ಮೂಡುಬಿದಿರೆ: ಸಿಬಿಎಸ್ಇ ಈ ಬಾರಿಯ ಹತ್ತನೆ ತರಗತಿಯ ಫಲಿತಾಂಶ ಪ್ರಕಟಿಸಿದ್ದು ಸತತ ಐದನೇ ವರ್ಷ ಆಳ್ವಾಸ್ ಶಾಲೆಯು 100% ಫಲಿತಾಂಶ ದಾಖಲಿಸಿದೆ. ಆಳ್ವಾಸ್ ಶಾಲೆಯ 29 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಶಾಲೆಯಿಂದ 95 ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆದವರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಅವರು, ಅಮೋಘ್ ಬಿಲ್ಲೂರ್, ದೀಕ್ಷಾ ಹೆಚ್ ಕೆ (98%), ಹರ್ಷಿತಾ ಎಸ್ ಪಾಟೀಲ್, ಪ್ರಜ್ವಲ್ ಕುಮಾರ್ ಬಿರಾದರ್, ಅದಿತಿ ಭಟ್, ಸಂದೀಪ್, ಶಿವನಂದ (97%), ಮನಸ್ವಿ, ದರ್ಶ ಧಾರ್ಮಿಕ್, ಚೇತನ್ ಎಸ್, ಚಿನ್ಮಯಿ ಎಂ, ನಿಸರ್ಗ ಎಸ್, ಅನ್ವಿತ್ ಆರ್, ಸಮರ್ಥ ಜೋಷಿ, ತುನುಶ್ರೀ ಜಿ ಆರ್, ಪೂನಮ್ ಸಾತಿ, ಅನುಷಾ ರಾಜೇಂದ್ರ (96%), ಕಿರಣ್ ಸಾರ್ವಿ, ಕಾರ್ತಿಕ್ ಎಸ್, ಅಭಿಜ್ಞಾ ರಾವ್, ಅರುಂದತಿ ಪಾಟೀಲ್, ಸಾಧನಾ ಎಸ್, ಪ್ರಶಾಂತ್ ಹಿರೇಮಠ, ಪೂರ್ವಿಕ್ ಗೌಡ, ವಿರೇಶ್, ದೀಪಿಕಾ ಎಸ್, ರೋಶನ್, ಹೇಮಸ್ವಿ ಸಿ, ಅಕುಲ್ ರವಿ (95%) ಅಂಕಗಳನ್ನು ಪಡೆಯುವುದರ ಮೂಲಕ ಸಾಧನೆ ಮೆರೆದಿದ್ದಾರೆ.

114 ವಿದ್ಯಾರ್ಥಿಗಳು 90% ಗಿಂತ ಹೆಚ್ಚು ಅಂಕ ಗಳಿಸಿದ್ದು, 17 ವಿದ್ಯಾರ್ಥಿಗಳು 94%, 18 ವಿದ್ಯಾರ್ಥಿಗಳು 93%, 12 ವಿದ್ಯಾರ್ಥಿಗಳು 92%, 18 ವಿದ್ಯಾರ್ಥಿಗಳು 91%, 20 ವಿದ್ಯಾರ್ಥಿಗಳು 90% ಅಂಕಗಳನ್ನು ಗಳಿಸಿದ್ದಾರೆ. ಸಂಸ್ಕೃತದಲ್ಲಿ 4 ವಿದ್ಯಾರ್ಥಿಗಳು, ಕನ್ನಡದಲ್ಲಿ 3 ವಿದ್ಯಾರ್ಥಿ, ವಿಜ್ಞಾನದಲ್ಲಿ 2 ವಿದ್ಯಾರ್ಥಿ ಶೇಕಡಾ 100 ಅಂಕ ಪಡೆದಿದ್ದಾರೆ. ಬಾಕ್ಸ್ ಐಟಮ್: ಜಗತ್ತಿನಾದ್ಯಂತ 95%ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು 1.92 ಶೇಕಡಾವಾರು ಆದರೆ, ಆಳ್ವಾಸ್ನಲ್ಲಿ 6.68% ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ, ಅಂತೆಯೇ ರಾಷ್ಟçಮಟ್ಟದಲ್ಲಿ 90 ಶೇಕಡಾಕ್ಕಿಂತ ಅಧಿಕ 8.43% ಆದರೆ, ಆಳ್ವಾಸ್ನಲ್ಲಿ 23.25% ವಿದ್ಯಾರ್ಥಿಗಳು ಈ ಸಾಧನೆ ಮೆರೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಸಿ.ಬಿ.ಎಸ್.ಇ ಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್ ಶಫಿ ಶೇಖ್, ಉಪಪ್ರಾಂಶುಪಾಲ ಬಿನೂ ಮ್ಯಾಥ್ಯೂ, ಶೈಕ್ಷಣಿಕ ಸಂಯೋಜಕಿ ಶೈಲಜಾ ರಾವ್, ಆಡಳಿತಾಧಿಕಾರಿ ಪ್ರೀತಂಕುAದರ್ ಉಪಸ್ಥಿತರಿದ್ದರು.