ಕತಾರ್ ಕರ್ನಾಟಕ ಸಂಘದ ಸ್ಥಾಪಕ ಅಧ್ಯಕ್ಷರಾದ ಡಾ| ಮೂಡಂಬೈಲು ರವಿ ಶೆಟ್ಟಿಯವರು ತನ್ನ ಧರ್ಮಪತ್ನಿ ಜ್ಯೋತಿ ಆರ್ ಶೆಟ್ಟಿಯವರೊಂದಿಗೆ ಆಗಮಿಸಿ ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರನ್ನು ಶಾಲು ಹೊದಿಸಿ, ಹೂ ಗಿಡವನ್ನು ಕೊಟ್ಟು ಗೌರವಿಸಿ, ನಿಮ್ಮ ಕಾರ್ಯಾವಧಿಯಲ್ಲಿ ಸಂಸ್ಥೆಯು ಅಭೂತಪೂರ್ವ ಯಶಸ್ಸು ಹೊಂದಲಿ ಎಂದು ಶುಭ ಹಾರೈಸಿದರು.

25 ವರ್ಷ ಪೂರೈಸಿರುವ ಕತಾರ್ ಕರ್ನಾಟಕ ಸಂಘದ ಸ್ಥಾಪಕ ಅಧ್ಯಕ್ಷರಾಗಿರುವ ಉದ್ಯಮಿ, ಸಮಾಜಸೇವಕ ಡಾ| ರವಿ ಶೆಟ್ಟಿಯವರು ಹಲವಾರು ಸಂಘ ಸಂಸ್ಥೆಗಳ ಮಹಾಪೋಷಕರಾಗಿದ್ದಾರೆ. ಈ ಸಂಧರ್ಭ ಡಿ.ಕೆ ಶೆಟ್ಟಿಯವರ ಧರ್ಮಪತ್ನಿ ಹೇಮಲತಾ ಶೆಟ್ಟಿಯವರು ಉಪಸ್ಥಿತರಿದ್ದರು.