ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜು ಶೈಕ್ಷಣಿಕವಾಗಿ ಪ್ರಗತಿಯ ಶಿಖರವನ್ನೇರಿ ಸಾಧನೆಗಳ ಮೇಲೆ ಸಾಧನೆಗಳನ್ನು ಸಾಧಿಸುತ್ತಾ ಬಂದಿರುವುದು ಗಮನಾರ್ಹ ವಿಷಯವಾಗಿದೆ. ಈ ಶೈಕ್ಷಣಿಕ ವಿಷಯದಲ್ಲಿ ಸಾಧನೆಗಳ ಮಹಾಪೂರವನ್ನೇ ಮಾಡಿ ‘ಸಾಧನೆಗಳ ಸರದಾರ’ ಎನ್ನುವ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದೆ. ಬೋರ್ಡ್, ಜೆಇಇ, ಸಿಇಟಿ, ನೀಟ್, ಸಿಎ, ಸಿಎಸ್ ಎನ್ನುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ದೇಶ ಹಾಗೂ ರಾಜ್ಯದಲ್ಲಿಯೇ ಅತ್ಯುತ್ತಮ ರ್ಯಾಂಕ್ ಹಾಗೂ ಉತ್ತೀರ್ಣತೆಯ ಪ್ರಮಾಣವನ್ನು ಪಡೆದುದಲ್ಲದೇ ದಿನಾಂಕ 13-04-2025ರಂದು ಪುಣೆಯ ಖಡಕ್ ವಾಸ್ಲಾದಲ್ಲಿರುವ ಎನ್.ಡಿ.ಎ, ಎನ್.ಎ ತರಬೇತಿ ಸಂಸ್ಥೆಯಲ್ಲಿ ಬಿ.ಟೆಕ್ ಅಥವಾ ಬಿ.ಎಸ್ಸಿ ಪದವಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗಾಗಿ ನಡೆಸುವ ಎನ್ ಡಿ ಎ ಮತ್ತು ಎನ್ ಎ ಪರೀಕ್ಷೆ ಬಲು ಕಠಿಣವಾಗಿದ್ದು, ಇಂತಹ ಕಠಿಣ ಪರೀಕ್ಷೆ ಬರೆದ 6 ಲಕ್ಷ ವಿದ್ಯಾರ್ಥಿಗಳಲ್ಲಿ 7,800 ವಿದ್ಯಾರ್ಥಿಗಳು ಮಾತ್ರ ಎಸ್.ಎಸ್.ಬಿ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಅದರಲ್ಲಿ ನಮ್ಮ ಸಂಸ್ಥೆಯ ಶ್ರೀಹರ್ಷ ಪಿ.ಎನ್ ಎನ್ನುವ ವಿದ್ಯಾರ್ಥಿಯು ಉತ್ತೀರ್ಣತೆಯನ್ನು ಹೊಂದುವ ಮೂಲಕ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಾಧನೆಯ ಗರಿಗೆ ಅದ್ಭುತ ಕೀರ್ತಿಯನ್ನು ತಂದಿರುವುದು ಎಕ್ಸಲೆಂಟ್ ಶೈಕ್ಷಣಿಕ ಇತಿಹಾಸದಲ್ಲಿ ಇನ್ನೊಂದು ಮಹತ್ತರ ಸಾಧನೆಯಾಗಿದೆ. 900 ಅಂಕಗಳಿಗೆ ನೆಡೆಯುವ ಈ ಪರೀಕ್ಷೆಯಲ್ಲಿ 300 ಅಂಕಗಳಿಗೆ ಬರೀ ಗಣಿತದ ಪ್ರಶ್ನೆಗಳೇ ಬರುವುದು ವಿದ್ಯಾರ್ಥಿಗಳಿಗಿರುವ ಬಹುದೊಡ್ಡ ಸವಾಲು. ಈ ಸವಾಲನ್ನು ನಮ್ಮ ಎಕ್ಸಲೆಂಟ್ ಕುಂದಾಪುರ ವಿದ್ಯಾಸಂಸ್ಥೆಯ ನಿರಂತರ ಬೋಧನೆ, ಎನ್.ಡಿ.ಎ ಮತ್ತು ಎನ್.ಎ ಗಾಗಿ ನಡೆಸುವ ವಿಶೇಷ ತರಬೇತಿಯಿಂದಾಗಿ ನಮ್ಮ ಸಂಸ್ಥೆಯ ಶ್ರೀಹರ್ಷ ಪಿ.ಎನ್ ವಿದ್ಯಾರ್ಥಿಯು ಉತ್ತೀರ್ಣತೆ ಹೊಂದಲು ಸಾಧ್ಯವಾಯಿತು ಎಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ ಮಹೇಶ್ ಹೆಗ್ಡೆಯವರು, ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿಯವರು, ಪರೀಕ್ಷೆಯ ಸಂಯೋಜಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ರೀತಿಯ ಸಾಧನೆ ಮಾಡಿದ ವಿದ್ಯಾರ್ಥಿಗೆ ಸಂಸ್ಥೆಯ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.