Author: admin
ಫಾರ್ಚ್ಯೂನ್ ಅಕಾಡೆಮಿ ಆಂಡ್ ಚಾರಿಟೇಬಲ್ ಟ್ರಸ್ಟ್ ನ ಆಡಳಿತಕ್ಕೊಳಪಟ್ಟ ಫಾರ್ಚ್ಯೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಹಾಗೂ ಬಿ.ಡಿ. ಶೆಟ್ಟಿ ಕಾಲೇಜು ಮಾಬುಕಳ ಇದರ ವಾರ್ಷಿಕೋತ್ಸವಕ್ಕೆ ಜೂನ್ 2 ರಂದು ನಿವೃತ್ತ ಪ್ರಾಂಶುಪಾಲ ಡಾ.ಬಿ ಜಗದೀಶ್ ಶೆಟ್ಟಿಯವರು ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವಿವೇಕಾನಂದರ ಆದರ್ಶ ತತ್ತ್ವ ಹಾಗೂ ಮೌಲ್ಯ ಅಳವಡಿಸಿಕೊಂಡು, ಸಮಾಜದಲ್ಲಿ ಪ್ರಾಮಾಣಿಕ ವ್ಯಕ್ತಿಯಾಗಿ ಬೆಳೆಯಬೇಕು ಎಂದರು. ಫಾರ್ಚ್ಯೂನ್ ಅಕಾಡೆಮಿಕ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ದೈವಿಕ್ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಛೇರ್ಮನ್ ತಾರಾನಾಥ್ ಶೆಟ್ಟಿ ಅವರು ವಿವಿಧ ಸ್ವರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಚೇತನಾ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ, ವಿದ್ಯಾರ್ಥಿ ನಾಯಕರಾದ ಕೋಟೇಶ್, ಎಂ.ವಿ. ಹರಿಕೃಷ್ಣ ಪ್ರಾಂಶುಪಾಲೆ ಸ್ಮಿತಾ ಮೋಲ್, ಉಪನ್ಯಾಸಕರಾದ ಅನುರಾಧಾ, ಅಂಬಿಕಾ, ಪ್ರೀತಿಕಾ ಇದ್ದರು. ಉಪನ್ಯಾಸಕಿ ಅಮಿಷಾ ಸ್ವಾಗತಿಸಿ, ವೀಣಾ ನಿರೂಪಿಸಿದರು. ಉಪನ್ಯಾಸಕ ಸುಕುಮಾರ್ ಶೆಟ್ಟಿಗಾರ್ ವಂದಿಸಿದರು.
ಯಕ್ಷ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಜೀವನ ಶಿಸ್ತಿನ ಅರಿವನ್ನು ಮೂಡಿಸುತ್ತದೆ. ಸಮಾಜ ಮುಖಿ ಚಿಂತನೆಯನ್ನು ಬಿತ್ತುತ್ತಾ ತಿಳುವಳಿಕೆಯನ್ನು ಹೆಚ್ಚಿಸುವ ಮಾಧ್ಯಮವಾಗಿ ಯಕ್ಷಗಾನವು ಒಂದು ರಮ್ಯ ಅದ್ಬುತ ಕಲೆ ಎಂದು ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ) ಕಟೀಲು -ಎಕ್ಕಾರು ಘಟಕದ ಆಧ್ಯಕ್ಷ ಗಿರೀಶ್ ಎಂ ಶೆಟ್ಟಿ ಕಟೀಲು ತಿಳಿಸಿದರು. ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಜೂನ್ 15, ಇಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ) ಮಂಗಳೂರು ಇದರ ವತಿಯಿಂದ ನಡೆಯುವ ಎರಡನೇ ವರ್ಷದ ಯಕ್ಷ ಶಿಕ್ಷಣ ಕಾರ್ಯಕ್ರಮದ ಉದ್ಘಾಟನೆ ಸಮಾರಂಭ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಿರೀಶ್ ಶೆಟ್ಟಿ ಅಧ್ಯಕ್ಷರು, ಯಕ್ಷದ್ರುವ ಪಟ್ಲ ಫೌಂಡೇಶನ್ (ರಿ) ಕಟೀಲು ಎಕ್ಕಾರು ಘಟಕ ಇವರು ವಹಿಸಿದ್ದರು. ಯಕ್ಷ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣಕ್ಕೆ ಸಂಬಂಧಿಸಿ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು.ವೇದಿಕೆಯಲ್ಲಿ ಸುದೀಪ್ ಅಮೀನ್, ಎಕ್ಕಾರು ಘಟಕದ ಸಂಚಾಲಕರಾದ…
ಪುತ್ತೂರು ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಕಾವು ಹೇಮನಾಥ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೇಮನಾಥ ಶೆಟ್ಟಿಯವರು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಬನ್ನೂರು ಗುತ್ತು ಮನೆಯಲ್ಲಿ ಡಿಸೆಂಬರ್ 21 1964 ರಲ್ಲಿ ಕಾವು ಅಂತಪ್ಪ ಶೆಟ್ಟಿ ಮತ್ತು ಬನ್ನೂರು ಗುತ್ತು ತಾರಾ ಅಂತಪ್ಪ ಶೆಟ್ಟಿ ದಂಪತಿಗಳ ತೃತೀಯ ಪುತ್ರನಾಗಿ ಜನಿಸಿದರು. ತನ್ನ ಪ್ರಾಥಮಿಕ ಶಿಕ್ಷಣವನ್ನು ಮಡಿಕೇರಿ ಸೈಂಟ್ ಮೈಕೆಲ್ ಶಾಲೆಯಲ್ಲಿ ಪ್ರಾರಂಭಿಸಿ ನಂತರ ಮಾಡ್ನೂರು ಕಾವು ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪೆರ್ನಾಜೆ ಸೀತಾರಾಘವ ಪ್ರೌಢಶಾಲೆ ಮತ್ತು, ಪ್ರೌಢ ಶಿಕ್ಷಣವನ್ನು ಪಡೆದು, ಸುಳ್ಯ ಕೆವಿಜಿ ಶಿಕ್ಷಣ ಸಂಸ್ಥೆಯಲ್ಲಿ ಪದವಿಪೂರ್ಣ ಶಿಕ್ಷಣವನ್ನು ಅಭ್ಯಸಿಸಿದರು. ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಬಿಎ ಪದವಿ ಶಿಕ್ಷಣವನ್ನು ಪಡೆದರು. ಎನ್. ಎಸ್. ಯು. ಐ ಪುತ್ತೂರು ತಾಲೂಕು ಅಧ್ಯಕ್ಷರಾಗಿ, ಮಂಗಳೂರು ವಿಶ್ವ ವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ, 9 ವರ್ಷಗಳ ಕಾಲ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕರಾಗಿ, ರಾಜಕೀಯವಾಗಿ ಜಿಲ್ಲೆ,…
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ, ಮಾನ್ಯ ಮುಖ್ಯಮಂತ್ರಿಗಳು ಹಾಗೂ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯರವರು ಮತ್ತು ಮಾನ್ಯ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು ಹಾಗೂ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಮಹಿಳೆಯರನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ದೇಶದ ಆಡಳಿತದ ಮುಖ್ಯವಾಹಿನಿಗೆ ತರುವ ಹಾಗೂ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಸ್ವರೂಪ ಎನ್ ಶೆಟ್ಟಿರವರನ್ನು ನೇಮಕ ಮಾಡಲಾಗಿದೆ.
ವಿದ್ಯಾದೇವಿ ಸರಸ್ವತಿಯನ್ನು ಆರಾಧಿಸುವಂತಹ ಸಂಸ್ಕಾರವನ್ನು ಅಳವಡಿಸುವ ದೇಗುಲ ಆಗಬೇಕು. ಅದು ಈ ಪಲ್ಲಿಪ್ಪಾಡಿಯಲ್ಲಿ ನಿರ್ಮಾಣವಾಗಲಿದೆ. ಆದರ್ಶವಾಗಿರುವಂತಹ ವಿದ್ಯಾರ್ಥಿಗಳು ಈ ವಿದ್ಯಾದೇಗುಲದಿಂದ ಹೊರಬರಲಿ ಎಂದು ಮಂಗಳೂರು ರಾಮಕೃಷ್ಣ ಮಠದ ಅಧಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್‌ರವರು ತಿಳಿಸಿದರು. ಅವರು ಆದಿತ್ಯವಾರ ನಡೆದ ಬಂಟ್ವಾಳ ತಾಲೂಕಿನ ಪಲ್ಲಿಪಾಡಿಯಲ್ಲಿ ಪೊಳಲಿಯಲ್ಲಿರುವ ಶ್ರೀ ರಾಮಕೃಷ್ಣ ತಪೋವನದ ಆಶ್ರಯದಲ್ಲಿ ೬ ಎಕರೆ ಜಮೀನಿನಲ್ಲಿ ರೂ. ೭೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗುರುಕುಲ ಮಾದರಿಯ ‘ರಾಮಕೃಷ್ಣ ವಿದ್ಯಾದೇಗುಲ’ಕ್ಕೆ ಶಿಲಾನ್ಯಾಸ ಮಾಡಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿ ಒಳ್ಳೆಯ ಜವಾಬ್ದಾರಿ ಅರಿತ, ಒಳೆಯ ವ್ಯಕ್ತಿತ್ವ ಹೊಂದಿರುವ, ಉತ್ತಮ ಗುರಿಯನ್ನು ಹೊಂದಿರುವ ಒಂದು ಆಶಾ ಮನೋಭಾವ ಹೊಂದಿರುವ ವ್ಯಕ್ತಿಗಳನ್ನು ನಿರ್ಮಾಣ ಮಾಡುವ ವಿದ್ಯಾಭ್ಯಾಸ ಇಂದಿನ ಮಕ್ಕಳಿಗೆ ಸಿಗಬೇಕು. ಅದು ಈ ವಿದ್ಯಾದೇಗುಲದಿಂದ ನೆರವೇರಲಿ ಎಂದು ಹಾರೈಸಿದರು. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿ ಪಾರಂಪರಿಕ ಭಾಷೆಯಾದ ಸಂಸ್ಕೃತ, ರಾಷ್ಟ್ರಭಾಷೆಯಾದ ಹಿಂದಿ, ಮಾತೃಭಾಷೆಯಾದ ಕನ್ನಡ ಮತ್ತು…
ಯಕ್ಷ ಧ್ರುವ ಪಟ್ಲ ಫೌಂಡೇಶನ್ ಇದರ ಯಕ್ಷ ಶಿಕ್ಷಣದ ಪ್ರಾರಂಭವು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ಜರಗಿತು. ಬಂಟ್ವಾಳ ಘಟಕದ ಅಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್, ಯಕ್ಷಗಾನ ಕಲಾವಿದ ಸರಪ್ಪಾಡಿ ಅಶೋಕ್ ಶೆಟ್ಟಿ, ಯಕ್ಷ ಗುರುಗಳಾದ ಓಂ ಪ್ರಕಾಶ್, ಘಟಕದ ಪ್ರಧಾನ ಕಾರ್ಯದರ್ಶಿ ದೇವದಾಸ್ ಶೆಟ್ಟಿ, ಕಮಲಾಕ್ಷ, ಶಿಕ್ಷಕ ದೇವದಾಸ್ ಮತ್ತಿತರರು ಉಪಸ್ಥಿತರಿದ್ದರು
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ವಿದ್ಯಾಗಿರಿಯ ಜಗಜ್ಯೋತಿ ಬಸವೇಶ್ವರ ವೃತ್ತದ, ಜ್ಞಾನಯೋಗಿ ಸರ್ವಜ್ಞ ಆವರಣದಲ್ಲಿ ನೂತನವಾಗಿ ನಿರ್ಮಾಣವಾದ ಕಾಲೇಜು ಸಂಕೀರ್ಣ ಹಾಗೂ ವಿದ್ಯಾರ್ಥಿನಿ ವಸತಿ ನಿಲಯದ ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು. ನೂತನ ಕಾಲೇಜು ಸಂಕೀರ್ಣ-‘ಜಗನ್ಮೋಹನ’ದ ಉದ್ಘಾಟನೆಯನ್ನು ಕರ್ನಾಟಕ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮಖ್ಯ ಆಯುಕ್ತ ಪಿಜಿಆರ್ ಸಿಂಧ್ಯ, ಉದ್ಯಮಿ ಕೆ ಶ್ರೀಪತಿ ಭಟ್ ನೆರವೇರಿಸಿದರು. ಡಾ ಎಂ ಮೋಹನ ಆಳ್ವರ ಧರ್ಮಪತ್ನಿ ದಿ.ಶೋಭಾ ಆಳ್ವರ ನೆನಪಿಗಾಗಿ ನೂತನ ವಸತಿ ನಿಲಯಕ್ಕೆ ‘ಶೋಭಾಯಮಾನ’ ಎಂದು ಹೆಸರಿಡಲಾಗಿದ್ದು, ಇದರ ಉದ್ಘಾಟನೆಯನ್ನು ಲಲಿತ ರಾಮಣ್ಣ ಶೆಟ್ಟಿ ಮತ್ತು ಜಯಶ್ರೀ ಅಮರನಾಥ್ ಶೆಟ್ಟಿ ನೇರವೇರಿಸಿದರು. ‘ಜಗನ್ಮೋಹನ’ದ ವಿಶೇಷತೆಗಳು: ಅತ್ಯಾಧುನಿಕ ವ್ಯವಸ್ಥೆಯನ್ನೊಳಗೊಂಡ ನೂತನ ಕಾಲೇಜು ಕಟ್ಟಡ -‘ಜಗನ್ಮೋಹನ’ದಲ್ಲಿ 68 ತರಗತಿ ಕೊಠಡಿಗಳಿದ್ದು, 3 ಭೌತಶಾಸ್ತ್ರದ ಲ್ಯಾಬ್, 3 ರಸಾಯಶಾಸ್ತ್ರದ ಲ್ಯಾಬ್ ಹಾಗೂ 2 ಜೀವಶಾಸ್ತ್ರದ ಲ್ಯಾಬ್ ಹಾಗೂ ಒಂದು ಸುಸಜ್ಜಿತ ಕಂಪ್ಯೂಟರ್ ಲ್ಯಾಬ್‍ನ್ನು ಹೊಂದಿದೆ. ವಿಶಾಲವಾದ ಸ್ಟಡಿಹಾಲ್‍ನ್ನು ಹೊಂದಿರುವ ಈ ಕಟ್ಟಡ, ಪ್ರತಿಧ್ವನಿ ಮುಕ್ತ…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ಆಯೋಜನೆಗೊಂಡ ‘ಸಮೃದ್ಧಿ’ -ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ ಭಾನುವಾರ ಸಂಪನ್ನಗೊಂಡಿತು. ಮಹಾಮೇಳದ ಮೂರನೇ ಹಾಗೂ ಕೊನೆಯ ದಿನದಂದು ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು. ಸ್ವಚ್ಛತಾ ಸೇನಾನಿಗಳ ಸೇವೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಳ್ಳುವ ಪ್ರತಿ ಕಾರ್ಯಕ್ರಮದಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಆಳ್ವಾಸ್ ನುಡಿಸಿರಿ, ಜಂಬೂರಿ , ವಿರಾಸತ್‍ನಂತಹ ಕಾರ್ಯಕ್ರಮಗಳ ಯಶಸ್ಸಿನ ಹಿಂದೆ ವೈಭವದ ಜೊತೆ ಜೊತೆಯಲ್ಲಿ ಸ್ವಚ್ಛತೆಯೆಡೆಗಿನ ಕಾಳಜಿ ಎಲ್ಲರ ಮನಗೆಲ್ಲುತ್ತದೆ. ಅದೇ ರೀತಿ ಈ ಭಾರಿಯ ಸಮೃದ್ಧಿ ಹಲಸು – ವೈವಿದ್ಯಮಯ ಹಣ್ಣುಗಳ ಆಹಾರೋತ್ಸವ ಹಾಗೂ ಕೃಷಿಪರೀಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳದಲ್ಲಿ ಸಾವಿರಾರು ಜನರು ಸೇರಿದ್ದರೂ ಸಂಸ್ಥೆಯ ಸ್ವಚ್ಛತಾ ಸೇನಾನಿಗಳು ಅಹರ್ನಿಶಿ ದುಡಿದಿದ್ದಾರೆ. ಸುಮಾರು 30 ಜನ ಕಾರ್ಮಿಕರು ಬೆಳಿಗ್ಗೆ 7:30…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾಗಿರಿಯ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿ ಸಿರಿ) ವೇದಿಕೆಯಲ್ಲಿ ನಡೆಯುತ್ತಿರುವ ‘ಸಮೃದ್ಧಿ’ -ಹಲಸು ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳದ ಎರಡನೇ ದಿನವೂ ಉತ್ತಮ ಜನಸ್ಪಂದನೆ ದೊರೆಯಿತು. ಮೂರು ದಿನಗಳ ಮೇಳದಲ್ಲಿ ಒಟ್ಟು 287 ಸ್ಟಾಲ್‍ಗಳನ್ನು ಪಾಲ್ಗೊಂಡಿದ್ದು, ಮೊದಲ ದಿನ 15000 ದಷ್ಟು ಜನರು ಪಾಲ್ಗೊಂಡರೆ, ಎರಡನೇ ದಿನ ಶನಿವಾರ 20000 ಕ್ಕೂ ಅಧಿಕ ಜನ ಆಗಮಿಸಿದರು. ಕೇರಳದ ಪಾಲಕ್ಕಾಡ್‍ನಿಂದ ಆಗಮಿಸಿದ್ದ, ಜಯಚಂದ್ರ ವಿವಿಧ ಬಗೆಯ ತರಕಾರಿ ಬೀಜಗಳ ಸ್ಟಾಲ್ ತೆರೆದಿದ್ದು, ತರಹೇವಾರಿ ಬೀಜಗಳ ಸಂಗ್ರಹ ಅವರ ಬಳಿಯಲ್ಲಿತ್ತು. ಅಲಸಂಡೆಯ 6 ತರಹದ ಬೀಜ, ಬೆಂಡೆಯ 3 ತರಹದ ಬೀಜ, ಬದನೆಯ 2 ತರಹದ ಬೀಜಗಳು ಲಭ್ಯವಿರುವುದಲ್ಲದೇ, ಒಟ್ಟು 60 ಬಗೆಯ ತರಕಾರಿ, ಹೂವು ಹಣ್ಣುಗಳ ಬೀಜಗಳು ವ್ಯಾಪಾರಕ್ಕೆ ಲಭ್ಯವಿದ್ದವು. ಚಿಕ್ಕ ಪ್ಯಾಕೆಟ್‍ನಲ್ಲಿ ಲಭ್ಯವಿದ್ದ ಬೀಜಗಳಿಗೆ 20ರೂ ಮುಖಬೆಲೆಯಾದರೆ, 3…
ದೇವರಲ್ಲಿ ಅರ್ಪಣಾ ಭಾವದ ಭಕ್ತಿ, ಸತತ ಪರಿಶ್ರಮ, ಸಮಾಜದ ಸತತ ಸಂಪರ್ಕಗಳಿಂದ ಇಂದು ಬಂಟ ಸಮುದಾಯ ಮಾತ್ರವಲ್ಲ ಸಮಸ್ತ ಮಾನವ ಸಮುದಾಯದ ಮಧ್ಯೆ ಧ್ರುವತಾರೆಯಂತೆ ಪ್ರಕಾಶಮಾನರಾಗಿರುವ ಪ್ರಕಾಶ್ ಶೆಟ್ಟರ ಹೆಸರು ಇಂದು ಅನ್ವರ್ಥವಾಗಿದೆ. ಪ್ರಕಾಶ್ ಶೆಟ್ಟರು ತಾನು ಬೆಳೆಯುತ್ತಿರುವಂತೆಯೇ ತಾನು ಹುಟ್ಟಿದ ಸಮುದಾಯದ ಏಳಿಗೆಗೂ ಕಂಕಣ ಬದ್ಧರಾಗಿ ದುಡಿಯುತ್ತಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಬಹು ಎತ್ತರಕ್ಕೇರಿದರೂ ತಮ್ಮ ಸ್ನೇಹ ಸೌಹಾರ್ದ ಆತ್ಮೀಯತೆಗಳಿಂದ ಎಂಥವರನ್ನೂ ತನ್ನ ಮಿತ್ರವಲಯಕ್ಕೆ ಸೇರಿಸಿಕೊಳ್ಳುವ ಅತ್ಯಂತ ಉದಾರಿ ಸಜ್ಜನ. ತನ್ನ ಹೋಟೆಲ್ ಉದ್ಯಮದಲ್ಲಿ ಗ್ರಾಹಕರನ್ನೂ ತನ್ನ ಕುಟುಂಬದ ಸದಸ್ಯರಂತೆ ಪ್ರೀತಿಸುತ್ತಾ ಅವರ ಅವಶ್ಯಕತೆ ಏನೇ ಇರಲಿ, ದೂರುಗಳಿರಲಿ, ಶ್ಲಾಘನೆ ಇರಲಿ ಎಲ್ಲವನ್ನೂ ಸಮಚಿತ್ತದಿಂದ ಆಲಿಸುವ ತಮ್ಮ ವಿಶಿಷ್ಟ ಗುಣ ಇಂದು ಹೋಟೆಲ್ ಹಾಸ್ಪಿಟಾಲಿಟಿ ಉದ್ಯಮದಲ್ಲಿ ಕೀರ್ತಿಶಿಖರದ ತುತ್ತ ತುದಿಯಲ್ಲಿದ್ದರೂ ತಮ್ಮ ದೃಷ್ಠಿ ತಾನು ಹುಟ್ಟಿ ಬೆಳೆದ ನೆಲದ ತಳದಲ್ಲಿದೆ. ಇವರ ಸಮಾಜಸೇವೆಯನ್ನು ಪರಿಗಣಿಸಿ ಮಂಗಳೂರು ವಿಶ್ವವಿದ್ಯಾನಿಲಯವು ಜೂನ್ 15 ರಂದು ಮಂಗಳೂರು ವಿ.ವಿ 42 ನೇಯ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲರಾದ…