Author: admin

ವಿದ್ಯಾಗಿರಿ: ಆಳ್ವಾಸ್ ಪದವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸಹಯೋಗದ ‘ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ವು 2023- 2024ರ ಜನವರಿ ಆವೃತ್ತಿಯ ಪ್ರಥಮ ವರ್ಷದ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ. ಸ್ನಾತಕೋತ್ತರ (ಪಿಜಿ)ದಲ್ಲಿ ಎಂ.ಎ- ಶಿಕ್ಷಣ, ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಇತಿಹಾಸ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಉರ್ದು, ಸಂಸ್ಕೃತ, ಸಮಾಜಶಾಸ್ತ್ರ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಎಂ.ಎಸ್.ಡಬ್ಲ್ಯೂ, ಎಂ.ಬಿ.ಎ-ಆನ್‍ಲೈನ್ ಪ್ರವೇಶ ಪರೀಕ್ಷೆ ಮೂಲಕ (ಫೈನಾನ್ಸ್, ಮಾರ್ಕೆಟಿಂಗ್, ಎಚ್.ಆರ್. ಆಪರೇಷನ್. ಟೂರಿಸಂ ಕಾಪ್ರೊರೇಟ್ ಲಾ, ಇನ್‍ಫರ್ಮನೇಷನ್ ಟೆಕ್ನಾಲಜಿ, ಆಸ್ಪತ್ರೆ ಮತ್ತುಆರೋಗ್ಯ ಕಾಳಜಿ ನಿರ್ವಹಣೆ.), ಎಂ.ಕಾಂ ಡ್ಯುಯೆಲ್ ಸ್ಪೆಷಲೈಜೇಷನ್ ( ಅಕೌಂಟಿಂಗ್ ಮತ್ತು ಫೈನಾನ್ಸ್ / ಎಚ್‍ಆರ್ ಎಂ ಮಾರ್ಕೆಟಿಂಗ್ ಮ್ಯಾನೇಜ್‍ಮೆಂಟ್ ಮತ್ತು ಎಚ್‍ಆರ್‍ಎಂ / ಫೈನಾನ್ಸ್), ಎಂ.ಸಿ.ಎ, ಎಂ.ಲಿಬ್.ಐ.ಎಸ್‍ಸಿ, ಎಂ.ಎಸ್‍ಸಿ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟಿಷಿಯನ್, ಪರಿಸರ…

Read More

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತುಳು ಕನ್ನಡಿಗರು ಒಂದಿಲ್ಲೊಂದು ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಪ್ರತಿಭಾ ಸಂಪನ್ನತೆಯಿಂದ ಗುರುತಿಸಿಕೊಂಡವರು. ಅದು ವ್ಯಾಪಾರ ಉದ್ಯಮವಿರಲಿ, ವೈದ್ಯಕೀಯ ತಾಂತ್ರಿಕ ಕ್ಷೇತ್ರಗಳಿರಲಿ, ರಾಜಕೀಯ ರಂಗವಿರಲಿ ನಮ್ಮವರು ಸಾಧಿಸಿದ ವಿಕ್ರಮಗಳು ಜಗಜ್ಜಾಹೀರಾಗಿ ವಿಶ್ವದ ಮೂಲೆ ಮೂಲೆಗಳಿಂದ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಇನ್ನೊಂದು ವರ್ಗದ ಜನ ಸಾಹಿತ್ಯ, ಕಲೆ, ಶಿಕ್ಷಣ, ಸಾಂಸ್ಕೃತಿಕ ಸಂಘಟನೆ, ಸಂಗೀತ, ನಾಟಕ, ಯಕ್ಷಗಾನ, ಚಿತ್ರಕಲೆ, ಸಮಾಜಸೇವೆ ಹೀಗೆ ಭಿನ್ನವಾದ ತಮಗೆ ಅಭಿರುಚಿ ಇರುವ ಮನಸ್ಸಿಗೆ ಖುಷಿ ನೀಡುವ ಒಟ್ಟಾರೆಯಾಗಿ ಹೇಳುವುದಾದರೆ ತಮಗೆ ದೈವದತ್ತವಾಗಿಯೋ, ಪಾರಂಪರಿಕ ಹಿನ್ನೆಲೆಯಿಂದಲೋ ಬಂದ ಸ್ವಸಾಮರ್ಥ್ಯ ಪ್ರತಿಭೆಗಳನ್ನು ಅರ್ಥಮಾಡಿಕೊಂಡು ನಿರಂತರ ಸಾಧನೆ ಅಧ್ಯಯನ ಮೂಲಕ ಗುರಿ ಮೀರಿದ ಸಾಧನೆಗಳಿಂದ ಗುರುತಿಸಿಕೊಂಡಿರುತ್ತಾರೆ. ತಾವು ಹುಟ್ಟಿದ ನೆಲದಲ್ಲಿ ಆರ್ಥಿಕ ಪ್ರಗತಿಗೆ ತೊಡಕಾದಾಗ ಅಥವಾ ಸಂಪನ್ಮೂಲಗಳ ಕೊರತೆ ಕಂಡಾಗ ಅವರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಕೌಟುಂಬಿಕ ಜೀವನದಲ್ಲಿ ಏಳಿಗೆ ಕಂಡುಕೊಳ್ಳಲು ಹುಟ್ಟಿದ ಊರನ್ನು ಬಿಟ್ಟು ಭವಿಷ್ಯದ ಕನಸಿನ ಮೂಟೆ ಕಟ್ಟಿಕೊಂಡು ನಗರಗಳನ್ನೋ ಕೊಲ್ಲಿ ರಾಷ್ಟಗಳನ್ನೋ ಸೇರಿ…

Read More

ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇವರ ಸಹಯೋಗದೊಂದಿಗೆ ಜನವರಿ 21 ರಂದು ಭಾನುವಾರ ಬೆಳಿಗ್ಗೆ 8.30 ಕ್ಕೆ ಗೋವಿಂದದಾಸ ಕಾಲೇಜ್ ಕ್ರೀಡಾಂಗಣದಲ್ಲಿ ಬಂಟರ ಕ್ರೀಡೋತ್ಸವ ನಡೆಯಲಿದೆ. ಕ್ರೀಡಾಕೂಟವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಡಾ. ವೈ ಭರತ್ ಶೆಟ್ಟಿ, ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ, ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಎಂ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ತೆರಿಗೆ ಹಣಕಾಸು ನಿರ್ಧರಣೆ ಸ್ಥಾಯಿ ಸಮಿತಿಯ ಅಧ್ಯಕ್ಷ…

Read More

ಹಳ್ಳಿಯ ಸೊಗಡು ಪಚ್ಚೆ ಪೈರಿನ ಪರಿಸರ. ದಿನನಿತ್ಯ ಶಿವನ ಧ್ಯಾನ, ಕೈ ಮುಗಿದು ಮುನ್ನಡೆದರೆ ಯಶಸ್ಸಿನ ಸಿಂಚನ. ಅರ್ಜುನಾಪುರದಲ್ಲಿ ನಿತ್ಯ ಜನಜಾತ್ರೆ. ಊರಿನಲ್ಲಿ ಕಳೆಗಟ್ಟಿದೆ ಸಂಭ್ರಮ. ದೇವರುಗಳ ನಾಡು ಮುಡುಬಿದಿರೆಯ ಹೃದಯ ಭಾಗದಿಂದ ಹನ್ನೊಂದೂವರೆ ಕಿ.ಮೀ ದೂರದ ಅರ್ಜುನಾಪುರದಲ್ಲಿ ನೆಲೆನಿಂತು ನಂಬಿ ಬಂದ ಭಕ್ತರ ಮೊಗದಲ್ಲಿ ನಗೆಯ ಅಲೆ ತೋರ್ಪಡಿಸುವ ಶ್ರೀ ಮಹಾಲಿಂಗೇಶ್ವರನ ಸಾನಿಧ್ಯ ತುಳುನಾಡಿನ ಜನರ ಚಿತ್ತದಲ್ಲಿ ನಾಟಿ ನಿಂತಿದೆ. ಶಿರ್ತಾಡಿ ಗ್ರಾಮದ ಗಡಿಭಾಗದಲ್ಲಿ ವಾಲ್ಪಾಡಿ ಗ್ರಾಮಕ್ಕೆ ತಾಗಿಕೊಂಡು ಬೆಳೆದು ನಿಂತಿರುವ ಸಂಪೂರ್ಣ ಶಿಲಾಮಯ ದೇಗುಲ ಆಸ್ತಿಕ ಭಕ್ತರ ಕೇಂದ್ರ ಬಿಂದು. ಅರ್ಜುನಾಪುರದ ಈ ಕ್ಷೇತ್ರದಲ್ಲಿ ಮಧ್ಯಮ ಪಾಂಡವ ಅರ್ಜುನ ತಪಸ್ಸು ಮಾಡಿರುವನೆಂಬುದು ಪ್ರತೀತಿ. ಐದು ಸಾವಿರ ವರ್ಷಗಳ ಹಿಂದೆಯೂ ಜನವಸತಿ ಪ್ರದೇಶವಾಗಿ ಈ ಭಾಗ ಗುರುತಿಸಲ್ಪಟ್ಟಿತ್ತು ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ಲಿಂಗರೂಪಿಯಾಗಿ ಆರಾಧನೆಗೊಳ್ಳುತ್ತಾ ನಂಬಿದವರಿಗೆ ಇಷ್ಟಾರ್ಥ ಸಿದ್ಧಿಯನ್ನು ಕಲ್ಪಿಸುತ್ತಾ ಬಂದಿರುವ ಅರ್ಜುನಾಪುರದ ಮಹಾಲಿಂಗೇಶ್ವರನಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ವಿಜಯನಗರದ ಶ್ರೀ ಕೃಷ್ಣದೇವರಾಯ ವೈಭವದಿಂದ ಆಡಳಿತ ನಡೆಸುತ್ತಿದ್ದ 1529…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಗೌರವ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿಯವರನ್ನು ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಒಕ್ಕೂಟದ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿರುವ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಗೌರವಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ‌, ಮಹಾ ನಿರ್ದೇಶಕರಾದ ತೋನ್ಸೆ ಆನಂದ್ ಎಂ ಶೆಟ್ಟಿ, ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ರವಿರಾಜ್ ಶೆಟ್ಟಿ, ಪತ್ರಕರ್ತ ಶರತ್ ಶೆಟ್ಟಿ ಕಿನ್ನಿಗೋಳಿ ಪಾಲ್ಗೊಂಡಿದ್ದರು.

Read More

ಕುಡುಂಬೂರು ಗುತ್ತು ಪಿಲಿಚಾಮುಂಡಿ, ಧೂಮಾವತಿ ಜಾರಂದಾಯ ಮತ್ತು ಪರಿವಾರ ದೈವಗಳಿಗೆ ಜ.19 ರಂದು ಧರ್ಮ ನೇಮವು ಸುರತ್ಕಲ್ ಸಮೀಪದ ಕೋಡಿಕೆರೆಯ ಕುಡುಂಬೂರು ಗುತ್ತು ದೈವಸ್ಥಾನ ವಠಾರದಲ್ಲಿ ಜರಗಲಿದೆ. ಜ.17 ರಂದು ಬೆಳಿಗ್ಗೆ 8.30 ಕ್ಕೆ ಉಗ್ರಾಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ನಾಗದೇವರಿಗೆ ತಂಬಿಲ ಮತ್ತು ಆಶ್ಲೇಷಾ ಬಲಿ ನಡೆದಿದೆ. ಪಣಂಬೂರು ಮಾಗಣೆಯ ಕನಿಲ ದೈವಸ್ಥಾನದಲ್ಲಿ ನವಕ ಕಲಶ ಮತ್ತು ಕುಡುಂಬೂರು ಗುತ್ತು ದೈವದ ಚಾವಡಿಯಲ್ಲಿ ನವಕ ಕಲಶ ಹಾಗೂ ಶುದ್ಧ ಕಲಶ ಸೇವೆ ನಡೆಯಲಿದೆ. 18 ರಂದು ಭೋಜನ ಶಾಲೆಯಲ್ಲಿ ಶುದ್ಧ ಮುದ್ರಿಕೆ ಮಾಡಿ ಕೊಪ್ಪರಿಗೆ ಏರಿಸುವುದು, ಜ.19 ರಂದು ಬೆಳಗ್ಗೆ ಶುದ್ಧ ಕಳಶದ ಅನಂತರ 10 ಗಂಟೆಗೆ ಧರ್ಮದೈವಗಳ ಭಂಡಾರ ಏರಿಸುವುದು,12.30 ಕ್ಕೆ ಮಹಾ ಅನ್ನಸಂತರ್ಪಣೆ,1 ಗಂಟೆಗೆ ಹರಿಕಥೆ, ಸಂಜೆ 4 ಕ್ಕೆ ಮೂಲ ಮೈಸಂದಾಯ ದೈವದ ಧರ್ಮನೇಮ, ಸಂಜೆ 6.30 ಕ್ಕೆ ಕಾಂತೇರಿ ಧೂಮಾವತಿ ಬಂಟ, ಜಾರಂದಾಯ ಬಂಟ, ಸರಳ ಧೂಮಾವತಿ ಬಂಟ ಮತ್ತು ಬಬ್ಬರ್ಯ…

Read More

ಮೊನ್ನೆ ಸಂಬಂಧಿಕರೊಬ್ಬರು ತಾವು ಹೊಸತಾಗಿ ನಿರ್ಮಿಸಿದ ಮನೆಯ ಗೃಹಪ್ರವೇಶಕ್ಕೆ ಆಹ್ವಾನ ಕೊಡಲು ಬಂದಿದ್ದರು. ಆಮಂತ್ರಣ ಪತ್ರಿಕೆ ನೋಡುವಾಗ ಮನೆಯೊಡತಿಯ ಮೊಗದಲ್ಲಿ ಸಣ್ಣ ಸಂಭ್ರಮ! ‘ಹೋ..! ಇದು ಪುತ್ತೂರು ಆಗಿಯೇ ಹೋಗಬೇಕು. ಹೇಗೂ ಹೋಗಲಿಕ್ಕುಂಟಲ್ಲ, ಹಾಗೆ ಒಂದು ಸೀರೆ ಖರೀದಿಸಿ ಬರಬೇಕು’ ಅವರ ಉವಾಚ! ಕಾರಿನ ಪೆಟ್ರೋಲ್ ಜೊತೆಗೆ ನಾರಿಯ ಸಾರಿಯ ಡಬ್ಬಲ್ ಖರ್ಚಿಗೆ ದಾರಿಯಾಯಿತು. ಆದರೆ ಅನಿರೀಕ್ಷಿತವಾಗಿ ಗೃಹಪ್ರವೇಶದವರಿಗೆ ಸೂತಕ ವಕ್ರಿಸಿ ಗೃಹಪ್ರವೇಶ ಮುಂದೂಡಲ್ಪಟ್ಟಿತು. ಸದ್ಯಕ್ಕೆ ಡಬ್ಬಲ್ ಉಳಿತಾಯ! ಇನ್ನೊಮ್ಮೆ ಮಕ್ಕಳಿಗೆ ರಜೆಯಿದ್ದ ಕಾರಣ ಧರ್ಮಸ್ಥಳ, ಸುಬ್ರಹ್ಮಣ್ಯ ಯಾತ್ರೆಗೆ ಹೋಗುವುದು ಅಂತ ನಿಶ್ಚಯವಾಯಿತು. ಹೇಗೂ ವಾಹನ ಮಾಡಿಕೊಂಡು ಹೋಗುವುದು ಪಕ್ಕದ ಮನೆಯವರೂ ಬರಲಿ ಎಂಬ ಉದಾರ ಭಾವ. ಜಾಮ್ ಟೈಟ್ ಆಗಿ ಮಿಸುಕಾಡಲೂ ಆಗದೆ ಕುಳಿತಾಗಲೂ ಹೀಗೆಲ್ಲ ಒಟ್ಟಿಗೆ ಹೋಗುವುದು ಒಂಥರಾ ಖುಷಿ ಅಲ್ವಾ ಅಂತ ಹೇಳಿಕೊಂಡು ಹೇಗೂ ಸಮಾಧಾನಿಸಿಕೊಂಡದ್ದಾಯಿತು. . ದಾರಿ ಮಧ್ಯೆ ಯಾರೋ ಒಬ್ಬರು ‘ನಾವು ಸೌತಡ್ಕಕ್ಕೆ ಕೂಡ ಹೋಗುವ, ಹೇಗೂ ಹೊರಟಿದ್ದೇವೆ ಅಲ್ವಾ’ ಅಂದ್ರು. ಸರಿ, ಇಲ್ಲೇ…

Read More

ಪ್ರತಿಯೊಬ್ಬರೂ ಸೇವಕರಾಗಿದ್ದು, ಕೆಲಸ ಕಾರ್ಯಕ್ಕಾಗಿ ಸಮಿತಿಗಳನ್ನು ಮಾಡಲಾಗಿದೆ. ಎಲ್ಲರೂ ನಮ್ಮವರೆಂದು ಭಾವಿಸಿ ಕೆಲಸ ಮಾಡಿದಾಗ ಯಶಸ್ಸು ಸಾಧ್ಯ. ಸೇವಕತನದ ರುಚಿ ಲಕ್ಷ್ಮೀ ಹನುಮಂತನಿಗೆ ಮಾತ್ರ ಗೊತ್ತು. ಎಲ್ಲರೂ ಒಂದಾಗಿ ರಥವನ್ನು ಎಳೆಯುವ ಕೆಲಸವಾಗಲಿ. ಗ್ರಾಮ ಗ್ರಾಮದಲ್ಲಿ ಜಾಗೃತಿಯ ಕಾರ್ಯ ರಥೋತ್ಸವದ ಮೂಲಕ ನಡೆಯುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಅವರು ಜ.14 ರಂದು ಶ್ರೀ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಫೆ.18 ಮತ್ತು ಫೆ.19 ರಂದು ನಡೆಯುವ ಶ್ರೀ ಸಂಸ್ಥಾನದ ವಾರ್ಷಿಕ ಉತ್ಸವವಾದ ತುಳುನಾಡ ಜಾತ್ರೆ, ಶ್ರೀ ಒಡಿಯೂರು ರಥೋತ್ಸವದ ಸಮಾಲೋಚನಾ ಸಭೆಯಲ್ಲಿ ಆಶೀರ್ವಚನ ನೀಡಿದರು. ಜವಾಬ್ದಾರಿಗಳನ್ನು ಸೇವಾ ಮನೋಭಾವದಲ್ಲಿ ನಡೆಸುವ ಕಾರ್ಯ ಪ್ರತಿಯೊಬ್ಬರಿಂದ ನಡೆಯಬೇಕು. ಜಾತ್ರೆ ಯಾತ್ರೆಯಲ್ಲಿ ತುಳುವಿನ ಮಂಥನ ನಡೆಯಲಿದೆ. ಪ್ರತಿಯೊಬ್ಬರು ಸಹಾಯಕರಾದಾಗ ಉತ್ತಮ ರೀತಿಯ ಕಾರ್ಯಕ್ರಮ ನಡೆಯಲು ಸಾಧ್ಯ. ರಾಮಾಯಣದ ಜೀವಾಳ ಹನುಮಂತನಾಗಿದ್ದು, ಸೇವೆಗೆ ಇನ್ನೊಂದು ಹೆಸರಾಗಿದ್ದಾನೆ. ರಾಮಾಯಣ, ಮಹಾಭಾರತ ನಮ್ಮ ಬದುಕನ್ನು ಉತ್ತಮವಾಗಿಸುತ್ತದೆ. ರಾಮಮಂದಿರ ನಿರ್ಮಾಣ ರಾಜಕೀಯವಲ್ಲ.…

Read More

ಮೂಡುಬಿದಿರೆ: ‘ಸ್ವಯಂ (ವೈಯಕ್ತಿಕ) ಕುರಿತು ಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವವನೇ ಸ್ವಯಂ ಸೇವಕ’ ಎಂದು ಜವನೆರ್ ಬೆದ್ರ ಪ್ರತಿಷ್ಠಾನದ ಅಧ್ಯಕ್ಷ ಅಮರ್ ಕೋಟೆ ಹೇಳಿದರು. ಆಳ್ವಾಸ್ ಕಾಲೇಜು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಬುಧವಾರ ‘ಅಭಿವ್ಯಕ್ತಿ ವೇದಿಕೆ’ಯ 2024ನೇ ಸಾಲಿನ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಶರೀರ ಇರುವುದೇ ಪರೋಪಕಾರ ಮಾಡಲು. ದೇಹವು ಸಮಾಜ ಸೇವೆ ಮಾಡಿದಾಗ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಮಾಜ ಸೇವೆಯಲ್ಲಿ ದೊಡ್ಡದು, ಸಣ್ಣದು ಎಂಬುದಿಲ್ಲ. ಅಸಹಾಯಕರೊಬ್ಬರಿಗೆ ರಸ್ತೆ ದಾಟಲು ಕೈ ಹಿಡಿದು ನೆರವು ನೀಡುವುದು, ಬಸ್‍ನಲ್ಲಿ ಹಿರಿಯರಿಗೆ ಕುಳಿತುಕೊಳ್ಳಲು ಅನುವು ಮಾಡುವುದೂ ಮಾದರಿ ಸಮಾಜಸೇವೆ ಎಂದು ವಿವರಿಸಿದರು. ಭಗವತ್‍ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದಂತೆ, ಲಾಭದ ನಿರೀಕ್ಷೆ ಇಲ್ಲದೇ ನಾವು ನಮ್ಮ ಕರ್ಮಗಳನ್ನು ಮಾಡಬೇಕು. ಮುಂದೊಂದು ದಿನ ಪ್ರತಿಫಲ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದರು. ಸೇವೆ ಮಾಡಲು ಸಮೂಹವೇ ಬೇಕಾಗಿಲ್ಲ. ನಮ್ಮ ಸಾಮಥ್ರ್ಯ, ಇತಿಮಿತಿಯಲ್ಲಿ ಸಾಧ್ಯವಾದಷ್ಟು ಸೇವೆ ಮಾಡಬೇಕು. ಬದ್ಧತೆಯಿಂದ ಸೇವೆ ಮಾಡಿದರೆ,…

Read More

ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾದ ರಮಾನಾಥ ಹೆಗ್ಡೆ (72) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮಂಗಳಾದೇವಿ ದೇವಸ್ಥಾನದಲ್ಲಿ ಕಳೆದ 31 ವರ್ಷಗಳಿಂದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ಮಂಗಳೂರಿನ ರಾಮಕೃಷ್ಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

Read More