Author: admin

ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸುತ್ತಿರುವ ವಾರ್ಷಿಕ ವಂದನಾ ಪ್ರಶಸ್ತಿ 2025 ಕ್ಕೆ ಉದ್ಯಮಿ ಡಾ| ಕೆ. ಪ್ರಕಾಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಡಾ| ಕೆ. ಪ್ರಕಾಶ್ ಶೆಟ್ಟಿ ಅವರು ಹೋಟೆಲ್ ಉದ್ಯಮದಲ್ಲಿ ಸಲ್ಲಿಸಿದ ಸುದೀರ್ಘ ಅನುಪಮ ಸೇವೆ ಹಾಗೂ ಅಮೂಲ್ಯ ಕೊಡುಗೆ ಮತ್ತು ಗಣನೀಯ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಾರ್ಚ್ 28ರಂದು ರಾತ್ರಿ 8:00 ಗಂಟೆಗೆ ನಗರದ ಹೋಟೆಲ್ ಮೋತಿ ಮಹಲ್ ಸಭಾಂಗಣದಲ್ಲಿ ಜರಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಸಭಾಪತಿ ಡಾ. ದೇವದಾಸ್ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಪ್ರಶಸ್ತಿ ಪ್ರಧಾನ ಮಾಡುವರು. ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಬ್ರಿಯಾನ್ ಪಿಂಟೋ ಅಧ್ಯಕ್ಷತೆ ವಹಿಸುವರು. ರೋಟರಿ ಜಿಲ್ಲಾ 3181ರ…

Read More

ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಇನ್ನಾ ಗ್ರಾಮದ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಂದಿನ ಮೂರು ವರ್ಷಗಳ ಅವಧಿಗೆ 2025 – 28 ನೂತನ ಅಧ್ಯಕ್ಷರಾಗಿ ದಿವಾಕರ್ ಆರ್. ಶೆಟ್ಟಿ ಕಾಚೂರ ಪರಾಡಿ ಅವರು ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಿಗೆ ದೇವಳದ ಸಂಪೂರ್ಣ ಪ್ರಭಾರವನ್ನು ಹಸ್ತಾಂತರಿಸುವಂತೆ ಆಡಳಿತಾಧಿಕಾರಿಯವರಿಗೆ ಉಡುಪಿ ಜಿಲ್ಲಾ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಸಹಾಯಕ ಆಯುಕ್ತೆ ಟಿ. ಎನ್. ಮಂಜುಳಾ ತಿಳಿಸಿದ್ದಾರೆ. ಸಮಿತಿಯ ಸದಸ್ಯರಾಗಿ ಜಯ ಎಸ್. ಕೋಟ್ಯಾನ್ ಬೈಲುಮನೆ, ಹರೀಶ್ ಶೆಟ್ಟಿ ದಡ್ಡು ಮನೆ, ವಿಮಲಾ ರವಿ ಮಡ್ಮಣ್, ಸುಜಾತ ಗಿರಿಯಪ್ಪ ಪೂಜಾರಿ, ಮಂಜುಳಾ ಕುಶ ಮೂಲ್ಯ, ಗಣೇಶ್ ಆಚಾರ್ಯ, ಮಹೇಶ್ ಪುತ್ರನ್ ಇರ್ಮಾಡಿ ಆಯ್ಕೆಯಾಗಿದ್ದಾರೆ.

Read More

ವಂಜಾರ ಕಟ್ಟೆ ಆಂಗ್ಲ ಮಾಧ್ಯಮ ಶಾಲೆಯ ಹೊಸ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಮಾರ್ಚ್ 27 ಬೆಳಿಗ್ಗೆ 9:30ಕ್ಕೆ ನಡೆಯಿತು. ವೈದಿಕ ವೃಂದದವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ವಂಜಾರಕಟ್ಟೆ ಆಂಗ್ಲ ಮಾಧ್ಯಮ ಶಾಲೆ ಕೇವಲ ಒಂದು ಕಟ್ಟಡವಲ್ಲ, ಇದು ಗ್ರಾಮೀಣ ಭಾಗದ ಅನೇಕ ಮಕ್ಕಳ ಕನಸುಗಳನ್ನು ನನಸಾಗಿಸುವ ಜ್ಞಾನ ಮಂದಿರ, ಭವಿಷ್ಯದ ಪೀಳಿಗೆಗಳಿಗೆ ಗುರಿಯನ್ನು ರೂಪಿಸುವ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಸಾಂಸ್ಕೃತಿಕವಾಗಿ, ಅಕ್ಷರ ದೀಪ ಬೆಳಗಿಸುವ ದೇಗುಲ. ಈ ನಿಟ್ಟಿನಲ್ಲಿ ಎಲ್ಲರ ಪ್ರೇರಣೆ ಜೊತೆಗೆ, ಸ್ಪೂರ್ತಿಯ ಬೆಂಬಲದ ಅಗತ್ಯವಿದೆ ಎಂದು ಶಾಲಾ ಸಂಚಾಲಕರಾದ ಅಕ್ಷಯ ಅಡ್ಯಂತಾಯ ತಿಳಿಸಿದರು.ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥ ಅಶೋಕ ಅಡ್ಯಂತಾಯ, ರಶ್ಮಿತಾ ಅಡ್ಯಂತಾಯ, ಕರುಣಾಕರ ಶೆಟ್ಟಿ, ಲೇಖಾ ಪಕ್ಕಲ, ಸೋಮಶೇಖರ್ ಶೆಟ್ಟಿ, ಪ್ರೋ ಪದ್ಮನಾಭ ಗೌಡ, ಕಾರ್ತಿಕ ಆಳ್ವ, ವಂಜಾರ ಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಜಗದೀಶ್ ಆಚಾರ್, ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಪ್ರಕಾಶ್, ಹಳೆ ವಿದ್ಯಾರ್ಥಿ ಸಂಘದ…

Read More

ತೆಂಕನಿಡಿಯೂರು ಗ್ರಾಮದ ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಹಸ್ತಾಂತರ ಕಾರ್ಯಕ್ರಮವು ಇತ್ತೀಚಿಗೆ ನಡೆಯಿತು. ಗ್ರಾಮ ಆಡಳಿತಾಧಿಕಾರಿ ಶ್ರೀಮತಿ ಪವಿತ್ರ ಅವರು ಅಧಿಕಾರ ಹಸ್ತಾಂತರಿಸಿದರು. ಈ ನೂತನ ವ್ಯವಸ್ಥಾಪನಾ ಸಮಿತಿಯಲ್ಲಿ ಅಧ್ಯಕ್ಷರಾಗಿ ಪ್ರಖ್ಯಾತ್ ಶೆಟ್ಟಿ, ಪ್ರಧಾನ ಅರ್ಚಕರಾಗಿ ಗೋಪಾಲಕೃಷ್ಣ ಭಟ್, ಸದಸ್ಯರಾಗಿ ಭೋಜ ಶೆಟ್ಟಿ, ವೆಂಕಟೇಶ್ ಕುಲಾಲ್, ಪ್ರಭಾಕರ್ ಅಂಚನ್, ಸತೀಶ್, ಶ್ರೀಮತಿ ಮಮತಾ ಶೆಟ್ಟಿ ಹಾಗೂ ಶ್ರೀಮತಿ ಅನುಷಾ ಅವರು ಅಧಿಕಾರ ಸ್ವೀಕರಿಸಿದರು. ಈ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರು, ಉಪ್ಪೂರು ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಸುವರ್ಣ, ತೆಂಕನಿಡಿಯೂರು ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಶ್ರೀಮತಿ ಶೋಭಾ ನಾಯ್ಕ್, ತೆಂಕನಿಡಿಯೂರು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಥ್ವಿರಾಜ್ ಶೆಟ್ಟಿ, ಸತೀಶ್ ನಾಯಕ್, ಸುರೇಶ್ ನಾಯಕ್, ಶರತ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಉದಯ್, ಉಮೇಶ್ ಪೂಜಾರಿ, ಉಡುಪಿ…

Read More

ದಾವಣಗೆರೆ ಚಿತ್ರದುರ್ಗ ಜಿಲ್ಲಾ ಬಂಟರ ಸಂಘದ ವಾರ್ಷಿಕ ಮಹಾ ಸಭೆಯು ಸಂಘದ ಅಧ್ಯಕ್ಷರಾದ ಡಾ. ಎಂ. ಪ್ರಭಾಕರ ಶೆಟ್ಟಿಯವರ ಅದ್ಯಕ್ಷತೆಯಲ್ಲಿ ಇತ್ತೀಚಿಗೆ ದಾವಣಗೆರೆಯ ಕುಂದುವಾಡ ರಸ್ತೆಯಲ್ಲಿರುವ ಡಾ. ಶಾಮಸುಂದರ್ ಶೆಟ್ಟಿ ಬಂಟರ ಭವನದಲ್ಲಿ ಜರುಗಿತು. 2025-28 ರ ಸಾಲಿನ ಸಂಘದ ನೂತನ ಅಧ್ಯಕ್ಷರಾಗಿ ದಾವಣಗೆರೆಯ ಜೆ.ಜೆ.ಎಂ ಮೆಡಿಕಲ್ ಕಾಲೇಜಿನ ನೇತ್ರ ಚಿಕಿತ್ಸೆ ವಿಭಾಗದ ನಿವೃತ್ತ ಮುಖ್ಯಸ್ಥರೂ, ದಾವಣಗೆರೆಯ ಹೆಸರಾಂತ ನೇತ್ರ ವೈದ್ಯರೂ ಆದ ಡಾ. ಎಸ್ ಸುರೇಂದ್ರ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಮಲ್ಯಾಡಿ ಪ್ರಭಾಕರ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ ಚಿತ್ರದುರ್ಗ, ಡಾ. ನಿತಿನ್ ರಾಜ್ ಶೆಟ್ಟಿ ಹರಿಹರ, ಸಿಎ ಉಮೇಶ್ ಶೆಟ್ಟಿ ಹಾಗೂ ಕಿಶನ್ ಚಂದ್ರ ಶೆಟ್ಟಿ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಗಳಾಗಿ ಮಲ್ಯಾಡಿ ಮಹೇಶ್ ಶೆಟ್ಟಿ, ಖಜಾಂಜಿಗಳಾಗಿ ಸಿಎ. ಕಿರಣ್ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

Read More

ಒಂದೂರಿನಲ್ಲಿ ಯುವ ಭಿಕ್ಷುಕನೊಬ್ಬ ಪಾಳು ಬಿದ್ದ ಗೋಡೆಯೊಂದರ ಬಳಿ ವಾಸಿಸುತ್ತಿದ್ದ. ಅಲ್ಲಿ ಇಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ. ಸ್ವಲ್ಪ ದಿನಗಳಿಂದ ಅವನು ಬೇಡಿ ತಂದ ಭಿಕ್ಷಾನ್ನವೆಲ್ಲಾ, ಅವನು ತಂದಿಟ್ಟ ಸ್ವಲ್ಪ ಹೊತ್ತಿನಲ್ಲಿ ಮಾಯವಾಗುತಿತ್ತು. ಇದು ಯಾವುದೋ ಇಲಿ ಮಾಡುತ್ತಿರುವ ಕೆಲಸವೆಂದು ಕಂಡುಹಿಡಿಯಲು ಅವನಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಒಂದು ದಿನ ಭಿಕ್ಷೆಯನ್ನು ತಂದಿಟ್ಟು ನೋಡೋಣವೆಂದು ಕಾಯುತ್ತಿದ್ದಾಗ ಅಲ್ಲಿಗೆ ಇಲಿಯೊಂದು ಬಂದಿತು. ಆಗ ಅವನು ನನ್ನ ಆಹಾರವನ್ನೇ ಏಕೆ ಕದಿಯುತ್ತಿರುವೆ? ಪಟ್ಟಣದಲ್ಲಿ ಎಷ್ಟೊಂದು ಜನ ಶ್ರೀಮಂತರಿದ್ದಾರೆ. ಅವರ ಮನೆಗಳಿಗೆ ಹೋದರೆ ನಿನಗೆ ಸಮೃದ್ಧವಾದ ಮೃಷ್ಟಾನ್ನ ಭೋಜನ ಸಿಗುವುದಿಲ್ಲವೇ? ಎಂದು ಇಲಿಯನ್ನು ಕೇಳಿದ. ಇದು ನಿನ್ನ ಹಣೆಬರಹ! ನಿನ್ನದು ಎಂಬುದನ್ನು ನೀನು ಎಂದೂ ಹೊಂದಲಾರೆ ಎಂದು ಹೇಳಿತು ಇಲಿ. ಯಾಕೆ ಹೀಗೆ ಹೇಳುವೆ, ಎಂದು ಭಿಕಾರಿ ಪ್ರಶ್ನಿಸಿದ. ಅದು ನನಗೆ ತಿಳಿಯದು, ಬೇಕಾದರೆ ಬುದ್ಧನ ಬಳಿ ಕೇಳು ಎಂದಿತು ಇಲಿ. ಮರುದಿನವೇ ಯುವ ಭಿಕ್ಷುಕ ಬುದ್ಧನನ್ನು ಹುಡುಕಿಕೊಂಡು ಹೊರಟ. ಕಾಡು ಮೇಡುಗಳನ್ನು ದಾಟಿ…

Read More

ಸುರತ್ಕಲ್ ಬಾಳಿಕೆ ಕೋರ್ದಬ್ಬು ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಪ್ರವೀಣ್ ಪಿ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಸುರತ್ಕಲ್ ಬಂಟರ ಸಂಘದ ನಿರ್ದೇಶಕರಾಗಿರುವ ಪ್ರವೀಣ್ ಶೆಟ್ಟಿಯವರು ಸಂಘಟನಾತ್ಮಕ ಕೆಲಸ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಶ್ರೀಯುತರು ಬಿ.ಎಸ್.ಎಫ್ ಉದ್ಯೋಗಿಯಾಗಿದ್ದಾರೆ.

Read More

ಮೂಡುಬಿದಿರೆ: ಖಾಸಗಿ ಚಿಂತನೆಯಿಂದಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆಯಾಗುತ್ತಿದೆ ಎಂದು ಕುಷ್ಮಾದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅಭಿಪ್ರಾಯಪಟ್ಟರು. ಆಳ್ವಾಸ್‌ನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ವತಿಯಿಂದ ಕುಪ್ಮಾ ಜಿಲ್ಲಾವಾರು ಸಮಿತಿಯ ಸಂಯೋಜಕರಿಗೆ ಆಯೋಜಿಸಿದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಶೇಕಡಾ 50ರಷ್ಟು ಮಕ್ಕಳು ಖಾಸಗಿ ವ್ಯವಸ್ಥೆಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಸರಕಾರಿ ಸಂಸ್ಥೆಗಳಿಗೆ ಹೋಲಿಸಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಫಲಿತಾಂಶ ಉತ್ತಮವಾಗಿದೆ. ಕಳೆದ ಬಾರಿಯ ಬೋರ್ಡ್ ಪರೀಕ್ಷೆಯಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳು 75 ಶೇಕಡಾ ಫಲಿತಾಂಶ ದಾಖಲಿಸಿದರೆ, ಅನುದಾನಿತ ಸಂಸ್ಥೆಗಳಲ್ಲಿ 79 ಶೇಕಡಾ ಫಲಿತಾಂಶ ಲಭಿಸಿದರೆ ಹಾಗೂ ಖಾಸಗಿ ಸಂಸ್ಥೆಗಳು 90.46 ಶೇಕಡಾ ಫಲಿತಾಂಶ ನೀಡಿವೆ.ಇವುಗಳ ಜೊತೆಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಫಲಿತಾಂಶದಲ್ಲೂ ಖಾಸಗಿ ಸಂಸ್ಥೆಗಳು ಅಗ್ರಗಣ್ಯ ಸ್ಥಾನದಲ್ಲಿ ನಿಂತಿವೆ. ಇದು ರಾಜ್ಯದ ಒಟ್ಟು ಫಲಿತಾಂಶದ ಉನ್ನತಿಗೆ ದೊಡ್ಡ…

Read More

ಮೆಹಬೂಬ್ ನಗರ ಹೋಟೆಲ್ ಉದ್ಯಮಿಗಳಿಂದ ಸಂಘಟನಾ ಚತುರ ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮದ ಅಧ್ಯಕ್ಷರಾದ ಡಾ| ಅಂಪಾರು ನಿತ್ಯಾನಂದ ಶೆಟ್ಟಿಯವರನ್ನು ಹೋಟೆಲ್ ಹಿಮಾಲಯ ಮೆಹಬೂಬ್ ನಗರದಲ್ಲಿ ಹಿರಿಯ ಹೋಟೆಲ್ ಉದ್ಯಮಿಗಳಾದ ಸಳ್ವಾಡಿ ಚಂದ್ರಶೇಖರ್ ಶೆಟ್ಟಿ ಮತ್ತು ಹೊಸೂರು ಚಂದ್ರಶೇಖರ ಶೆಟ್ಟಿ ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಹೋಟೆಲ್ ಉದ್ಯಮಿಗಳಾದ ಪ್ರವೀಣ್ ಶೆಟ್ಟಿ ಗುಡ್ರಿ, ಪ್ರಸಾದ್ ಶೆಟ್ಟಿ ಹಂದಕುಂದ ಮತ್ತು ಗಿರೀಶ್ ಉಪಸ್ಥಿತರಿದ್ದರು.

Read More

ಒಬ್ಬ ವ್ಯಕ್ತಿ, ಆತ ಬೇರೆಯವರನ್ನು ಟೀಕಿಸುತ್ತಾ ದೂಷಿಸುತ್ತಾ ಇರದಿದ್ದರೆ ಅವನಿಗೆ ತಿಂದ ಅನ್ನವೇ ಜೀರ್ಣವಾಗುತ್ತಿರಲಿಲ್ಲ. ಯಾವಾಗಲೂ ಅದೇ ಅವನ ಕೆಲಸ. ಒಂದು ಸಲ ಊರಲ್ಲಿ ಕಳ್ಳತನವಾದಾಗ, ತಾನೇ ಸ್ವತಃ ನೋಡಿದವನ ಹಾಗೆ, ತಮ್ಮ ಪಕ್ಕದ ಮನೆಯ ಯುವಕನೇ ಕಳ್ಳ ಎಂದು ಸುದ್ದಿ ಹಬ್ಬಿಸಿದ. ಆ ಯುವಕನನ್ನು ಕಂಡರೆ ಇವನಿಗೆ ಆಗುತ್ತಿರಲಿಲ್ಲ. ಆ ತರುಣನನ್ನು ಪೊಲೀಸರು ಬಂಧಿಸಿದರು. ವಿಚಾರಣೆಯೆಲ್ಲಾ ನಡೆದು, ಕೆಲವು ದಿನಗಳ ನಂತರ ನಿಜವಾದ ಕಳ್ಳ ಸಿಕ್ಕಿದ ನಂತರ, ಈ ಯುವಕನನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದರು. ಅವಮಾನಿತನಾದ ‌ಈ ಯುವಕ ತನ್ನ ಮೇಲೆ ಸುಳ್ಳು ಆಪಾದನೆ ನೀಡಿದ ತನ್ನ ಪಕ್ಕದ ಮನೆಯ ವ್ಯಕ್ತಿಯ ಮೇಲೆ ಮಾನನಷ್ಠ ಮೊಕದ್ದಮೆಯನ್ನು ಹೂಡಿದ. ನ್ಯಾಯಾಲಯದಲ್ಲಿ ಈ ವ್ಯಕ್ತಿ, ನಾನು ಸುಮ್ಮನೆ ಅವನು ‌ಇದ್ರೂ ಇರಬಹುದು ‌ಎಂದು‌‌ ಅನುಮಾನದಿಂದ ಹೇಳಿದ್ದು, ಅದರಿಂದ ಈಗ ಅವನಿಗೇನೂ ತೊಂದರೆಯಾಗಿಲ್ಲವಲ್ಲ, ಹೇಗೂ ಬಿಡುಗಡೆಯಾದನಲ್ಲ ಎಂದ. ವಿಚಾರಣೆಯೆಲ್ಲಾ ಮುಗಿಯಿತು. ಎಲ್ಲರೂ ಎದ್ದು ಹೋಗುವ ಮುಂಚೆ ನ್ಯಾಯಾಧೀಶರು, ಈ ವ್ಯಕ್ತಿಯನ್ನು ಕರೆದು, ನೀನು…

Read More