ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ ಒಂದರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಜರಗಲಿರುವ ಆಮಂತ್ರಣ ಪತ್ರಿಕೆಯನ್ನು ದುಬೈನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ಯಕ್ಷಗಾನ ಅಭ್ಯಾಸ ಕೇಂದ್ರ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಯುಎಇಯ ಕನ್ನಡ ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.ಯುಎಇ ಘಟಕದ ಸಂಚಾಲಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕಳೆದ ಒಂಬತ್ತು ವರ್ಷಗಳಿಂದ ಹದಿನೆಂಟು ಕೋಟಿ ರೂಪಾಯಿಗಳಷ್ಟು ಮಿಕ್ಕಿ ಅಶಕ್ತ ಕಲಾವಿದರಿಗೆ ವಿದ್ಯಾಭ್ಯಾಸ, ಆರೋಗ್ಯ, ಮನೆ ನಿರ್ಮಾಣ, ಮನೆ ರಿಪೇರಿ, ಇನ್ಸ್ಯೂರೆನ್ಸ್ ಗಳನ್ನು ನೀಡಿ ಒಳ್ಳೆಯ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಟ್ರಸ್ಟ್ ಹತ್ತು ಕೋಟಿ ರೂಪಾಯಿ ಸಂಗ್ರಹ ಮಾಡುವ ಉತ್ತಮವಾದ ಯೋಜನೆಗೆ ಕೈ ಹಾಕಿದೆ. ಯುಎಇಯಲ್ಲಿ ಇರುವ ಎಲ್ಲರೂ ಈ ಯೋಜನೆಗೆ ಕೈ ಜೋಡಿಸಬೇಕೆಂದು ವಿನಂತಿಸುತ್ತ ಜೂನ್ ಒಂದರಂದು ದಿನಂಪೂರ್ತಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಾವೆಲ್ಲರೂ ಬಾಗವಹಿಸಬೇಕಾಗಿ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಯುಎಇ ಬಂಟ್ಸ್ ಮತ್ತು ಕರ್ನಾಟಕ ಎನ್ ಆರ್ ಐ ವೇದಿಕೆಯ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಬ್ರಾಹ್ಮಣ ಸಮಾಜ ಯುಎಇಯ ಅಧ್ಯಕ್ಷರಾದ ಸುಧಾಕರ ರಾವ್ ಪೇಜಾವರ, ಉದ್ಯಮಿ ಕಲಾಪೋಷಕರಾದ ಶಿವಶಂಕರ್ ನೆಕ್ರಾಜೆ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕರಾದ ಅಧ್ಯಕ್ಷರಾದ ಅಮರ್ ದೀಪ್ ಕಲ್ಲೂರಾಯ, ಕರ್ನಾಟಕ ಜಾನಪದ ಅಕಾಡೆಮಿ ದುಬೈಯ ಅಧ್ಯಕ್ಷರಾದ ಸದನ್ ದಾಸ್, ಕರ್ನಾಟಕ ಸಂಘ ದುಬೈಯ ಮನೋಹರ ಹೆಗ್ಡೆ, ನಾಗರಾಜ ರಾವ್ ಉಡುಪಿ, ಕನ್ನಡಿಗರ ಕನ್ನಡ ಕೂಟ ದುಬೈಯ ಅಧ್ಯಕ್ಷರಾದ ಅರುಣ್ ಕುಮಾರ್, ಉದ್ಯಮಿ ರಶ್ಮಿಕಾಂತ್ ಶೆಟ್ಟಿ, ಕರ್ನಾಟಕ ಸಂಘ ದುಬೈಯ ಗೌರವ ಸಲಹೆಗಾರರಾದ ಜಯಂತ್ ಶೆಟ್ಟಿ, ತೀಯಾ ಸಮಾಜ ಯುಎಇಯ ಅಧ್ಯಕ್ಷೆ ಶ್ರೀಮತಿ ಜೆಸ್ಮೀತಾ ವಿವೇಕ್, ಗಮ್ಮತ್ ಕಲಾವಿದೆರ್ ದುಬೈಯ ನಿರ್ದೆಶಕರಾದ ವಿಶ್ವನಾಥ ಶೆಟ್ಟಿ, ಬಿಲ್ಲವಾಸ್ ದುಬೈಯ ಅಧ್ಯಕ್ಷರಾದ ದೀಪಕ್ ಎಸ್. ಪಿ, ಹಿರಿಯ ಯಕ್ಷಗಾನ ಕಲಾವಿದರಾದ ಪ್ರಭಾಕರ ಸುವರ್ಣ ಕರ್ನಿರೆ, ರಂಗ ಕಲಾವಿದರಾದ ವಾಸು ಶೆಟ್ಟಿ, ಉದ್ಯಮಿ ರಮಾನಂದ ಶೆಟ್ಟಿ, ಜೈನ್ ಮಿಲನ್ ದುಬೈಯ ಸಂದೇಶ್ ಜೈನ್, ಗಾಣಿಗ ಸಮಾಜ ದುಬೈಯ ಸುಪ್ರೀತ್ ಗಾಣಿಗ, ವೀರಶೈವ ಲಿಂಗಾಯಿತ ಸಮಾಜ ದುಬೈಯ ಮಲ್ಲಿಕಾರ್ಜುನ ಗೌಡ, ಹಿರಿಯ ಹಿಮ್ಮೇಳ ವಾದಕರಾದ ವೆಂಕಟೇಶ ಶಾಸ್ತ್ರಿ, ಒಕ್ಕಲಿಗರ ಸಂಘ ಯುಎಇಯ ಅಧ್ಯಕ್ಷರಾದ ಕಿರಣ್ ಗೌಡ, ಚಿತ್ರ ನಿರ್ಮಾಪಕರಾದ ಶೋಧನ್ ಪ್ರಸಾದ್, ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಸುಗಂದರಾಜ್ ಬೇಕಲ್, ಬಿರುವೆರ್ ಕುಡ್ಲ ದುಬೈಯ ಸಂದೀಪ್ ಕೋಟ್ಯಾನ್, ಪೊಲದವರ ಯಾನೆ ಗಟ್ಟಿ ಸಮಾಜ ದುಬೈಯ ಮನೋಜ್ ಬಂಗೆರ, ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜ, ಯಕ್ಷಗಾನ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿ, ಘಟಕದ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾಡೂರು ಗುತ್ತು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಕಾರ್ಯಕ್ರಮವನ್ನು ಕೇಂದ್ರದ ಸದಸ್ಯರಾದ ಗಿರೀಶ್ ನಾರಯಣ್ ನಿರೂಪಿಸಿದರು. ದಿನೇಶ್ ಶೆಟ್ಟಿ ಕೊಟ್ಟಿಂಜ ಸ್ವಾಗತಿಸಿ ದನ್ಯವಾದವಿತ್ತರು.

ಬರಹ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)