ಸುರತ್ಕಲ್ ಅರಂತಬೆಟ್ಟು ಗುತ್ತಿನಲ್ಲಿ ಗಡಿಪ್ರಧಾನ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಮತ್ತು ಅವರ ಧರ್ಮಪತ್ನಿ ಶ್ರೀಮತಿ ಚಂದ್ರಿಕಾ ಹರೀಶ್ ಶೆಟ್ಟಿಯವರು ಭಾಗಿಯಾಗಿ ಶ್ರೀ ದೈವ ದೇವರ ಗಂಧ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದಂಪತಿಗಳನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಗಡಿ ಪ್ರಧಾನರಾದ ನಿಡ್ಡೋಡಿ ಮೈಂದಡಿ ಸದಾನಂದ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಸುರೇಂದ್ರ ಶೆಟ್ಟಿ, ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ರಾಜೇಶ್ ಶೆಟ್ಟಿ, ಉದ್ಯಮಿ ದಿಲ್ ರಾಜ್ ಆಳ್ವ, ದಿವಾಕರ ಸಾಮನಿ ಇವರುಗಳು ಉಪಸ್ಥಿತರಿದ್ದರು.