ಈ ಬಾರಿಯ ಮಹಾರಾಷ್ಟ್ರ ಎಸ್ ಎಸ್ ಸಿ ಬೋರ್ಡ್ ಪರೀಕ್ಷೆಯಲ್ಲಿ ಹೊರನಾಡ ಕನ್ನಡಿಗರ ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕರ್ನಾಟಕ ಸಂಘ ಡೊಂಬಿವಲಿ ಸಂಚಾಲಿತ ಮಂಜುನಾಥ ವಿದ್ಯಾಲಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಿಗೆ ಉತ್ತಮ ಫಲಿತಾಂಶ ಬಂದಿದೆ. ಕನ್ನಡ ಮಾಧ್ಯಮದಲ್ಲಿ ಒಟ್ಟು 20 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಶೇ.100 ಪ್ರತಿಶತ ಫಲಿತಾಂಶ ತಂದಿರುತ್ತಾರೆ. ಅವರಲ್ಲಿ 4 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶೇ. 92 ಅಂಕಗಳೊಂದಿಗೆ ಸ್ನೇಹ ರಾಜು ಭಂಡಾರೆ ಪ್ರಥಮ, ಜಯಂತಿ ತಾರಾಸಿಂಗ್ ಚವ್ಹಾನ್ ಶೇ. 81.40 ಅಂಕಗಳೊಂದಿಗೆ ದ್ವಿತೀಯ, ಅರ್ಜುನ್ ಸುನೀಲ್ ರಾಠೋಡ್ ಶೇ. 79 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.ಆಂಗ್ಲ ಮಾಧ್ಯಮದಲ್ಲಿ ಒಟ್ಟು 139 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 74 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 54 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 11 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಶೇ 96.80 ಅಂಕಗಳೊಂದಿಗೆ ಪ್ರಾಚಿ ಅವದೇಶ್ ಯಾದವ್ ಪ್ರಥಮ, ಶೇ 95.80 ಅಂಕಗಳೊಂದಿಗೆ ದುರ್ವ ಅಭಿಜಿತ್ ಕ್ಷೀರ್ ಸಾಗರ್ ದ್ವಿತೀಯ ಹಾಗೂ ಶೇ 95.40 ಅಂಕಗಳೊಂದಿಗೆ ನಿಧಿ ನಿತ್ಯಾನಂದ ನಾಯಕ್ ತೃತೀಯ ಸ್ಥಾನ ಪಡೆದಿದ್ದಾರೆ.

ತಮ್ಮ ಸಾಧನೆಯ ಮೂಲಕ ಶಾಲೆಯ ಕೀರ್ತಿಯನ್ನು ಉತ್ತುಂಗ ಶಿಖರಕ್ಕೇರಿಸಿದ ವಿದ್ಯಾರ್ಥಿಗಳಿಗೆ, ಅವರ ಯಶಸ್ಸಿಗೆ ಕಾರಣರಾದ ಮುಖ್ಯ ಶಿಕ್ಷಕರಾದ ಸುರೇಖಾ ಪಂಡಿತ್, ಪ್ರಭು ಕೋತಾಲಿ ಹಾಗೂ ಶಿಕ್ಷಕ/ಶಿಕ್ಷಕಿ ವೃಂದ, ಪಾಲಕರು, ಶಿಕ್ಷಕೇತರ ಸಿಬ್ಬಂದಿಯನ್ನು ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸುಕುಮಾರ ಎನ್ ಶೆಟ್ಟಿ, ಉಪಾಧ್ಯಕ್ಷರಾದ ಲೋಕನಾಥ ಎ ಶೆಟ್ಟಿ, ಕಾರ್ಯಾಧ್ಯಕ್ಷರಾದ ಡಾ| ಇಂದ್ರಾಳಿ ದಿವಾಕರ್ ಶೆಟ್ಟಿ, ಉಪಕಾರ್ಯಾಧ್ಯಕ್ಷರಾದ ದೇವದಾಸ ಎಲ್ ಕುಲಾಲ್, ಗೌರವ ಕಾರ್ಯದರ್ಶಿ ಪ್ರೊ. ಅಜಿತ್ ಬಿ ಉಮ್ರಾಣಿ, ಜತೆ ಕಾರ್ಯದರ್ಶಿ ದಿನೇಶ್ ಬಿ ಕುಡ್ವ, ಕೋಶಾಧಿಕಾರಿ ತಾರಾನಾಥ ಸೂರು ಅಮೀನ್, ಜತೆ ಕೋಶಾಧಿಕಾರಿ ವಿಮಲಾ ವಿ ಶೆಟ್ಟಿ ಹಾಗೂ ಕಾರ್ಯಕಾರಿ ಮಂಡಳಿಯ ಸರ್ವ ಸದಸ್ಯರು ಅಭಿನಂದಿಸಿದ್ದಾರೆ.