Author: admin

ಮನದಲ್ಲಿ ಮಹತ್ವಾಕಾಂಕ್ಷೆ ಇದ್ದರೆ ಸಾಲದು. ಆ ದಿಶೆಯಲ್ಲಿ ಮುನ್ನುಗ್ಗಿ ಅದನ್ನು ತನ್ನದಾಗಿಸುವ ಎಂಟೆದೆಯ ಛಲ ಬೇಕಾಗುತ್ತದೆ. ಅಂಥಹ ಸಾಧನೆಯ ಮೂರ್ತಿ ಎಂಟೆದೆಯ ಬಂಟ ನಮ್ಮ ಸರ್ವೋತ್ತಮ ಶೆಟ್ಟಿ ಅವರು. ಮಟ್ಟಾರು ಪರಾರಿ ಸೂರಪ್ಪ ಹೆಗ್ಡೆ ಹಾಗೂ ಪರೀಕ ಸರಸ್ವತಿ ಹೆಗ್ಡೆ ದಂಪತಿಯರ ಸುಪುತ್ರ ಸರ್ವೋತ್ತಮ ಶೆಟ್ಟರು ಬದುಕು ಕಟ್ಟಿಕೊಂಡ ರೀತಿ ಇತರ ಉದ್ಯಮಶೀಲರಿಗೆ ಮಾದರಿಯಾಗಬಲ್ಲುದು. ಉಡುಪಿ ಜಿಲ್ಲೆಯ ಪರೀಕ ಎಂಬಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಬೆಳೆದು ತನ್ನ ಸಾಧನೆ ಪರಿಶ್ರಮದಿಂದ ಇಂದು ಹುಟ್ಟಿದ ಕುಟುಂಬ ಮಾತ್ರವಲ್ಲ ಬಂಟ ಸಮುದಾಯವನ್ನೇ ಎತ್ತರದ ಬಿತ್ತರಕ್ಕೆ ಮುಟ್ಟಿಸಿದ ಮಹನೀಯರಿವರು. ಪೆರ್ಡೂರು ಮತ್ತು ಹಿರಿಯಡ್ಕಗಳಲ್ಲಿ ತನ್ನ ಪದವಿಪೂರ್ವ ಶಿಕ್ಷಣ ಮುಗಿಸಿ ಮುಂಬಯಿ ನಗರ ಸೇರಿ ಹೊಟೇಲುಗಳಲ್ಲಿ ದುಡಿದು ನಂತರ ಹೊಟೇಲು ನಡೆಸಿಕೊಂಡು ತನ್ನ ಜೀವನ ಯಾಪನೆ ಮಾಡತೊಡಗಿದರು. ನಂತರ ಓರ್ವ ಸೋಲಿಸಿಟರ್ ಕಛೇರಿಯಲ್ಲಿ ದುಡಿಯತೊಡಗಿದರು. ಆದರೆ ವಿದ್ಯಾಭ್ಯಾಸ ಮುಂದುವರಿಸಬೇಕೆಂಬ ಮನದ ಇಚ್ಛೆಯನ್ನು ಪೂರ್ಣಗೊಳಿಸಲು ದುಡಿಯುತ್ತಿದ್ದಂತೆಯೇ ಕಾಲೇಜು ಸೇರಿ ಪದವಿ ಶಿಕ್ಷಣ ಮುಂದುವರಿಸಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ವಾಣಿಜ್ಯ…

Read More

ಭಾರತವಲ್ಲದೇ ಜಗತ್ತಿನ ಇನ್ಯಾವುದೇ ದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ರಾಜ ಪ್ರಭುತ್ವವನ್ನು ವಿರೋಧಿಸಿದ ಪ್ರಜೆಗಳು ಬದುಕುಳಿದ ಕುರುಹುಗಳು ಕಾಣ ಸಿಗುವುದೇ ಇಲ್ಲ. ರಾಜನೇ ಪ್ರತ್ಯಕ್ಷ ದೇವರು. ಆತನಲ್ಲಿ ದೋಷ ಕಾಣುವುದೇ ಮಹಾಪರಾಧ ಎನ್ನುವಂತಹ ಅಲಿಖಿತ ಶಾಸನಗಳ ಅಡಿಯಲ್ಲಿಯೇ ಜಗತ್ತಿನ ಇನ್ನಿತರ ನಾಗರೀಕತೆಗಳು ಬೆಳೆದವು. ಅಲ್ಲಿ ಜನಸಾಮಾನ್ಯರ ಪ್ರತಿರೋಧದ ಸ್ವರಗಳನ್ನಾಗಲಿ, ರಾಜ ಶಾಸನದ ವಿಮರ್ಶೆ ಎಂಬ ಅಭಿವ್ಯಕ್ತಿ ಸ್ವಾತಂತ್ರ್ಯದ ಹುಚ್ಚು ಕಲ್ಪನೆಯನ್ನಾಗಲಿ ಊಹಿಸುವುದೇ ಬಾಲಿಶತನ. ಆದರೆ ಭಾರತದ ಮಹಾಕಾವ್ಯಗಳಲ್ಲಿ ದೈವತ್ವವನ್ನು ಪಡೆದ ಮಹಾಪುರುಷರೂ ಪ್ರಶ್ನಾತೀತರಲ್ಲ. ಆ ಮಹಾಪುರುಷರೆಲ್ಲ ತಮ್ಮನ್ನು ಪ್ರಶ್ನಿಸಿದ ಜನ ಸಾಮಾನ್ಯನನ್ನೂ ತಮ್ಮ ಜೊತೆ ಉಳಿಸಿ ಬೆಳೆಸಿದರು. ಇಲ್ಲದಿದ್ದರೆ ಶ್ರೀ ರಾಮಚಂದ್ರನೆಂಬ ಅಖಂಡ ಆರ್ಯಾವರ್ತದ ಅನಭಿಷಿಕ್ತ ಸಾರ್ವಭೌಮನನ್ನು, ಒಬ್ಬ ಸಾಮಾನ್ಯ ಅಗಸ ಪ್ರಶ್ನಿಸಿದ ಜಗತ್ತಿನ ಬೇರೆ ಯಾವುದೇ ದೇಶಗಳಲ್ಲಾಗಿದ್ದರೆ, ಅಂತಹ ಅಪವಾದ ಹೊರಿಸಿದ ಅಗಸನ ರುಂಡವನ್ನೇ ಚೆಂಡಾಡಿ ಬಿಡುತ್ತಿದ್ದರು. ಆದರೆ ಶ್ರೀರಾಮಚಂದ್ರನ ಜೊತೆ ಒಬ್ಬ ಜುಜುಬಿ ಅಗಸ, ತ್ರೇತಾಯುಗದಿಂದ ಕಲಿಯುಗದವರೆಗೂ ಉಳಿದುಕೊಂಡು ಬಂದ..ಆ ಮೂಲಕ ಕೊಟ್ಯಾಂತರ ಜನರ ವಿಮರ್ಶೆಗೆ ವಸ್ತುವಾದ. ಜೊತೆಗೆ ಭಾರತದಂತ…

Read More

ತುಳುನಾಡ ಫೌಂಡೇಶನ್ ಪುಣೆ ವತಿಯಿಂದ ಭಾರತೀಯ ಸೇನಾ ದಿನಾಚರಣೆಯನ್ನು ಖಡ್ಕಿಯಲ್ಲಿರುವ ಭಾರತೀಯ ಸೇನಾ ಪಾರ್ಶ್ವವಾಯು ಪುನರ್ವಸತಿ ಕೇಂದ್ರದಲ್ಲಿ ನಿವೃತ್ತ ಸೇನಾ ಯೋಧರೊಂದಿಗೆ ಆಚರಿಸಲಾಯಿತು. ಈ ಸಂದರ್ಭ ದೇಶಭಕ್ತಿ ಗೀತೆಯ ಹಾಡುಗಳೊಂದಿಗೆ ವೈವಿಧ್ಯಮಯ ಸಂಗೀತ ರಸಮಂಜರಿ ಕಾರ್ಯಕ್ರಮಗಳು, ನೃತ್ಯ ಪ್ರದರ್ಶನ ನಡೆಯಿತು. ನಿವೃತ್ತ ಸೇನಾ ಯೋಧರೊಂದಿಗೆ ಭೋಜನವನ್ನು ಮಾಡಲಾಯಿತು. ಈ ಸಂದರ್ಭ ತುಳುನಾಡ ಪೌಂಡೇಶನ್ ಪುಣೆ ಇದರ ಗೌರವಾಧ್ಯಕ್ಷ ತಾರಾನಾಥ ರೈ ಮೇಗಿನಗುತ್ತು ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಇದು ಎರಡನೇ ಸಾಮಾಜಿಕ ಕಾರ್ಯಕ್ರಮವಾಗಿದೆ. ಸಂಸ್ಥೆಯ ಸ್ಥಾಪನೆಯ ದಿನ ಪುಣೆಯಲ್ಲಿರುವ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು. ಇಂದು ಭಾರತೀಯ ಸೇನಾ ದಿನಾಚರಣೆಯನ್ನು ಭಾರತ ಸೇನಾ ಪಾರ್ಶ್ವಾಯು ಪುನರ್ವಸತಿ ಕೇಂದ್ರದಲ್ಲಿ ನಿವೃತ್ತ ಸೇನಾ ಯೋಧರೊಂದಿಗೆ ಬೆರೆತು ಆಚರಿಸುತ್ತಿರುವುದು ಬಹಳಷ್ಟು ಸಂತೋಷ ತಂದಿದೆ. ಇಲ್ಲಿ ಅವರೊಂದಿಗೆ ಕಳೆದ ಕ್ಷಣಗಳು ಬಹಳಷ್ಟು ಉತ್ತಮ ಅನುಭವಗಳನ್ನು ನೀಡಿದೆ. ಸಂಸ್ಥೆಯ ವತಿಯಿಂದ ಸಾಧ್ಯವಾದಷ್ಟು ಪ್ರಾಮಾಣಿಕವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ಸಂಸ್ಥೆಯ ಅಧ್ಯಕ್ಷರಾದ…

Read More

ಕಳೆದ ಹಲವು ವರ್ಷಗಳಿಂದ ಬಂಟ್ಸ್ ಫೋರಮ್ ಸಂಸ್ಥೆಯ ಮಹಿಳಾ ವಿಭಾಗದ ವತಿಯಿಂದ ತಿಂಗಳ ಪ್ರತೀ ಸಂಕ್ರಮಣದಂದು ಕಚೇರಿ ಅಥವಾ ಸದಸ್ಯರ ಮನೆಗಳಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಸಂಸ್ಥೆಯ ಸದಸ್ಯರು ಪ್ರತಿಯೊಂದು ಕಾರ್ಯಕ್ರಮಕ್ಕೂ ಒಗ್ಗಟ್ಟಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಸದಸ್ಯರ ಒಮ್ಮತದಿಂದ ಪ್ರಸ್ತುತ ವರ್ಷದಲ್ಲಿ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಆರಿಸಿದ್ದಾರೆ. ಸಂಸ್ಥೆಗೆ ಚ್ಯುತಿ ಬಾರದಂತೆ ಕಾರ್ಯವನ್ನು ನಿಭಾಯಿಸಿ ಮುನ್ನಡೆಸುವ ನಿರ್ಧಾರದಿಂದ ಕೊಟ್ಟ ಸ್ಥಾನವನ್ನು ಸಂತೋಷದಿಂದ ಸ್ವೀಕರಿಸಿದ್ದೇನೆ. ಇಂದಿನ ತನ್ನ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಕಾರ್ಯಕ್ರಮವು ಸರ್ವ ಸದಸ್ಯರ ಸಹಕಾರದಿಂದ ವಿಜೃಂಭಣೆಯಿಂದ ಜರಗಿದೆ. ಕಾರ್ಯಕ್ರಮದ ಯಶಸ್ಸಿಗೆ ಹಾಗೂ ಸಂಸ್ಥೆಯ ಪ್ರಗತಿಗೆ ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಬಂಟ್ಸ್ ಫೋರಮ್ ನ ನೂತನ ಅಧ್ಯಕ್ಷ ಉದಯ ಎಮ್ ಶೆಟ್ಟಿ ಮಲಾರಬೀಡು ನುಡಿದರು. ಅವರು ಮೀರಾ – ಭಾಯಂದರ್ ರಸ್ತೆಯಲ್ಲಿರುವ ಗೋಲ್ಡನ್ ನೆಸ್ಟ್ ಸರ್ಕಲ್ ಸಮೀಪದ ಅಶ್ವಿನಿ ( ಕ್ರಾಸ್ ಹೋಟೆಲ್ಸ್ ) ಸಭಾಗೃಹದಲ್ಲಿ ಬಂಟ್ಸ್ ಫೋರಮ್ ಮೀರಾ- ಭಾಯಂದರ್ ಆಯೋಜಿಸಿದ್ದ ವಾರ್ಷಿಕ ಭಜನಾ ಮಂಗಳೋತ್ಸವ ಕಾರ್ಯಕ್ರಮದ…

Read More

ಸಾಮಾಜಿಕ ಕಳಕಳಿ ಹೊಂದಿರುವ ಐಕಳ ಹರೀಶ್ ಶೆಟ್ಟಿಯವರ ಕನಸಿನಂತೆ ಮೂಲ್ಕಿಯಲ್ಲಿ ತೆರೆದ ಸಭಾಂಗಣ ನಿರ್ಮಾಣವಾಗುತ್ತಿದ್ದು, ಈ ಸಭಾಂಗಣವಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ದಾನಿಗಳಾದ ತೋನ್ಸೆ ಆನಂದ ಶೆಟ್ಟಿ ಹೇಳಿದರು. ಅವರು ಮೂಲ್ಕಿಯ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ತೋನ್ಸೆ ಶಶಿರೇಖಾ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್ ಹೆಸರಿನಲ್ಲಿ ಹೊರಾಂಗಣ ಸಭಾ ವೇದಿಕೆ ನಿರ್ಮಾಣದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಜಾಗತಿಕ ಬಂಟರ ಸಂಘದ ಅಧ್ಯಕ್ಷರಾಗಿ ಐಕಳ ಹರೀಶ್ ಶೆಟ್ಟಿಯವರು ಅಧಿಕಾರ ಸ್ವೀಕಾರ ಮಾಡಿದ ನಂತರ ಸಂಘದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ಸಂಘದ ಚಿತ್ರಣವೇ ಬದಲಾಗಿದೆ. ಇದೀಗ ಮೆಹೆಂದಿ, ಮದುವೆ ಮತ್ತಿತರ ಎಲ್ಲಾ ಕಾರ್ಯಕ್ರಮಗಳಿಗೆ ಉಪಯೋಗವಾಗುವಂತಹ ಉತ್ತಮವಾದ ತೆರೆದ ಸಭಾಂಗಣ ನಿರ್ಮಾಣವಾಗುತ್ತಿದ್ದು ಸಂಘಕ್ಕೆ ಹೊಸ ರೂಪ ಸಿಗಲಿದೆ ಎಂದರು. ಜಾಗತಿಕ ಬಂಟರ ಸಂಘದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ‌ ಮಾತನಾಡಿ, ಐಕಳ ಹರೀಶ್ ಶೆಟ್ಟಿಯವರ ನಾಯಕತ್ವದಲ್ಲಿ ಸಂಘ ಹೆಮ್ಮರವಾಗಿ…

Read More

ಯಕ್ಷಗಾನ ಕಲಾ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶವಾಗಿ ದಶಕಗಳೇ ಕಳೆದವು. ಅದರಲ್ಲೂ ವಿದ್ಯಾರ್ಥಿನಿಯರು, ಯುವತಿಯರು ಯಕ್ಷಗಾನ ರಂಗದ ಕಡೆ ಹೆಚ್ಚೆಚ್ಚು ಆಕರ್ಷಿತರಾಗುತ್ತಿರುವುದು ಕಲೆಯ ಬೆಳವಣಿಗೆ ದೃಷ್ಟಿಯಿಂದ ಆರೋಗ್ಯಕರ ಬೆಳವಣಿಗೆ ಎನ್ನಬಹುದು. ಈ ನಿಟ್ಟಿನಲ್ಲಿ ನೋಡಿದರೆ ತನ್ನ ವಿದ್ಯಾರ್ಥಿ ದೆಸೆಯಿಂದಲೇ ಮುಖಕ್ಕೆ ಬಣ್ಣ ಹಚ್ಚಿ ರಂಗು ರಂಗಿನ ವೇಷಭೂಷಣಗಳನ್ನು ಧರಿಸಿಕೊಂಡು ರಂಗ ಮಂಟಪದಲ್ಲಿ ಆತ್ಮವಿಶ್ವಾಸದಿಂದ ತನ್ನ ಕಲಾಪ್ರದರ್ಶನ ನೀಡುತ್ತಿದ್ದ ಪೃಥ್ವಿ ಹೆಗ್ಡೆ ಸ್ನಾತಕೋತ್ತರ ಪದವೀಧರೆ. ಪೃಥ್ವಿಯ ತಾಯಿ ಶ್ರೀಮತಿ ಪೂರ್ಣಿಮಾ ಹೆಗ್ಡೆ ಹಾಗೂ ಅವರ ಸೋದರ ಸಂಬಂಧಿಕರೆಲ್ಲಾ ಯಕ್ಷಗಾನ ಕಲೆಯ ಬಗ್ಗೆ ಆಸಕ್ತಿ ಗೌರವ ಹೊಂದಿದವರಾಗಿದ್ದ ಕಾರಣ ಪೃಥ್ವಿಗೆ ಯಕ್ಷಗಾನ ರಂಗ ಪ್ರವೇಶ ನಿರಾಳವಾಯಿತು. ತನ್ನ ಬಾಲ್ಯದ ದಿನಗಳಿಂದಲೇ ಚುರುಕು ಸ್ವಭಾವದವಳಾಗಿದ್ದ ಬಾಲಕಿ, ವಿದ್ಯಾರ್ಥಿ ಜೀವನದಲ್ಲಿ ದೈನಂದಿನ ಅಭ್ಯಾಸದ ಜೊತೆಗೆ ಪಾಠೇತರ ಚಟುವಟಿಕೆಗಳಲ್ಲಿ ಮುಂದಿದ್ದು ಇತರ ವಿದ್ಯಾರ್ಥಿಗಳಿಂದ ಭಿನ್ನ ಆಕರ್ಷಣೆ ಹೊಂದಿದ್ದಳು. ಈಕೆಯ ವಿಶೇಷ ಪ್ರತಿಭೆಯನ್ನು ಗುರುತಿಸಿದ ಅಧ್ಯಾಪಕರು ಈಕೆಯ ಸುಪ್ತ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಆಸಕ್ತಿ ತೋರಿದ ಪರಿಣಾಮ ಪೃಥ್ವಿ ಬರಹ, ಭಾಷಣ,…

Read More

ಸಂಘ ಸಮಾಜಕ್ಕೆ ದಾರಿ ದೀಪದಂತೆ ನಡೆಯಬೇಕು. ಅದೇ ರೀತಿ ಬಾಂಧವರಲ್ಲಿ ಸಂಘಟನೆ ನಮ್ಮ ಹೆಮ್ಮೆ ಎಂಬ ಭಾವನೆ ಕೂಡಾ ತುಂಬಿರಬೇಕು. ಇದು ಹೊಂದಿಕೊಂಡು ನಡೆದರೆ ಸಂಸ್ಥೆ ಮತ್ತಷ್ಟು ಅಬಿವೃದ್ದಿಯ ಪಥದಲ್ಲಿ ಸಾಗಲು ಸಾದ್ಯ. ಅಭಿವೃದ್ದಿಯಲ್ಲಿ ನಾವು ಎಲ್ಲಿಂದ ಎಲ್ಲಿಗೆ ಸಾಗಿ ಬಂದಿದ್ದೇವೆ ಎಂಬುದನ್ನು ಅವಲೋಕಿಸಿದಾಗ ನಮ್ಮ ಈ ಬೆಳವಣಿಗೆಗೆ ಮತ್ತು ಉತ್ತುಂಗಕ್ಕೆ ಏರಲು ಮುಖ್ಯವಾಗಿ ಅದರ ಹಿಂದಿರುವ ಅರ್ಥಿಕತೆಯ ಬೇರು ಹೋಟೆಲ್ ಉದ್ಯಮ. ಅದೆಷ್ಟೋ ಹೋಟೆಲು ಉದ್ಯಮಿಗಳ ಸಹಕಾರದಿಂದ ನಮ್ಮ ಸಮಾಜದ ಉದ್ದೇಶ ಏನಿದೆಯೋ ಅದು ಈಡೇರಿದೆ. ಹೆಗ್ಗುರುತಾಗಿ ನಮ್ಮ ಸಮಾಜಕ್ಕೆ ವರದಾನವಾಗಿ ಸಿಕ್ಕಿದ ಹೋಟೆಲ್ ಉದ್ಯಮ ಇನ್ನಷ್ಟು ಬದಲಾವಣೆಯೊಂದಿಗೆ ನಮ್ಮ ಯುವ ಜನತೆ ಪ್ರಾಧಾನ್ಯತೆ ನೀಡಿ ಮುನ್ನಡೆಸುವ ಅವಶ್ಯಕತೆ ಇದೆ. ನಮ್ಮ ಹಿರಿಯರು ಕಷ್ಟಪಟ್ಟು ಬೆಳೆಸಿದ ಉದ್ಯಮವು ಬಂಟ ಸಮಾಜದ ಉದ್ದಾರದ ಹಾಗೂ ಸಮಾಜದ ಪ್ರಗತಿಗೆ ಮತ್ತು ನಮ್ಮ ಅಸ್ತಿತ್ವದ ಮೂಲ ಬೇರಾಗಿದೆ. ಇಂದಿನ ಯುವ ಜನಾಂಗಕ್ಕೆ ಅದರ ಮಹತ್ವವನ್ನು ತಿಳಿಸಿ, ಉಳಿಸಿ ಬೆಳೆಸುವುದು ನಮ್ಮೆಲ್ಲರ ಅದ್ಯ ಕರ್ತವ್ಯ ಕೂಡ…

Read More

ಅಯೋಧ್ಯೆಯಲ್ಲಿ ಭಾರತೀಯರ ಶತ ಶತಮಾನಗಳ ಪ್ರಯತ್ನಗಳ ಮೂಲಕ ಇದೀಗ 2024 ಜನವರಿ 22 ರಂದು ಭವ್ಯ ರಾಮ ಮಂದಿರ ನಿರ್ಮಾಣಗೊಂಡು ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾ ಮಹೋತ್ಸವವು ಜರುಗಲಿದ್ದು ಅದೇ ಪುಣ್ಯ ಮುಹೂರ್ತದಲ್ಲಿ ಪುಣೆ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಆಶ್ರಯದಲ್ಲಿ ಸಂಘದ ಸಭಾಭವನದಲ್ಲಿ ಪ್ರಸಿದ್ಧ ಹರಿದಾಸರಾದ “ವಿಶ್ವೇಶ ದಾಸ” ಬಿರುದಾಂಕಿತ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ಅವರಿಂದ “ಸೀತಾರಾಮ ಕಲ್ಯಾಣ” ಎಂಬ ಹರಿಕಥೆಯು ಬೆಳಿಗ್ಗೆ 10-30 ರಿಂದ ನಡೆಯಲಿದೆ. ಮಧ್ಯಾಹ್ನ 12.22 ಕ್ಕೆ ಅಯೋಧ್ಯಾ ರಾಮನ ಪ್ರಾಣ ಪ್ರತಿಷ್ಠಾ ಸಮಯದಲ್ಲಿ ರಾಮದೇವರಿಗೆ ರಾಮ ಭಜನೆ, ರಾಮನಾಮ ಉದ್ಘೋಷದೊಂದಿಗೆ ಮಹಾ ಮಂಗಳಾರತಿಯು ನಡೆಯಲಿದೆ. ಆನಂತರ ಪ್ರಸಾದ ಭೋಜನವು ನಡೆಯಲಿದೆ. ಹಾರ್ಮೋನಿಯಂನಲ್ಲಿ ಶೇಖರ್ ಸಸಿಹಿತ್ಲು, ತಬಲಾದಲ್ಲಿ ಜನಾರ್ಧನ ಸಾಲಿಯಾನ್, ಸಂಗೀತ ಸಹಕಾರ ವಿಖ್ಯಾತ ವಿ ಭಟ್ ಅವರು ನೀಡಲಿದ್ದಾರೆ ಎಲ್ಲಾ ಶ್ರೀರಾಮ ಭಕ್ತರು ಸಂಪ್ರದಾಯದ ಉಡುಪು, ಕೇಸರಿ ಶಾಲು ಧರಿಸಿ ಬಂದು ಭಾಗವಹಿಸಿ ಈ ಪುಣ್ಯ ಸತ್ಕಾರ್ಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಹಾಗೂ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕರ್ನಿರೆ ಇದರ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೀ ಕರ್ನಿರೆ ವಿಶ್ವನಾಥ ಶೆಟ್ಟಿ ದಂಪತಿಗಳು ತಮ್ಮ ಮಕ್ಕಳ ಸಹಿತ ಶ್ರೀ ವಿಷ್ಣುಮೂರ್ತಿ ದೇವರಿಗೆ ಚಿನ್ನ ಲೇಪಿತ ಬಿಂಬಕ್ಕೆ ಕವಚವನ್ನು ಸಮರ್ಪಿಸಿದರು. ಈ ಸಂಧರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಕರ್ನಿರೆ ಗುತ್ತು ಹರಿಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

Read More

ಮುಂಬಯಿಯ ಪ್ರತಿಷ್ಠಿತ ಜಾತೀಯ ಸಂಘಟನೆ ಬೋಂಬೆ ಬಂಟ್ಸ್ ಎಸೋಸಿಯೇಶನ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಜಯ ಎನ್ ಶೆಟ್ಟಿ ಅವರಿಗೆ ಬೋಂಬೆ ಬಂಟ್ಸ್ ಎಸೋಸಿಯೇಶನ್ ವತಿಯಿಂದ ಶ್ರದ್ಧಾಂಜಲಿ ಸಭೆಯು ಜ 20 ರಂದು ಶನಿವಾರ ಸಂಜೆ 4:00ಗೆ ಸಯನ್ ನಿತ್ಯಾನಂದ ಸಭಾಗೃಹದಲ್ಲಿ ಜರಗಲಿದೆ. ಬೋಂಬೆ ಬಂಟ್ಸ್ ಎಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಶ್ರದ್ಧಾಂಜಲಿ ಸಭೆಗೆ ಸದಸ್ಯರೆಲ್ಲರೂ ಹಾಗೂ ಜಯ ಎನ್ ಶೆಟ್ಟಿ ಅವರ ಅಭಿಮಾನಿಗಳು ಬಂಧು-ಬಳಗವು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಬೋಂಬೆ ಬಂಟ್ಸ್ ಎಸೋಸಿಯೇಶನ್ ಉಪಾಧ್ಯಕ್ಷ ನ್ಯಾ. ಡಿ ಕೆ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ್ ಶೆಟ್ಟಿ, ಜೊತೆ ಕಾರ್ಯದರ್ಶಿ ಅಡ್ವಕೇಟ್ ಗುಣಾಕರ್ ಶೆಟ್ಟಿ, ಜೊತೆ ಕೋಶಾಧಿಕಾರಿ ಸಿಎ ದಿವಾಕರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ತೇಜಾಕ್ಷಿ ಎಸ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ದೃಶ್ಯ ಶೆಟ್ಟಿ ಹಾಗೂ ಸಮಿತಿ ಸದಸ್ಯರು, ಮಾಜಿ ಅಧ್ಯಕ್ಷರುಗಳು,…

Read More