2024-25 ರ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ 600 ರಲ್ಲಿ 590 ಅಂಕ ಪಡೆದ ಉಪ್ಪುಂದ ಕಟ್ಕೆರೆ ವಿಜಯ್ ಕುಮಾರ್ ಶೆಟ್ಟಿ ಮತ್ತು ವಂಡ್ಸೆ ಕೊರ್ಗಿ ಮನೆ ಅಂಬಿಕಾ ಶೆಟ್ಟಿ ದಂಪತಿಗಳ ಪುತ್ರ ಅಭಿಜಿತ್ ಶೆಟ್ಟಿಯವರ ಸಾಧನೆಯನ್ನು ಗುರುತಿಸಿ ಬೈಂದೂರು ಬಂಟರ ಸಂಘದ ವತಿಯಿಂದ ಅಧ್ಯಕ್ಷ ಸಾಲ್ಗದ್ದೆ ಶಶಿಧರ ಶೆಟ್ಟಿಯವರ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಗಣ್ಯರು ವಿದ್ಯಾರ್ಥಿಯ ಮನೆಗೆ ತೆರಳಿ ಅಭಿನಂದಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಅಡಿಕೆ ಕೊಡ್ಲು ಫಲ ಪುಷ್ಪಗಳೊಂದಿಗೆ ಗೌರವಿಸಿ ಶುಭಕೋರಿದರು.

ಉದ್ಯಮಿ, ಸಂಘದ ಉಪಾಧ್ಯಕ್ಷ ಜಗದೀಶ್ ಶೆಟ್ಟಿಯವರು ನಗದು ಪ್ರೋತ್ಸಾಹ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಹರ್ಜಿ ಕರುಣಾಕರ ಶೆಟ್ಟಿ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಕೆ ಶಿವರಾಂ ಶೆಟ್ಟಿ, ಉದ್ಯಮಿ ರಿತೇಶ್ ಶೆಟ್ಟಿ ಕುಕನಾಡು, ಹಿರಿಯರಾದ ಸುಧಾಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.