Author: admin

ನೀಟ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ತೆಗೆದು, ವೈದ್ಯಕೀಯ ವ್ಯಾಸಂಗವನ್ನು ಮಾಡಲು ಅರ್ಹತೆಯನ್ನು ಹೊಂದಿದ್ದ ಕೈಕಾರದ ದೇವಿನ್ ಪ್ರಜ್ವಲ್ ರೈರವರ ವೈದ್ಯಕೀಯ ಶಿಕ್ಷಣವನ್ನು ಪೂರೈಸಲು ಬೇಕಾದ ಆರ್ಥಿಕ ನೆರವನ್ನು 2020- 21ರ ಅವಧಿಯಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರ ಅವಧಿಯಲ್ಲಿ 35 ಮಂದಿ ದಾನಿಗಳ ಸಹಕಾರದಲ್ಲಿ 5.73 ಲಕ್ಷ ರೂ ದೇಣಿಗೆ ಸಂಗ್ರಹಿಸಿ ನೀಡಲಾಗಿದ್ದು, ಇದೀಗ ದೇವಿನ್ ಪ್ರಜ್ವಲ್ ರೈಯವರು ವೈದ್ಯರಾಗಿದ್ದು, ಈ ನಿಟ್ಟಿನಲ್ಲಿ ದಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಸರಳ ಸಮಾರಂಭ ಬೂಡಿಯಾರ್ ರಾಧಾಕೃಷ್ಣ ರೈಯವರ ನಿವಾಸದಲ್ಲಿ ಮೇ 20ರಂದು ಜರಗಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಬೂಡಿಯಾರ್ ರಾಧಾಕೃಷ್ಣ ರೈಯವರು ದೇವಿನ್ ಪ್ರಜ್ವಲ್ ರೈಯವರು ಆರ್ಥಿಕವಾಗಿ ಬಹಳ ಹಿಂದಿದ್ದರೂ, ಕಲಿಕೆಯಲ್ಲಿ ಮುಂದಿದ್ದರು. ವೈದ್ಯನಾಗಬೇಕೆಂಬ ತುಡಿತ ಇತ್ತು. ಈ ವಿಚಾರ ಬಂಟರ ಸಂಘದ ಗಮನಕ್ಕೆ ಬಂದಾಗ 2020-21ರ ಅವಧಿಯಲ್ಲಿ ನಾನು ಬಂಟರ ಸಂಘದ ಅಧ್ಯಕ್ಷನಾಗಿದ್ದ ಸಮಯದಲ್ಲಿ ಚಿಲ್ಮೆತ್ತಾರು ಜಗಜೀವನ್ ದಾಸ್ ರೈ ಹಾಗೂ ಜೈರಾಜ್ ಭಂಡಾರಿ ಡಿಂಬ್ರಿ ಅವರೊಂದಿಗೆ…

Read More

ಕಿರಿಮಂಜೇಶ್ವರದ ಶ್ರೀ ಅಗಸ್ತ್ಯೇಶ್ವರ, ಶ್ರೀ ಮಹಾಗಣಪತಿ, ಶ್ರೀ ವಿಶಾಲಾಕ್ಷಿ ಅಮ್ಮನವರ ದೇವಸ್ಥಾನದಲ್ಲಿ ವಾರ್ಷಿಕ ಶ್ರೀ ಮನ್ಮಹಾರಥೋತ್ಸವು ಸಂಭ್ರಮದಲ್ಲಿ ನಡೆಯಿತು. ರಥೋತ್ಸವ ಪ್ರಯುಕ್ತ ಸಾನಿಧ್ಯದಲ್ಲಿ ಬೆಳಿಗ್ಗೆ ಬುದ್ಧ ಪೂರ್ಣಿಮಾ, ಪೂರ್ವಾಹ್ನ ನಿತ್ಯಬಲಿ, ಅಧಿವಾಸ ಹೋಮ, ರಥ ಶುದ್ಧಿ, ರಥ ಬಲಿ, ಪೂರ್ವಾಹ್ನ 10ಕ್ಕೆ ರಥಾರೋಹಣ, ಮಧ್ಯಾಹ್ನ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ಸಂಜೆ 5 ಗಂಟೆಗೆ ಶ್ರೀ ಮನ್ಮಹಾರಥೋತ್ಸವ ಸಡಗರ ಸಂಭ್ರಮದಲ್ಲಿ ನಡೆಯಿತು. ರಥೋತ್ಸವಕ್ಕೆ ವಿವಿಧ ರಾಜ್ಯಗಳಿಂದ, ವಿವಿಧ ಜಿಲ್ಲೆಗಳಿಂದ, ವಿದೇಶದಿಂದ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ದೇವಸ್ಥಾನ ಸುತ್ತಲೂ ಮತ್ತು ರಥ ಬೀದಿ ಸುತ್ತಲೂ ಹೂವಿನ ಅಲಂಕಾರ ವಿದ್ಯುತ್ ದೀಪ ಅಲಂಕಾರ ಮತ್ತು ವಿವಿಧ ವೇಷ ಭೂಷಣಗಳು ವಾದ್ಯಗೋಷ್ಠಿಗಳು ಚಂಡೆ ವಾದನ ರಥೋತ್ಸವಕ್ಕೆ ಇನ್ನಷ್ಟು ಅದ್ದೂರಿಗೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಶೆಟ್ಟಿ, ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ಕಿರಿಮಂಜೇಶ್ವರ ಗ್ರಾಮ…

Read More

ಗುಡ್ಡಮ್ಮಾಡಿ ಸೇನಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಮತ್ತು ಶ್ರೀ ದುರ್ಗಾಪರಮೇಶ್ವರಿ ಮೂಲಸ್ಥಾನದ ಮೆಟ್ಟಿಲು ಸೇವೆ ಲೋಕಾರ್ಪಣೆ ಬಹಳ ವಿಜೃಂಭಣೆ ಯಿಂದ ನಡೆಯಿತು. ಬೆಳಿಗ್ಗೆ ಗಂಟೆ 8-00 ರಿಂದ ಗುರುಗಣಪತಿ ಪೂಜೆ, ಪ್ರಾರ್ಥನೆ, ಪುಣ್ಯಾಹ, ಸ್ನಪನಾಧಿವಾಸ ಹೋಮ, ಕಲಶ ಪೂಜೆ, ಬೆಳಿಗ್ಗೆ 10 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಮೂಲಸ್ಥಾನದ ಮೆಟ್ಟಿಲು ಲೋಕಾರ್ಪಣೆಯನ್ನು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆಯವರು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿ ಶುಭ ಹಾರೈಸಿದರು.11.30 ಕ್ಕೆ ಶ್ರೀ ದೇವಿಯ ಮೂಲಸ್ಥಾನಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ವಿವಿಧ ಭಜನಾ ತಂಡಗಳು ವಾದ್ಯಗೋಷ್ಠಿ ಚಂಡೆ ವಾದನಗಳ ಮೂಲಕ ಭವ್ಯ ಮೆರವಣಿಗೆ ಸಾಗಿತು. ನಂತರ ಅಷ್ಠಾವಧಾನ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ ಮತ್ತು ಮಧ್ಯಾಹ್ನ ಗಂಟೆ 12-00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ. 12-30ಕ್ಕೆ ಅನ್ನಸಂತರ್ಪಣೆ, ಸಂಜೆ ಗಂಟೆ 7ಕ್ಕೆ ಶ್ರೀ ದೇವಿಯ ಸಾನ್ನಿಧ್ಯದಲ್ಲಿ ರಂಗಪೂಜೆ, ಪ್ರಸಾದ ವಿತರಣೆ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.ದೇವಸ್ಥಾನ ಸುತ್ತಲೂ ಹೂವಿನ…

Read More

ದಯವಿಟ್ಟು ನೀವು ಸಂತಾಪ ಸೂಚಕ ಸಭೆಯಲ್ಲಿ ಕೂತ ಹಾಗೆ ಮುಖ ಗಂಟಿಕ್ಕಿ ಕೂರಬೇಡಿ. ಮನಸ್ಸು ದೇಹ ಎರಡನ್ನು ಸಡಿಲಗೊಳಿಸಿ ನಿರಾಳವಾಗಿರಿ, ಮಾತು ಏಕಮುಖವಾಗುವುದು ಬೇಡ. ಇದೊಂದು ಸಮ್ಮುಖ ಸಂವಾದವಾಗಲಿ. ನೀವೂ ಪ್ರಶ್ನೆ ಕೇಳಿ, ನಾನೂ ಕೇಳುವೆ ಎಂದ ತಕ್ಷಣ ಅದೊಂದು ಹುಡುಗಿ ‘ಸಂತಾಪ ಸೂಚಕ’ ಎಂದರೆ ಏನು ಸರ್ ಎಂಬ ಪ್ರಶ್ನೆ ಕೇಳುವುದೇ? ಪದವಿ ಓದುವ ಮಗುವಿಗೆ ಸಂತಾಪ ಸೂಚಕ ಅನ್ನುವ ಸರಳ ಶಬ್ದ ಅರ್ಥವಾಗಿಲ್ಲ ಎಂದರೆ ಕಾಲ ಎಷ್ಟು ಕೆಟ್ಟು ಹೋಯಿತು ಎಂದು ತಬ್ಬಿಬ್ಬಾದೆ. ಸಾಹಿತ್ಯ ಭಾಷೆ ಸಂಸ್ಕೃತಿಯ ವಿಷಯ ಪಕ್ಕಕ್ಕಿರಲಿ. ಇತ್ತೀಚೆಗೆ ನಮ್ಮ ಕಾಲೇಜುಗಳ ಶೈಕ್ಷಣಿಕ ಉಪನ್ಯಾಸ, ವಾರ್ಷಿಕ ಉತ್ಸವ- ಸಭೆಗಳೆಲ್ಲ ಲವಲವಿಕೆ ಜೀವಂತಿಕೆಯೇ ಇಲ್ಲದ ನಿರಾಸಕ್ತಿಯ ಮುಖ ಮುದ್ರೆಯ ಯುವ ಪ್ರೇಕ್ಷಕರನ್ನು ಹೊಂದಿರುತ್ತದೆ ಯಾಕೆ ಎಂಬುವುದು ನನ್ನ ಇಂದಿನ ಪ್ರಶ್ನೆ. ಕಳೆದ ಐದಾರು ದಶಕದಿಂದ ಇಡೀ ಕರಾವಳಿಗೇ ಮಾದರಿಯನ್ನೆಬಹುದಾದ ಕಾಲೇಜೊಂದರ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿದ್ದೆ. ಮೂರು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಆ ಸಂಸ್ಥೆಯ ಶೈಕ್ಷಣಿಕ ಸಮಾಪನ ಕಾರ್ಯಕ್ರಮದಲ್ಲಿ ಸಭಾಮಂಟಪದಲ್ಲಿದ್ದ ವಿದ್ಯಾರ್ಥಿಗಳ ಸಂಖ್ಯೆ…

Read More

ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಕುಂದಾಪುರ ತಾಲೂಕು, ಸಮಿತಿ ಮತ್ತು ಕುಂದಾಪುರ ತಾಲೂಕು ಮಹಿಳಾ ವಿಭಾಗ ಇವರ ಸಹಭಾಗಿತ್ವದಲ್ಲಿ ಪ್ರತಿ ಹುಣ್ಣಿಮೆಯಂದು ನಡೆಯುವ ‘ಸಾಮೂಹಿಕ ಸತ್ಯನಾರಾಯಣ ಪೂಜೆ’ ಬಂಟರ ಯಾನೆ ನಾಡವರ ಸಂಕೀರ್ಣದ ಎಸ್. ಎಸ್. ಹೆಗ್ಡೆ ಸಭಾ ಭವನದಲ್ಲಿ ಜರಗಿತು. ಸೇವಾಕರ್ತರಾದ ಉದ್ಯಮಿ ದಂಪತಿ ಮರಾತೂರು ಹೊಸಿಮನೆ ಶ್ಯಾಮಲ ಶೆಟ್ಟಿ ಮತ್ತು ಜಯರಾಮ ಶೆಟ್ಟಿ ಅವರಿಂದ ನೆರವೇರಿಸಲಾಯಿತು. ಸೇವಾಕರ್ತರನ್ನು ಸಮಾಜದ ಹಿರಿಯರಾದ ಅಮೃತ ರಾಧಾ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೆ ಆಶಾ ಶಿವರಾಮ ಶೆಟ್ಟಿ, ಮಹಿಳಾ ಸಂಘದ ಅಧ್ಯಕ್ಷೆ ಹೇಮಾವತಿ ಹೆಗ್ಡೆ ಅವರು ಸಮ್ಮಾನಿಸಿದರು. ಸಮಾಜದ ಜನರಿಗೆ ವೈದ್ಯಕೀಯ ನೆರವಿಗೆ ತಾಲೂಕು ಸಮಿತಿ ವತಿಯಿಂದ ಸಹಾಯ ಧನ ನೀಡಲಾಯಿತು.ಬಂಟರ ಯಾನೆ ನಾಡವರ ಮಾತೃ ಸಂಘ ಕುಂದಾಪುರ ತಾಲೂಕು ಸಮಿತಿಯ ಸಂಚಾಲಕ ಸಂಪತ್ ಕುಮಾರ್ ಶೆಟ್ಟಿ ಕಾವ್ರಾಡಿ ಸ್ವಾಗತಿಸಿ, ಪ್ರಸ್ತಾವಿಸಿದರು. ಕುಂದಾಪುರ ತಾಲೂಕು ಸಮಿತಿ ಸಹ ಸಂಚಾಲಕ ಅಶೋಕ್ ಶೆಟ್ಟಿ ಸಂಸಾಡಿ, ಕುಂದಾಪುರ ತಾಲೂಕು ಮಹಿಳಾ ಸಂಘದ ಸದಸ್ಯೆಯರು,…

Read More

ಸ್ನೇಹ ಕೃಪಾ ಮೂವೀಸ್ ಲಾಂಛನದಲ್ಲಿ ತಯಾರಾದ ಕಲಾಸಾರ್ವಭೌಮ ಸುಧಾಕರ ಬನ್ನಂಜೆ ಕತೆ ಚಿತ್ರಕತೆ ಸಂಭಾಷಣೆ ಹಾಡು ಬರೆದು ನಿರ್ಮಿಸಿ ನಿರ್ದೇಶಿಸಿರುವ “ಗಂಟ್ ಕಲ್ವೆರ್” ತುಳು ಚಿತ್ರ ಮೇ 23 ರಂದು ತುಳುನಾಡಿನಾದ್ಯಂತ ಬಿಡುಗಡೆಯಾಗಲಿದೆ. ಮಂಗಳೂರಿನಲ್ಲಿ ಭಾರತ್ ಸಿನಿಮಾಸ್, ಸಿನಿಪೋಲಿಸ್ ಪಿವಿಆರ್, ರೂಪವಾಣಿ, ಉಡುಪಿಯಲ್ಲಿ ಭಾರತ್ ಸಿನಿಮಾಸ್, ಕಲ್ಪನಾ, ಮಣಿಪಾಲ, ಪಡುಬಿದ್ರೆ ಪುತ್ತೂರು, ದೇರಳಕಟ್ಟೆಯ ಭಾರತ್ ಸಿನಿಮಾಸ್, ಮಣಿಪಾಲದ ಐನಾಕ್ಸ್, ಕಾರ್ಕಳದ ರಾಧಿಕಾ, ಪ್ಲಾನೆಟ್ ಬೆಳ್ತಂಗಡಿಯ ಭಾರತ್, ಸುರತ್ಕಲ್ ನ ನಟರಾಜ್ ಹಾಗೂ ಸಿನಿ ಗ್ಯಾಲಕ್ಸಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದು ಸಿನಿಮಾದ ನಿರ್ದೇಶಕ ಸುಧಾಕರ ಬನ್ನಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನವೀನ್ ಡಿ ಪಡೀಲ್, ಅರವಿಂದ ಬೋಳಾರ್ , ಭೋಜರಾಜ್ ವಾಮಂಜೂರು, ಆರ್ಯನ್ ಶೆಟ್ಟಿ, ಸ್ಮಿತಾ ಸುವರ್ಣ, ಉಮೇಶ್ ಮಿಜಾರು, ದಿಶಾ ಪುತ್ರನ್, ಸುಂದರ ರೈ ಮಂದಾರ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಯಾದವ ಮಣ್ಣಗುಡ್ಡೆ, ರವಿ ಸುರತ್ಕಲ್, ವಸಂತ ಮುನಿಯಾಲು, ಪ್ರಶಾಂತ್ ಎಳ್ಳಂಪಳ್ಳಿ, ಗಿರೀಶ್ ಎಂ ಶೆಟ್ಟಿ ಕಟೀಲ್, ಸುಧೀರ್ ಕೊಠಾರಿ, ಕ್ಲಾಡಿ…

Read More

ಆರ್ಯಾಡಿ ಶ್ರೀ ಜನಾರ್ಧನ ದೇವಸ್ಥಾನ ಪಾಂಗಾಳ ಇದರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಲುವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಂ.ಆರ್.ಜಿ ಗ್ರೂಪ್ ನ ಸಿಎಂಡಿ ಡಾ| ಕೆ ಪ್ರಕಾಶ್ ಶೆಟ್ಟಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಟಿ ಶೆಟ್ಟಿ, ವಿದ್ವಾನ್ ಶ್ರೀ ಸುಬ್ರಹ್ಮಣ್ಯ ಅವನಾಧಿ, ಉದ್ಯಮಿಗಳಾದ ಬಾಲಾಜಿ ಯೋಗಿಶ್ ಶೆಟ್ಟಿ, ಕಟ್ಟಡ ಸಮಿತಿ ಕಾರ್ಯಾಧ್ಯಕ್ಷರಾದ ಗೋವಿಂದ ಶೆಟ್ಟಿ ಉಪಸ್ಥಿತರಿದ್ದರು.

Read More

ಹೌದು ಹಣ್ಣು ತರಕಾರಿಗಳಲ್ಲಿ ಸೀಡ್ ಲೆಸ್ ಸೃಷ್ಟಿಯಾಗುತ್ತಿರುವಂತೆ ಭಾರತೀಯ ಸಮಾಜದ ಯುವಕ ಯುವತಿಯರ ಮಾನಸಿಕ ಸ್ಥಿತಿ ಗಮನಿಸಿದರೆ ಸೀಡ್ ಲೆಸ್ ಜನಾಂಗವೊಂದು ಸೃಷ್ಟಿಯಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಜಾಗತೀಕರಣದ ಪ್ರಭಾವದಿಂದಾಗಿ ಭಾರತದ ಮಧ್ಯಮ ವರ್ಗದ ಕುಟುಂಬಗಳಲ್ಲಿ ಬಡತನ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು. ಊಟ ಬಟ್ಟೆ ವಸತಿಯ ವಿಷಯದಲ್ಲಿ ಮಕ್ಕಳಿಗೆ ಹೆಚ್ಚಿನ ಕೊರತೆಯಾಗದಂತೆ ಪೋಷಕರು ನೋಡಿಕೊಂಡರು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಂಡುಬಂದಿತು. ಅವಿಭಕ್ತ ಕುಟುಂಬಗಳು ಶಿಥಿಲವಾಗಿ ಚಿಕ್ಕ ಸಂಸಾರಗಳು ಅಸ್ತಿತ್ವಕ್ಕೆ ಬಂದವು. ಅದರಿಂದಾಗಿ ಮಕ್ಕಳ ಮೇಲೆ ಪೋಷಕರು ಪ್ರೀತಿ ಹೆಚ್ಚಾಯಿತು. ಟಿವಿ ಮೊಬೈಲ್ ವಿಡಿಯೋ ಗೇಮ್ ಸಿನಿಮಾ ಮನರಂಜನೆ ಮುಂತಾದ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಿಂದ ಮಕ್ಕಳ ಮನಸ್ಥಿತಿ ಹೆಚ್ಚು ಶಾರ್ಪ್ ಆಯಿತು. ಕಲಬೆರಕೆ ಆಹಾರ, ಜಂಕ್ ಪುಡ್ ಮುಂತಾದ ರಸಾಯನಿಕ ಮಿಶ್ರಿತ ಪದಾರ್ಥಗಳ ತಿಂಡಿಗಳು ಮತ್ತು ಅತಿಯಾದ ವಾಹನಗಳ ಬಳಸುವಿಕೆ ಹಾಗು ಪರಿಸರ ಮಾಲಿನ್ಯದಿಂದ ದೇಹ ಮತ್ತು ಮನಸ್ಸುಗಳಲ್ಲಿ ಆಲಸ್ಯ ಉಂಟಾಯಿತು. ತೀರಾ ಹಸಿವಿನ ಸಂಕಷ್ಟಗಳ ಅನುಭವ ಅವರಿಗೆ ಆಗಲೇ ಇಲ್ಲ.…

Read More

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಕಂಪ್ಯೂಟರ್ ತರಬೇತಿ ,ಅಕೌಂಟೆನ್ಸಿ ಇತ್ಯಾದಿ ವಿವಿಧ ಹಂತಗಳಲ್ಲಿ ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಪುಣಚ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾರಪ್ಪ ಶೆಟ್ಟಿ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸಿ ನೆರವೇರಿಸಿದರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ತರಬೇತಿ ಮುಗಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕರಾವಳಿ ಭಾಗದಲ್ಲಿ ವಿಶಿಷ್ಟ ತರಬೇತಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ಉದ್ಯೋಗ ಕೌಶಲ್ಯತೆ ಗಳನ್ನು ಹೆಚ್ಚಿಸುವ ವಿವಿಧ ಯೋಜನೆಗಳ ಮೂಲಕ ವಿದ್ಯಾಮಾತಾ ಅಕಾಡೆಮಿಯು ಫಲಿತಾಂಶವನ್ನು ಪಡೆಯುತ್ತಿರುವುದಲ್ಲದೆ ಸಾವಿರಾರು ವಿದ್ಯಾರ್ಥಿಗಳಿಗೆ ಖಾಸಗಿ ಮತ್ತು ಸರಕಾರಿ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆಯಲು ದಾರಿದೀಪವಾಗಿರುವುದನ್ನು ಮುಕ್ತವಾಗಿ ಶ್ಲಾಘಿಸಿ ಸಂಸ್ಥೆಗೆ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ಅವರು ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿ, ಅತಿಥಿಯಾಗಿ ಆಗಮಿಸಿದ್ದ ಶ್ರೀ ಮಾರಪ್ಪ ಶೆಟ್ಟಿಯವರನ್ನು ಸಂಸ್ಥೆಯ…

Read More

ಬೆಂಗಳೂರಿನ ಪ್ರಖ್ಯಾತ ಉದ್ಯಮಿ, ಸ್ಮಾರ್ಟ್ ಲೈನರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ, ಬೆಂಗಳೂರು ಬಂಟರ ಸಂಘದ ಮಾಜಿ ಖಜಾಂಚಿ ಅಮರನಾಥ್ ಶೆಟ್ಟಿ ಹೆಗ್ಗುಂಜೆ ಅವರು ಸಾಗರ ಬಂಟರ ಭವನ ಕಟ್ಟಡ ನಿರ್ಮಾಣಕ್ಕೆ 5 ಲಕ್ಷ ದೇಣಿಗೆಯನ್ನು ನೀಡಿದ್ದಾರೆ. ವೈಯಕ್ತಿಕ ಕಾರ್ಯಕ್ರಮ ನಿಮಿತ್ತ ಸಾಗರಕ್ಕೆ ಭೇಟಿ ನೀಡಿದ್ದ ಅಮರನಾಥ್ ಶೆಟ್ಟಿ ಅವರನ್ನು ಸಾಗರ ಬಂಟರ ಸಂಘದ ಮುಖಂಡರು ಸಾಗರ ಬಂಟರ ಸಂಘದ ಕಟ್ಟಡಕ್ಕೆ ಭೇಟಿ ನೀಡಲು ಆಹ್ವಾನ ನೀಡಿದ ಸಂದರ್ಭದಲ್ಲಿ ಕಟ್ಟಡದ ಪ್ರಗತಿಯನ್ನು ಕಂಡು ನಾನು ನಿಮ್ಮ ಕಷ್ಟಗಳಿಗೆ ಜೊತೆಯಾಗುತ್ತೇನೆ ಎಂದರು. ಆ ಕೂಡಲೇ ರೂ 5 ಲಕ್ಷ ದೇಣಿಗೆಯನ್ನು ನೀಡಿ ಮಾತನಾಡಿ, ನಾನು ಸತತವಾಗಿ 15 ವರ್ಷಗಳಿಂದ ಬೆಂಗಳೂರು ಬಂಟರ ಸಂಘ ಹಾಗೂ ಹಲವಾರು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಮುದಾಯದ ಕೆಲಸ ದೇವರ ಕೆಲಸ ಎಂದು ಪರಿಗಣಿಸಿದ್ದೇನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ ಹಕ್ಲಾಡಿ ಅವರು ಅಮರನಾಥ್ ಶೆಟ್ಟಿ…

Read More