ಮುಂಬಯಿ ವಿಶ್ವವಿದ್ಯಾಲಯ, ಪ್ರಸಕ್ತ ಸಾಲಿನ ಕನ್ನಡ ಎಂ.ಎ, ತರಗತಿಯ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯವು ಕನ್ನಡ ಎಂ.ಎ (ಸೆಮಿಸ್ಟರ್, ರೆಗ್ಯೂಲರ್) ಪ್ರಥಮ ವರ್ಷದ ತರಗತಿ (2025-2026ನೆಯ ಸಾಲಿನ) ಅಧ್ಯಯನಕ್ಕೆ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿ.ಎ, ಬಿ.ಕಾಂ, ಬಿ.ಎಸ್ಸಿ,ಬಿ. ಟೆಕ್ ಮೊದಲಾದ ಪದವಿ ಪಡೆದವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ತರಗತಿಗೆ ಹಾಜರಾತಿ ಕಡ್ಡಾಯವಿರುತ್ತದೆ. ಅಧ್ಯಯನ, ಪ್ರವೇಶಕ್ಕೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ.

ಸರ್ವ ಪ್ರಥಮರಾದ ವಿದ್ಯಾರ್ಥಿಯೊಬ್ಬರಿಗೆ ಎಂ.ಬಿ ಕುಕ್ಯಾನ್ ಚಿನ್ನದ ಪದಕವನ್ನು ಸಹ ವಿಶ್ವವಿದ್ಯಾಲಯದಿಂದ ನೀಡಲಾಗುತ್ತದೆ. ಆನ್ಲೈನ್ ಮೂಲಕ ಪ್ರವೇಶದ ಅರ್ಜಿಗಳನ್ನು ತುಂಬುವುದು ಅನಿವಾರ್ಯ. ಆಸಕ್ತ ಅರ್ಹ ಅಭ್ಯರ್ಥಿಗಳು ಸ್ವಲಿಖಿತ ಅರ್ಜಿಯನ್ನು ಹಾಗೂ ಎಲ್ಲಾ ದಾಖಲೆಗಳ ಪ್ರತಿಯನ್ನು
Dr. G. N. Upadhya, Head, Department of Kannada, University of Mumbai, Ranade Bhavan, Vidyanagari, Santacruz(East), Mumbai 400 098 Email: kannadadepartment@gmail.com ವಿಳಾಸಕ್ಕೆ ಜೂನ್ 3ರೊಳಗೆ ಕಳುಹಿಸಬಹುದು. https://mu.samarth.edu.in/index.php/site/login
ಈ ವೆಬ್ ಸೈಟ್ ಮೂಲಕ ವಿದ್ಯಾರ್ಥಿಗಳು ಪ್ರವೇಶವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 9220212578, 9594553402 ಈ ದೂರವಾಣಿ ಸಂಖ್ಯೆಯ ಮೂಲಕ ಸಂಪರ್ಕಿಸಬಹುದು.
ವಿಳಾಸ:- ಡಾ. ಜಿ.ಎನ್ ಉಪಾಧ್ಯ, ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ರಾನಡೆ ಭವನ, ವಿದ್ಯಾನಗರಿ, ಸಾಂತಾಕ್ರೂಜ್, (ಪೂರ್ವ) ಮುಂಬೈ- 400098 ಈಮೇಲ್: kannadadepartment@gmail.com (ವಿಶ್ವವಿದ್ಯಾನಿಲಯದ ವೆಬ್ಸೈಟ್ www.mu.ac.in)ಎ ಗ್ರೇಡ್ ಮಾನ್ಯತೆ ಪಡೆದ ಕನ್ನಡ ವಿಭಾಗ
ಹೊರನಾಡಿನಲ್ಲಿರುವ ಕನ್ನಡ ವಿಭಾಗಗಳಲ್ಲಿ ಮುಂಬಯಿ ವಿಶ್ವವಿದ್ಯಾಲಯಕ್ಕೆ ವಿಶಿಷ್ಟವಾದ ಸ್ಥಾನಮಾನವಿದೆ. ಮುಂಬಯಿ ವಿಶ್ವವಿದ್ಯಾಲಯಕ್ಕೆ ಅಂತಾರಾಷ್ಟ್ರೀಯ ಮನ್ನಣೆಯಿದೆ. ಇತ್ತೀಚೆಗಷ್ಟೇ ಯುಜಿಸಿ ನ್ಯಾಕ್ ಮೌಲ್ಯಮಾಪನದಲ್ಲಿ ಮುಂಬಯಿ ವಿಶ್ವವಿದ್ಯಾಲಯಕ್ಕೆ ‘ಎ ಪ್ಲಸ್ ಪ್ಲಸ್’ ಶ್ರೇಯಾಂಕ ದೊರೆತಿದೆ. ಇದು ಮಹಾರಾಷ್ಟ್ರದಲ್ಲೇ ಅತಿ ಹೆಚ್ಚಿನದು. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗಕ್ಕೆ ಈಗ ನಲ್ವತ್ತೇಳರ ಸಂಭ್ರಮ. ಈ ಮಾಯಾನಗರಿಯಲ್ಲಿ ವಿಭಾಗ ಕನ್ನಡದ ಪ್ರಸಾರ ಪ್ರಚಾರದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಕನ್ನಡ ವಿಭಾಗ ಎಂ.ಎ, ಪಿಎಚ್.ಡಿ. ಉನ್ನತ ಅಧ್ಯಯನದ ಜತೆ ಜತೆಗೆ ಕನ್ನಡ ಬಾರದವರಿಗೆ, ಕನ್ನಡೇತರರಿಗೆ ಕನ್ನಡ ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ತರಗತಿಗಳನ್ನು ಸಹ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಕನ್ನಡ ವಿಭಾಗ ಈವರೆಗೆ 110 ವೈವಿಧ್ಯಮಯವಾದ ಮೌಲಿಕ ಕೃತಿಗಳನ್ನು ಪ್ರಕಟಿಸಿ ನಾಡಿನ, ವಿದ್ವಾಂಸರ, ಸಹೃದಯರ ಗಮನವನ್ನು ಸೆಳೆದಿದೆ. ಕನ್ನಡ ವಿಭಾಗದ ಸಮಗ್ರ ಸಾಧನೆಯನ್ನು ಗಮನಿಸಿ ಮುಂಬೈ ವಿಶ್ವವಿದ್ಯಾಲಯ ‘ಎ’ ಗ್ರೇಡ್ ಮಾನ್ಯತೆ ನೀಡಿ ಗೌರವಿಸಿದೆ. ಕನ್ನಡ ವಿಭಾಗದ ಸಾಧನೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಉಲ್ಲೇಖನೀಯವಾದುದು. ಎನ್ ಈ ಪಿ ಹೊಸ ಪಠ್ಯಕ್ರಮದಂತೆ ಈಗ ಎಂ.ಎ. ವಿದ್ಯಾರ್ಥಿಗಳು ಶೋಧ ಸಂಪ್ರಬಂಧಗಳನ್ನು ಬರೆದು ಲೇಖಕರಾಗಿ ಹೊರ ಹೊಮ್ಮುತಿರುವುದು ಗಮನೀಯ ಅಂಶ ಎಂಬುದಾಗಿ ವಿಭಾಗದ ಪ್ರಕಟಣೆ ತಿಳಿಸಿದೆ.