Author: admin

ವಿದ್ಯಾಗಿರಿ: ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸಿದ್ದು, ಆಳ್ವಾಸ್ ಶಾಲೆಯ 81 ವಿದ್ಯಾರ್ಥಿಗಳು 625ರಲ್ಲಿ 600ಕ್ಕೂ ಹೆಚ್ಚು ಅಂಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಮಾನ್ಯ (622), ಕ್ಷೀರಜಾ (621), ಹರೀಶ್ ಬಡಿಗೇರ್ (621), ಪವನ್ ಶರಣಬಸಪ್ಪ ಮೇಗೂರ್(621), ರಿಯಾ ವಿದ್ಯಾಧರ ಕಮಟೆ(621), ಪ್ರಜ್ಞಾ ಶೀತಲ್ ಪಾಟೀಲ್ (620), ಸಮೀಕ್ಷಾ ಸಂದೀಪ್ ಸಮಾಜನ್ನವರ್ (620), ಸಿಂಧೂ ಶೀತಲ್ ಚೌಗಲೆ(620), ಸುಪ್ರೀತಾ ಲಕ್ಷ್ಮಣ್ ನಾಯ್ಕ್ (620), ಆದಿತ್ಯ(620), ಚಿನ್ಮಯ್(620) ಅಂಕಗಳನ್ನು ಪಡೆಯುವುದರ ಮೂಲಕ ವಿಶಿಷ್ಠ ಸಾಧನೆ ಮಾಡಿದ್ದಾರೆ. 91 ವಿದ್ಯಾರ್ಥಿಗಳು ಶೇ95ಕ್ಕೂ ಅಧಿಕ, 161 ವಿದ್ಯಾರ್ಥಿಗಳು ಶೇ90ಕ್ಕೂ ಅಧಿಕ, 211 ವಿದ್ಯಾರ್ಥಿಗಳು ಶೇ 85ಕ್ಕೂ ಅಧಿಕ ಅಂಕ ಪಡೆದಿದ್ದಾರೆ ಎಂದರು. ಇಬ್ಬರು ವಿದ್ಯಾರ್ಥಿಗಳು ಐದು ವಿಷಯಗಳಲ್ಲಿ, ನಾಲ್ಕು ವಿಷಯಗಳಲ್ಲಿ 6 ವಿದ್ಯಾರ್ಥಿಗಳು, ಮೂರು…

Read More

ಗಣಿತನಗರ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜಮುಖಿ ಕಾರ್ಯಕ್ರಮ ಒಂದು ಭಾಗವಾಗಿ ಕಳೆದ ವರ್ಷದಿಂದ ವಾಣಿಜ್ಯ ವಿಬಾಗದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. 2025-26ನೇ ಶೈಕ್ಷಣಿಕ ಸಾಲಿನ ವಾಣಿಜ್ಯ ವಿಭಾಗಕ್ಕೆ ದಾಖಲಾತಿ ಬಯಸುವ, ಹತ್ತನೇ ತರಗತಿಯಲ್ಲಿ ಶೇ 95ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪೂರ್ಣ ಉಚಿತ ಶಿಕ್ಷಣ, ಶೇ90ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ, ಶೇ 85ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಕಾಲೇಜು ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದು ಕೊಳ್ಳಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಮಾಹಿತಿಗಾಗಿ : 8147454906 2024-25ರ ಫಲಿತಾಂಶದಲ್ಲಿ ರಕ್ಷಾ ರಾಮ್‍ಚಂದ್ರ ನಾಯಕ್ 597 ಅಂಕಗಳೊಂದಿಗೆ ರಾಜ್ಯಕ್ಕೆ 3ನೇ ಸ್ಥಾನಿಯಾಗಿ ಹಾಗೂ ಉಡುಪಿ ಜಿಲ್ಲೆಗೆ ದ್ವಿತೀಯ…

Read More

ಬಂಟರ ಸಂಘ ಸಜೀಪ ವಲಯ ಇದರ ಆಶ್ರಯದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟ, ವಲಯದ ಸಾಧಕರಿಗೆ ಗೌರವ ಸನ್ಮಾನ ಮತ್ತು ವಲಯ ಬಂಟರ ಸಮ್ಮಿಲನ ಕಾರ್ಯಕ್ರಮವು ಏಪ್ರಿಲ್ 26 ರಂದು ಸಂಕೇಶದಲ್ಲಿ ನಡೆಯಿತು. ರಾತ್ರಿ ನಡೆದ ಬಂಟರ ಸಮ್ಮಿಲನ ಕಾರ್ಯಕ್ರಮವು ವಿವಿಧ ರೀತಿಯ ವಿನೋದ ಕಾರ್ಯಕ್ರಮಗಳು ಮತ್ತು ನೃತ್ಯ ಪ್ರದರ್ಶನಗಳೊಂದಿಗೆ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮವು ಸುರೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಸಮಾಜದ ಹಿರಿಯರಾದ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾಗಿ ಮರು ಆಯ್ಕೆಯಾದ ಎ.ಸಿ ಭಂಡಾರಿ, ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಕಾಂತಾಡಿಗುತ್ತು, ವಿವಿಧ ಸಂಸ್ಥೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರಾಗಿ ಆಯ್ಕೆಯಾದ ಮಹನೀಯರು ಹಾಗೂ ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ವಿದ್ಯಾರ್ಥಿಗಳು ಸೇರಿದಂತೆ ಹದಿನೆಂಟು ಸಾಧಕರಿಗೆ ಗಣ್ಯರ ಉಪಸ್ಥಿತಿಯಲ್ಲಿ ಗೌರವ ಸನ್ಮಾನ ಮಾಡಲಾಯಿತು. ವಿವಿಧ ಕ್ರೀಡಾ ಪಂದ್ಯಾಟಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.…

Read More

ರೈತಾಪಿ ವರ್ಗ ಭಗವಂತನ ಮೇಲೆ ಇರಿಸಿದ ನಂಬಿಕೆ ಮತ್ತು ಭಕ್ತಿ ಭಾವದ ಪ್ರತೀಕವೇ ಕಂಬಳ ಎಂದು ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು. ಬೈಂದೂರು ತಾಲೂಕಿನ ಮುಳ್ಳಿಕಟ್ಟೆಯ ನಗುಸಿಟಿಯಲ್ಲಿ ರೈತ ಸಂಘ ಬೈಂದೂರು ತಾಲೂಕು ಘಟಕದ ಆಶ್ರಯದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ, ಬೈಂದೂರು ತಾಲೂಕು ಕಂಬಳ ಸಮಿತಿ ಮರಾಠಿ ಹಾಗೂ ಗೊಂಡ ಸಮಾಜದ ಸಹಯೋಗದಲ್ಲಿ ನಡೆಯುವ ರಾಜ್ಯಮಟ್ಟದ ಕೋಟಿ ಚೆನ್ನಯ ಜೋಡುಕರೆ ಕಂಬಳ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕತೆಯ ಹೊಡೆತಕ್ಕೆ ಅನೇಕ ಪಾರಂಪರಿಕ ಹಾಗೂ ಸಾಂಸ್ಕೃತಿಕ ಆಚರಣೆಗಳು ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲೂ ಕಂಬಳ ಆಧುನಿಕತೆಗೆ ತೆರೆದುಕೊಂಡಿರುವುದು ಸಂತೋಷದ ಸಂಗತಿ ಬೇಸಾಯ ಉತ್ತಮವಾಗಿರಲಿ, ಮನೆ ವ್ಯವಸ್ಥೆ ಚೆನ್ನಾಗಿರಲಿ ಎಂದು ಪ್ರಾರ್ಥಿಸಿ ಕಂಬಳ ನಡೆಸುವುದು ಸಂಪ್ರದಾಯ. ದಕ್ಷಿಣ ಕನ್ನಡ ಹಾಗೂ ಉಡುಪಿ, ಕಾರ್ಕಳ ಭಾಗದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಜೋಡುಕರೆ ಕಂಬಳ, ದೀಪಕ್ ಕುಮಾರ ಶೆಟ್ಟಿ ಅವರ ನೇತೃತ್ವದಲ್ಲಿ ಈ ಭಾಗದಲ್ಲಿಯೂ ಆಯೋಜನೆಗೊಂಡಿರುವುದು ಕಮಲದ ಉಳಿವಿನ ದೃಷ್ಟಿಯಿಂದ ಉತ್ತಮ ಬೆಳವಣಿಗೆ…

Read More

ಶೈಕ್ಷಣಿಕ ಸೇವಾಸಕ್ತ, ಸಮಾಜ ಸೇವಕ ಮತ್ತು ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ಸುವರ್ಣ ಸಂಭ್ರಮದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ 2024- 25 ನೇ ಸಾಲಿನ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಭಾರತೀಯ ಪ್ರಜೆಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತಿದೆ. ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ 1961 ಸಪ್ಟೆಂಬರ್ 25 ರಂದು ಜನಿಸಿದ ಸಚ್ಚಿದಾನಂದ ಶೆಟ್ಟರು ನರಿಕೊಂಬು ಸರಕಾರಿ ಪ್ರಾಥಮಿಕ ಶಾಲೆ ಮತ್ತು ಪಾಣೆಮಂಗಳೂರು ಶಾರದಾ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿ, ಬಂಟ್ವಾಳದ ಎಸ್‌.ವಿ.ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು. ಮುಂಬೈ ಮಹಾನಗರದಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಭಾರತೀಯ ವಿಮಾನಯಾನ ಹಾಗೂ ವಿವಿಧ ಕಂಪನಿಗಳ ಲೆಕ್ಕಪತ್ರ ವಿಭಾಗದಲ್ಲಿ ಸುಮಾರು 14 ವರ್ಷ ಸೇವೆ ಸಲ್ಲಿಸಿದ್ದಾರೆ. ಬಳಿಕ ಊರಿಗೆ ಹಿಂತಿರುಗಿ ದುರ್ಗಾ ಫೆಸಿಲಿಟೀಸ್ ಮ್ಯಾನೇಜ್ಮೆಂಟ್ ಸರ್ವಿಸಸ್ ಪ್ರೈ. ಲಿ. ಎಂಬ ಸಂಸ್ಥೆಯನ್ನು 2007 ರಲ್ಲಿ…

Read More

ಬಂಟರ ಸಂಘ ಪೈವಳಿಕೆ ಮಂಜೇಶ್ವರ ಇದರ ಆಶ್ರಯದಲ್ಲಿ ಮಹಿಳೆಯರ ಅಂತರ್ ರಾಜ್ಯ ಮಟ್ಟದ ಬಂಟರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳಾ ತಂಡವು 25 ಸಾವಿರ ನಗದಿನೊಂದಿಗೆ ಪ್ರಥಮ ಸ್ಥಾನವನ್ನು ಗೆದ್ದುಕೊಂಡಿದೆ. ಕಯ್ಯಾರು ಎಸ್.ಆರ್.ಎ.ಎಲ್.ಪಿ ಶಾಲಾ ಮೈದಾನದಲ್ಲಿ ನಡೆದ ಲೀಗ್ ಮಾದರಿಯ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಒಟ್ಟು ಆರು ತಂಡಗಳು ಭಾಗವಹಿಸಿದೆ. ಫೈನಲ್ ಪಂದ್ಯಾಟದಲ್ಲಿ ಸುರತ್ಕಲ್ ಬಂಟರ ಮಹಿಳಾ ತಂಡವು ಕುಂಜತ್ತೂರು ಮಹಿಳಾ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಜಯಿಸಿತ್ತು‌. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಂಬೈ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷ, ಉದ್ಯಮಿ ಸದಾಶಿವ ಶೆಟ್ಟಿ ಕನ್ಯಾನ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ವಿತರಿಸಿದರು. ಮಾಜಿ ಸಚಿವ ಬಿ ರಮಾನಾಥ ರೈ, ಪೈವಳಿಕೆ ಬಂಟರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುರತ್ಕಲ್ ತಂಡದ ನಾಯಕಿ ಬಬಿತಾ ಶೆಟ್ಟಿ ಮತ್ತು ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು. ಬೆಸ್ಟ್ ಲಾಕರ್ ಪ್ರಶಸ್ತಿಯನ್ನು ವೈಷ್ಣವಿ ಅಡಪ ಪಡೆದರು. ತಂಡದ ಕೋಚ್ ನಿನಾದ್ ಜಯರಾಮ ಶೆಟ್ಟಿ ಮತ್ತು ಸಂತೋಷ್…

Read More

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸುಣ್ಣಾರಿಯ ಎಕ್ಸಲೆಂಟ್ ಪಿಯು ಕಾಲೇಜು ಶೈಕ್ಷಣಿಕವಾಗಿ ಪ್ರಗತಿಯ ಶಿಖರವನ್ನೇರಿ ಸಾಧನೆಗಳ ಮೇಲೆ ಸಾಧನೆಗಳನ್ನು ಸಾಧಿಸುತ್ತಾ ಬಂದಿರುವುದು ಗಮನಾರ್ಹ ವಿಷಯವಾಗಿದೆ. ಈ ಶೈಕ್ಷಣಿಕ ವಿಷಯದಲ್ಲಿ ಸಾಧನೆಗಳ ಮಹಾಪೂರವನ್ನೇ ಮಾಡಿ ‘ಸಾಧನೆಗಳ ಸರದಾರ’ ಎನ್ನುವ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದೆ. ಬೋರ್ಡ್, ಜೆಇಇ, ಸಿಇಟಿ, ನೀಟ್, ಸಿಎ, ಸಿಎಸ್ ಎನ್ನುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ದೇಶ ಹಾಗೂ ರಾಜ್ಯದಲ್ಲಿಯೇ ಅತ್ಯುತ್ತಮ ರ್ಯಾಂಕ್ ಹಾಗೂ ಉತ್ತೀರ್ಣತೆಯ ಪ್ರಮಾಣವನ್ನು ಪಡೆದುದಲ್ಲದೇ ದಿನಾಂಕ 13-04-2025ರಂದು ಪುಣೆಯ ಖಡಕ್ ವಾಸ್ಲಾದಲ್ಲಿರುವ ಎನ್.ಡಿ.ಎ, ಎನ್.ಎ ತರಬೇತಿ ಸಂಸ್ಥೆಯಲ್ಲಿ ಬಿ.ಟೆಕ್ ಅಥವಾ ಬಿ.ಎಸ್ಸಿ ಪದವಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗಾಗಿ ನಡೆಸುವ ಎನ್ ಡಿ ಎ ಮತ್ತು ಎನ್ ಎ ಪರೀಕ್ಷೆ ಬಲು ಕಠಿಣವಾಗಿದ್ದು, ಇಂತಹ ಕಠಿಣ ಪರೀಕ್ಷೆ ಬರೆದ 6 ಲಕ್ಷ ವಿದ್ಯಾರ್ಥಿಗಳಲ್ಲಿ 7,800 ವಿದ್ಯಾರ್ಥಿಗಳು ಮಾತ್ರ ಎಸ್.ಎಸ್.ಬಿ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಅದರಲ್ಲಿ ನಮ್ಮ ಸಂಸ್ಥೆಯ ಶ್ರೀಹರ್ಷ ಪಿ.ಎನ್ ಎನ್ನುವ ವಿದ್ಯಾರ್ಥಿಯು ಉತ್ತೀರ್ಣತೆಯನ್ನು ಹೊಂದುವ ಮೂಲಕ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಸಾಧನೆಯ…

Read More

ಮೂಡುಬಿದಿರೆ: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್‌ನವರು ನಡೆಸಿದ ನ್ಯಾಷನಲ್ ಅಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ (ನಾಟಾ) ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 19 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಂಚಿತಾ ಆರ್ ರಾವ್, ರಾಜ್ ಬಂಗೇರ, ಪಾರ್ಥ ಎಲ್ಲಪ್ಪಾ ಚಿಕಲ್ಕರ್, ದೇವಾನಂದ, ರೇಣುಕಾ, ಕಲೇಬ್ ಜೇಶ್ರುನ್, ಅಭಿಷೇಕ್ ಶೆಟ್ಟಿ, ಪವನ್ ಬಿಡಿ, ಭಾನುಪ್ರಕಾಶ್, ನಿಖಿಲ್ ಗೌಡ, ಲೈಶುನ್ ಬೆನ್ಡಿಕ್ಟ್ ಫೆರ್ನಾಂಡೀಸ್, ಪ್ರತೀಕ್, ರಿಶಭ್, ಪೂಜಿತಾ ಗೌಡ, ನಾಗರಾಜ್, ನಿಖಿತಾ, ಶ್ರೀ ಸುರೇಶ್ ಪಾಟೀಲ್, ವಿಭಾ ವಿ, ಆಕಾಶ್ ಜಿ ಉತ್ತೀರ್ಣರಾದ ವಿದ್ಯಾರ್ಥಿಗಳಾಗಿದ್ದರೆ. ಆಳ್ವಾಸ್ ಪದವಿಪೂರ್ವ ಕಾಲೇಜಿನ 19 ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದು, ಪರೀಕ್ಷೆ ಎದುರಿಸಿದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.

Read More

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ವತಿಯಿಂದ ಯಡಾಡಿ ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪಿ.ಯು. ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆದ ಮಂಥನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಮಾತನಾಡುತ್ತಾ, ಪ್ರತಿಯೊಂದು ಮಗುವು ಪ್ರತಿಭೆಯ ಕಣಜದಂತೆ. ಮಕ್ಕಳ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸಿದರೆ ಆ ಪ್ರತಿಭೆ ಬೆಳಕನ್ನು ಕಂಡು ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದರೆ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ. ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡು ನಿರಂತರ ಅಭ್ಯಾಸ ಮತ್ತು ಪರಿಶ್ರಮದಿಂದ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಇಂದು ಯಕ್ಷಗಾನ ಮುಂತಾದ ಕಲೆಯಲ್ಲಿ ಆಸಕ್ತಿಯನ್ನು ಹೊಂದಿರುವವರು ಸಾಕಷ್ಟು ಸಾಧನೆ ಮಾಡಿ ಯಶಸ್ಸನ್ನು ಆರ್ಥಿಕ ಸದೃಢತೆಯನ್ನು ಹೊಂದುತ್ತಿದ್ದಾರೆ. ಹಾಗಾಗಿ ಕಲಾ ಪ್ರಕಾರಗಳು ಕೂಡ ಬದುಕನ್ನು ಕಟ್ಟಿಕೊಡುತ್ತವೆ ಎಂದರೆ ತಪ್ಪಾಗಲಾರದು. ಕಲೆ ಮತ್ತು ಕಲಾವಿದರನ್ನು ಗುರುತಿಸುವ,…

Read More

ಪಯ್ಯನೂರಿನ ನವಪುರಂನಲ್ಲಿರುವ ಮತಾತೀತ ಪುಸ್ತಕ ದೇವಾಲಯದಲ್ಲಿ ನಡೆದ ನವಪುರಂ ನವರಸಂ ಸಾಹಿತ್ಯ ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ನವಪುರಂ ದೇವಾಲಯದ ಸಂಚಾಲಕರಾದ ಪ್ರೋಪಿಲ್ ನಾರಾಯಣ ಮಾಸ್ಟರ್, ಸವಿಹೃದಯದ ಕವಿಮಿತ್ರರು ವೇದಿಕೆಯ ಸಂಚಾಲಕರಾದ ಸುಭಾಷ್ ಪೆರ್ಲ ಮತ್ತಿತರರು ಉಪಸ್ಥಿತಿತರಿದ್ದರು.

Read More