ಕಲಾವಿದರ ಸಂಕಷ್ಟಕ್ಕೆ ಬದ್ದರಾಗಿ ನಿಂತ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ಕಾರ್ಯವೈಖರಿಗೆ ಗುಜರಾತ್ ನ ಕಲಾಭಿಮಾನಿ ಬಂಧುಗಳು ಶಂಕರ್ ಶೆಟ್ಟಿ, ರವಿನಾಥ್ ಶೆಟ್ಟಿ, ಅಜಿತ್ ಶೆಟ್ಟಿ ಹಾಗೂ ರಾಮಚಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಅನೇಕ ದಾನಿಗಳು ಮುಂದೆ ಬಂದು ಪಟ್ಲ ದಶಮ ಸಂಭ್ರಮಕ್ಕೆ 50 ಲಕ್ಷ ರೂಪಾಯಿ ದೇಣಿಗೆಯನ್ನು ಘೋಷಿಸಿದ್ದಾರೆ.

ಯಕ್ಷಧ್ರುವ ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಬರೋಡ ಶಶಿಧರ ಶೆಟ್ಟಿ ಅವರ ವಿಶೇಷ ಮನವಿಗೆ ಸ್ಪಂದಿಸಿದ ಗುಜರಾತ್ ನ ದಾನಿಗಳಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ ಯಾವತ್ತೂ ಚಿರಋಣಿಯಾಗಿದೆ ಎಂದು ಕೇಂದ್ರ ಸಮಿತಿಯ ಗೌರವಾಧ್ಯಕ್ಷ ಡಾ| ಕನ್ಯಾನ ಸದಾಶಿವ ಶೆಟ್ಟಿ, ಡಾ| ಪ್ರಕಾಶ್ ಶೆಟ್ಟಿ, ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಬರೋಡ ಶಶಿಧರ ಶೆಟ್ಟಿ ಹಾಗೂ ಪಟ್ಲ ಫೌಂಡೇಶನ್ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.