Author: admin
ಮನುಷ್ಯನ ಜೀವನದಲ್ಲಿ ಸುಖ- ದುಃಖ, ಲಾಭ-ನಷ್ಟ, ನಗು- ಅಳು ಎಲ್ಲವೂ ಸಹಜ. ಇವೆಲ್ಲವೂ ಒಳಗೊಂಡಿದ್ದರೆ ಅದು ಜೀವನ. ಯಾವನೇ ವ್ಯಕ್ತಿಯಾಗಲೀ ತನ್ನ ಬದುಕಿನುದ್ದಕ್ಕೂ ಕೇವಲ ಸುಖ ಅಥವಾ ಕೇವಲ ದುಃಖವನ್ನೇ ಕಂಡಿದ್ದರೆ ಆತನ ಜೀವನದ ನಿಜಾ ರ್ಥದಲ್ಲಿ ಬರಡು. ಇವೆರಡೂ ಸಮ್ಮಿಳಿತ ಗೊಂಡಿದ್ದರೆ ಆ ಬದುಕಿಗೂ ಒಂದು ಅರ್ಥ. ಹಾಗೆಂದು ಸಂಕಷ್ಟಗಳು ಎದುರಾದವೆಂದು ಕೊರಗುವುದಾಗಲೀ ಸುಖಮಯವಾಗಿದೆ ಎಂದು ಹಿಗ್ಗುವುದಾಗಲೀ ಸರಿಯಲ್ಲ. ಸಮಸ್ಯೆ, ಕಷ್ಟಗಳು ಎದುರಾದಾಗ ಅದನ್ನು ಎದುರಿಸುವ ಛಾತಿಯನ್ನು ನಾವು ಬೆಳೆಸಿಕೊಳ್ಳಬೇಕು. ಸಕಾರಾತ್ಮಕ ಮನೋಭಾವದಿಂದ ಮುನ್ನಡೆದಲ್ಲಿ ಯಶಸ್ಸನ್ನು ಕಾಣಬಹುದು. ಒಮ್ಮೆ ಒಬ್ಬಳು ಗೃಹಿಣಿ ಎರಡು ಮಾವಿನ ಹಣ್ಣುಗಳನ್ನು ತಿಂದು ಅದರ ಗೊರಟುಗಳನ್ನು (ಓಟೆ) ತಿಪ್ಪೆ ಗುಂಡಿಗೆ ಬಿಸಾಡಿದಳು. ಆಗ ಒಂದನೆಯ ಗೊರಟು ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯು ಗೊಬ್ಬರ ಮತ್ತು ಪೌಷ್ಟಿಕಾಂಶ ಕೊಡುತ್ತದೆ, ಇದರಿಂದ ಸಸಿಯಾಗಿ ಸಣ್ಣ ಗಿಡವಾಗುತ್ತೇನೆ, ಕಾಲಾಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರವಾದ ಮಾವಿನ ಹಣ್ಣನ್ನು ಕೊಡುತ್ತೇನೆ. ನೂರಾರು ವರ್ಷಗಳು ಬದುಕುತ್ತೇನೆಂದು ಯೋಚಿಸಿ…
ಮಂಗಳೂರಿನ ಖ್ಯಾತ ಹೋಟೆಲ್ ಉದ್ಯಮಿ, ಶ್ರೀದೇವಿ ವಿದ್ಯಾ ಸಮೂಹ ಸಂಸ್ಥೆಗಳ ಮುಖ್ಯಸ್ಥ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಧ್ಯಕ್ಷ, ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ ಶ್ರೀ ಎ. ಸದಾನಂದ ಶೆಟ್ಟಿ ಅವರ ಧರ್ಮಪತ್ನಿ ಮೂಲ್ಕಿ ಕುಬೆವೂರು ದೊಡ್ಡಮನೆ ಮೈನಾ ಎಸ್ ಶೆಟ್ಟಿ (75 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ರಾತ್ರಿ 8 ಕ್ಕೆ ನಿಧನರಾದರು. ಮೃತರು ಶ್ರೀದೇವಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಯಾಗಿದ್ದು ಶ್ರೀದೇವಿ ಸಮೂಹ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಮಂಗಳೂರಿನ ಕ್ವಾಲಿಟಿ-ಕುಡ್ಲ ಹೋಟೆಲ್ ಸಮೂಹಗಳನ್ನು ತನ್ನ ಕ್ರಿಯಾಶೀಲತೆಯಿಂದ ಬೆಳೆಸಿ, ರಾಜ್ಯದ ಪ್ರತಿಷ್ಠಿತ ಕೇಟರಿಂಗ್ ಸಂಸ್ಥೆಯಾಗಿ ರೂಪುಗೊಳ್ಳುವಲ್ಲಿ ಶ್ರಮಿಸಿದವರು. ಜಿಲ್ಲೆಯ ಹಲವಾರು ಪ್ರತಿಷ್ಠಿತ ಕೇಟರಿಂಗ್, ಹೋಟೆಲ್ ಉದ್ಯಮಿಗಳಿಗೆ ಮಾರ್ಗದರ್ಶಿಯಾಗಿದ್ದರು. ಬೆಂಗಳೂರು, ಮಂಗಳೂರಿನಲ್ಲಿ ನಡೆದಿದ್ದ ಚಾರಿತ್ರಿಕ ವಿಶ್ವ ಬಂಟರ ಸಮ್ಮೇಳನದ ಊಟೋಪಚಾರದ ಸಂಪೂರ್ಣ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು. ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದರು. ಮೂಲ್ಕಿ ಕುಬೆವೂರು ದೊಡ್ಡಮನೆಯ…
ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಮತ್ತು ಯಕ್ಷಧ್ರುವ ಪಟ್ಲ ಪೌಂಡೇಶನ್ ಯು.ಎ.ಇ. ಘಟಕ ಜಂಟಿ ಸಂಯೋಜನೆಯ ವಿಶ್ವ ಪಟ್ಲ ಸಂಭ್ರಮ ಮತ್ತು ದುಬಾಯಿ ಯಕ್ಷೋತ್ಸವ 2023 ಅಂಗವಾಗಿ ನಡೆಯಲಿರುವ “ದಶಾವತಾರ” ಯಕ್ಷಗಾನ ಪ್ರಸಂಗದ ಪ್ರವೇಶ ಪತ್ರ -ಅಮಂತ್ರಣಗಳ ಬಿಡುಗಡೆ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ದಿನಾಂಕ 11-06-2023 ರಂದು ದುಬಾಯಿ ಕರಮದ ಶೇಖ್ ರಶೀದ್ ಅಡಿಟೋರಿಯಂನಲ್ಲಿ(ಇಂಡಿಯನ್ ಸ್ಕೂಲ್ ಕರಮ- ವೂದ್ ಮೆಹತಾ ) ನಡೆಯಲಿರುವ ಬಹು ನಿರೀಕ್ಷಿತ ವಿಶ್ವ ಪಟ್ಲ ಸಂಭ್ರಮ ಮತ್ತು ದುಬಾಯಿ ಯಕ್ಷೋತ್ಸವದ ಅಂಗವಾಗಿ ನಡೆಯಲಿರುವ ಅದ್ದೂರಿಯ ಯಕ್ಷಗಾನ ಕಾರ್ಯಕ್ರಮ ದಶಾವತಾರ ಇದರ ಆಮಂತ್ರಣ ಪತ್ರ ಮತ್ತು ಪ್ರವೇಶ ಪತ್ರದ ಬಿಡುಗಡೆ ಸಮಾರಂಭ ಇತ್ತೀಚೆಗೆ ಹೋಟೇಲ್ ಫಾರ್ಚೂನ್ ಪ್ಲಾಝದ ಬ್ಯಾಂಕ್ವೆಟ್ ಹಾಲ್ ನಲ್ಲಿ, ಪಟ್ಲ ಪೌಂಡೇಶನ್ ದುಬಾಯಿ ಘಟಕದ ಅಧ್ಯಕ್ಷರಾದ ಶ್ರೀಯುತ ಸರ್ವೋತ್ತಮ ಶೆಟ್ಟರ ಸಭಾಧ್ಯಕ್ಷತೆಯಲ್ಲಿ ನಡೆಯಿತು. ಶ್ರೀಯುತರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಕಾರ್ಯಕ್ರಮದಲ್ಲಿ ಪ್ರಮುಖ ಅಭ್ಯಾಗತರಾಗಿ ಭಾಗವಹಿಸಲಿರುವ, ಪಟ್ಲ ಟ್ರಸ್ಟ್ ನ ಗೌರವಾಧ್ಯಕ್ಷರಾದ ಸದಾಶಿವ ಶೆಟ್ಟಿ…
ಮುಂಬೈ ವಿವಿ ಕನ್ನಡ ವಿಭಾಗ ಹಾಗೂ ಡಾ ವಿಶ್ವನಾಥ್ ಕಾರ್ನಾಡ್ ಪ್ರತಿಷ್ಠಾನ ಮುಂಬೈ: ವಿದ್ಯಾರ್ಥಿ ಸಮ್ಮೇಳನ ಮುಂಬೈ ವಿವಿ ಕನ್ನಡ ವಿಭಾಗಕ್ಕೆ ಒಂದೂವರೆ ದಶಕಗಳಿಂದ ಸುವರ್ಣ ಯುಗ : ಡಾ. ದಿನೇಶ್ ಶೆಟ್ಟಿ ರೆಂಜಾಳ
ಮುಂಬಯಿ, ಮಾ. 18 : ಕಳೆದ ಒಂದೂವರೆ ದಶಕಗಳಿಂದ ಮುಂಬೈ ವಿಶ್ಕವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಸುವರ್ಣ ಯುಗ ಎಂದೇ ಹೇಳಬಹುದು . ಮಹತ್ತರ ಬೃಹತ್ ಪಿಎಚ್ ಡಿ ಗ್ರಂಥಗಳು ಹೊರಬಂದಿರುವುದು ನಮ್ಮ ಕನ್ನಡ ವಿಭಾಗದಲ್ಲಿ ಎನ್ನುವುದು ಹೆಮ್ಮೆಯ ವಿಷಯ. ಇದಕ್ಕೆಲ್ಲ ಮುಖ್ಯ ಕಾರಣ ಕನ್ನಡವನ್ನೇ ಉಸಿರಾಗಿಸಿಕೊಂಡ ಮುಖ್ಯಸ್ಥರ ಸಾರಥ್ಯ. ತನ್ನ ಜೀವನವನ್ನೇ ವರ್ಷದ 365 ದಿನಗಳ ಕಾಲ ತನ್ನ ಉಸಿರಿನಲ್ಲಿ ಬೆರೆತು ಹೋಗಿರುವ ಕನ್ನಡ ವಿಭಾಗಕ್ಕಾಗಿ, ಕನ್ನಡಕ್ಕಾಗಿ ,ಕನ್ನಡದ ವಿದ್ಯಾರ್ಥಿಗಳ ಸೇವೆಗಾಗಿ ಮುಡಿಪಾಗಿಟ್ಟಿದ್ದು ಇದಕ್ಕೆ ಪ್ರಸಿದ್ಧ ಸಾಹಿತಿಗಳಾದ ಡಾ ಎಸ್ ಎಲ್ ಭೈರಪ್ಪನವರು , ಡಾ.ಕಂಬಾರರು, ಪ್ರೊ.ಹಂಪನಾ, ಡಾ.ಕಮಲಾ ಹಂಪನಾ, ಡಾ.ವಿವೇಕ್ ರೈ ಮೊದಲಾದ ಸಾಹಿತ್ಯ ದಿಗ್ಗಜರು ವಿಭಾಗದ ಬಗ್ಗೆ ವ್ಯಕ್ತಪಡಿಸಿದ ಅಭಿನಂದನೀಯ ನುಡಿಗಳೇ ಸಾಕ್ಷಿಯಾಗಿವೆ. ತಾನು ಬೆಳೆದು ತನ್ನ ವಿದ್ಯಾರ್ಥಿಗಳನ್ನು ಬೆಳೆಸುವವರು ನಿಜವಾದ ಗುರುಗಳು. ಈ ಸಾಲಿನಲ್ಲಿ ಡಾ. ಜಿ .ಎನ್. ಉಪಾಧ್ಯ ಅವರು ನಿಲ್ಲುತ್ತಾರೆ. ಮುಂಬೈ ವಿವಿ ಕನ್ನಡ ವಿಭಾಗದಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ …
ದೈವ, ದೇವರ ಬಗ್ಗೆ ನಂಬಿಕೆ ಇದ್ದರೆ ಧರ್ಮ ಉಳಿಯುತ್ತದೆ. ಬದುಕು ಉತ್ತಮವಾಗಿ ನಡೆಯಲು ದೈವ, ದೇವರ ಬಗ್ಗೆ ನಂಬಿಕೆ ಮುಖ್ಯ ಎಂದು ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರಕ್ಕೆ 150 ವರ್ಷ ಪ್ರಯುಕ್ತ ಮಾ. 7ರ ವರೆಗೆ ನಡೆಯಲಿರುವ “ಕಂಕನಾಡಿ ಗರಡಿ 150-ನಮ್ಮೂರ ಸಂಭ್ರಮ’ ಸೋಮವಾರದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ತನ್ನ ಬದುಕಿನ ಉದ್ಧಾರದಂತೆಯೇ ಇನ್ನೊಬ್ಬರ ಬದುಕಿನ ಬಗ್ಗೆಯೂ ಕಾಳಜಿ ಹೊಂದುವುದು ಧರ್ಮ. ನಮ್ಮ ಬದುಕಿನ ನಿಯಂತ್ರಣಕ್ಕೆ ಧರ್ಮದ ಅಗತ್ಯವಿದೆ. ಧರ್ಮದ ಹಿಂದೆ ದೈವ, ದೇವರ ಬಗ್ಗೆ ನಂಬಿಕೆ ಇರಬೇಕು ಎಂದರು. ದೀಪ ಪ್ರಜ್ವಲನೆಗೈದ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ. ಶೆಟ್ಟಿ ಮಾತನಾಡಿ, ಕಂಕನಾಡ ಗರಡಿ ಕಾರಣಿಕ, ಪ್ರಸಿದ್ಧ ಕ್ಷೇತ್ರವಾಗಿದೆ. 150 ವರ್ಷಗಳ ಸಮಾರಂಭ ವಿಜೃಂಭಣೆಯಿಂದ ನಡೆಯುತ್ತಿದೆ ಎಂದರು. ಬಹುಭಾಷಾ ಚಲನಚಿತ್ರ ನಟ ಸುಮನ್ ತಲ್ವಾರ್ ಮಾತನಾಡಿ, ದೇವರು, ದೈವದ ಶಕ್ತಿ ಇಲ್ಲದೆ ಸಾಧನೆ ಸಾಧ್ಯವಿಲ್ಲ.…
ಕನ್ನಡ ಸಾಹಿತ್ಯಕ್ಕೆ ನಾನು ಬಂದಿದ್ದು ಆಕಸ್ಮಿಕ. ಬಿಎಸ್ಸಿ ವಿದ್ಯಾರ್ಥಿಯಾಗಿದ್ದ ನನಗೆ ಎಂಎಸ್ಸಿ ಮಾಡಬೇಕು ಎಂಬ ಆಸೆಯಿತ್ತು. ಆದರೆ ಸೀಟು ಸಿಗಲಿಲ್ಲ. ಹಾಗಾಗಿ ಐಚ್ಛಿಕ ಕನ್ನಡ ತೆಗೆದುಕೊಂಡು ಎಂಎ ಪದವಿ ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡೆ ಎಂದು ಹಿರಿಯ ಜಾನಪದ ವಿದ್ವಾಂಸ ಡಾ| ಬಿ.ಎ.ವಿವೇಕ ರೈ ಹೇಳಿದರು.ಬಿಎಂಶ್ರೀ ಪ್ರತಿಷ್ಠಾನ ಎನ್ಆರ್ ಕಾಲನಿಯ ಎಂವಿಸಿ ಸಭಾಂಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಶ್ರೀ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ಹಿರಿಯ ವಿದ್ವಾಂಸ ಹಂಪ ನಾಗರಾಜಯ್ಯ ಮಾತನಾಡಿ, ವಿವೇಕ ರೈ ಅವರು ಜರ್ಮನಿಯಲ್ಲಿ ಕೂಡ ಕನ್ನಡ ಸಾಹಿತ್ಯದ ಬಿತ್ತನೆ ಮಾಡಿದ್ದಾರೆ. ಹೀಗಾಗಿ ಮುಂದಿನ 500 ವರ್ಷಗಳಲ್ಲಿ ಕನ್ನಡ ಸಾಹಿತ್ಯದ ವೈಶಿಷ್ಟ ಏನು ಎಂಬುದು ತಿಳಿಯಲಿದೆ ಎಂದರು. ಶಾ ಬಾಲುರಾವ್ ನೆನಪುಗಳು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ| ಬೈರಮಂಗಲ ರಾಮೇಗೌಡ, ನಿಕಟಪೂರ್ವ ಅಧ್ಯಕ್ಷ ಡಾ| ಆರ್.ಲಕ್ಷ್ಮಿನಾರಾಯಣ, ಗೌರವಾಧ್ಯಕ್ಷ ಡಾ| ಪಿ.ವಿ.ನಾರಾಯಣ, ಕಮಲಿನಿ ಬಾಲುರಾವ್ ಮತ್ತಿತರರು ಉಪಸ್ಥಿತರಿದ್ದರು.
ಸಮಸ್ತ ಭಕ್ತರನ್ನ ಸಲಹುವ ಶಕ್ತಿ ದೇವತೆ, ಜಗನ್ಮಾತೆ ಸಿರಸಿ ಮಾರಿಕಾಂಬ ದೇವಿ….!” ಹಸಿರು ಹೊತ್ತ ಮಲೆನಾಡಿನ ಮಧ್ಯೆ ನೆಲೆ ನಿಂತ ಜಗನ್ಮಾತೆ ಸಿರಸಿ -“ಮಾರಿಕಾಂಬ ದೇವಿಯ ದೇಗುಲ….! – ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ.(ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) santhoshmolahalli@gmail.com ಭಾರತ ದೇಶ ಸಾಂಸ್ಕೃತಿಕ ಕಲೆ ಆಚಾರ ವಿಚಾರಗಳ ಪರಂಪರೆಯ ದೇಶ ಇಲ್ಲಿ ಎಲ್ಲ ರಾಜ್ಯಗಳು ತಮ್ಮದೆ ಆದ ಸಂಸ್ಕೃತಿ ಹೊಂದಿವೆ ಅದರಲ್ಲೂ ಕರ್ನಾಟಕ ಸಾಂಸ್ಕೃತಿಕ ರಾಯಬಾರಿ ಎಂದರೆ ತಪ್ಪಾಗಲಾರದು ಕರ್ನಾಟಕವನ್ನು ಒಂದು ರಾಜ್ಯ ಹಲವು ಜಗತ್ತು ಅಂತ ಹೇಳುತ್ತಾರೆ ಕಾರಣ ಈ ನಾಡಿನ ಪ್ರತಿಯೊಂದು ಜಿಲ್ಲೆಯು ತನ್ನದೆ ಆದ ಪರಂಪರೆಯ ಸಂಸ್ಕೃತಿ ಹೊಂದಿದೆ ವಿಶಾಲ ಕರ್ನಾಟಕದಲ್ಲಿ ಸಿರ್ಸಿ ಕೂಡಾ ಒಂದು ಶ್ರೀಮಂತ ಸಂಸ್ಕೃತಿಯ ಊರು. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ಘಟ್ಟದ ಮೆಲಿನ ಒಂದು ಸುಂದರ ನಗರ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇರುವುದರಿಂದ ಇದು ತನ್ನ ಸುತ್ತಲೂ ಅದೆಷ್ಟೋ ಜಲಪಾತಗಳಿಂದ ಸುತ್ತಲ್ಪಟ್ಟಿದೆ. ನಗರದ ಮದ್ಯದಲ್ಲಿ…
ಶ್ರೀ ಕೃಷ್ಣನಗರಿ ಉಡುಪಿಯ ರಥಬಿದಿಯಲ್ಲಿ ತಿಂಗಳ ಹಿಂದೆ ಸಾಗುತ್ತಾ ಇದ್ದೆ. ತಾಳೆ ಹಣ್ಣು ತುಂಬಿದ ಕೈಗಾಡಿಯೆದುರು ಹಿರಿಯ ಕಿರಿಯರು ತಾಳೆ ಸೊಳೆ ತಿನ್ನುವುದಕ್ಕೆ ಸೇರಿದ್ದರು. ಆರೋಗ್ಯದಾಯಕ ನೈಸರ್ಗಿಕ ಆಹಾರದ ಮಹತ್ವಕ್ಕೆ ಕೊಡಬೇಕಾದ ಕಾಲ ಘಟ್ಟವಿದು. ದೇಹದಲ್ಲಿ ರೋಗ ನೀರೊಧಕ ಶಕ್ತಿ ಹೆಚ್ಚಿಸಿಕೊಳ್ಳವುದರ ಮಹತ್ವದ ಅರಿವು ಇಂದು ಜನಸಾಮಾನ್ಯರಿಗೆ ಆಗಿದ್ದು, ತಾಳೆಹಣ್ಣು ತಿನ್ನುವುದರಲ್ಲಿ ಮುಗಿಬಿದ್ದರೊ ಎನಿಸಿತು. ಸರಿ ನಾನು ಹೋಗಿ ತಿಂದೆ. ಬಿಸಿಲ ಬೇಗೆಯಿಂದ ಧಣಿವಾರಿಸಿಕೊಳ್ಳಲು ಜನ ತಂಪು ಪದಾರ್ಥಗಳನ್ನೇ ಬಯಸುತ್ತಿದ್ದು ಅದರಲ್ಲಿ ಆರೋಗ್ಯಕ್ಕೆ ಹಿತಕರ ತಾಟಿನಿಂಗು ಪ್ರಮುಖ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಎಪ್ರಿಲ್ ಆರಂಭದಲ್ಲಿ ಕೊಯ್ಲಿಗೆ ಬಂದರೆ ಜೂನ್ ಜುಲೈವರೆಗೂ ಲಭ್ಯವಿರುತ್ತದೆ. ಸಾಕಷ್ಟು ಔಷಧೀಯ ಗುಣಗಳ ಪೋಷಕಾಂಶಗಳ ಆಗರವಾಗಿದ್ದು ದೇಹಕ್ಕೆ ಚೈತನ್ಯ ನೀಡುತ್ತದೆ. ಮಾರುಕಟ್ಟೆಯಲ್ಲಿ ಅಷ್ಟೊಂದು ಬೇಡಿಕೆ ಇಲ್ಲದೆ ಇದ್ದ ಈ ಹಣ್ಣು ಇತ್ತೀಚೆಗೆ ಕೆಲ ವರ್ಷಗಳಿಂದ ಜನ ಮುಂಚಿತವಾಗಿ ನಿಗದಿಗೊಳಿಸಿ ತರಿಸಿಕೊಂಡು ತಿನ್ನುತ್ತಾರೆ. ದಾಹ ತಣಿಸುವ ತಾಟಿಹಣ್ಣು ಬೇಸಿಗೆಯಲ್ಲಿ ಮಾತ್ರವಲ್ಲ ವರ್ಷದ 12 ತಿಂಗಳಲ್ಲಿ ಬೇಡಿಕೆ ಇದ್ದು ಕೇವಲ ನೀರಡಿಕೆ ಇಂಗಿಸುವುದಕ್ಕಷ್ಟೆ…
ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವವು ಏಪ್ರಿಲ್ 14ರಿಂದ 21ರ ವರೆಗೆ ನಡೆಯಲಿದೆ. ಏಪ್ರಿಲ್ 13 ರಂದು ರಾತ್ರಿ ದೊಡ್ಡ ರಂಗಪೂಜೆ, ಅಂಕುರಾರೋಪಣ ಎ.14ರಂದು ಹಗಲು ಧ್ವಜಾರೋಹಣ ರಾತ್ರಿ ಉತ್ಸವ ಬಲಿ, ಎ.15ರಂದು ಪ್ರಾತಃ ಯುಗಾದಿ ದೀಪದ ಬಲಿ, ರಾತ್ರಿ ಉತ್ಸವ ಬಲಿ, ಪಂಚಾಂಗ ಪಠಣ, ಎ.16ರ ರಾತ್ರಿ ಉತ್ಸವ ಬಲಿ, ಮೂಡುಸವಾರಿ, ಎ. 17ರಂದು ಪ್ರಾತಃ ದೀಪದ ಬಲಿ, ರಾತ್ರಿ ಉತ್ಸವ ಬಲಿ, ಎ.18ರಂದು ಹಗಲು ಭ್ರಾಮರೀವನದಲ್ಲಿ ಪ್ರತಿಷ್ಠಾ ವರ್ಧಂತಿ, ರಾತ್ರಿ ಬೆಳ್ಳಿ ರಥೋತ್ಸವ ಉತ್ಸವ ಬಲಿ, ಎ. 19 ರಂದು ಹಗಲು ಬ್ರಹ್ಮಸನ್ನಿದಿಯಲ್ಲಿ ಪರ್ವ ರಾತ್ರಿ ಉತ್ಸವ ಬಲಿ, ಪಡುಸವಾರಿ, ಎ. 20ರಂದು ಹಗಲು ಬ್ರಹ್ಮರಥೋತ್ಸವ ರಾತ್ರಿ ಉತ್ಸವ ಬಲಿ, ಶ್ರೀ ಭೂತಬಲಿ, ಶಯನ, ಎ. 21ರಂದು ಪ್ರಾತಃ ಕವಾಟೋದ್ಘಾಟನೆ ರಾತ್ರಿ ಅವಭೃಥ (ಆರಾಟ) ನಡೆಯಲಿದೆ.
ಮುಂಬಯಿ ವಿಶ್ವವಿದ್ಯಾನಿಲಯ, ಕನ್ನಡ ವಿಭಾಗದ ಎಂ. ಎ. ದ್ವಿತೀಯ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಸವಿತಾ ಅರುಣ್ ಶೆಟ್ಟಿ ಅವರು ‘ವ್ಯಾಸರಾಯ ಬಲ್ಲಾಳ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ’ಕ್ಕೆ ಆಯ್ಕೆಯಾಗಿದ್ದಾರೆ. ಹೊರನಾಡಾದ ಮುಂಬೈಯಲ್ಲಿ ನೆಲೆಸಿ ಐದು ದಶಕಗಳಿಗಿಂತಲೂ ಹೆಚ್ಚು ಕಾಲ ಕನ್ನಡ ಸಾಹಿತ್ಯವನ್ನು ವಿಭಿನ್ನ ನೆಲೆಗಳಲ್ಲಿ ಬಲಗೊಳಿಸಿದ ಸಾಹಿತಿ ವ್ಯಾಸರಾಯ ಬಲ್ಲಾಳ ಅವರ ಶತಮಾನೋತ್ಸವದ ನೆನಪಿಗೆ ಮುಂಬೈ ವಿಶ್ಕವಿದ್ಯಾನಿಲಯದ ವಿದ್ಯಾರ್ಥಿಯೊಬ್ಬರಿಗೆ ಅತ್ಯುತ್ತಮ ವಿದ್ಯಾರ್ಥಿ ಪುರಸ್ಕಾರ ನೀಡುವ ನಿರ್ಧಾರಕ್ಕೆ ಬರಲಾಗಿದ್ದು, ಈ ಚೊಚ್ಚಲ ಪುರಸ್ಕಾರಕ್ಕೆ ಸವಿತಾ ಅರುಣ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪುರಸ್ಕಾರವು ನಗದು ಬಹುಮಾನ, ಕೃತಿ ಕರಂಡಕ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಸವಿತಾ ಅರುಣ್ ಶೆಟ್ಟಿ ಅವರು ಈಗಾಗಲೇ ‘ಮಿತ್ರಾ ವೆಂಕಟ್ರಾಜ್ – ಬದುಕು ಬರಹ’ ಎಂಬ ಸಂಪ್ರಬಂಧವನ್ನು ರಚಿಸಿ ವಿಶ್ವ ವಿದ್ಯಾಲಯಕ್ಕೆ ಸಾದರಪಡಿಸಿದ್ದಾರೆ. ಇದೀಗ ” ಮುಂಬೈ ಕನ್ನಡ ಲೋಕದ ಅವಲೋಕನ ” ಎಂಬ ಶೋಧ ಸಂಪ್ರಬಂಧದ ರಚನೆಯಲ್ಲಿ ನಿರತರಾಗಿದ್ದಾರೆ. ಸವಿತಾ ಅರುಣ್ ಶೆಟ್ಟಿ ಅವರು ಉತ್ತಮ ಸಾಹಿತ್ಯಾಸಕ್ತರಾಗಿದ್ದು, ಅವರು…