Author: admin
ಇಂದು ಡಿಜಿಟಲ್ ಸಾಕ್ಷರತೆಯಿಲ್ಲದೆ ದೈನಂದಿನ ಜೀವನ ನಡೆಯುವುದು ಕಷ್ಟ. ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಜ್ಞಾನವಿಲ್ಲದೆ ಉದ್ಯೋಗ ವ್ಯವಹಾರ ಅಸಾಧ್ಯ ಎಂದು ಉಡುಪಿ ಸ್ವದೇಶ್ ಗ್ರೂಪ್ ಆಫ್ ಹೋಟೆಲ್ಸ್ ನ ಚೇರ್ಮನ್ ಮ್ಯಾನೇಜಿಂಗ್ ಡೈರೆಕ್ಟರ್ ನಾಗೇಶ್ ಹೆಗ್ಡೆ ಹೇಳಿದರು. ಕುಂತಳನಗರದ ಉಡುಪಿ ಗ್ರಾಮೀಣ ಸಂಘದ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಮಂಗಳೂರು ಪ್ರಾಯೋಜಕತ್ವದಲ್ಲಿ ನಡೆಯುವ ಕಂಪ್ಯೂಟರ್ ಉಚಿತ ತರಬೇತಿ ಕಾರ್ಯಕ್ರಮದ 17ನೇ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮದಲ್ಲಿ ಈವರೆಗೆ 360 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಕೌಶಲ್ಯ ಮತ್ತು ಉದ್ಯೋಗ ತರಬೇತಿ ಶಿಬಿರದ ಮೂಲಕ 2200 ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಮಹಿಳೆಯರಿಗೆ ತರಬೇತಿ ನೀಡಲಾಗಿದ್ದು, ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಎರಡು ಬೃಹತ್ ಉದ್ಯೋಗ ಮೇಳದ ಮೂಲಕ 1300 ಅಭ್ಯರ್ಥಿಗಳಿಗೆ ಉದ್ಯೋಗ ದೊರೆತಿದೆ ಎಂದರು.…
ಮೂಡುಬಿದಿರೆ: ‘ಆಳ್ವಾಸ್ ಫಾರ್ಮಸಿಯು 1982ರಲ್ಲಿ ಆರಂಭಗೊಂಡಿದ್ದು, ಆಯುರ್ವೇದ ಔಷಧಿ ಮತ್ತು ಇತರ ಆಯುಷ್ ಉತ್ಪನ್ನಗಳನ್ನು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಉತ್ಪಾದಕರಾಗಿ ಅಭಿವೃದ್ಧಿಗೊಂಡಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು. ಮಿಜಾರಿನ ಆಳ್ವಾ ಫಾರ್ಮಸಿಯಲ್ಲಿ ಸೋಮವಾರ ನಡೆದ ವಿವಿಧ ಔಷಧೀಯ ಉತ್ಪನ್ನಗಳ ‘ಫ್ಯಾಕ್ಟರಿ ಔಟ್ಲೆಟ್, ವೆಬ್ಸೈಟ್ ಬಿಡುಗಡೆ ಮತ್ತು ಟಿವಿಸಿ ಬಿಡುಗಡೆ’ ಸಮಾರಂಭದಲ್ಲಿ ಅವರು ಮಾತನಾಡಿದರು. ಹೇಗೆ ನಮ್ಮ ನೆರಳು ನಮ್ಮನ್ನು ಹಿಂಬಾಲಿಸುತ್ತದೆಯೋ, ಹಾಗೆಯೇ ನಾವು ನಂಬಿರುವ ಮೌಲ್ಯಗಳು ನಮ್ಮನ್ನು ರಾಜ ಮಾರ್ಗದಲ್ಲಿ ಕ್ರಮಿಸುವಂತೆ ಮಾಡುತ್ತವೆ. ಆದರೆ ಇಂದಿನ ಸ್ಪರ್ಧಾತ್ಮಕ ಜಾಹೀರಾತಿನ ಯುಗದಲ್ಲಿ ವಸ್ತುಗಳ ಮಾರುಕಟ್ಟೆ ವಿಧಾನವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಉತ್ಪನ್ನವೊಂದು ತನ್ನ ಅಂತಸತ್ವದ ಜೊತೆ ಜಾಹೀರಾತುಗೊಂಡಾಗ ಜನರನ್ನು ತಲುಪುತ್ತದೆ. ಜಾಹೀರಾತು ಪ್ರಾಮಾಣಿಕರಾಗಿರಬೇಕು. ಜನರಲ್ಲಿ ವಿಶ್ವಾಸರ್ಹತೆಯನ್ನು ಮೂಡಿಸಬೇಕು ಎಂದರು. ಆಳ್ವಾಸ್ ಫಾರ್ಮಸಿಯ ನೂತನ ಉತ್ಪನ್ನ ಸುಕೇಶ್ ಪೋಷಕ ತೈಲವು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿದೆ. ಇನ್ನಿತರ ಔಷಧೀಯ ಉತ್ಪನ್ನಗಳನ್ನು ಉತ್ತಮ ರೀತಿಯಲ್ಲಿ ಮಾರುಕಟ್ಟೆ ಮಾಡಿ,…
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ನವದುರ್ಗ ಲೇಖನ ಯಜ್ಞ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮತ್ತು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ತಾಲೂಕು ಸಮಿತಿಗಳ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಶುಕ್ರವಾರ ಸಂಜೆ ಅಡ್ಯಾರ್ ಗಾರ್ಡನ್ ನಲ್ಲಿ ಜರುಗಿತು. ಕಮಲ ಪ್ರಭಾಕರ್ ಭಟ್, ಅಶ್ವಿನಿ ಮುಹಿಲನ್, ಸುನಂದಾ ಪುರಾಣಿಕ್, ಮಮತಾ ಸುನೀಲ್ ಆಚಾರ್, ವೃಂದ ವೇದವ್ಯಾಸ ಕಾಮತ್, ನಿರ್ಮಿತ ಸತೀಶ್ ಪಟ್ಲ, ಶ್ರೀದುರ್ಗ ಹರೀಶ್ ಪೂಂಜಾ, ಮಮತಾ ಗಟ್ಟಿ, ಮಲ್ಲಿಕಾ ಪ್ರಸಾದ್ ಶೆಟ್ಟಿ ದೀಪ ಪ್ರಜ್ವಲನೆಗೈದರು. ಬಳಿಕ ಮಾತಾಡಿದ ಕಾಪು ಮಾರಿಗುಡಿ ಕ್ಷೇತ್ರದ ಕುಮಾರ ತಂತ್ರಿಗಳು, “ಹೆತ್ತು ಹೊತ್ತ ತಾಯಿಗೆ ಸನಾತನ ಸಂಸ್ಕೃತಿ ಬಹಳಷ್ಟು ಗೌರವವನ್ನು ನೀಡಿದೆ. ಆದೇ ರೀತಿ ಇಡೀ ಲೋಕದ ತಾಯಿಯಾದ ಕಾಪುವಿನ ಮಾರಿಯಮ್ಮ ನಮ್ಮ ಸಂಕಷ್ಟಗಳನ್ನು ಕಳೆಯುತ್ತಾಳೆ ಎಂಬ ನಂಬಿಕೆ ನಮ್ಮಲ್ಲಿದೆ. ಅಮ್ಮನ ಕ್ಷೇತ್ರದ ಜೀರ್ಣೋದ್ಧಾರ ಸಂದರ್ಭದಲ್ಲಿ ಈ ಲೇಖನ ಯಜ್ಞವನ್ನು ಹಮ್ಮಿಕೊಳ್ಳಲಾಗಿದೆ. ಸಾವಿರಾರು ವರ್ಷಗಳ ಹಿಂದೆ ಕಾಪುವಿನ ಮಾರಿಯಮ್ಮ ಪ್ರತಿಷ್ಠಾಪನೆಗೊಂಡಿದ್ದು…
ವಿದ್ಯಾಗಿರಿ: ಶಿಬಿರಾರ್ಥಿಗಳು ರಾಷ್ಟೀಯ ಸೇವಾ ಯೋಜನೆಯ ಧ್ಯೇಯವನ್ನು ಅರಿತುಕೊಳ್ಳುವುದು ಅತ್ಯಗತ್ಯ ಎಂದು ರೆಂಜಾಳ ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಹಾವೀರ ಹೆಗ್ಡೆ ಹೇಳಿದರು. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ರೆಂಜಾಳದ ಸಂಯುಕ್ತ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ” ನಮ್ಮ ಭಾರತಕ್ಕಾಗಿ ನಮ್ಮ ಯುವಜನತೆ ” ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕ ಸೇವೆಯ ಮೂಲಕ ವ್ಯಕ್ತಿತ್ವವನ್ನು ವೃದ್ಧಿಗೊಳಿಸುವ ಮುಖ್ಯ ಉದ್ದೇಶವನ್ನು ಇಟ್ಟುಕೊಂಡ ರಾಷ್ಟೀಯ ಸೇವೆ ಯೋಜನೆಯು ವಿದ್ಯಾರ್ಥಿಗಳನ್ನು ಲೋಕ ಸೇವೆಯ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ರಾಷ್ಟ್ರಪ್ರೇಮ ಮತ್ತು ಸೇವಾಭಾವನೆಗಳನ್ನು ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸಿ, ಮತ್ತಷ್ಟು ಪ್ರೇರಣೆ ನೀಡಬೇಕು ಎಂದು ಆಶಿಸಿದರು. ಒಂದು ವಾರದ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಂಪನ್ಮೂಲ ವ್ಯಕ್ತಿಗಳ ಹಿತವಚನಗಳನ್ನು ಆಲಿಸುವ ಮನೋಭಾವದ ಜೊತೆಗೆ, ಸ್ಥಳೀಯರ ಜೊತೆ ಉತ್ತಮ ರೀತಿಯಲ್ಲಿ ವರ್ತಿಸುವ ಮನೋಭಾವ…
‘ನಮ್ಮ ಸಂಸ್ಕೃತಿ ಮತ್ತು ಜನಜೀವನದೊಂದಿಗೆ ಹಾಸು ಹೊಕ್ಕಾಗಿರುವುದು ಭಾರತೀಯ ಲಲಿತ ಕಲೆಗಳು. ಪ್ರಾಚೀನ ಕಾಲದಿಂದಲೂ ಅವುಗಳಿಗೆ ಆಸರೆಯಾಗಿರುವುದು ಇಲ್ಲಿನ ದೇಗುಲಗಳು. ವಿಶೇಷ ಪರ್ವಕಾಲಗಳಲ್ಲಿ ಸಂಗೀತ, ನೃತ್ಯ, ಯಕ್ಷಗಾನಗಳು ನಡೆಯದಿರುವ ದೈವ ಸಾನಿಧ್ಯಗಳೇ ನಮ್ಮಲ್ಲಿಲ್ಲ. ಅದರಲ್ಲೂ ಯಕ್ಷಗಾನ ತಾಳಮದ್ದಳೆ, ಪುರಾಣ ಪ್ರವಚನ ಮತ್ತು ಬಯಲಾಟಗಳು ಆರಂಭಗೊಂಡಿರುವುದು ಈ ದೇವಸ್ಥಾನಗಳಿಂದಲೇ’ ಎಂದು ಖ್ಯಾತ ಯಕ್ಷಗಾನ ಅರ್ಥಧಾರಿ ಮತ್ತು ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಹರೇಕಳ ಗ್ರಾಮದ ಸಂಪಿಗೆದಡಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಯಕ್ಷಗಾನ ತಾಳಮದ್ದಳೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಶುಭಾಶಂಸನೆಗೈದರು. ಮುಂಬೈ ಉದ್ಯಮಿ ಜಗದೀಶ ಪೂಜಾರಿ ಇರಾ ಆಚೆಬೈಲು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ದಾಸ್ ರೈ ದೆಬ್ಬೇಲಿ ಗುತ್ತು ಅವರ ನೇತೃತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಮಹಾಬಲ…
ಕಾರ್ಕಳ ಜ್ಞಾನಸುಧಾ : ನುಡಿನಮನ ಗಣಿತನಗರ : ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಇತ್ತೀಚೆಗೆ ಅಗಲಿದ ಉದ್ಯಮ ಸಂತ, ಮಾತೃ ಹೃದಯಿ ಉದ್ಯಮಿ, ಟಾಟಾ ಸಮೂಹ ಸಂಸ್ಥೆಗಳ ಮಾಜಿ ಮುಖ್ಯಸ್ಥ ಶ್ರೀ ರತನ್ ಟಾಟಾ ಅವರಿಗೆ ನುಡಿನಮನವನ್ನು ಸಲ್ಲಿಸಲಾಯಿತು. ರತನ್ ಟಾಟಾರ ಜೀವನ ಗಾಥೆಯನ್ನು ಖ್ಯಾತ ವಾಗ್ಮಿ ಶ್ರೀ ರಾಜೇಂದ್ರ ಭಟ್ ಕೆ. ಪ್ರಸ್ತುತಪಡಿಸಿ ನುಡಿ ನಮನ ಸಲ್ಲಿಸಿದರು. ಇದೇ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುಧಾಕರ್, ಟ್ರಸ್ಟಿ ಅನಿಲ್ ಕುಮಾರ್ ಜೈನ್, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ನಿರ್ವಹಣಾಧಿಕಾರಿ ಶ್ರೀ ದಿನೇಶ್ ಎಂ.ಕೊಡವೂರ್, ಉಪಪ್ರಾಂಶುಪಾಲರುಗಳಾದ ಶ್ರೀ ಸಾಹಿತ್ಯ ಮತ್ತು ಶ್ರೀಮತಿ ಉಷಾ ರಾವ್ ಯು ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ. ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕರಾವಳಿ ಕಡಲ ತಡಿಯ ಭಾರ್ಗವ ರಾಮರ ಸುಂದರ ಹಸಿರು ನಾಡಿನ ಸುಣ್ಣಾರಿ ಎನ್ನುವ ಸುಂದರ ಊರಿನಲ್ಲಿ ಸ್ಥಾಪಿತಗೊಂಡಿರುವ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಸಾಧಿಸಿರುವ ಅಗ್ರಗಣ್ಯ ಸಂಸ್ಥೆಯೇ ಎಕ್ಸಲೆಂಟ್ ವಿದ್ಯಾಸಂಸ್ಥೆಯಾಗಿದೆ. ಈ ಸಂಸ್ಥೆಗೆ ಪ್ರತಿ ವರ್ಷವು ವಿವಿಧ ರಾಜ್ಯದ ಹಾಗೂ ಜಿಲ್ಲೆಗಳ ನಾನಾ ಭಾಗದ ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಂಡು ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಹೊಸ ಕ್ರಾಂತಿಯನ್ನು ಸೃಷ್ಠಿಸಿದೆ. ಪ್ರತಿ ವರ್ಷವು ಸಿಇಟಿ, ಜೆಇಇ, ನೀಟ್, ಸಿಎ, ಸಿಎಸ್ ಹಾಗೂ ಬೋರ್ಡ್ಗಳಲ್ಲಿ ಹಲವಾರು ರ್ಯಾಂಕ್ಗಳನ್ನು ಗಳಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಹೆಗ್ಗಳಿಕೆಯ ಸಂಸ್ಥೆಯಾಗಿದೆ. ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೇ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಭಾಗವಹಿಸಿ ಅದೆಷ್ಟೋ ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು ಸಂಸ್ಥಗೆ ಹೆಮ್ಮೆಯ ವಿಚಾರವಾಗಿದೆ. ಹೀಗೆ ಶಿಕ್ಷಣ, ಕ್ರೀಡಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಸಾಂಸ್ಕ್ರತಿಕ ಕ್ರೇತ್ರದಲ್ಲಿ ಹೊಸ ಅಧ್ಯಾಯವನ್ನು ಸೃಷ್ಠಿಮಾಡಲು…
ಮೂಡುಬಿದಿರೆ: ಮೈಸೂರಿನ ಜಿಎಸ್ಎಸ್ಎಸ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಿಳೆಯರ ಕಾಲೇಜು ವತಿಯಿಂದ ನಡೆದ ವಿಟಿಯು ರಾಜ್ಯ ಮಟ್ಟದ ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಮಹಿಳಾ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ. 12-09-2024 ಪತ್ರಿಕಾ ಪ್ರಕಟಣೆಯ ಕೃಪೆಗಾಗಿ ಪದವಿಪೂರ್ವ ಕಾಲೇಜುಗಳ ಮೂಡುಬಿದಿರೆ ತಾಲೂಕು ಮಟ್ಟದ ಖೋ ಖೋ ಪಂದ್ಯಾಟ ಆಳ್ವಾಸ್ಗೆ ಅವಳಿ ಪ್ರಶಸ್ತಿ. ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಹಾಗೂ ಆಳ್ವಾಸ್ ಪದವಿ ಪೂರ್ವ ಕಾಲೇಜು ಮೂಡುಬಿದಿರೆ ಇವರ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ದಿನಾಂಕ 12-09-2023 ರಂದು ನಡೆದ ಮೂಡುಬಿದಿರೆ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ಖೋ-ಖೋ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು, ಮಹಾವೀರ ಪದವಿ ಪೂರ್ವ ಕಾಲೇಜು ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು, ಮಹಾವೀರ ಪದವಿ ಪೂರ್ವ…
ಮೂಡುಬಿದಿರೆ: ಉಡುಪಿಯ ಎಂಜಿಎಂ ಸಂಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಮಹಿಳೆಯರ ಬಾಸ್ಕೆಟ್ಬಾಲ್ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜು ಉಜಿರೆಯ ಎಸ್ಡಿಎಂ ಕಾಲೇಜನ್ನು 25-17 ಅಂಕಗಳ ಅಂತರದೊಂದಿಗೆ ಸೋಲಿಸಿ ಪ್ರಥಮ ಸ್ಥಾನ ಪಡೆಯಿತು. ಆಳ್ವಾಸ್ನ ದಿವ್ಯ ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದರು.
ಮೂಡುಬಿದಿರೆ: ಬೆಂಗಳೂರಿನ ಆದಿತ್ಯ ಕಾಲೇಜ್ ಆಫ್ ಫಾರ್ಮಸಿಯಲ್ಲಿ ನಡೆದ ರಾಜೀವ ಗಾಂಧಿ ವಿಜ್ಞಾನ ವಿವಿಗಳ ಅಂತರ್ ವಲಯ ಮಟ್ಟದ ಮಹಿಳೆಯರ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ನ ನ್ಯಾಚುರೋಪಥಿ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.