ಬದಿಯಡ್ಕ ಬಂಟರ ಸಂಘದ ನೇತೃತ್ವದಲ್ಲಿ ಆಟಿದ ಕೂಟ, ಬಂಟರ ಸಮ್ಮಿಲನ ಕಾರ್ಯಕ್ರಮವು ಇಲ್ಲಿನ ಇರಾ ಸಭಾಭವನ ವಲಮಲೆಯಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ ರೈ ಪೆರಡಾಲ ವಹಿಸಿದರು. ಜಿಲ್ಲಾ ಬಂಟರ ಭವನದ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ, ಕೊಡುಗೈ ದಾನಿ ಡಾ| ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಬಂಟರು ಈ ಭೂಮಿಯ ಮೂಲ ನಿವಾಸಿಗಳು. ತುಳುನಾಡಿನ ಪ್ರತಿಯೊಂದು ಆಚರಣೆಯ ಕಾರಣೀ ಭೂತರು ಬಂಟ ಸಮಾಜದವರು. ತುಳುನಾಡಿಗೆ ಬಂಟರು ಕೊಟ್ಟ ಕೊಡುಗೆ ಅಪಾರವಾಗಿದೆ. ರಕ್ತಗತವಾಗಿ ನಾಯಕತ್ವ ಗುಣವನ್ನು ಬೆಳೆಸಿಕೊಂಡು ರಾಜಕೀಯ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರ, ಸಂಸ್ಕೃತಿ ಕಲೆಗಳಲ್ಲಿ ಬಂಟರು ತಮ್ಮನ್ನು ತೊಡಗಿಸಿಕೊಂಡು ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಐ ಸುಬ್ಬಯ್ಯ ರೈ ಮಾತನಾಡಿ, ಆಗಸ್ಟ್ 10 ರಂದು ಜಿಲ್ಲಾ ಬಂಟರ ಸಂಘದ ಸಹಯೋಗದೊಂದಿಗೆ ಡಾ| ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ನೇತೃತ್ವದಲ್ಲಿ ಮಂಗಲ್ಪಾಡಿಯಲ್ಲಿ ನಡೆಯುವ ಜಿಲ್ಲಾ ಬಂಟರ ಸಮ್ಮಿಲನ ಮತ್ತು ಆಟಿದ ಕೂಟ ಕಾರ್ಯಕ್ರಮಕ್ಕೆ ಬದಿಯಡ್ಕ ಪಂಚಾಯತಿಯ ಎಲ್ಲಾ ಬಂಟರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರೆ ನೀಡಿದರು.
ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಪಿಜಿ ಚಂದ್ರಹಾಸ ರೈ, ಮಾತೃ ಸಂಘ ಕಾಸರಗೋಡು ತಾಲೂಕು ಸಂಚಾಲಕ ಸುಧೀರ್ ಕುಮಾರ್ ರೈ, ಪೆರಡಾಲ ಕ್ಷೇತ್ರದ ಮೊಕ್ತೇಸರ ಪಿಜಿ ಜಗನ್ನಾಥ ರೈ, ಫಿರ್ಖ ಸಂಘದ ಕಾರ್ಯದರ್ಶಿ ಅಶೋಕ್ ರೈ ಕೊರೆಕ್ಕನ, ಬಂಟರ ಭವನ ನಿರ್ಮಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ ಮಜಿಬೈಲು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶುಭ ಹಾರೈಸಿದರು. ಆಟಿ ತಿಂಗಳ ಮದಿಪು ಉಪನ್ಯಾಸವನ್ನು ದೇವಿ ಪ್ರಸಾದ್ ಶೆಟ್ಟಿ ಬೆಜ್ಜ ಮಾಡಿದರು. ಆಟಿ ತಿಂಗಳ ವಿಶೇಷ ತಿಂಡಿ ತಿನಿಸುಗಳ ಪ್ರದರ್ಶನವನ್ನು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಸುಬ್ಬಯ್ಯ ರೈ ಉದ್ಘಾಟಿಸಿದರು. ಕಾರ್ಯಕ್ರಮ ಭಾಗವಾಗಿದ್ದ ಸ್ಪರ್ಧೆಗಳು ಜರಗಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಗೌರಾರ್ಪಣೆ ನಡೆಯಿತು.
ರಮನಾಥ ರೈ ಮೇಗಿನ ಕಡಾರು, ಜಗನ್ನಾಥ ರೈ ಕೊರೆಕ್ಕನ, ಉದ್ಯಮಿ ಹರಿಪ್ರಸಾದ್ ರೈ ಸ್ಕಂದ, ಇರಾ ಸಭಾಭವನದ ಮಾಲಿಕ ಸಾಮಾಜಿಕ ಮುಂದಾಳು ಗಂಗಾಧರ ಆಳ್ವ ಪೆರಡಾಲ, ರಾಧಾಕೃಷ್ಣ ರೈ ಕಾರ್ಮರು, ಜಯಪ್ರಕಾಶ್ ಶೆಟ್ಟಿ ಕಡಾರು ಬೀಡು, ಜನಪ್ರತಿನಿಧಿಗಳಾದ ಶುಭ ಲತಾ ರೈ, ಬಾಲಕೃಷ್ಣ ಶೆಟ್ಟಿ ಮೇಗಿನ ಕಡಾರು, ಸುರೇಶ್ ಶೆಟ್ಟಿ, ರವೀಂದ್ರನಾಥ ಶೆಟ್ಟಿ ವಲಮಲೆ, ಗಿರೀಶ್ ರೈ ವಳಮಲೆ, ರತೀಶ್ ರೈ ವಳಮಲೆ, ಸಂತೋಷ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಟಿ ತಿಂಗಳ ವಿಶೇಷ ಬಂಟ ಶೈಲಿಯ ಭೋಜನ ಏರ್ಪಾಡು ಮಾಡಲಾಗಿತ್ತು. ಬದಿಯಡ್ಕ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿದರು. ಕೋಶಾಧಿಕಾರಿ ದಯಾನಂದ ರೈ ಮೇಗಿನ ಕಡಾರು ವಂದಿಸಿದರು. ಅಶ್ವಿನಿ ಪ್ರದೀಪ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶ್ರದ್ಧಾ ರೈ ಪ್ರಾರ್ಥನೆ ಹಾಡಿದರು.