾರಂತ ವೇದಿಕೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ- ದಿ ಮ್ಯಾಟ್ರಿಕ್ಸ್ ಗ್ರೂಪ್ ಆಯೋಜಿಸಿದ್ದ- ‘’ಒನ್ ಟೀಮ್, ಒನ್ ಡ್ರೀಮ್’’- ಸಾಮೂಹಿಕ ಯಶಸ್ಸಿನ ಹಾದಿ ವಿಷಯದ ಕುರಿತು ಮಾತನಾಡಿದರು. ಪ್ರತಿಯೊಬ್ಬರು ತಮ್ಮ ಸಾಮಾಥ್ರ್ಯ ಹಾಗೂ ದೌರ್ಬಲ್ಯಗಳನ್ನು ಅರಿತು, ತಮ್ಮಲ್ಲಿರುವ ನ್ಯೂನತೆಗಳನ್ನು ಮಣಿಸಲು ಆರಂಬಿಸಿದಾಗ ಸಾಧಿಸಲು ಹೊರಟ ಕೆಲಸದಲ್ಲಿ ಜಯ ಲಭಿಸಲು ಸಾಧ್ಯ. ಇದರ ಜೊತೆಗೆ ಪ್ರತಿಯೊಬ್ಬರು ತಂಡದಲ್ಲಿ ಕೆಲಸಮಾಡುವ ಅಗತ್ಯತೆಯನ್ನು ಅರಿಯಬೇಕು. ಇಲ್ಲಿ ವೈಯಕ್ತಿಕ ಹಿತಾಸಕ್ತಿಗಳಿಗೆ ಪ್ರಾಶಸ್ತ್ಯವಿರುವುದಿಲ್ಲ. ತಂಡದ ಶ್ರೇಯಸ್ಸೇ ಪ್ರತಿಯೊಬ್ಬರ ಗುರಿಯಾಗಿರುತ್ತದೆ. ಈ ಹಂತದಲ್ಲಿ ನಾವು ಪಡೆಯುತ್ತಿರುವ ಶಿಕ್ಷಣ ಈ ಪ್ರಕ್ರಿಯೆಗೆ ಎಷ್ಟು ಪರಿಣಾಮಕಾರಿಯಾಗಿ ಸ್ಪಂದಿಸುತ್ತಿದೆ ಎಂಬುದು ಮುಖ್ಯ. ಶಿಕ್ಷಣ ನಮ್ಮನ್ನು ಜವಾಬ್ದಾರಿಯುತ ಹಾಗೂ ಉತ್ತರದಾಯಿತ್ವದ ವಿದ್ಯಾರ್ಥಿಗಳನ್ನಾಗಿಬೇಕು. ಈ ಹಂತದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಂಡು ಬೆಳವಣಿಗೆ ಹೊಂದುವತ್ತಾ ಶ್ರಮಿಸಬೇಕು ಎಂದರು.…
ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ ಸುಧಾಕರ್ ಶೆಟ್ಟಿ ‘ಹೇ ಪ್ರಭು’ ಬಹುಭಾಷಾ ಚಿತ್ರದ ವೈದ್ಯಕೀಯ ಪ್ರೊಫೆಸರ್ ಪಾತ್ರದಿಂದ ಸಿನಿಮಾ ರಂಗಕ್ಕೆ ಎಂಟ್ರಿ
ಹೊರನಾಡ ಕನ್ನಡ ರತ್ನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಸುಧಾಕರ ಶೆಟ್ಟಿ ಅವರ ಹೆಸರು ಕೇಳದವರು ತುಂಬಾ ಕಡಿಮೆ. ಮೂಡುಬಿದಿರೆ ಮೂಲದವರಾಗಿರುವ ಡಾ.ಸುಧಾಕರ ಶೆಟ್ಟಿ ಪುಣೆಯಲ್ಲಿ ಖ್ಯಾತ ಮಕ್ಕಳ ತಜ್ಞರಾಗಿ ಕಳೆದ ಮೂರು ದಶಕಗಳ ಅವರ ಸೇವೆಗಾಗಿ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿದೆ. ಮೂಡುಬಿದಿರೆಯಲ್ಲೂ ಅವರು ಕಳೆದೊಂದು ವರ್ಷದಿಂದ ಬೇಬಿ ಫ್ರೆಂಡ್ ಎಂಬ ಸಂಚಾರಿ ಕ್ಲಿನಿಕ್ ನಡೆಸುತ್ತಿದ್ದು, ನೂರಾರು ಕಡೆಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಿ ಮನೆಮಾತಾಗಿದ್ದಾರೆ. ವೈದ್ಯಕೀಯ, ಸಮಾಜ ಸೇವೆ ಮೂಲಕ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನೆ ಮಾತಾಗಿರುವ ಇವರು ದಕ್ಷಿಣ ಕನ್ನಡದ ಮೂಡುಬಿದಿರೆಯ ಪ್ರತಿಷ್ಠಿತ ಬಂಟ ಮನೆತನದ ಹಿನ್ನಲೆ ಹೊಂದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪುಣೆಯಲ್ಲಿದ್ದ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಕನ್ನಡಿಗರಿಗೆ ಚಿಕಿತ್ಸೆ ನೀಡಿದ ಡಾ. ಸುಧಾಕರ್ ಶೆಟ್ಟಿಯವರ ವೈದ್ಯಕೀಯ ತಂಡಕ್ಕೆ ಸತತ 4 ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹೊರನಾಡ…
‘ತುಳುನಾಡು ಸಂಸ್ಕೃತಿ ಸಂಸ್ಕಾರಗಳಿಗೆ ಹೆಸರಾಗಿದೆ. ಇಲ್ಲಿನ ಜನರಲ್ಲಿ ಜಾತಿ ಸಂಕಟವಿಲ್ಲ. ಮತ- ಧರ್ಮಗಳ ಸಂಘರ್ಷವಿಲ್ಲ. ಆದ್ದರಿಂದ ತುಳುವರ ಸಾಹಿತ್ಯ ಕೃತಿಗಳಲ್ಲಿ ಸಮಕಾಲೀನ ಸಂಗತಿಗಳೊಂದಿಗೆ ಸಹಬಾಳ್ವೆ – ಸಮಭಾವಗಳ ಸಂದೇಶವಿರುತ್ತದೆ. ಭಾಸ್ಕರ ರೈಯವರ ಗದ್ಯ ಮತ್ತು ಕಾವ್ಯ ಕೃತಿಗಳಲ್ಲಿ ಇದು ಹಾಸು ಹೊಕ್ಕಾಗಿರುವುದರಿಂದ ನಾಡು – ಹೊರನಾಡುಗಳಲ್ಲಿ ಅವರದೇ ಆದ ಅಭಿಮಾನಿ ವರ್ಗ ಸೃಷ್ಟಿಯಾಗಿದೆ’ ಎಂದು ಮುಂಬಯಿಯ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಹೇಳಿದರು. ವಿದ್ಯಾ ವಿಹಾರ್ ಪೂರ್ವದ ಶ್ರೀ ಅಂಬಿಕಾ ಆದಿನಾಥೇಶ್ವರ ಗಣಪತಿ ಮಂದಿರದಲ್ಲಿ ಆಗಸ್ಟ್ 24ರಂದು ಕವಿ, ಲೇಖಕ ಮತ್ತು ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಎರಡು ಕವನ ಸಂಕಲನಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ನೇತೃತ್ವದ ಅಜೆಕಾರು ಕಲಾಭಿಮಾನಿ ಬಳಗದ 2024 ನೇ ಸಾಲಿನ ಯಕ್ಷಗಾನ ತಾಳಮದ್ದಳೆ ಸರಣಿಯನ್ನು ಅಂಬಿಕಾ ಮಂದಿರದ ಧರ್ಮದರ್ಶಿ ವೇದಮೂರ್ತಿ ಪೆರ್ಣಂಕಿಲ ಹರಿದಾಸ ಭಟ್ ದೇವಿ ಸನ್ನಿಧಿಯಲ್ಲಿ ದೀಪ ಬೆಳಗಿಸಿ…
ಮುಂಬಯಿಯ ಪ್ರತಿಷ್ಠಿತ ಜಾತಿಯ ಸಂಸ್ಥೆಗಳಲ್ಲಿ ಒಂದಾದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಪ್ರತೀ ವರ್ಷ ನೀಡುತ್ತಿರುವ ವಾರ್ಷಿಕ ಶೈಕ್ಷಣಿಕ ಸಹಾಯ ವಿತರಣಾ ಕಾರ್ಯಕ್ರಮವು ಆಗಸ್ಟ್ 25 ರಂದು ರವಿವಾರ ಜುಯಿ ನಗರದ ಬಂಟ್ಸ್ ಸೆಂಟರ್ ನ ಶಶಿಕಲಾ ಮನಮೋಹನ್ ಶೆಟ್ಟಿ ಕಾಂಪ್ಲೆಕ್ಸ್ ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ನಿನ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಲಿರುವುದು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಂಬೆ ಬಂಟ್ಸ್ ಅಸೋಸಿಯೇಷನ್ನಿನ ಟ್ರಸ್ಟಿ, ಹೇರಂಬ ಕೆಮಿಕಲ್ಸ್ ನ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿಯವರು ಭಾಗವಹಿಸಲಿರುವರು. ಗೌರವ ಅತಿಥಿಗಳಾಗಿ ಬಾಂಬೆ ಬಂಟ್ಸ್ ಅಸೋಸಿಯೇಷನ್ನಿನ ಟ್ರಸ್ಟಿ ವಿ.ಕೆ ಗ್ರೂಪ್ ಆಫ್ ಕಂಪನಿ ಸಿಎಂಡಿ ಕೆ.ಎಂ ಶೆಟ್ಟಿ, ಕೃಷ್ಣ ಪ್ಯಾಲೆಸ್ ಗ್ರೂಪ್ ಹೋಟೆಲ್ ಸಿಎಂಡಿ ಕೃಷ್ಣ ವೈ ಶೆಟ್ಟಿ, ಆನಂದ ಶೆಟ್ಟಿ ಮುಖ್ಯಸ್ಥರು ನೊವೊ ನೊರ್ಡಿಸ್ಕ್ ಆಗ್ನೇಯ ಏಷ್ಯಾ ಸಿಂಗಾಪುರ, ತುಂಗಾ ಆಸ್ಪತ್ರೆಯ ನಿರ್ದೇಶಕ ಜವಾಬ್ ಸಂಸ್ಥೆಯ ಅಧ್ಯಕ್ಷ ರಾಜೇಶ್ ಶೆಟ್ಟಿ, ಬಾಂಬೆ ಬಂಟ್ಸ್…