ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ರಾಮನವಮಿ ಆಚರಣೆಯು ಏಪ್ರಿಲ್ 6 ರಂದು ಮತ್ತು ಹನುಮ ಜಯಂತಿ ಆಚರಣೆಯು ಏಪ್ರಿಲ್ 12ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ರಾಮನವಮಿ ಆಚರಣೆಯು ಬಳಗದ ಪ್ರಮುಖರಾದ ಶ್ರೀಮತಿ ಪ್ರೇಮಾ ಸಂಜಯ್ ಶೆಟ್ಟಿ ದಂಪತಿಗಳ ಆಯೋಜನೆಯಲ್ಲಿ ಬಿಬ್ವೆವಾಡಿಯಲ್ಲಿ ಹಾಗೂ ಹನುಮ ಜಯಂತಿ ಆಚರಣೆಯು ಬಳಗದ ಪ್ರಮುಖರಾದ ಜಗದೀಶ್ ಹೆಗ್ಡೆ, ಸ್ವರ್ಣಲತಾ ಜೆ ಹೆಗ್ಡೆ ದಂಪತಿಗಳ ಆಯೋಜನೆಯಲ್ಲಿ ಲುಲ್ಲಾ ನಗರದಲ್ಲಿ ಜರಗಿತು.

ಕಾರ್ಯಕ್ರಮದ ಅಂಗವಾಗಿ ದೇವರಿಗೆ ದೀಪ ಬೆಳಗಿಸಿ, ನಂತರ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದೆಸ್ಯೆಯರು ಹಾಗೂ ಬಳಗದ ಸದಸ್ಯರಿಂದ ದಾಮೋದರ ಬಂಗೇರರವರ ಮಾರ್ಗದರ್ಶನದಲ್ಲಿ ಬಳಗದ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ನಂತರ ಸೇರಿದ ಭಕ್ತರೆಲ್ಲರೂ ಸಾಮೂಹಿಕವಾಗಿ ಹನುಮಾನ್ ಚಾಲೀಸವನ್ನು ಪಠಿಸಿದರು. ಹನುಮ ಪೂಜೆಯ ನಂತರ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಕಾರ್ಯಕ್ರಮದ ಆಯೋಜಕ ದಂಪತಿಗಳು, ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ವೀಣಾ ಪಿ ಶೆಟ್ಟಿ ದಂಪತಿಗಳು, ಬಳಗದ ಕಾರ್ಯದರ್ಶಿ ರೋಹಿತ್ ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅದ್ಯಕ್ಷೆ ಜಯಲಕ್ಷ್ಮಿ ಪಿ ಶೆಟ್ಟಿ ಮತ್ತು ಪದಾಧಿಕಾರಿಗಳು, ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪದಾಧಿಕಾರಿಗಳು, ಸದಸ್ಯೆಯರು ಹಾಗೂ ಸೇರಿದ ಗುರು ಭಕ್ತರೆಲ್ಲರೂ ಆರತಿಗೈದರು.
ಈ ಸಂದರ್ಭದಲ್ಲಿ ಮಾತನಾಡಿದ ಪುಣೆ ಬಳಗದ ಅದ್ಯಕ್ಷರಾದ ಪ್ರಭಾಕರ ಶೆಟ್ಟಿಯವರು, ನಾವು ಸುಮಾರು 23 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಹನುಮ ಜಯಂತಿಯ ಈ ಶುಭ ಸಂಧರ್ಭದಲ್ಲಿ ನಾವೆಲ್ಲರೂ ಶ್ರದ್ದಾ ಭಕ್ತಿಯಿಂದ ರಾಮದೂತ ಹನುಮಂತನ ಸ್ಮರಣೆ ಮಾಡುತ್ತಾ, ಶ್ರೀ ರಾಮ ಹನುಮನ ಕೃಪೆಗೆ ಪಾತ್ರಾರಾಗಿದ್ದೇವೆ. ಸೇವೆಗೆ ಮತ್ತು ಪ್ರೀತಿಗೆ ಅಂಜನೇಯ ಶ್ರೀ ರಾಮದೂತನಾಗಿ, ದೇವರಾಗಿ ನಮಗೆ ಪ್ರೇರಣೆ ನೀಡುತ್ತಾರೆ. ಸಾಮೂಹಿಕವಾಗಿ ಹನುಮ ಚಾಲೀಸ ಪಠಣೆಯಿಂದ ಅದೇನೋ ಒಂದು ದೈವಿಕ ಶಕ್ತಿಯ ಸಂಚಲನ ನಮ್ಮಲ್ಲಿ ಮೂಡಿ ಬರುತ್ತದೆ. ನಾವು ಭಕ್ತಿಯಿಂದ ಪ್ರಾರ್ಥಿಸಿ ಶ್ರೀ ಮಾರುತಿಯನ್ನು ನಂಬಿ ಮಾಡುವ ಪ್ರತಿಯೊಂದು ಕಾರ್ಯವು ಪಲಪ್ರದವಾಗುತ್ತದೆ. ನಮ್ಮ ಜೀವನದಲ್ಲಿ ಕೂಡ ನಾವು ಸಾರ್ಥಕತೆಯನ್ನು ಪಡೆಯಬೇಕಾದರೆ ಉತ್ತಮ ಸಂಸ್ಕಾರ, ಸತ್ಯ, ಧರ್ಮ, ಶಾಂತಿ ಸ್ನೇಹಮಯ ಜೀವನದ ದಾರಿಯಲ್ಲಿ ನಡೆಯಬೇಕು. ನಮ್ಮ ಹಿಂದೂ ಪರಂಪರೆ ಸನಾತನ ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವಲ್ಲಿ ನಾವು ಧಾರ್ಮಿಕ ಕಾರ್ಯಕ್ರಮಗಳನ್ನು ಸದಾ ಆಯೋಜಿಸುತ್ತಾ ಹಿಂದೂ ಸಮಾಜ ಸದೃಡ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕು ಎಂದರು.ಈ ಸಂದರ್ಭದಲ್ಲಿ ಬಳಗದ ಪ್ರಮುಖರಾದ ಮಾಜಿ ಅಧ್ಯಕ್ಷರುಗಳಾದ ಹಾಗೂ ಸಲಹೆಗಾರರಾದ ಉಷಾ ಕುಮಾರ್ ಶೆಟ್ಟಿ, ನಾರಾಯಣ ಕೆ ಶೆಟ್ಟಿ, ಉಪಾಧ್ಯಕ್ಷ ರಂಜಿತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು, ವಸಂತ್ ಶೆಟ್ಟಿ, ಸತೀಶ್ ಶೆಟ್ಟಿ, ದಾಮೋದರ ಬಂಗೇರ, ವಜ್ರಮಾತೆ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ಜಯಲಕ್ಷ್ಮಿ ಪಿ ಶೆಟ್ಟಿ, ಶೋಭಾ ಯು ಶೆಟ್ಟಿ, ವೀಣಾ ಪಿ ಶೆಟ್ಟಿ, ಪ್ರೇಮ ಎಸ್ ಶೆಟ್ಟಿ, ಪುಷ್ಪ ಪೂಜಾರಿ, ಸುಧಾ ಎನ್ ಶೆಟ್ಟಿ, ಸರೋಜಿನಿ ಡಿ ಬಂಗೇರ, ಅಮಿತಾ ಪಿ ಪೂಜಾರಿ, ಸುಜಾತ ಎ ಶೆಟ್ಟಿ, ಲಲಿತಾ ಪೂಜಾರಿ, ವೀಣಾ ಡಿ ಶೆಟ್ಟಿ, ಶ್ವೇತಾ ಎಚ್ ಮೂಡಬಿದ್ರಿ, ಮಮತಾ ಡಿ ಶೆಟ್ಟಿ, ಸ್ವರ್ಣಲತಾ ಜೆ ಹೆಗ್ಡೆ, ವನಿತಾ ಎಸ್ ಕರ್ಕೇರ, ಅರ್ಚನಾ ಶೆಟ್ಟಿ, ಉಮಾ ಶೆಟ್ಟಿ, ಸಂದ್ಯಾ ಶೆಟ್ಟಿ, ನಯನಾ ಶೆಟ್ಟಿ, ಸುಮನ ಶೆಟ್ಟಿ, ಸುಶೀಲಾ ಮೂಲ್ಯ, ಆಶಾ ಪೂಜಾರಿ ಹಾಗೂ ಹೆಚ್ಚಿನ ಗುರು ಭಕ್ತರು ಉಪಸ್ತಿತರಿದ್ದು, ಶ್ರೀ ರಾಮ ಮತ್ತು ಹನುಮನ ಕೃಪೆಗೆ ಪಾತ್ರರಾದರು. ಮಂಗಳಾರತಿ ನಂತರ ಪ್ರಸಾದ ವಿತರಣೆ ಹಾಗೂ ಲಘು ಉಪಾಹಾರ ನಡೆಯಿತು.
ಚಿತ್ರ, ವರದಿ : ಹರೀಶ್ ಮೂಡಬಿದ್ರಿ ಪುಣೆ