Author: admin
ವಿದ್ಯಾಗಿರಿ: ಆಳ್ವಾಸ್ ಹಮ್ಮಿಕೊಂಡಿರುವ ಉಚಿತ ಕಣ್ಣಿನ ತಪಾಸಣಾ ಶಿಬಿರ, ಯಾವುದೇ ನಿರ್ದಿಷ್ಟ ಜಾತಿ, ಧರ್ಮಗಳಿಗೆ ಸೀಮಿತವಾಗಿರದೆ, ಸರ್ವರಿಗೂ ಕಣ್ಣಿನ ಆರೋಗ್ಯ ಸೇವೆ ಲಭಿಸುತ್ತಿದೆ ಎಂಬ ತೃಪ್ತಿ ನನಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆ, ಮಂಗಳೂರಿನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಹೆಗ್ಗಡೆ ಸಮಾಜ ಸಂಘ (ರಿ.), ಕೋಟೆಬಾಗಿಲು ಗಾಣಿಗ ಯಾನೆ ಸಪಳಿಗ ಸೇವಾ ಸಂಘ (ರಿ.) ಮೂಡುಬಿದಿರೆ, ಮಿಜಾರು-ಎಡಪದವು ಭಂಡಾರಿ ಸಮಾಜ ಸೇವಾ ಸಂಘ(ರಿ)ಮೂಡುಬಿದಿರೆ ಹಾಗೂ ಮಡಿವಾಳ ಸಮಾಜ ಸೇವಾ ಸಂಘ (ರಿ.), ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 9ನೇ ಉಚಿತ ನೇತ್ರ ತಪಾಸಣಾ ಶಿಬಿರ ಮಂಗಳವಾರ ನಡೆಯಿತು. ಹಲವಾರು ಸಂಘ ಸಂಸ್ಥೆಗಳು ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳುತ್ತಿದ್ದರೂ, ಕಣ್ಣಿನ ಚಿಕಿತ್ಸೆ ಬಗ್ಗೆ ಜಾಗೃತಿ ಜನರಲ್ಲಿ…
ಮೂಡುಬಿದಿರೆ: ಪುತ್ತೂರು ವಿವೇಕಾನಂದ ಸ್ವಾಯತ್ತ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮಾಧ್ಯಮ ಹಬ್ಬ ವಿವೇಕ ಚೇತನದಲ್ಲಿ ಆಳ್ವಾಸ್ ಪತ್ರಿಕೋದ್ಯಮ ವಿಭಾಗವು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಒಟ್ಟು 13 ಸ್ಪರ್ಧೆಗಳಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳು 6 ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ಒಂದು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು. ಲೋಗೋ ವಿನ್ಯಾಸದಲ್ಲಿ ಸಚಿನ್ ಆಚಾರ್ಯ ಪ್ರಥಮ, ರೇಡಿಯೋ ನಿರೂಪಣೆ ಪ್ರಖ್ಯಾತ ಬೆಳುವಾಯಿ ಪ್ರಥಮ, ಸಪ್ರ್ರೈಸ್ ಇವೆಂಟ್ ರಂಜಿತ್ ಪ್ರಥಮ, ಬೀದಿ ನಾಟಕ ಪ್ರಥಮ, ರಸಪ್ರಶ್ನೆ ಜಡೇಶ್ ಹಾಗೂ ತಬ್ರೀಸ್ ಪ್ರಥಮ, ಪಿ2ಸಿ ಚಿದಾನಂದ ರುದ್ರಪುರಮಠ ಪ್ರಥಮ, ರೀಲ್ಸ್ ಮೇಕಿಂಗ್ ವಿನೀತ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ವಿಜೇತ ತಂಡವನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ.
ಮೂಡುಬಿದಿರೆ: ಸೌಂದರ್ಯವರ್ಧಕ ಚಿಕಿತ್ಸಾಲಯಗಳು ಈ ಕಾಲದ ಪ್ರತಿಯೊಬ್ಬರ ಕನಿಷ್ಠ ಅಗತ್ಯೆಯೆ ಹೊರತು ಐಷಾರಾಮಿ ಜೀವನ ಪದ್ದತಿಯಲ್ಲ ಎಂದು ಮುಂಬೈನ ಖ್ಯಾತ ಡೆರ್ಮಟೊ ಕಾಸ್ಮಟಾಲಜಿಸ್ಟ್ ಡಾ ದೀಪಿಕಾ ಶೆಟ್ಟಿ ತಿಳಿಸಿದರು. ಅವರು ಆಳ್ವಾಸ ಶಿಕ್ಷಣ ಪ್ರತಿಷ್ಠಾನದಿಂದ ಮೂಡುಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್ ಪಕ್ಕದಲ್ಲಿ ನೂತನವಾಗಿ ಪ್ರಾರಂಭಗೊಂಡ ಆಳ್ವಾಸ್ ಎಸ್ಥೆಟಿಕ್ ರಿಜುವನೇಶನ್ ಸೆಂಟರ್‍ನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಪ್ರತಿಯೊಬ್ಬರು ತಮ್ಮ ತ್ವಚೆಗೆ ಹಾಗೂ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು, ಇಂತಹ ವೈಯಕ್ತಿಕ ಯೋಗ ಕ್ಷೇಮದ ಸೇವೆಯನ್ನು ನೀಡುವ ಚಿಕಿತ್ಸಾಲಯಗಳು ಈ ಕಾಲದ ಮೂಲಭೂತ ಅಗತ್ಯಗಳಾಗಿ ಮಾರ್ಪಟ್ಟಿವೆ. ತಾನು 3 ದಶಕಗಳ ಹಿಂದೆ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಸಂಶಯ ದೃಷ್ಟಿಯಿಂದ ನೋಡಿದವರು ಹೆಚ್ಚೇ ಹೊರತು, ಬೆಂಬಲ ನೀಡಿದವರು ಕಡಿಮೆ. ಆದರೆ ಇಂದು ಈ ಕ್ಷೇತ್ರದ ಸೇವೆ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಿಗೂ ಅಗತ್ಯವೆನ್ನುವಷ್ಟು ಬೆಳೆದಿದೆ ಎಂದ ಹರ್ಷ ವ್ಯಕ್ತ ಪಡಿಸಿದರು. ತ್ವರಿತಗತಿಯಲ್ಲಿ ಬೆಳೆಯುತ್ತಿರುವ ಮೂಡುಬಿದಿರೆಯ ಪಟ್ಟಣಕ್ಕೆ ಇಂತಹ ಸೌಂದರ್ಯವರ್ಧಕ ಚಿಕಿತ್ಸಾಲಯಗಳ ಅಗತ್ಯ ಹೆಚ್ಚಿದೆ. ಆಳ್ವಾಸ್…
ಅಂತರ್ಜಾಲ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ ಮಾತ್ರವಲ್ಲ, ಸಹಸ್ರಾರು ಬಂಟರ ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸಿದ ‘ಬಂಟ್ಸ್ ನೌ’ ಅಂತರ್ಜಾಲ ಸುದ್ದಿ ಮಾಧ್ಯಮ ಸಂಸ್ಥೆಯ ವತಿಯಿಂದ ಅನುಬಂಧ – 2024 ಕಾರ್ಯಕ್ರಮ ಮೇ 19 ರಂದು ಮಂಗಳೂರು ಪುರಭವನದಲ್ಲಿ ಅಪರಾಹ್ನ 3 ರಿಂದ ರಾತ್ರಿ 10 ರ ತನಕ ನಡೆಯಲಿದೆ. ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಅರ್ಥಪೂರ್ಣ, ಸಮಾಜ ಹಿತ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಫದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀದೇವಿ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ, ಹಿರಿಯ ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಸಾಂಕೇತಿಕವಾಗಿ ತುಳುನಾಡಿನ ಸಂಪ್ರದಾಯದಂತೆ ವಿವಿಧ ಆಕರ್ಷಕ ಶೈಲಿಗಳಲ್ಲಿ ಉದ್ಘಾಟಿಸಲಿದ್ದಾರೆ. ಈ ಸಂಭ್ರಮದಲ್ಲಿ ಗೌರವ…
ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಆಳ್ವಾಸ್ ಕಾಲೇಜಿನ ಪುರುಷರ ತಂಡ ಸತತ 19ನೇ ಬಾರಿ ಚಾಂಪಿಯನ್
ಮೂಡುಬಿದಿರೆ: ಎಂಪಿಎಂ ಕಾಲೇಜು ಕಾರ್ಕಳದಲ್ಲಿ ಮುಕ್ತಾಯಗೊಂಡ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್‍ನಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ತಂಡ ಸತತ 19ನೇ ಬಾರಿ ದಿವಂಗತ ಎಂಕೆ ಅನಂತ ರಾಜ್ ಮೆಮೋರಿಯಲ್ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿತು. ಸೆಮಿಪೈನಲ್ ಹಣಾಹಣಿಯಲ್ಲಿ ಬೆಳ್ತಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಆಳ್ವಾಸ್ ತಂಡ 35-16,35-13 ನೇರ ಸೆಟ್ ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಪೈನಲ್ ನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುಶಾಲನಗರ ತಂಡವನ್ನು 35-09,35-04 ನೇರ ಸೆಟ್ ಗಳಿಂದ ಸೋಲಿಸಿ ಸತತ 19ನೇ ಬಾರಿ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಫ್ ಗೆದ್ದುಕೊಂಡಿತು. ಆಳ್ವಾಸ್‍ನ ಚೇತನ್ ಉತ್ತಮ ದಾಳಿಗಾರ ಹಾಗೂ ನಂದಕುಮಾರ್ ಉತ್ತಮ ರಕ್ಷಣಕಾರ ಪ್ರಶಸ್ತಿಗೆ ಭಾಜನರಾದರು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
ವಿದ್ಯಾಗಿರಿ: ಆಯುರ್ವೇದ ವೈದ್ಯ ಪದ್ದತಿಯಲ್ಲಿ ಮಾನವ ದೇಹದ ನಿರ್ದಿಷ್ಟವಾದ ಅಂಗಗಳಿಗೆ ಚಿಕಿತ್ಸೆ ನೀಡುವುದರ ಮೂಲಕ ಪರಿಣಾಮಕಾರಿ ಫಲಿತಾಂಶ ಪಡೆಯಲು ಮರ್ಮ ಶಾಸ್ತ್ರ- ಶ್ರೇಷ್ಠ ವೈದ್ಯಕೀಯ ಪದ್ದತಿಯಾಗಿದೆ ಎಂದು ಡಿಐಎಸ್‍ಎಮ್‍ನ ನಿವೃತ್ತ ಮರ್ಮ ಚಿಕಿತ್ಸಕ ಡಾ.ಎನ್.ವಿ ಶ್ರೀವತ್ಸ ಹೇಳಿದರು. ಅವರು ಆಳ್ವಾಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸ್ನಾತಕೋತ್ತರ ಶಲ್ಯ ತಂತ್ರ ಮತ್ತು ಶರೀರ ರಚನಾ ವಿಭಾಗದ ಜಂಟಿ ಆಶ್ರಯದಲ್ಲಿ ಶುಕ್ರವಾರ ನಡೆದ ಮರ್ಮ ಅಭ್ಯಾಸ-2024ರ ರಾಷ್ಟ್ರೀಯ ಮಟ್ಟದ ಕಾರ್ಯಗಾರ ವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಆಕ್ಯುಪಂಕ್ಚರ್, ಆಕ್ಯು ಪ್ರೇಶರ್ ಮೂಲ ಮರ್ಮ ಶಾಸ್ತ್ರ. ಆದರೆ ಇಂದು ಮರ್ಮ ಶಾಸ್ತ್ರವನ್ನು ಶಾಸ್ತ್ರೋಕ್ತವಾಗಿ ಕಲಿಯುವ ಹಾಗೂ ಕಲಿಸುವ ವರ್ಗ ಕ್ಷೀಣಿಸುತ್ತಿದೆ. ನಮ್ಮ ಕಾಲದ ಶಿಕ್ಷಕರು ಉದಾರ ಮನಸ್ಸಿನಿಂದ ಈ ವಿದ್ಯೆಯನ್ನು ನಮಗೆ ಕಲಿಸಿದರು. ಆದರೆ ಇಂದಿನ ಯುವಜನತೆ ಈ ಕ್ಷೇತ್ರದಿಂದ ದೂರ ಸರಿಯುತ್ತಿರುವುದು ದುಃಖಕರ ಎಂದರು. ರೋಗವನ್ನು ನಿರ್ಣಯಿಸಲು, ಚಿಕಿತ್ಸೆ ಪಡೆಯಲು, ಹಾಗೂ ರೋಗದ ಮುನ್ಸೂಚನೆ ಪಡೆಯಲು ಈ ವೈದ್ಯ ಪದ್ದತಿ ಸಹಕಾರಿಯಾಗಿದೆ. ಮರ್ಮಶಾಸ್ತ್ರದ…
ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಇದರ ಆಡಳಿತ ಮಂಡಳಿ ನಿರ್ದೇಶಕರಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ದ.ಕ ಸಹಕಾರಿ ಕೃಷಿ ಅಭಿವೃದ್ಧಿ ಸಂಘ ನಿಯಮಿತ ಮಂಗಳೂರು ಇದರ ಆಡಳಿತ ಮಂಡಳಿಗೆ ನಾಮ ನಿರ್ದೇಶಕ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಎಸ್ ಸಿಡಿಸಿಸಿ ಬ್ಯಾಂಕ್ ವತಿಯಿಂದ ದ.ಕ ಸಹಕಾರಿ ಕೃಷಿ ಅಭಿವೃದ್ಧಿ ಸಂಘ ( ನಿ )2019 ಮೇ.20 ರಂದು ನಾಮ ನಿರ್ದೇಶನಗೊಂಡಿದ್ದ ವಿನಯ್ ಕುಮಾರ್ ಸೂರಿಂಜೆ ಅವರ ಸ್ಥಾನಕ್ಕೆ ಶಶಿಕುಮಾರ್ ರೈ ಬಾಲ್ಯೋಟ್ಟು ಅವರನ್ನು ಆಯ್ಕೆ ಮಾಡಲಾಗಿದೆ.25/03/2024 ರಂದು ನಡೆದ ಬ್ಯಾಂಕಿನ ಆಡಳಿತ ಸಭೆಯ ನಿರ್ಣಯದಂತೆ ಈ ನೇಮಕ ಮಾಡಲಾಗಿದೆ ಎಂದು ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಪ್ರಭಾರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ. ರವಿ ಶೆಟ್ಟಿಯವರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದು, ಕಳೆದ ವರ್ಷ ಬಹಳ ವಿಜೃಂಭಣೆಯಿಂದ ನಡೆದ ಪುಣಚ ಮಹಿಷಮರ್ಧಿನಿ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಸಮಿತಿಯ ಅಧ್ಯಕ್ಷರಾಗಿದ್ದರು. ಅಲ್ಲದೇ ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾಗಿ ಮತ್ತು ಹಲವಾರು ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತುಳುಕೂಟ ಕತಾರ್ ನ ಪೋಷಕರಾಗಿ, ಮೂರು ಬಾರಿ ಅಧ್ಯಕ್ಷರಾಗಿ, ಈ ಹಿಂದೆ ಕರ್ನಾಟಕ ಸಂಘ ಕತಾರಿನ ಉಪಾಧ್ಯಕ್ಷರಾಗಿ, ಬಂಟ್ಸ್ ಕತಾರಿನ ಸಂಸ್ಥಾಪಕ ಅಧ್ಯಕ್ಷರಾಗಿ, ಭಾರತೀಯ ರಾಯಭಾರಿ ಕಚೇರಿಯ ಅಧೀನದಲ್ಲಿರುವ ಐಸಿಬಿಎಫ್, ಐಸಿಪಿಸಿಯ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ಸಂಘ ಕತಾರಿನ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು ಈ ಸಂದರ್ಭದಲ್ಲಿ ಡಾ. ರವಿ ಶೆಟ್ಟಿ ಮೂಡಂಬೈಲು ಅವರು ಅಧ್ಯಕ್ಷರಾಗಿರುವುದು ಬಂಟ ಸಮಾಜ ಬಾಂಧವರೆಲ್ಲರಿಗೂ ಖುಷಿ ತಂದಿದೆ.
ಮಾನವ ಸಂಘ ಜೀವಿಯಾಗಿದ್ದು, ಸಂಘಟನೆಗಳು ಪ್ರಾಮಾಣಿಕ, ಸತ್ಯ, ನಿಷ್ಠೆ ಮತ್ತು ಸಮಾಜಮುಖಿ ಚಿಂತನೆ ಅಳವಡಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಂಘಟಿತ ಸಮಾಜ ನಿರ್ಮಾಣವಾಗಲು ಸಂಘ, ಸಂಸ್ಥೆಗಳ ಪಾತ್ರ ಮಹತ್ವವಾಗಿದೆ ಎಂದು ಘಟಪ್ರಭಾ ಉದ್ಯಮಿ ಎಚ್. ಜಯಶೀಲ ಎನ್. ಶೆಟ್ಟಿ ಹೇಳಿದರು. ಉಪ್ಪುಂದ ಜೆಸಿಐ ಘಟಕದ 20 ವರ್ಷಗಳ ಹೆಜ್ಜೆ ಗುರುತು ವಿಂಶತಿ ಮಹೋತ್ಸವ ಸಂಭ್ರಮದ ಸಮಾರಂಭ ಉದ್ಘಾಟಿಸಿ ಮಾತನಾಡಿಸಿದರು. ಬದುಕಿನಲ್ಲಿ ಅವಕಾಶ ದೊರೆಯುವುದು ವಿರಳ. ಆದರೆ ದೊರೆತ ಅವಕಾಶ ಸಾರ್ಥಕ ಸದುಪಯೋಗ ಪಡಿಸಿಕೊಳ್ಳಬೇಕಾಗಿರುವುದು ಯುವಜನತೆ ಜವಾಬ್ದಾರಿ. ಸಮಾಜಮುಖಿ ಚಿಂತನೆಯೊಂದಿಗೆ ಹುಟ್ಟಿಕೊಂಡ ಜೇಸಿ ಸಂಸ್ಥೆ ವ್ಯಕ್ತಿತ್ವ ಬೆಳೆಸುವುದರ ಮೂಲಕ ಸಮಾಜದ ಪರಿವರ್ತನೆಗೆ ಸಹಕಾರಿಯಾಗಿದೆ ಈ ನೆಲೆಯಲ್ಲಿ ಜೇಸಿ ಸಂಸ್ಥೆ ಯುವ ಸಮುದಾಯದ ಸಂಘಟನಾ ಪ್ರಯತ್ನ ಶ್ಲಾಘನೀಯ ಎಂದರು. ಜೆಸಿಐ ಅಧ್ಯಕ್ಷ ಮಂಜುನಾಥ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಸೇವಾ ನಿವೃತ್ತಿ ಹೊಂದಿದ ಸ್ಥಳೀಯ ಯೋಧ ಹೊಳೆಕಡಿಮನೆ ವೆಂಕಟೇಶ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಹಿಂದಿನ 19 ಪೂರ್ವಾಧ್ಯಕ್ಷರ ಸೇವೆ ಗುರುತಿಸಿ ಗೌರವಿಸಲಾಯಿತು. ಜೆಸಿಐ ವಲಯಾಧ್ಯಕ್ಷ ಗಿರೀಶ…
ಮೂಡುಬಿದಿರೆ: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮಂಗಳೂರು ವಿ ವಿ ಆಶ್ರಯದಲ್ಲಿ ಜರುಗಿದ ಮಂಗಳೂರು ವಿ.ವಿ. ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಅಂತರ್ ಕಾಲೇಜು ಪವರ್ ಲಿಫ್ಟಿಂಗ್ಚಾಂ ಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಕಾಲೇಜು ಮೂಡುಬಿದಿರೆ ಸತತ 20ನೇ ಬಾರಿ ಸಮಗ್ರ ತಂಡ ಪ್ರಶಸ್ತಿ ಜಯಿಸಿದೆ. ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು 27 ಅಂಕವನ್ನು ಪಡೆದು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು 56 ಅಂಕದೊಂದಿಗೆ ತಂಡ ಪ್ರಶಸ್ತಿಯನ್ನು ಪಡೆಯಿತು. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ|ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.