Author: admin
ಇಂತಹದೊಂದು ಕಾನೂನು ತಂದ ಮಹಾರಾಷ್ಟ್ರದ ನೆಚ್ಚಿನ ಮುಖ್ಯಮಂತ್ರಿಗೆ ಎಷ್ಟು ಸಲಾಮುಗಳನ್ನು ಹೇಳಬೇಕು ಅರ್ಥ ಆಗ್ತಾ ಇಲ್ಲ. ಸಾಮಾನ್ಯರಿಂದ ಸಾಮಾನ್ಯರ ಮನೆಯಲ್ಲಿ ಇವತ್ತು ಮದುವೆ ಮತ್ತು ಮೆಹಂದಿಯಲ್ಲಿ ಶರಾಬು ಇಲ್ಲದೆ ಕಾರ್ಯಕ್ರಮ ಆಗುವಂತಿಲ್ಲ. ಮಹಾರಾಷ್ಟ್ರದ ನೆಚ್ಚಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಾರಾಯಿ ಹಂಚುವಂತಿಲ್ಲ ಎಂಬ ಕಾನೂನಿನ ಕಡತಕ್ಕೆ ಸಹಿ ಹಾಕಿದ್ದಾರೆ. ಕಾನೂನು ಉಲ್ಲಂಘಿಸಿದಿರಿ ಅಂತಾದರೆ ನಿಮ್ಮನ್ನು ಶಿಕ್ಷಿಸಲಾಗುತ್ತೆ. ಲಕ್ಷ ರೂಪಾಯಿ ದಂಡ ಹಾಕುತ್ತೆ. ಕಟ್ಟು ನಿಟ್ಟಾದ ಕಾನೂನು ಸದ್ಯದಲ್ಲಿಯೇ ಜಾರಿಗೆ ಬರುತ್ತೆ. ಸ್ನೇಹಿತರೇ ಸಪ್ತಪದಿಯ ಸಂಪ್ರದಾಯ ಸಾರಾಯಿ ಸಮಾರಂಭ ಆಗುವುದು ಎಷ್ಟು ಸರಿ? ಆದರೂ ಶ್ರೀಮಂತರಿಂದ ಹಳ್ಳಿಯ ಬಡ ಕುಟುಂಬವೂ ಸಹ ಇವತ್ತಿನ ದಿನಗಳಲ್ಲಿ ಈ ದರಿದ್ರ ಆಚರಣೆಗೆ ಮಾರು ಹೋಗಿರುವುದು ದುರದೃಷ್ಟಕರ. ಗುಂಪಿನಲ್ಲಿ ಗೋವಿಂದ ಎಂಬಂತೆ ಇವತ್ತಿನ ದಿನಗಳಲ್ಲಿ ಕಡು ಬಡ ಜನರೂ ಸಹ ಈ ಕಾರ್ಯಕ್ರಮಕ್ಕೆ ಜೈ ಅನ್ನುವುದು ವಾಡಿಕೆಯಾಗಿದೆ. ಯೋಗ್ಯತೆ ಇಲ್ಲದೆ ಇದ್ದರೂ ಸಹ ಮೆಹಂದಿ ಸಮಾರಂಭ ಮಾಡಿ ಸಾಲದ ಹೊರೆಯಲ್ಲಿ ಬೀಳುವವರನ್ನು ನಾವು ಕಂಡವರು. ಹಾಗೆಯೇ ಸಪ್ತಪದಿಯ…
ತುಳುನಾಡಿನ ಶಕ್ತಿಯಾದ ಸಾಂಪ್ರದಾಯಿಕ ಕಂಬಳ ಕ್ರೀಡೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು. ಪಡುಪಣಂಬೂರು ಅರಮನೆ ಗದ್ದೆಯಲ್ಲಿ ನಡೆದ ಮೂಲ್ಕಿ ಸೀಮೆ ಅರಸು ಕಂಬಳದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಂಬಳ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು. ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಐಕಳಬಾವ ಡಾ| ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಈ ಬಾರಿ ಸರಕಾರವು 24 ಕಂಬಳಗಳಿಗೆ ಐದು ಲಕ್ಷ ರೂಪಾಯಿ ಹಣ ಅನುದಾನ ಮಂಜೂರು ಮಾಡಿದೆ. ತುಳುನಾಡಿನ ಹೆಮ್ಮೆಯ ಕಂಬಳಗಳಿಗೆ ಭಾರತ ಸರಕಾರದ ಮಾನ್ಯತೆ ಪಡೆಯಲು ಸ್ಥಳೀಯ ಸಂಸದರ ಮೂಲಕ ಪ್ರಯತ್ನ ನಡೆಸಲಾಗುವುದು ಎಂದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಮಾತನಾಡಿ, ವಿಶ್ವ ವ್ಯಾಪಿ ಕಂಬಳ ಕ್ರೀಡೆ ಸೂರ್ಯ ಚಂದ್ರರಿರುವ ತನಕ ಮುಂದುವರಿಯುವುದು ಶತಹ ಸಿದ್ಧ ಎಂದರು. ಮಾಜಿ ಸಚಿವರಾದ ಬಿ. ರಮಾನಾಥ ರೈ ಮತ್ತು ಕೆ. ಅಭಯ್…
ಕ್ರಿಸ್ಮಸ್ ಎನ್ನುವ ಪದದ ಅರ್ಥವೇ ಹಂಚಿಕೊಳ್ಳುವಿಕೆ ಎಂದು. ಮನುಷ್ಯರ ನಡುವೆ ಪ್ರೀತಿಯನ್ನು ಹಂಚಿ ಎಲ್ಲರೂ ಸಮಾನರು ಎನ್ನುವ ಸಂದೇಶವನ್ನು ಸಾರಿ ದೈವತ್ವವನ್ನು ನೀಡಲು ಏಸುವು ಭೂಮಿಯಲ್ಲಿ ಜನ್ಮ ತಾಳಿದನು. ಪ್ರತಿಯೊಂದು ಮಗುವಿನ ಬೆಳವಣಿಗೆಗೆ ಪ್ರೀತಿ ಬಹು ಮುಖ್ಯವಾದುದು. ಮಕ್ಕಳ ವ್ಯಕ್ತಿತ್ವವು ಯಾವಾಗಲೂ ಶ್ವೇತ ವರ್ಣದಂತೆ ಶುಭ್ರವಾಗಿರಬೇಕು. ನಮ್ಮ ಪ್ರತಿಯೊಂದು ಹಬ್ಬಗಳು ಎಲ್ಲರನ್ನು ಪ್ರೀತಿಯಿಂದ ಒಗ್ಗೂಡಿಸಬೇಕು ಮತ್ತು ಎಲ್ಲರ ಮನಸ್ಸಿನಲ್ಲಿ ನಿರ್ಮಲತೆಯನ್ನು ಉಂಟುಮಾಡಬೇಕು. ಜಗತ್ತಿನಲ್ಲಿ ತಪ್ಪನ್ನು ತಿದ್ದಿ ಪರಿವರ್ತನೆಗೆ ಅವಕಾಶ ಮಾಡಿಕೊಟ್ಟಾಗ ಒಳ್ಳೆಯ ಸಮಾಜ ಕಟ್ಟಲು ಸಾಧ್ಯವಾಗುತ್ತದೆ” ಎಂದು ಸೇಂಟ್ ಫಿಯೂಸ್ ಚರ್ಚ್ ಹಂಗಳೂರಿನ ರೆವೆರೆಂಡ್ ಫಾದರ್ ಅಲ್ಬರ್ಟ್ ಕ್ರಾಸ್ತಾ ಹೇಳಿದರು. ಅವರು ಕೋಟೇಶ್ವರ ಯಡಾಡಿ- ಮತ್ಯಾಡಿ ಸುಜ್ಞಾನ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕ್ರಿಸ್ಮಸ್ ಸಂಭ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮೆಂಬರ್ ಆಗಿರುವ ರೊಟೇರಿಯನ್ ಜುಡಿತ್ ಮೆಂಡೋನ್ಸಾ ಮಾತನಾಡುತ್ತ “ಈ ನಾಡಿನಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಬುದ್ಧ, ಬಸವ…
ಮಕ್ಕಳ ತಜ್ಞ ವೈದ್ಯರು ಕೆಲವು ವಿಚಾರದಲ್ಲಿ ಬಹಳ ಅದೃಷ್ಟವಂತರು. ಹೆಚ್ಚಿನ ಮಕ್ಕಳು ಅವರ ಪಾಡಿಗೆ ಅವರೇ ಚೇತರಿಸಿಕೊಳ್ಳುತ್ತಾರೆ. ಜೀವನ ಪರ್ಯಂತ ಬಳಲಬಹುದಾದ ಬಿಪಿ, ಶುಗರ್, ಮೂತ್ರಪಿಂಡದ ವೈಫಲ್ಯಗಳಿಂದ ಬಳಲುವ ಮಕ್ಕಳ ಸಂಖ್ಯೆ ತೀರಾ ಕಮ್ಮಿ. ಮಕ್ಕಳ ವಾರ್ಡುಗಳಿಗೆ ಮತ್ತೆ ಐಸಿಯುವಿಗೆ ಅನಾರೋಗ್ಯದಿಂದ ನರಳುತ್ತಾ ಬರುವ ಮಕ್ಕಳು ಒಂದೆರಡು ದಿನದಲ್ಲಿ ಹುಷಾರಾಗುತ್ತಾರೆ ಮತ್ತು ಆಟವಾಡುತ್ತಾ ನಲಿದಾಡಲು ಪ್ರಾರಂಭಿಸುತ್ತಾರೆ. ಆದರೆ ಜೀವನದ ಕಹಿಸತ್ಯಗಳನ್ನು ಅರಿಯಲು ನೀವು ಸಾವನ್ನು ಎದುರು ನೋಡುತ್ತಿರುವ ಹಿರಿಯರನ್ನು ಹತ್ತಿರದಿಂದ ನೋಡಬೇಕು! ಕೆಲವು ದಿನಗಳ ಹಿಂದೆ ಪರಿಚಯವಿರುವ ಹಿರಿಯ ರೋಗಿಯೊಬ್ಬರನ್ನು ನೋಡಲು ಐಸಿಯು ಕಡೆಗೆ ಹೋಗಿದ್ದೆ. ಜೀವನದ ಕೊನೆಯ ದಿನಗಳನ್ನು ಎಣಿಸುತ್ತಾ ಕುಳಿತಿರುವ ಅನೇಕ ಹಿರಿಯರ ಕಣ್ಣುಗಳನ್ನು ನೋಡಿದೆ. ಹೆಚ್ಚಿನವರ ಕಣ್ಣಿನಲ್ಲಿ ತಮ್ಮ ಜೀವನ ಹೇಗೆ ಕಳೆದು ಹೋಯಿತು ಎಂಬ ಪ್ರಶ್ನಾರ್ಥಕ ಚಿಹ್ನೆಯಿತ್ತು. ಕೆಲವರ ಕಣ್ಣುಗಳಲ್ಲಿ ಮೃತ್ಯುವಿನ ಭಯ. ಉಳಿದವರ ಕಣ್ಣುಗಳಲ್ಲಿ ತಮ್ಮ ಜೀವನವನ್ನು ತಮ್ಮ ಇಷ್ಟದ ಅನುಸಾರ ಬದುಕಲಿಲ್ಲವೆಂಬ ನಿರಾಶೆಯಿತ್ತು. ಈ ಎಪ್ಪತ್ತು ಮೀರಿದ ಹಿರಿಯರು ಮೂವತ್ತು ನಲವತ್ತು ವರ್ಷಗಳ…
ಅಂತರಾಷ್ಟ್ರೀಯ ಜೇಸಿಐ ಪುತ್ತೂರು ವಲಯ 15ರ ನೂತನ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭವು ಡಿಸೆಂಬರ್ 26ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಲಿದೆ. ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಗೌರವ ಅತಿಥಿಗಳಾಗಿ ಸಂತ ಫಿಲೋಮೀನಾ ಕಾಲೇಜಿನ ಪ್ರಾಂಶುಪಾಲ ವ. ಆಂಟನಿ ಪ್ರಕಾಶ್ ಮೊಂತೇರೊ, ಜೇಸಿಐ ಇಂಡಿಯಾದ ವಲಯ 15, ರೀಜನ್ ಇದರ ವಲಯ ಉಪಾಧ್ಯಕ್ಷ (ಝಡ್ ವಿಪಿ)ಸುಹಾಸ್ ಎಪಿಎಸ್ ರವರು ಭಾಗವಹಿಸಲಿದ್ದಾರೆ. ನೂತನ ತಂಡ : 2025 ನೇ ಸಾಲಿನ ಪುತ್ತೂರು ಜೇಸಿಐ ಅಧ್ಯಕ್ಷರಾಗಿ ಭಾಗ್ಯೇಶ್ ರೈ, ಉಪಾಧ್ಯಕ್ಷರುಗಳಾಗಿ ಜಿತೇಶ್ ರೈ (ನಿರ್ವಹಣೆ), ಶರತ್ ಶ್ರೀನಿವಾಸ್ (ತರಬೇತಿ), ರಾಜಶೇಖರ್ (ಕಾರ್ಯಕ್ರಮ), ವಿಘ್ನೇಶ್ (ಬೆಳವಣಿಗೆ ಮತ್ತು ಅಭಿವೃದ್ಧಿ), ಸುಹಾಸ್ ರೈ (ಉದ್ಯಮ), ನಿರೋಶ್ (ಸಾರ್ವಜನಿಕ ಸಂಪರ್ಕ ಮಾರ್ಕೆಟಿಂಗ್), ಕಾರ್ಯದರ್ಶಿ ಮನೋಹರ್ ಪಾಟಾಳಿ, ಜೊತೆ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಕೋಶಾಧಿಕಾರಿ ರುಕ್ಮಯ, ಮಹಿಳಾ ಜೇಸಿ ಸಂಯೋಜಕರಾಗಿ ಆಶಾ ಮೋಹನ್, ಜೆಜೆಸಿ ವಿಂಗ್ ಚೇರ್ ಪರ್ಸನ್ ಸ್ವಸ್ಥಿ…
ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು, ಸುಣ್ಣಾರಿ, ಕುಂದಾಪುರವು ಒಂದರ ನಂತರ ಒಂದು ಅದ್ಭುತ ಸಾಧನೆ ಮಾಡುತ್ತ ಹೊಸ ಶಕೆಯನ್ನು ನಿರಂತರ ಮಾಡುತ್ತಾ ಬಂದಿರುವ ಗ್ರಾಮೀಣ ಭಾಗದ ಹೆಗ್ಗಳಿಕೆಯ ವಿದ್ಯಾಸಂಸ್ಥೆಯಾಗಿದೆ. ಈ ವಿದ್ಯಾಸಂಸ್ಥೆಯು ‘ಜೆಇಇ’ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಷ್ಟ್ರವೇ ಹೆಮ್ಮೆಯಿಂದ ಗುರುತಿಸಿದ ಸಂಸ್ಥೆ, ‘ನೀಟ್’ನಲ್ಲಿಯೂ ಸಹ ಈಡೀ ರಾಜ್ಯವೇ ಗುರುತಿಸಿದ್ದು ಮಾತ್ರವಲ್ಲದೇ 35 ವಿದ್ಯಾರ್ಥಿಗಳು ಮೆಡಿಕಲ್ನಲ್ಲಿ ಉಚಿತ ಸೀಟ್ನನ್ನು ಪಡೆದಿರುವ ವಿದ್ಯಾಸಂಸ್ಥೆ, ಕರ್ನಾಟಕ ಬೋರ್ಡ್ ಪರೀಕ್ಷೆಯಲ್ಲಿ 13 ರ್ಯಾಂಕ್ಗಳನ್ನು ಗಳಿಸಿ ರಾಜ್ಯದ ಎಲ್ಲಾ ಜನತೆಯು ಎಕ್ಸಲೆಂಟ್ ಸಾಧನೆಯತ್ತ ನಿಬ್ಬೆರಗಾಗುವಂತೆ ಮಾಡಿದ ವಿದ್ಯಾಸಂಸ್ಥೆ, ಅಷ್ಟೆ ಅಲ್ಲದೇ ವಾಣಿಜ್ಯ ವಿಭಾಗದಲ್ಲಿಯೂ ‘ಸಿಎ’, ‘ಸಿಎಸ್’ ಎನ್ನುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ದೇಶದಲ್ಲೇ ಅತ್ಯಧಿಕ 31.58% ಉತ್ತೀರ್ಣತೆಯನ್ನು ಗಳಿಸಿ, ಪ್ರಥಮ ಹಂತದಲ್ಲಿಯೇ ಉತ್ತೀರ್ಣಗೊಂಡ ಹೆಗ್ಗಳಿಕೆಯ ಸಂಸ್ಥೆಯಾಗಿ ಈಡೀ ಶಿಕ್ಷಣವಲಯದಲ್ಲಿಯೇ ಹೊಸ ಶೈಕ್ಷಣಿಕ ಅಲೆಯನ್ನು ಸೃಷ್ಟಿಸಿದ ಒಂದು ವಿದ್ಯಾಸಂಸ್ಥೆಯಾಗಿದೆ. ಕೇವಲ ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಗುರುತಿಸಿಕೊಂಡು ಬಂದಿರುವುದು ಮಾತ್ರವಲ್ಲದೇ ಕ್ರೀಡಾಕ್ಷೇತ್ರದಲ್ಲಿ ಒಂದರ ಮೇಲೆ ಒಂದು ಸಾಧನೆಯನ್ನು ಮಾಡುತ್ತಾ ಬಂದಿರುವುದು ಗಮನಾರ್ಹ. ವಾಲಿಬಾಲ್, ಪುಟ್ಬಾಲ್,…
ಪ್ರತೀ ವರ್ಷ ಆಯೋಜಿಸಿಕೊಂಡು ಬಂದಿರುವ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ “ನೆರವು” ಸಹಾಯಹಸ್ತ ಪ್ರದಾನ ಕಾರ್ಯಕ್ರಮ ಡಿಸೆಂಬರ್ 25ರಂದು ಮಧ್ಯಾಹ್ನ ಗಂಟೆ 3.30ಕ್ಕೆ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅದಮ್ಯ ಚೇತನ ಫೌಂಡೇಶನ್ನಿನ ಅಧ್ಯಕ್ಷರು ಹಾಗೂ ಸಹ ಸಂಸ್ಥಾಪಕರೂ ಆಗಿರುವ ಡಾ. ತೇಜಸ್ವಿನಿ ಅನಂತಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ, ಕಾಪು ವಿಧನಾಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಎಂ.ಆರ್.ಜಿ.ಗ್ರೂಪ್ ನ ಆಡಳಿತ ನಿರ್ದೇಶಕರಾದ ಗೌರವ್ ಪಿ ಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದು ಎಂ.ಆರ್.ಜಿ.ಗ್ರೂಪ್ ಛೇರ್ಮನ್ ಡಾ| ಕೆ.ಪ್ರಕಾಶ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. “ಈ ವರ್ಷ ಒಟ್ಟು 3,000 ಕುಟುಂಬಗಳಿಗೆ 6 ಕೋಟಿ ರೂಪಾಯಿಗೂ ಮಿಕ್ಕಿ ನೆರವನ್ನು ವಿತರಿಸಲಾಗುತ್ತಿದೆ. ಇದರಿಂದ ಸುಮಾರು ಹದಿನೈದು ಸಾವಿರ ಮಂದಿಗೆ ಪ್ರಯೋಜನವಾಗಲಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಒಂದು ನಿಗದಿತ ಮಾನದಂಡವನ್ನು ಅನುಸರಿಸಲಾಗಿದೆ. ಅರ್ಜಿಗಳನ್ನು ಪರಿಶೀಲಿಸಿ, ಅವಶ್ಯ…
ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿಯಿಂದ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ 60ನೇ ಹುಟ್ಟುಹಬ್ಬ ಆಚರಣೆ ಮತ್ತು ಚಾವಡಿ ಸನ್ಮಾನ ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದ ಬಂಟರ ಚಾವಡಿಯಲ್ಲಿ ಡಿಸೆಂಬರ್ 21ರಂದು ಜರಗಿತು. ಕಾವು ಹೇಮನಾಥ ಶೆಟ್ಟಿಯವರನ್ನು ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಹೇಮನಾಥ ಶೆಟ್ಟಿಯವರು ಕೇಕ್ ಕತ್ತರಿಸಿದರು. ಬಳಿಕ ಮಾತನಾಡಿದ ಹೇಮನಾಥ ಶೆಟ್ಟಿಯವರು ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈಯವರ ಆಶಯದಂತೆ ಬಂಟರ ಭವನದ ಬಂಟೆರೆ ಚಾವಡಿಯ ಪ್ರಥಮ ಕಾರ್ಯಕ್ರಮದಲ್ಲಿ ನನ್ನ ಹುಟ್ಟುಹಬ್ಬದ ಆಚರಣೆ ಮತ್ತು ಸನ್ಮಾನ ದೊರೆತಿರುವುದು ತುಂಬಾ ಸಂತೋಷ ತಂದಿದೆ. ಮಾತೃ ಸಂಘದ ಪುತ್ತೂರು ಸಂಚಾಲಕರಾಗಿರುವ ಕುಂಬ್ರ ದುರ್ಗಾಪ್ರಸಾದ್ ರೈಯವರನ್ನು ನಾನು ಬಹಳ ವರ್ಷದಿಂದ ಬಲ್ಲೆ. ಅವರ ಯೋಚನೆ ಮತ್ತು ಯೋಜನೆ…
ಕುಂದಾಪುರ ತಾಲೂಕು ಯುವ ಬಂಟರ ಸಂಘದಿಂದ 90 ರ ಸಂಭ್ರಮದಲ್ಲಿರುವ ನಾಡಿನ ಗಣ್ಯಮಾನ್ಯರಾದ ಬಸ್ರೂರು ಅಪ್ಪಣ್ಣ ಹೆಗ್ಡೆಯವರನ್ನು ಅವರ ಸ್ವಗ್ರಹದಲ್ಲಿ ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ ವತ್ಸಲ ದಯಾನಂದ ಶೆಟ್ಟಿ, ಸಂಘದ ಪೋಷಕರಾದ ವಿಜಯ ಶೆಟ್ಟಿ ಸಟ್ಟಾಡಿ ಮತ್ತು ಸಂಘದ ಸ್ಥಾಪಕಾಧ್ಯಕ್ಷರು ಮತ್ತು ದಶಮ ಸಂಭ್ರಮದ ಅಧ್ಯಕ್ಷರಾದ ಡಾ| ಅಂಪಾರು ನಿತ್ಯಾನಂದ ಶೆಟ್ಟಿಯವರು ಸನ್ಮಾನಿಸಿ ಗೌರವಿಸಿದರು. ಸಂಘದ ಅಧ್ಯಕ್ಷರಾದ ನಿತೀಶ್ ಶೆಟ್ಟಿ ಬಸ್ರೂರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಸುಕೇಶ ಶೆಟ್ಟಿ ಹೊಸ್ಮಠ, ಸುನಿಲ್ ಶೆಟ್ಟಿ ಹೇರಿಕುದ್ರು, ಕೋಶಾಧಿಕಾರಿ ಭರತ್ ಶೆಟ್ಟಿ ಜಾಂಬೂರು, ಉಪಾಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಸುರೇಶ ಶೆಟ್ಟಿ ಕಾರಿಬೈಲ್ ಜೆಡ್ಡು, ಸುಕುಮಾರ ಶೆಟ್ಟಿ ಹೇರಿಕುದ್ರು, ದಿನಕರ ಶೆಟ್ಟಿ ಹರ್ಕಾಡಿ, ಸುರೇಂದ್ರ ಶೆಟ್ಟಿ ಗುಳ್ವಾಡಿ, ರೋಷನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಡಾ| ಚೇತನ ಕುಮಾರ್ ಶೆಟ್ಟಿ ಕೊವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಶಮ ಸಂಭ್ರಮದ ಕೋಶಾಧಿಕಾರಿ ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿ…
ವಿದ್ಯಾಗಿರಿ: ಪ್ರಾಚೀನ ಮತ್ತು ಆಧುನಿಕ ವೈದ್ಯಕೀಯ ಪದ್ಧತಿಗಳಲ್ಲಿ ಹೃದಯಕ್ಕೆ ಕೇಂದ್ರ ಸ್ಥಾನವನ್ನು ನೀಡಲಾಗಿದೆ ಎಂದು ಆಳ್ವಾಸ್ ಫಾರ್ಮಾಸಿ ಕಾಲೇಜಿನ ಪ್ರಾಂಶುಪಾಲ ಡಾ. ಎಮ್. ಮಂಜುನಾಥ್ ಶೆಟ್ಟಿ ಹೇಳಿದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ವತಿಯಿಂದ ಶನಿವಾರ ನಡೆದ ‘ಜ್ಞಾನಚಕ್ಷು-2024′- ‘ಈಸಿಜಿಯ ಮೂಲಭೂತ ಅಂಶಗಳು ಹಾಗೂ ಅದರ ವ್ಯಾಖ್ಯಾನಗಳು’ ವಿಷಯದ ರಾಷ್ಟ್ರ ಮಟ್ಟದ ಕಾರ್ಯಗಾರದಲ್ಲಿ ಮಾತನಾಡಿದರು. ಆಯುರ್ವೇದದಲ್ಲಿ ಹೃದಯವನ್ನು ಪ್ರಜ್ಞೆ ಮತ್ತು ಜೀವಿಯ ಪ್ರಮುಖ ಅಂಗವೆಂದು ಪರಿಗಣಿಸಲಾಗಿದೆ. ಆಯುರ್ವೇದ ತಜ್ಞರಿಗೆ ಹೃದಯದ ಬಗ್ಗೆ ಹೆಚ್ಚಿನ ಜ್ಞಾನಗಳಿಸಲು ಎಲೆಕ್ಟ್ರೋಕಾರ್ಡಿಯೋಗ್ರಫಿ ಅಥವಾ ಇಸಿಜಿ ಉಪಯುಕ್ತವಾಗಿದೆ. 1901ರಲ್ಲಿ ಡಚ್ನ ವಿಲ್ಲೆಮ್ ಐಂಥೋವನ್ ಇಸಿಜಿಯನ್ನು ಕಂಡು ಹಿಡಿದರು. ಅವರ ಈ ಆವಿಷ್ಕಾರಕ್ಕಾಗಿ 1924ರಲ್ಲಿ ನೊಬೆಲ್ ಪ್ರಶಸ್ತಿಯು ಲಭಿಸಿತು. ಈ ಕಾರ್ಯಾಗಾರವು ಇಸಿಜಿಯ ತಾಂತ್ರಿಕ ಅಂಶಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಆಯುರ್ವೇದ ವೈದ್ಯರಿಗೆ ತಮ್ಮ ವೃತ್ತಿಯಲ್ಲಿ ನಾವೀನ್ಯತೆಯನ್ನು ಪಡೆಯಲು ಸಹಕಾರಿಯಾಗಿದೆ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ ವಿನಯ್ ಆಳ್ವ ಮಾತನಾಡಿ, ನಮ್ಮ ದೃಷ್ಟಿಕೋನ ಬದಲಾಯಿಸಿಕೊಂಡರೆ ಎಲ್ಲವೂ ವಿಶೇಷವಾಗಿ ಕಾಣಿಸುತ್ತದೆ.…