ಮನುಷ್ಯನ ಜೀವನದಲ್ಲಿ ಹಲವು ಸವಾಲುಗಳಿರುತ್ತದೆ. ಅದನ್ನು ಮೆಟ್ಟಿ ನಿಲ್ಲುವ ತಾಕತ್ತು ನಮ್ಮಲ್ಲಿರಬೇಕು. ಧರ್ಮ, ಆರಾಧನೆ ಜತೆಗೆ ಕುಟುಂಬ ಸ್ನೇಹ ನಮ್ಮಲಿರಬೇಕು ಎಂದು ಮುಂಬಯಿ ಉದ್ಯಮಿ ಮೋಹನ್ ಚೌಟ ಮಧ್ಯ ನುಡಿದರು. ಅವರು ಮಧ್ಯ ಶ್ರೀ ಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಗ್ರಾಮ ಸೇವಾ ಸಂಘ ಮಧ್ಯ ಇವರ 53 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಅಭಿವೃದ್ದಿ ನಮ್ಮ ಗುರಿಯಾಗಬೇಕು : ಅನಿಲ್ ಶೆಟ್ಟಿ ಸೂರಿಂಜೆ
ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ಮುಂಬಯಿ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ ಮಾತನಾಡಿ, ಮನುಷ್ಯ ತನ್ನ ಜೀವನದಲ್ಲಿ ಉತ್ತಮ ಕಾರ್ಯ ಆಯೋಜಿಸಬೇಕು. ಮಾನವ ಅಭಿವೃದ್ಧಿಗೆ ಪೂರಕವಾದ ಕಾರ್ಯ ಚಟುವಟಿಕೆ ನಾವು ಮಾಡಬೇಕು. ಅಭಿವೃದ್ಧಿ ನಮ್ಮ ಗುರಿಯಾಗಬೇಕು ಎಂದರು.
ಮುಂಬಯಿ ವಕೀಲರಾದ ದಿನಕರ ಕೆ ಶೆಟ್ಟಿ ಮಧ್ಯ, ಚೇಳ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಮುಂಬಯಿ ಉದ್ಯಮಿ ರಮೇಶ್ ಶೆಟ್ಟಿ ಸಾಣೂರು ಮಧ್ಯ, ಮುಂಬಯಿ ಉದ್ಯಮಿ ಕುಟ್ಟಿ ಶೆಟ್ಟಿ ಬಗ್ಗಣ್ಣಮನೆ ಮಧ್ಯ, ಮುಂಬಯಿ ಉದ್ಯಮಿ ಅಶೋಕ್ ಶೆಟ್ಟಿ ಕಾಳದೂಮಣ್ಣ ಮನೆ ಮಧ್ಯ, ಉದ್ಯಮಿ ಅಶೋಕ್ ದೇವಾಡಿಗ ಕಾಟಿಪಳ್ಳ, ಜಯಂತ್ ದೇವಾಡಿಗ ಮಧ್ಯ, ಮಧ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಪ್ರಭಾಲಾಕ್ಷಿ ಶೆಟ್ಟಿ, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ವಜ್ರಾಕ್ಷಿ ಪಿ ಶೆಟ್ಟಿ, ಮಧ್ಯ ಪ್ರೆಂಡ್ಸ್ ಅಧ್ಯಕ್ಷ ದಿಶಾಂತ್ ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಯಶೋದ ಪೂಜಾರಿ, ಪ್ರಮೀತ್ ಬಿ ಶೆಟ್ಟಿ, ಗ್ರಾಮ ಸೇವಾ ಸಂಘದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ, ಕಾರ್ಯದರ್ಶಿ ರಾಜೇಶ್ ಶೆಟ್ಟಿ, ದೀಪಕ್ ಶೆಟ್ಟಿ, ಚರಣ್ ಶೆಟ್ಟಿ, ಅಶೋಕ್, ಸಂತೋಷ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮ ನಿರೂಪಣೆ ಮತ್ತು ಸ್ವಾಗತವನ್ನು ಸಂಘದ ಜತೆ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಮಧ್ಯ ಮಾಡಿದರು. ಸಂಘದ ಉಪಾಧ್ಯಕ್ಷ ದಿನೇಶ್ ದೇವಾಡಿಗ ಧನ್ಯವಾದ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಮುಂಬಯಿಯಲ್ಲಿ ವಕೀಲರಾದ ದಿನಕರ ಕೆ ಶೆಟ್ಟಿ ಮಧ್ಯ ಕುಂಜರಬಾಳಿಕೆ ಅವರು ನೋಟರಿಯಾಗಿ ಅಯ್ಕೆಯಾದ ಬಗ್ಗೆ ಅವರನ್ನು ಸನ್ಮಾನಿಸಲಾಯಿತು.