Author: admin
ವಿದ್ಯಾಗಿರಿ: ಆಯುರ್ವೇದದ ಪ್ರಸೂತಿ ತಂತ್ರದಲ್ಲಿ ಸ್ತ್ರೀ ರೋಗಕ್ಕೆ ಹಲವಾರು ಪರಿಹಾರವಿದೆ ಎಂದು ಆಳ್ವಾಸ್ ಹೆಲ್ತ್ ಸೆಂಟರ್ ಸ್ತ್ರೀರೋಗತಜ್ಞೆ ಡಾ ಹನಾ ಶೆಟ್ಟಿ ನುಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ) ಆಳ್ವಾಸ್ ನಿರಾಮಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ಸ್ನಾತಕೋತ್ತರ ವಿಭಾಗ, ಮೂಡಬಿದಿರೆ ಬಂಟರ ಮಹಿಳಾ ಸಂಘದ ಜಂಟಿ ಆಶ್ರಯದಲ್ಲಿ ಮೂಡಬಿದಿರೆಯ ಕನ್ನಡ ಭವನದಲ್ಲಿ ಬುಧವಾರ ಹಮ್ಮಿಕೊಂಡ ‘ಸ್ತ್ರೀ ರೋಗ ಮಾಹಿತಿ ಹಾಗು ಉಚಿತ ಆರೋಗ್ಯ ತಪಾಸಣಾ’ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ತ್ರೀರೋಗದ ಕುರಿತು ಅರಿವು ಮೂಡಿಸಿ ಹಾಗೂ ರಿಯಾಯಿತಿ ದರದಲ್ಲಿ ಔಷಧವನ್ನು ಒದಗಿಸಿ, ಮುಂಬರುವ ದಿನಗಳಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವವರಿಗೆ ನೆರವಾಗುತ್ತೇವೆ ಎಂದರು. ಒಂದು ಕುಟುಂಬದ ಸ್ತ್ರೀ ಆರೋಗ್ಯವಾಗಿದ್ದಾಗ ಮಾತ್ರ, ಕುಟುಂಬದ ಎಲ್ಲಾ ಸದಸ್ಯರು ಆರೋಗ್ಯದಿಂದಿರಲು ಸಾಧ್ಯ ಎಂದು ಹೇಳಿದರು. ಆಳ್ವಾಸ್ ನಿರಾಮಯದ ವೈದ್ಯಕೀಯ ನಿರ್ದೇಶಕಿ ಡಾ ಸುರೇಖಾ ಪೈ, ಮಾತನಾಡಿ, ಬಹುತೇಕ ಸ್ತ್ರೀಯರು…
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕರ ಕಛೇರಿ (ಆಡಳಿತ) ಮಂಗಳೂರು ಹಾಗೂ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಮತ್ತು ಮಂಗಳೂರು ದಕ್ಷಿಣ ವಲಯ, ಎಸ್‍ಡಿಎಮ್ ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು 06 ಚಿನ್ನ, 01 ಬೆಳ್ಳಿ, 01 ಕಂಚು ಒಟ್ಟು 08 ಪದಕಗಳೊಂದಿಗೆ 17 ವರ್ಷ ವಯೋಮಿತಿಯ ಬಾಲಕರ ತಂಡ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಮುಂದಿನ ತಿಂಗಳು ನಡೆಯುವ ರಾಜ್ಯಮಟ್ಟದ ಕುಸ್ತಿ ಪಂದ್ಯಾಟಕ್ಕೆ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯಿಂದ 07 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ. ಫಲಿತಾಂಶ : 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ : ರಜತ್ ಬಸು – 55 ಕೆಜಿ ವಿಭಾಗದಲ್ಲಿ (ಪ್ರಥಮ), ರಿತಿಕ್ ಕೆ ಜಿ – 60…
ಮೂಡಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಮತ್ತು ಕಪಿತಾನಿಯೋ ಪದವಿಪೂರ್ವ ಕಾಲೇಜು ಮಂಗಳೂರು ಜಂಟಿ ಆಶ್ರಯದಲ್ಲಿ ಮಂಗಳೂರಿನಲ್ಲಿ ಜರುಗಿದ ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಮಂಗಳೂರು ತಾಲೂಕನ್ನು ಪ್ರತಿನಿಧಿಸಿದ ಕಪಿತಾನಿಯೋ ಪ.ಪೂ. ಕಾಲೇಜನ್ನು 1 ಇನ್ನಿಂಗ್ಸ್ ಹಾಗೂ 06 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕರ ಸೆಮಿಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಪುತ್ತೂರು ತಾಲೂಕನ್ನು ಪ್ರತಿನಿಧಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜನ್ನು ಸೋಲಿಸಿ ಫೈನಲ್‍ಗೆ ಪ್ರವೇಶಿಸಿತ್ತು. ಬಾಲಕಿಯರ ವಿಭಾಗದಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿದ ಆಳ್ವಾಸ್ ತಂಡವು ಕಡಬ ತಾಲೂಕನ್ನು ಪ್ರತಿನಿಧಿಸಿದ ಬೆಥನಿ ಪ.ಪೂ. ಕಾಲೇಜು ತಂಡವನ್ನು 1 ಇನ್ನಿಂಗ್ಸ್ ಹಾಗೂ 10 ಅಂಕಗಳಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಬಾಲಕಿಯರ ಸೆಮಿಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಮೂಲ್ಕಿ ತಾಲೂಕನ್ನು ಪ್ರತಿನಿಧಿಸಿದ ಶ್ರೀ ದುರ್ಗಾಪರಮೇಶ್ವರಿ ಪದವಿಪೂರ್ವ ಕಾಲೇಜು ಕಟೀಲನ್ನು ಸೋಲಿಸಿ ಫೈನಲ್‍ಗೆ ಅರ್ಹತೆ ಪಡೆದಿತ್ತು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ…
ಯಕ್ಷಗಾನ ಕಲೆಗೆ ಅದರದೇ ಆದ ಮಹತ್ವವಿದೆ. ಮೂಲ ಚೌಕಟ್ಟಿಗೆ ಬದಲಾವಣೆಯಾಗದಂತೆ ಆ ಕಲೆಯನ್ನು ಪ್ರದರ್ಶಿಸಬೇಕು. ಇತ್ತೀಚೆಗೆ ಕೆಲವು ಪ್ರಸಂಗಗಳು ಯಕ್ಷಗಾನದ ಚೌಕಟ್ಟನ್ನು ಮೀರಿ ಪ್ರದರ್ಶನಗೊಳ್ಳುತ್ತಿರುವುದು ವಿಷಾದನೀಯ. ಯಕ್ಷಗಾನದಲ್ಲಿ ಬದಲಾವಣೆ ಹಾಗೂ ಮನೋರಂಜನೆ ಬೇಕು. ಆದರೆ ಅದಕ್ಕೊಂದು ಇತಿಮಿತಿ ಇರಬೇಕು ಎಂದು ಹೇರಂಬಾ ಇಂಡಸ್ಟ್ರೀಸ್ ಲಿ. ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ತಿಳಿಸಿದರು. ಕುರ್ಲಾ ಪೂರ್ವದ ಮುಂಬಯಿ ಬಂಟರ ಸಂಘದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಸೆಪ್ಟೆಂಬರ್ 29ರಂದು ಜರಗಿದ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿಯ 23ನೇ ವಾರ್ಷಿಕೋತ್ಸವದ ತ್ರಯೋವಿಂಶತಿ ಕಲಾ ಸಂಭ್ರಮ ಯಕ್ಷರಕ್ಷಾ ಪ್ರಶಸ್ತಿ ಪ್ರಧಾನ ಸಮಾರಂಭ, ಕೋಟಿ – ಚೆನ್ನಯ ಯಕ್ಷಗಾನ ಪುಸ್ತಕ ಬಿಡುಗಡೆ ಹಾಗೂ ಪರಕೆದ ಪಲ್ಲೆಂಕಿ ಯಕ್ಷಗಾನ ಪ್ರದರ್ಶನದಲ್ಲಿ ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಅವರು ಉದ್ಘಾಟಿಸಿ, ಪ್ರಸಿದ್ಧ ಯಕ್ಷಗಾನ ಕಲಾವಿದ ಪ್ರಾರ್ಥಿಸುಬ್ಬರಿಂದ ಹಿಡಿದು ಅನೇಕ ಪ್ರಸಿದ್ಧ ಹಿರಿಯ ಕಲಾವಿದರು ಯಕ್ಷಗಾನಕ್ಕಾಗಿ ಉತ್ತಮ ಕೊಡುಗೆ ನೀಡಿದ್ದಾರೆ. ಅವರ ಜೀವನವೇ ಯಕ್ಷಗಾನಕ್ಕಾಗಿ ಮುಡಿಪಾಗಿತ್ತು. ಅಂತಹ ಕಲೆಯನ್ನು ನಾವು…
ಗಾಂಧಿ ಜಯಂತಿ ದಿನದಂದು ಸುರತ್ಕಲ್ ಸುಭಾಷಿತ ನಗರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಯಿತು. ಸ್ವಚ್ಛತಾ ಕಾರ್ಯಕ್ರಮ ಬೆಳಿಗ್ಗೆ ನಡೆಯಿತು. ಸುಭಾಷಿತ ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ನಡೆಯಿತು. ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ ನ ಅಧ್ಯಕ್ಷ ರಮೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಅಸೋಸಿಯೇಶನ್ ನ ಉಪಾಧ್ಯಕ್ಷ ತಾರಾನಾಥ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ನರಸಿಂಹ ಸುವರ್ಣ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಕುಡುಂಬೂರು, ಜೊತೆ ಕಾರ್ಯದರ್ಶಿ ಲಕ್ಷ್ಮೀ ಚಂದ್ರಶೇಖರ, ಜಗನ್ನಾಥ ಶೆಟ್ಟಿ ಬಾಳ ಹಾಗೂ ಅಸೋಸಿಯೇಶನ್ ನ ಸದಸ್ಯರು ಪಾಲ್ಗೊಂಡಿದ್ದರು. ಬಳಿಕ ಅಸೋಶಿಯನ್ ನ ಸರ್ವ ಸದಸ್ಯರ ಸಭೆ ರಮೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸುರತ್ಕಲ್ ಎನ್.ಐ.ಟಿ.ಕೆ ನಿವೃತ್ತ ಪ್ರಾಂಶುಪಾಲ ಡಾ| ಪಿ. ಸುಧಾಕರ ಶೆಟ್ಟಿ ಅವರ ಶ್ರದ್ಧಾಂಜಲಿ ಸಭೆಯು ಬೈಲೂರು ಮಹಿಷಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಡಾ. ಸುಧೀರ್ ರಾಜ್, ಮಟ್ಟಾರ್ ರತ್ನಾಕರ್ ಹೆಗ್ಡೆ, ಪ್ರೊ.ಕೆ.ಆರ್ ಕಾಮತ್ ನುಡಿನಮನ ಸಲ್ಲಿಸಿದರು. ಮಣಿಪಾಲ ಮಾಹೆಯ ಉಪಕುಲಪತಿ ಡಾ. ಎಚ್. ಎಸ್. ಬಲ್ಲಾಳ್, ಎಂಆರ್ ಜಿ ಗ್ರೂಪ್ ಚೇರ್ಮನ್ ಪ್ರಕಾಶ್ ಶೆಟ್ಟಿ, ಮಣಿಪಾಲ ಕೆಎಂಸಿ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಕೆಎಂಸಿ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಅವಿನಾಶ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂಎಲ್‌ಸಿ ಮಂಜುನಾಥ್ ಭಂಡಾರಿ, ಮಾಜಿ ಸಚಿವರಾದ ಜಯಪ್ರಕಾಶ್ ಹೆಗ್ಡೆ, ನಾಗರಾಜ್ ಶೆಟ್ಟಿ, ಮಾಜಿ ಶಾಸಕರಾದ ಸುಕುಮಾರ್ ಶೆಟ್ಟಿ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ರಘುಪತಿ ಭಟ್, ಲಾಲಾಜಿ ಮೆಂಡನ್, ಆರೆಸ್ಸೆಸ್ ಮುಖಂಡ ಶಂಭು ಶೆಟ್ಟಿ, ಬಿಜೆಪಿ ಮುಖಂಡ ಕಿದಿಯೂರು ಉದಯಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ನವೀನ್ ಚಂದ್ರ ಜೆ. ಶೆಟ್ಟಿ, ಮುನಿಯಾಲು ಉದಯ ಕುಮಾರ ಶೆಟ್ಟಿ, ಕಿಶನ್ ಹೆಗ್ಡೆ…
ಕ್ಷೇಮ ಮತ್ತು ಅನಾರೋಗ್ಯದಲ್ಲಿ ಪೌಷ್ಟಿಕ ಚಿಕಿತ್ಸೆಯ ಸಮಗ್ರ ವಿಧಾನ: ವಿಚಾರಸಂಕಿರಣ ಆರೋಗ್ಯಕ್ಕೆ ಪೌಷ್ಟಿಕ ಸೇವನೆ ಅಗತ್ಯ: ಪ್ರೊ. ಧರ್ಮ
ವಿದ್ಯಾಗಿರಿ: ನಾವು ಸೇವಿಸುವ ಆಹಾರ ಯಾವುದೇ ಬಾಹ್ಯ ಅಂಶಗಳಿಂದ ನಿರ್ಧರಿತವಾಗಿರಬಾರದು. ಆದರೆ ಭಾರತದಲ್ಲಿ ಆಹಾರ ವ್ಯವಸ್ಥೆಯು ಸಾರ್ವಜನಿಕ ನೀತಿಯನ್ನು ಅವಲಂಬಿಸಿದೆ. ಹಾಗಾಗಿ ನಾವು ಏನು ಬಯಸುತ್ತವೆಯೋ ಅದನ್ನು ಸೇವಿಸುವ ಬದಲು ನಮ್ಮ ನಡುವೆ ನಿರ್ಮಾಣಗೊಂಡಿರುವ ವ್ಯವಸ್ಥೆಗೆ ಒಳಗಾಗಿ ಆಹಾರವನ್ನು ತೆಗೆದುಕೊಳ್ಳುವ ಸ್ಥಿತಿಗೆ ನಾವು ಬಂದಿದ್ದೇವೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ ಹೇಳಿದರು. ಐಎಪಿಇಎನ್ ಇಂಡಿಯಾದ ಮಂಗಳೂರು ಘಟಕದ ಸಹಕಾರದಲ್ಲಿ ಆಳ್ವಾಸ್ ಶಿಕ್ಷಣಪ್ರತಿಷ್ಠಾನ(ರಿ)ದ ಆತಿಥ್ಯದಲ್ಲಿ ಆಹಾರ, ಪೌಷ್ಟಿಕ ಮತ್ತು ಆಹಾರಪದ್ಧತಿಯ ಪದವಿ ಮತ್ತು ಸ್ನಾತಕೋತ್ತರ ವಿಭಾಗಗಳು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ‘ಕ್ಷೇಮ ಮತ್ತು ಅನಾರೋಗ್ಯದಲ್ಲಿ ಪೌಷ್ಟಿಕ ಚಿಕಿತ್ಸೆಯ ಸಮಗ್ರ ವಿಧಾನ’ ಕುರಿತ ಅಂತರರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ವೈದ್ಯರು ತಿಳಿಸುವ ಆಹಾರದ ಬದಲು ನಮ್ಮ ಧಾರ್ಮಿಕ ಹಾಗೂ ರಾಜಕೀಯ ಮುಖಂಡರು ನಮ್ಮ ಆಹಾರವನ್ನು ನಿರ್ಧಾರ ಮಾಡುತ್ತಿದ್ದಾರೆ. ಝೊಮ್ಯಾಟೋ, ಸ್ವಿಗ್ಗಿ ಬಹುರಾಷ್ಟ್ರೀಯ ಆಹಾರ ವಿತರಣಾ ಕಂಪೆನಿಗಳು ನಮ್ಮ ಮೆನುವನ್ನು…
ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ (ರಿ) ಉಡುಪಿ ಜಿಲ್ಲೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿಯು ಶಿಕ್ಷಕರ ದಿನಾಚರಣೆ ಪ್ರಯುಕ್ತ ಕೊಡ ಮಾಡುವ 2024- 25 ನೇ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಳಹಳ್ಳಿ ಇದರ ಸಹ ಶಿಕ್ಷಕ ಗಣೇಶ್ ಶೆಟ್ಟಿ ಭಾಜನರಾಗಿದ್ದಾರೆ. ಇವರು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಕುಂದಾಪುರ ವಲಯದಿಂದ ಇವರು ಆಯ್ಕೆಯಾಗಿದ್ದು, ಸೆಪ್ಟೆಂಬರ್ 29 ರಂದು ಕುಂಭಾಶಿಯ ಶ್ರೀ ವಿನಾಯಕ ಸಭಾಭವನದಲ್ಲಿ ಜಿಲ್ಲಾ ನ್ಯಾಯಾಧೀಶರಿಂದ ಪ್ರಶಸ್ತಿ ಸ್ವೀಕರಿಸಿದರು.
ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಅ. 02 ರಂದು ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಯನ್ನು ಮಾಡುವ ಮೂಲಕ ಗೌರವ ಸಲ್ಲಿಸಿದರು. ನಂತರ ಮಾತನಾಡಿ ಗಾಂಧೀಜಿಯವರ ಸತ್ಯ, ಅಹಿಂಸೆಯ ಸಿದ್ಧಾಂತವನ್ನು ಇಂದು ಇಡೀ ಮನುಕುಲವೇ ಅನುಸರಿಸಬೇಕಾಗಿದೆ. ಅದೇ ರೀತಿ ಲಾಲ್ ಬಹದ್ದೂರ್ ಶಾಸ್ತ್ರೀಯವರ ಸರಳತೆ, ಪ್ರಾಮಾಣಿಕತೆ, ನಾಯಕತ್ವದ ಗುಣಗಳು ನಮಗೆಲ್ಲರಿಗೂ ಆದರ್ಶವೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ ಮಹಾನ್ ನಾಯಕರನ್ನು ನಾವು ನಿರಂತರ ಸ್ಮರಿಸಬೇಕು. ಗಾಂಧೀ ಚಿಂತನೆಗಳೇ ನಮಗೆ ದಾರಿದೀಪ, ಅವರು ಹಚ್ಚಿದ ದೀಪದಲ್ಲಿ ನಾವು ಮುನ್ನಡೆಯೋಣವೆಂದರು. ಕಾರ್ಯಕ್ರಮದಲ್ಲಿ ಶಾಲಾ ಮ್ಯಾನೇಜರ್ ತ್ಯಾಗೀಶ್ಚಂದ್ರ ಶೆಟ್ಟಿ, ಸಂಸ್ಥೆಯ ಶಿಕ್ಷಕ ವೃಂದ, ಸಹ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅಕ್ಟೋಬರ್ 2ರಂದು ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿರವರ ಜನ್ಮ ದಿನಾಚರಣೆಯ ಪ್ರಯುಕ್ತ ಲಯನ್ಸ್ ಕ್ಲಬ್, ಹಂಗಳೂರು ಹಾಗೂ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಸುಣ್ಣಾರಿ, ಕುಂದಾಪುರ ಇದರ ಸಹಯೋಗದಲ್ಲಿ ಸ್ವಚ್ಛ ಭಾರತ್ ಸ್ವಸ್ಥ ಭಾರತ್ ಅಭಿಯಾನ 2024ರ ಸ್ವಚ್ಛತೆಯ ಸೇವಾ ಕಾರ್ಯಕ್ರಮವನ್ನು ಕೋಡಿ ಕಿನಾರ ಕಡಲ ತೀರದಲ್ಲಿ ಹಮ್ಮಿಕೊಂಡು ಕಡಲ ತಡಿಯ ಭಾಗದಲ್ಲಿರುವ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ವಸ್ತುಗಳನ್ನು ಸಂಪೂರ್ಣವಾಗಿ ಸ್ವಚ್ಛಮಾಡುವ ಅಭಿಯಾನವನ್ನು ನಮ್ಮ ಎಕ್ಸಲೆಂಟ್ ಸಂಸ್ಥೆಯು ಕೈಗೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯು, ಉಪನ್ಯಾಸಕರು, ಶಿಕ್ಷಕ – ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಸಹ ಈ ಕಾಯಕದಲ್ಲಿ ಪಾಲ್ಗೊಂಡಿರುತ್ತಾರೆ.