Author: admin

ಹೆಣ್ಣು ಅಬಲೆ ಅವಳ ರಕ್ಷಣೆಗಾಗಿ ಗಂಡು ಜೊತೆಗಿರಲಿ ಎಂಬ ವಾದ ಎಷ್ಟರ ಮಟ್ಟಿಗೆ ಸರಿ ಎನ್ನುವುದು ನನಗಿನ್ನೂ ಅರ್ಥ ಆಗಲಿಲ್ಲ. ಪುರಾಣದ ಪುಟಗಳನ್ನು ತೆರೆದಂತೆ ಜಗತ್ತಿನ ಬಲಶಾಲಿ ಯೋಧರ ಸಾಲಿನಲ್ಲಿ ನನಗೆ ಹೆಚ್ಚಾಗಿ ಕಾಣುವುದು ಹೆಣ್ಣೇ. ಅದೆಷ್ಟೋ ಧರ್ಮ ಯುದ್ಧಗಳಿಗೆ ಪಾಂಚಜನ್ಯ ಆಗಿರುವುದು ಕೂಡ ಹೆಣ್ಣೇ. ಧರ್ಮ ಕಾರ್ಯದ ಆರಂಭ ಕೊನೆ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಹೆಣ್ಣೇ. ಮಂಥರೆಯ ಕುತಂತ್ರಕ್ಕೆ ರಾಮಾಯಣ ಶುರುವಾದರೆ, ಶೂರ್ಪನಖಿಯ ಸೇಡು, ಕೈಕೇಯಿಯ ಕೇಡು, ಸೀತೆಯ ಪಾಡು, ಇದುವೇ ಅಲ್ವಾ ರಾಮಾಯಣದ ಯುದ್ಧಕ್ಕೆ ಜಾಡು. ಇನ್ನು ಮಹಾಭಾರತ ನಡೆದದ್ದೇ ಜಾರಿದ ಹೆಣ್ಣಿನ ಸೆರಗಿನಿಂದ ಅಂದರೆ ತಪ್ಪಲ್ಲ. ಮಹಾಭಾರತದಲ್ಲೂ ಹೆಣ್ಣಿನದ್ದೇ ಮೇಲುಗೈ. ಕುಂತಿಯ ಕುತೂಹಲ, ದ್ರೌಪದಿಯ ಸೇಡು, ಗಾಂಧಾರಿಯ ಕಣ್ಕಟ್ಟು, ಇವೆಲ್ಲಾ ಧರ್ಮಕಾರ್ಯಕ್ಕೆ ಹೆಣ್ಣುತೆತ್ತ ಬೆಲೆ, ತ್ಯಾಗ ಇರಬಹುದೇನೋ. ಧರ್ಮ ರಕ್ಷಣೆಯ ಅದೆಷ್ಟೋ ಸಂದರ್ಭದಲ್ಲಿ, ಸಾವನ್ನು ಗೆದ್ದೇ ಎಂದು ಮೆರೆಯುತ್ತಿದ್ದ ಅದೆಷ್ಟೋ ರಾಕ್ಷಸ ಸಂಹಾರ ಹೆಣ್ಣಿನಿಂದಲೇ ಆಗಿದೆ. ಹುಟ್ಟಿಸಿ ಜೀವ ನೀಡುವ ತಾಯಿ ಒಡಲ ಬಸಿದು ಕೊಲ್ಲುವ…

Read More

ಬಂಟರ ಯಾನೆ ನಾಡವರ ಮಾತೃ ಸಂಘ ಬಂಟ್ಸ್ ಹಾಸ್ಟೆಲ್ ಮಂಗಳೂರು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಬಂಟರ ಕ್ರೀಡಾಕೂಟ ‘ಬಂಟರ ಕ್ರೀಡೋತ್ಸವ 2024’ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಕ್ರೀಡಾಂಗಣದಲ್ಲಿ ಜರಗಿತು. ಈ ಕ್ರೀಡಾಕೂಟದಲ್ಲಿ ಗುರುಪುರ ಬಂಟರ ಮಾತೃ ಸಂಘವು ಎಲ್ಲಾ ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಿ 9 ಪ್ರಥಮ, 6 ದ್ವಿತೀಯ, 3 ತೃತೀಯ ಬಹುಮಾನಗಳನ್ನು ಪಡೆದು ಸತತ ಮೂರನೇ ವರ್ಷ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಕ್ರೀಡಾಕೂಟವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕಾರ್ಯದರ್ಶಿ ಎಂ. ಸುಂದರ್ ಶೆಟ್ಟಿ ಉದ್ಘಾಟಿಸಿ, ಬಂಟರು ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದು, ಕ್ರೀಡೋತ್ಸವಗಳಿಂದ ಇನ್ನಷ್ಟು ಕ್ರೀಡಾ ಪ್ರತಿಭೆಗಳು ಹೊರಗೆ ಬರಲಿ ಎಂದರು. ಸಂಜೆ ನಡೆದ ಸಮಾರೋಪದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ವಹಿಸಿದ್ದರು. ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಬಿ…

Read More

ಸೆಪ್ಟೆಂಬರ್ 28 ರಂದು ಬಂಟರ ಯಾನೆ ನಾಡವರ ಮಾತೃ ಸಂಘ ಬಂಟ್ಸ್ ಹಾಸ್ಟೆಲ್ ಇದರ ಆಶ್ರಯದಲ್ಲಿ ಗಣೇಶೋತ್ಸವದ ಪ್ರಯುಕ್ತ ನಡೆದ “ಬಂಟ ಕ್ರೀಡೋತ್ಸವ – 2024” ರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮಂಜೇಶ್ವರ ಬಂಟರ ಸಂಘವು ಪುರುಷರ ವಿಭಾಗದಲ್ಲಿ ಜಯಗಳಿಸಿ ಸತತ ಎರಡನೇ ಬಾರಿಗೆ ಪ್ರಥಮ ಬಹುಮಾನ ಪಡೆದು ಇತಿಹಾಸವನ್ನು ದಾಖಲಿಸಿತು. ಮಂಜೇಶ್ವರ ಹಗ್ಗ ಜಗ್ಗಾಟದ ಪುರುಷರ ಹಾಗೂ ಮಹಿಳಾ ತಂಡಗಳಿಗೆ ಉತ್ತಮ ತರಬೇತಿಯನ್ನು ನೀಡಿ ಬಲಿಷ್ಠ ತಂಡ ರಚನೆಯಲ್ಲಿ ಸಹಕರಿಸಿದ ಆಂಜನೇಯ ಕ್ಲಬ್, ಕಣ್ವತೀರ್ಥ ಅಧ್ಯಕ್ಷರು ಮತ್ತು ಸರ್ವ ಸದಸ್ಯರಿಗೆ ಈ ಸಂಧರ್ಭದಲ್ಲಿ ಬಂಟರ ಸಂಘದ ಪರವಾಗಿ ಧನ್ಯವಾದಗಳನ್ನು ಸಮರ್ಪಿಸಿದರು.

Read More

ವಿದ್ಯಾಗಿರಿ: ‘ವೈದ್ಯರು ಮತ್ತು ಎಂಜಿನಿಯರ್‌ಗಳಿಗೆ ಮಾತ್ರಜಗತ್ತಿನಲ್ಲಿ ಬೇಡಿಕೆಇರುವುದಲ್ಲ, ಎಲ್ಲ ಕ್ಷೇತ್ರಗಳ ಪರಿಣತರಅವಶ್ಯಕತೆಇದೆ. ಸೂಕ್ಷ್ಮಜೀವವಿಜ್ಞಾನವು ವಿಜ್ಞಾನ ವಿದ್ಯಾರ್ಥಿಗಳಿಗೂ ನವೀನ’ ಎಂದು ಸೈಂಟ್‌ಅಲೋಷಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಸೂಕ್ಷ್ಮಜೀವ ವಿಜ್ಞಾನ ವಿಭಾಗದ ಮುಖ್ಯ ಸ್ಥೆಡಾ. ವೈಶಾಲಿ ರೈ ಹೇಳಿದರು. ವಿದ್ಯಾಗಿರಿ ಸುಂದರಿ ಆನಂದ ಆಳ್ವ ಆವರಣದ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಶುಕ್ರವಾರ ಸೂಕ್ಷ್ಮ ಜೀವವಿಜ್ಞಾನ ವಿಭಾಗವು ಆಯೋಜಿಸಿದ ಪಿಯು ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಾಗಾರ ‘ಮೈಕ್ರೋಸ್ಪಾರ್ಕ್’ (ಕಾಣದಜಗತ್ತನ್ನು ಅನ್ವೇಷಿಸಿ) ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದ ಹೊಸ ಸಾಧ್ಯತೆ ಮತ್ತು ಆಯಾಮಗಳನ್ನು ಅನ್ವೇಷಿಸಬೇಕು. ನಿಮ್ಮ ಮಾತು ಮತ್ತು ಆಯ್ಕೆಗಳಲ್ಲಿ ಜವಾಬ್ದಾರಿ ಇರಬೇಕು ಎಂದರು. ಥಾಮಸ್‌ ಆಲ್ವಾಎಡಿಸನ್ ವಿದ್ಯುತ್ ದೀಪ ಕಂಡು ಹಿಡಿಯುವ ಪ್ರಯೋಗದಲ್ಲಿ ಸಾವಿರ ಬಾರಿ ವಿಫಲರಾಗಿರಬಹುದು. ಆದರೆ, ಅದು ವೈಫಲ್ಯವಲ್ಲ, ಸಾವಿರ ಸಾಧ್ಯತೆಗಳು ಎಂದು ಅವರು ವಿಶ್ಲೇಷಿಸಿದರು. ಸುಸ್ಥಿರತೆ ಇಂದಿನ ಅಗತ್ಯವಾಗಿದೆ. ಉದ್ಯಮ ಶೀಲತಾ ಕ್ಷೇತ್ರದಲ್ಲಿ ಸೂಕ್ಷ್ಮಜೀವವಿಜ್ಞಾನಕ್ಕೆ ಬೇಡಿಕೆಇದೆ. ಇಂತಹ ಪ್ರಾಯೋಗಿಕ ಕಾರ್ಯಾಗಾರಗಳು ಜ್ಞಾನದ ಹಂಚಿಕೆಗೆ ಸಹಕಾರಿಎಂದು ವಿವರಿಸಿದರು. ನಿಮ್ಮ…

Read More

ಮೂಡುಬಿದಿರೆ: ಕಳೆದ ನಾಲ್ಕು ದಶಕಗಳಿಂದ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ದತ್ತು ಸ್ವೀಕಾರ, ಸಹಾಯಧನ, ಪ್ರೋತ್ಸಾಹಧನ, ವಿವಿಧ ಶಿಷ್ಯವೇತನ, ಬಹುಮಾನ, ಪುರಸ್ಕಾರಗಳ ಮೂಲಕ ನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಬರುತ್ತಿರುವ ‘ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ’ವು ಈ ಬಾರಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿಯೇ ವಿಶೇಷ ಶೈಕ್ಷಣಿಕ ವಿದ್ಯಾರ್ಥಿ ವೇತನವನ್ನು ಫೋಷಿಸಿದೆ. 10ನೇ ತರಗತಿ (ಎಸ್ಸೆಸ್ಸೆಲ್ಸಿ)ಯಲ್ಲಿ ಸಿಬಿಎಸ್‌ಇ (ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ), ಐಸಿಎಸ್‌ಇ (ಭಾರತೀಯ ಪ್ರೌಢಶಿಕ್ಷಣದ ಪ್ರಮಾಣ ಪತ್ರ) ಹಾಗೂ ರಾಜ್ಯ ಪಠ್ಯಕ್ರಮ (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ)ದಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಈ ಶೈಕ್ಷಣಿಕ ವಿದ್ಯಾರ್ಥಿ ವೇತನ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿ ವೇತನಕ್ಕೆ ಅರ್ಹರಾದ ವಿದ್ಯಾರ್ಥಿಗಳು ಅತ್ಯುತ್ತಮ ಮತ್ತು ಪರಿಣಾಮಕಾರಿ ಪದವಿಪೂರ್ವ ಶಿಕ್ಷಣವನ್ನು ಆಳ್ವಾಸ್ ಪದವಿ ಪೂರ್ವ ಕಾಲೇಜಿನಿಂದ ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಷಯಗಳಲ್ಲಿ ಪಡೆಯಬಹುದು. ಗಣಿತ, ವಿಜ್ಞಾನ ಮತ್ತು ಸಾಮಾನ್ಯ ಜ್ಞಾನ ವಿಷಯಗಳ…

Read More

ಮೂಡುಬಿದಿರೆ: ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ನೆಲ, ಜಲವನ್ನು ಉಳಿಸಿಕೊಂಡು ಬರಬೇಕಾದ ಹೊಣೆಗಾರಿಕೆ ಕನ್ನಡಿಗರಾದ ನಮ್ಮೆಲ್ಲರ ಮೇಲಿದೆ. ಸರಕಾರದ ಆಶಯದಂತೆ ನಾವೆಲ್ಲರೂ ನಾಡುನುಡಿ ಪ್ರೀತಿಯ ಜೊತೆ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವಲ್ಲಿ ಶ್ರಮಿಸಬೇಕಾಗಿದೆ ಎಂಬುದಾಗಿ ಮೂಡುಬಿದಿರೆ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ನುಡಿದರು. ರಾಜ್ಯಕ್ಕೆ ಕರ್ನಾಟಕ ಹೆಸರು ನಾಮಕರಣಗೊಂಡು ೫೦ ವರ್ಷಗಳು ತುಂಬಿದ ಸುವರ್ಣ ಸಂಭ್ರಮದ ಸಂದರ್ಭದ ಸಲುವಾಗಿ ‘ಕನ್ನಡ ಜ್ಯೋತಿ ರಥಯಾತ್ರೆ’ಯನ್ನು ಮೂಡುಬಿದಿರೆ ತಾಲೂಕು ಆಡಳಿತ ಸೌಧದ ಬಳಿ ಸ್ವಾಗತಿಸಿ ಮಾತಾನಾಡಿದರು.  ರಥಕ್ಕೆ ಕ.ಸಾ.ಪ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರು, ಕ.ಸಾ.ಪ ಹೋಬಳಿ ಘಟಕದ ಅಧ್ಯಕ್ಷರು ಮತ್ತಿತರ ಆಡಳಿತ ವರ್ಗದವರು ಮಾಲಾರ್ಪಣೆ ನೆರವೇರಿಸಿದರು. ಕಂದಾಯ ನಿರೀಕ್ಷಕರಾದ ಮಂಜುನಾಥ ಹಾಗೂ ಆಡಳಿತ ಸೌಧದ ಅಧಿಕಾರಿಗಳು, ನೌಕರ ವೃಂದ, ಕ್ಷೇತ್ರ ಶಿಕ್ಷಣಾಧಿಕಾರಿ, ಕ.ಸಾ.ಪದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ, ಕಾರ್ಯದರ್ಶಿ ಸದಾನಂದ ನಾರಾವಿ, ಸಂಘಟನಾ ಕಾರ್ಯದರ್ಶಿ ಯತಿರಾಜ ಶೆಟ್ಟಿ, ಹೋಬಳಿ ಅಧ್ಯಕ್ಷ ರಾಮಕೃಷ್ಣ ಶಿರೂರು, ಸರಕಾರಿ ನೌಕರರ ಸಂಘದ…

Read More

ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಅಕ್ಟೋಬರ್ 4 ರಂದು ಕರ್ನಾಟಕ ಸಂಘ ಕತಾರ್ ನ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲು ಹಾಗೂ ಅಬುಧಾಬಿಯ ಇಂಡಿಯಾ ಸೋಶಿಯಲ್ ಆಂಡ್ ಕಲ್ಚರ್ ಸೆಂಟರ್ ಅಧ್ಯಕ್ಷ ಜಯರಾಮ್ ರೈ ಮಿತ್ರಂಪಾಡಿಯವರು ಸಮಾಜಸೇವೆ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಹೃದಯವಾಹಿನಿ ರಜತ ಮಹೋತ್ಸವ ಹಾಗೂ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನದಲ್ಲಿ ಪ್ರತಿಷ್ಠಿತ ನವಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು. ಯುಎಇ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿಯವರು ಸಮ್ಮೇಳನದ ಅಧ್ಯಕ್ಷರಾಗಿ ಆಗಮಿಸಿದ್ದರು.

Read More

ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ನೂತನ ಅಧ್ಯಕ್ಷರಾಗಿ ಕೆ ಬಾಬು ಹೆಗ್ಡೆ ತಗ್ಗರ್ಸೆಯವರು ಆಯ್ಕೆಯಾಗಿದ್ದಾರೆ. ದೇವಸ್ಥಾನದ ಜಗದಾಂಬಿಕ ವಸತಿ ಗೃಹದ ಆಡಳಿತ ಮಂಡಳಿಯ ಸಂಕೀರ್ಣದಲ್ಲಿ ನಡೆದ ವ್ಯವಸ್ಥಾಪನ ಸಮಿತಿಯ ನೂತನ ಸದಸ್ಯರ ಪ್ರಥಮ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ಕುಂದಾಪುರ ಸಹಾಯಕ ಕಮಿಷನರ್ ಮಹೇಶ್ಚಂದ್ರ, ದೇವಳದ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಶೆಟ್ಟಿಯವರನ್ನು ವ್ಯವಸ್ಥಾಪನ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಕೋಟೇಶ್ವರ ಸಹನಾ ಗ್ರೂಪ್ ಆಫ್ ಕಂಪನಿ ಸಿಎಂಡಿ ಸುರೇಂದ್ರ ಶೆಟ್ಟಿಯವರು ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Read More

ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಮೀರಾ ಭಯಂದರ್ ಮುಂಬಯಿ ಇದರ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ ಇವರನ್ನು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು ಗೌರವಿಸಿದರು. ಈ ಸಂದರ್ಭದಲ್ಲಿ ಉದ್ಯಮಿ, ಸಮಾಜ ಸೇವಕ ಡಾ| ಹರೀಶ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಭಾ ಕಾರ್ಯಕ್ರಮದ ನಂತರ ಉಲಾಯಿಡೊಂಜಿ ಪಿದಾಯಿಡೊಂಜಿ ತುಳು ನಾಟಕ ಪ್ರದರ್ಶನಗೊಂಡಿತು.

Read More

ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಬಂಟ್ಸ್ ಹಾಸ್ಟೆಲ್ ನಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಡೆದ ಬಂಟ ಕ್ರೀಡೋತ್ಸವ – 2024 ರಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳೆಯರ ತಂಡ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡದುಕೊಂಡಿದೆ. ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಮಹಿಳೆಯರ ಬಿ ತಂಡ ಎ ತಂಡವನ್ನು ಸೋಲಿಸಿ 25 ಸಾವಿರ ನಗದು ಮತ್ತು ಪ್ರಶಸ್ತಿಯನ್ನು ಪಡೆಯಿತು. ಎ ತಂಡ 15 ಸಾವಿರ ನಗದು ಮತ್ತು ಪ್ರಶಸ್ತಿಯೊಂದಿಗೆ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಪ್ರಶಸ್ತಿ ವಿತರಿಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಕೆ.ಎಂ.ಶೆಟ್ಟಿ, ಕೋಶಾಧಿಕಾರಿ…

Read More