ಹೊಸನಗರ ಬಂಟರ ನಾಡವರ ಸಂಘದ ಅಧೀನಕ್ಕೊಳಪಟ್ಟ ನಿಟ್ಟೂರು ಮತ್ತು ಅದರ ಅಕ್ಕ ಪಕ್ಕದ ಗ್ರಾಮಗಳ ಬಂಟ ಸಮುದಾಯದ ಬಂಧುಗಳನ್ನು ಒಂದೆಡೆ ಸೇರಿಸಿ ತಾಲ್ಲೂಕು ಸಂಘದ ಸಂಘಟನೆ ಮತ್ತು ಇನ್ನಿತರೆ ವಿಷಯಗಳ ಕುರಿತು ಚರ್ಚಿಸುವ ಸಲುವಾಗಿ ನಿಟ್ಟೂರಿನ ನವರತ್ನ ಪ್ಯಾಲೇಸ್ ನಲ್ಲಿ ಯುವ ಉದ್ಯಮಿ, ಪತ್ರಿಕೋದ್ಯಮಿ ಜಯರಾಮ್ ಶೆಟ್ಟಿಯವರ ನೇತೃತ್ವದಲ್ಲಿ ಶ್ರಾವಣ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಭೆಯನ್ನು ಆಯೋಜಿಸುವಲ್ಲಿ ತಾಲ್ಲೂಕು ಸಂಘದ ನಿರ್ದೇಶಕರಾದ ಜಯರಾಮ್ ಶೆಟ್ಟಿ, ಪ್ರಸಿದ್ಧ ವಕೀಲರಾದ ಮೋಹನ್ ಶೆಟ್ಟಿ, ಮಾಜಿ ಕಾರ್ಯದರ್ಶಿಗಳಾದ ಶಿವರಾಮ್ ಶೆಟ್ಟಿ, ಅಲ್ಲದೇ ಆ ಭಾಗದ ಮುಖಂಡರು ಪ್ರಮುಖ ಪಾತ್ರ ವಹಿಸಿದ್ದರು. ಸಭೆಯಲ್ಲಿ ತಾಲ್ಲೂಕು ಸಂಘದ ಸಂಘಟನೆ, ಸದಸ್ಯತ್ವ ಅಭಿಯಾನ, ಸಂಘದ ಮೂಲಕ ದೊರೆಯುವ ಸೌಲಭ್ಯಗಳು, ಸಮುದಾಯದ ಬಂಧುಗಳ ನಡುವೆ ಬಾಂಧವ್ಯ ಮುಂತಾದ ವಿಷಯಗಳ ಕುರಿತು ಸುಧೀರ್ಘ ಚರ್ಚೆ ನಡೆಯಿತು. ಕಾರ್ಯಕ್ರಮದ ಆಯೋಜಕರಾದ ಜಯರಾಮ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ಉಪಾಧ್ಯಕ್ಷ ನಗರ ಚಂದ್ರಶೇಖರ ಶೆಟ್ಟಿ ಮತ್ತು ಮುಡುಬ ಶಿವರಾಮ ಶೆಟ್ಟಿ, ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾದ ಚಂದ್ರ ಶೆಟ್ಟಿ ಸಂಪೆಕಟ್ಟೆ, ರಿಪ್ಪನಪೇಟೆ ವಲಯ ಸಂಘದ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಹಿರಿಯರಾದ ರಾಮಣ್ಣ ಮಾಸ್ಟ್ರು, ಕಾನೂನು ಸಲಹೆಗಾರರು ಮತ್ತು ಪ್ರಸಿದ್ಧ ವಕೀಲರಾದ ಮೋಹನ್ ಶೆಟ್ಟಿ, ಮಾಜಿ ಕಾರ್ಯದರ್ಶಿಗಳಾದ ಶಿವರಾಮ್ ಶೆಟ್ಟಿ, ನಿಟ್ಟೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ಚಂದ್ರಮತಿ ಶೆಟ್ಟಿ, ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಶಂಕರ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ರಾಜೇಶ್ ಶೆಟ್ಟಿ, ತಾಲ್ಲೂಕು ಸಂಘದ ನಿರ್ದೇಶಕರುಗಳಾದ ಶರತ್ ಶೆಟ್ಟಿ, ನವೀನ್ ಶೆಟ್ಟಿ, ಶ್ರೀಮತಿ ಶಶಿಕಲಾ ಹರೀಶ್ ಶೆಟ್ಟಿ ಹಾಗೂ ಉಪನ್ಯಾಸಕರಾದ ಶ್ರೀಧರ ಶೆಟ್ಟಿ, ಉಮೇಶ್ ಶೆಟ್ಟಿ ಕೋಡೂರು, ಭಾಸ್ಕರ್ ಶೆಟ್ಟಿ ರಿಪ್ಪನಪೇಟೆ, ಶ್ರೀಮತಿ ನಾಗರತ್ನ ಶೆಟ್ಟಿ, ಶ್ರೀಮತಿ ಪ್ರಮೀಳ ಶೆಟ್ಟಿ, ಶ್ರೀನಿವಾಸ ಶೆಟ್ಟಿ ಮತ್ತಿಮನೆ, ಅಲ್ಲದೇ ನಿಟ್ಟೂರು ಭಾಗದ ಸಮುದಾಯದ ಬಂಧುಗಳು, ಮುಖಂಡರು ಭಾಗವಹಿಸಿದ್ದರು.
ಮಾಜಿ ಕಾರ್ಯದರ್ಶಿ ಶಿವರಾಮ್ ಶೆಟ್ಟಿಯವರು ಸಂಘದ ಹಿನ್ನೆಲೆಯ ಬಗ್ಗೆ ಮಾತನ್ನಾಡಿದರೆ, ಸಂಘದ ಅವಶ್ಯಕತೆಯ ಬಗ್ಗೆ ಉಪನ್ಯಾಸಕ ಶ್ರೀಧರ್ ಶೆಟ್ಟಿಯವರು ಅರ್ಥಪೂರ್ಣವಾಗಿ ಮಾತನಾಡಿದರು. ಉಪನ್ಯಾಸಕಿ ಶ್ರೀಮತಿ ಮಾಲಾಶ್ರೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮೋಹನ್ ಶೆಟ್ಟಿಯವರು ಸ್ವಾಗತಿಸಿ ವಂದಿಸಿದರು.