Author: admin
ರಾಷ್ಟ್ರ ರಾಜಧಾನಿಯಲ್ಲಿ ತುಳುನಾಡಿನ ಸಂಸ್ಕೃತಿ ಪರಂಪರೆ ಪ್ರತಿಬಿಂಬಿಸಲು ಅವಿರತ ಶ್ರಮಿಸುತ್ತಿರುವ ಪ್ರತಿಷ್ಠಿತ ಸಂಘಟನೆ ‘ದೆಹಲಿ ತುಳುಸಿರಿ’ಯ ಅಧ್ಯಕ್ಷರಾಗಿ ವಸಂತ ಶೆಟ್ಟಿ ಬೆಳ್ಳಾರೆ ಪುನರಾಯ್ಕೆಯಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತುಳುನಾಡಿನ ಮಣ್ಣಿನ ಸೊಗಡನ್ನು ಪಸರಿಸುತ್ತಿರುವ ದೆಹಲಿ ತುಳುಸಿರಿಯ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ವಸಂತ ಶೆಟ್ಟಿ ಬೆಳ್ಳಾರೆ ಆಯ್ಕೆಯಾಗಿದ್ದಾರೆ. ಅವರು ದೆಹಲಿ ಕರ್ನಾಟಕ ಸಂಘ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಸಾಂಸ್ಕೃತಿಕ ಸಂಘಟಕರಾಗಿದ್ದಾರೆ. ಇದೇ ವೇಳೆ, ‘ದೆಹಲಿ ತುಳುಸಿರಿ’ಯ ಉಪಾಧ್ಯಕ್ಷರಾಗಿ ಬಿ. ಪ್ರದೀಪ್, ಮಾಲಿನಿ ಪ್ರಹ್ಲಾದ್, ಕಾರ್ಯದರ್ಶಿಯಾಗಿ ಅರವಿಂದ ಬಿಜೈ, ಜತೆ ಕಾರ್ಯದರ್ಶಿಗಳಾಗಿ ಪ್ರಕಾಶ್ ಶೆಟ್ಟಿ ಉಳೆಪಾಡಿ, ಕೃಷ್ಣರಾಜ್ ಕೆ. ಎನ್., ಖಜಾಂಚಿಯಾಗಿ ವಿಖ್ಯಾತ್ ಸಿ. ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲಕ್ಷ್ಮಣ್ ನಾಯ್ಕ, ಡ್ಯಾರೆಲ್ ಜೆಸಿಕ ಫೆನಾಂಡಿಸ್, ಹರ್ಷಿತಾ ಎಸ್. ಕೆ.. ಪ್ರಶಾಂತ್ ಕುಮಾರ್, ಮೆಲ್ವಿನ್ ಗ್ಯಾಬೆಲ್ ಲೋಬೊ, ಕಾರ್ತಿಕ್ ರೈ, ರವಿ, ಯು.ಎ.ಶರೀಫ್, ರಾಘವೇಂದ್ರ ನಾಯ್ಕ, ಶುಭಾ ದೇವಿಪ್ರಸಾದ್, ನಿರ್ಮಲಾ ನಾಗೇಶ್,…
ಸ್ವರ್ಗ… (ಅಸಹಾಯಕರ ಅರಮನೆ) ಇಂತಹದೊಂದು ಚಿಂತನೆ ಮಾಡಿದ್ದೆವು. ಇಂದು ಬಂದ ಕರೆಯೊಂದು ನಿಜಕ್ಕೂ ಆಶ್ಚರ್ಯಕರವಾಗಿತ್ತು. ಇದೆಂತಹ ಅರಮನೆ ಮಾರ್ರೆ ಒಂದು ಮುಚ್ಚಿದ ಶಾಲೆಗೆ ಸುಣ್ಣಬಣ್ಣ ಹಾಕಿದ್ರಿ ಅರಮನೆ ಅನ್ನೋಕೆ ಅದ್ರಲ್ಲೆಂತ ಸ್ಪೆಷಲ್ ಇದೆ? ಅಂದ್ರು. ನಾನು ಬ್ಯುಸಿ ಇದ್ದೆ ಹಾಗಾಗಿ “ನಿಮ್ಮಲ್ಲಿ ಮತ್ತೆ ಮಾತಾಡುತ್ತೇನೆ” ಎಂದು ಹೇಳಿ ಫೋನಿಟ್ಟೆ. ಆ ಮನುಷ್ಯನ ಕಲ್ಪನೆಯಲ್ಲಿ ಬಹುಷಃ ಮೈಸೂರು ಅರಮನೆ ಇದ್ದಿರಬೇಕು. ಆದರೆ ದಿನವಿಡೀ ಅವರು ಹೇಳಿದ ಮಾತು “ಅದೆಂತ ಅರಮನೆ?” ಎಂಬುದು ಕಿವಿಯೊಳಗೆ ಪದೇ ಪದೇ ಝೇಂಕರಿಸುತಿತ್ತು. ಸಂಜೆಯ ಹೊತ್ತಿಗೆ ಈ ಪ್ರಶ್ನೆಗೆ ಉತ್ತರವೂ ಸಿಕ್ಕಿದ್ದು ಮಾತ್ರ ಕಾಕತಾಳೀಯ. ಸಂಜೆ ನಮ್ಮ ಆತ್ಮೀಯರಿಂದ ಕರೆಯೊಂದು ಬಂತು. ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬ ಅಸಹಾಯಕ ಪರಿಸ್ಥಿತಿಯಲ್ಲಿದ್ದಾನೆ. ಅನೇಕ ದಿನದಿಂದ ಕರೆ ಮಾಡುತ್ತಿದ್ದಾನೆ ಎಂದು ನನಗೆ ಕಾನ್ಫರೆನ್ಸ್ ಕಾಲ್ ಹಾಕಿದರು. ಆತ ಅಲೆಯುತ್ತಾ ಧರ್ಮಸ್ಥಳದ ನೇತ್ರಾವತಿ ಬಳಿ ಇದ್ದೀನಿ ಎಂದು ತನ್ನ ಕಷ್ಟವನ್ನು ತೋಡಿಕೊಂಡ. ಮಕ್ಕಳು ನೋಡಿಕೊಳ್ಳುತ್ತಿಲ್ಲ. ಹೃದಯದಲ್ಲಿ ಸಮಸ್ಯೆಯಿದೆ ಎಂದು ಹೇಳುವಾಗ ನಾನಂದೆ “ಏನೂ ಟೆನ್ಶನ್ ಮಾಡಬೇಡಿ…
ಮುಂಬಯಿ (ಆರ್‍ಬಿಐ), ಡಿ.26: ವಿದ್ಯಾಥಿರ್üಗಳೇ ಭ್ರಷ್ಟಾಚಾರ ವಿರೋಧಿ ನಿಲುವಿಗೆ ಬದ್ದರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಪಣತೊಡಿ ಎಂದು ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಸಂತೋಷ್ ಹೆಗ್ಡೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಇಂದಿಲ್ಲಿ ಎಸ್‍ವಿಟಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವರ್ಗೀಯ ಹಿರಿಯ ಪತ್ರಕರತ ಡಾ| ಶೇಖರ ಅಜೆಕಾರು ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಜಸ್ಟೀಸ್ ಹೆಗ್ಡೆ ಮಾತನಾಡಿ ವಿದ್ಯಾರ್ಥಿಗಳು ಸಮಾಜದ ಕಣ್ಣುಗಳು ಅವರೆ ಸಮಾಜವನ್ನು ಬದಲಾಯಿಸುವವರು. ಮಾನವೀಯತೆಯನ್ನು ರೂಢಿಸಿಕೊಂಡು, ಶಾಂತಿ ಸೌಹಾರ್ದ ಭಾವನೆಯನ್ನು ಕಾಪಾಡಿಕೊಳ್ಳಿ ಎಂದರು. ಪತ್ರಕರ್ತ ಬಿ.ಎಂ ಬಶೀರ್ ಅವರಿಗೆ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಲಾಯಿತು. ಶೇಖರ ಅಜೆಕಾರು ಸಾಹಿತ್ಯ ಸಂಘಟಕರಾಗಿದ್ದು ಜನಮೆಚ್ಚುಗೆ ಪಾತ್ರರಾದವರು.ಊರಿಗೆ ಹಾಗೂ ಮುಂಬಯಿ ಜನರಿಗೆ ಸ್ನೇಹ ಸೇತುವಾಗಿದ್ದು ಅವರು ಸೂಕ್ಷ್ಮ ಸಂವೇದನೆ ಹೊಂದಿದ್ದರು ಎಂದ ಪ್ರಶಸ್ತಿಗೆ ಉತ್ತರಿಸಿ ಬಶೀರ್ ತಿಳಿಸಿ ಪ್ರಶಸ್ತಿಯ ಒಟ್ಟು ನಗದು ಮೊತ್ತವನ್ನು ಸೌಮ್ಯಶ್ರೀ ಶೇಖರ ಅಜೆಕಾರು ಅವರಿಗೆ ಹಸ್ತಾಂತರಿಸಿದರು . ಎಸ್‍ವಿಟಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಪಿ ಶೆಣೈ…
ಮೂಡುಬಿದಿರೆ: ‘ಆಧುನಿಕ ಜಗತ್ತಿನಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಅಗತ್ಯ’ ಎಂದು ಭಾರತ ಸರ್ಕಾರದ ಆಯುಷ್ ಸಚಿವಾಲಯದ ನಿರ್ದೇಶಕ ಡಾ. ರಾಘವೇಂದ್ರ ರಾವ್ ಹೇಳಿದರು. ಆಳ್ವಾಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಕರಿಗಾಗಿ ನಡೆದ ಆರು ದಿನಗಳ ರಾಷ್ಟ್ರೀಯ ಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು. ಕಳೆದ ಹಲವು ದಶಕಗಳಿಂದ ಅಸಾಂಕ್ರಾಮಿಕ ರೋಗಗಳು ಇಡೀ ಜಗತ್ತಿನಲ್ಲಿ ವ್ಯಾಪಕವಾಗಿ ಹರಡುತ್ತಿರುವುದು ಕಂಡುಬAದಿದೆ. ಈ ನಿಟ್ಟಿನಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ವೈದ್ಯರು ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ನಡೆಸಿ ಸಮಾಜದ ಆರೋಗ್ಯಕ್ಕಾಗಿ ಮತ್ತು ಪ್ರಕೃತಿ ಚಿಕಿತ್ಸೆ ಹಾಗೂ ಯೋಗವನ್ನು ಮುಖ್ಯ ವಾಹಿನಿಗೆ ತರುವಲ್ಲಿ ಯಾವ ರೀತಿ ಕಾರ್ಯಪ್ರವೃತ್ತರಾಗಬೇಕು ಎಂದರು. ಕೇಂದ್ರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಸಂಸ್ಥೆಯ ಸಂಶೋಧನೆ ಮತ್ತು ನೋಡಲ್ ಅಧಿಕಾರಿ, ಡಾ. ವಾದಿರಾಜ್ ಮಾತನಾಡಿ, ನಿರಂತರ ವೈದ್ಯಕೀಯ ಶಿಕ್ಷಣ ಪ್ರತಿಯೊಂದು ಶಿಕ್ಷಣ ಸಂಸ್ಥೆಗಳಲ್ಲೂ ನಡೆಯಬೇಕು. ಪ್ರಕೃತಿ ಚಿಕಿತ್ಸೆ ಮತ್ತು…
ಕಾರ್ಕಳ : ಜ್ಞಾನಸುಧಾ ಕಾರ್ಕಳದ ಆಸ್ತಿಯಾಗಿದ್ದು, ಸಂಸ್ಕಾರ, ಸದ್ವಿಚಾರದ ಅಡಿಪಾಯವನ್ನು ಶಿಕ್ಷಣದ ಜೊತೆಗೆ ನೀಡುತ್ತಿರುವ ಇಲ್ಲಿನ ಕಾರ್ಯ ಶ್ಲಾಘನೀಯ. ಡಾ.ಸುಧಾಕರ್ ಶೆಟ್ಟಿಯವರ ತಂಡದ ಸಂಘಟಿತ ಪ್ರಯತ್ನ ಪ್ರಶಂಸನೀಯ. ವಿದ್ಯಾರ್ಥಿಗಳು ನವಭಾರತವನ್ನು ನಿರ್ಮಿಸುವುದಕ್ಕಾಗಿ ಸಂಕಲ್ಪತೊಡಬೇಕು ಎಂದು ಕ್ಷೇತ್ರದ ಶಾಸಕರಾದ ಶ್ರೀ.ವಿ.ಸುನಿಲ್ಕು ಮಾರ್ ನುಡಿದರು.ಅವರು ಗಣಿತನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಡಿಸೆಂಬರ್ 22, 2024ರಂದು ನಡೆದ ಜ್ಞಾನಸುಧ ಸಂಸ್ಥಾಪಕರ ಹಾಗೂ ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ಸಾಧಕ ವಿದ್ಯಾರ್ಥಿಳಿಗೆ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಎಂ.ಆರ್.ಜಿ.ಗ್ರೂಪ್‍ಗಳ ಸಂಸ್ಥಾಪಕ ಹಾಗೂ ಉದ್ಯಮಿಗಳಾದ ಶ್ರೀ ಕೆ. ಪ್ರಕಾಶ್ ಶೆಟ್ಟಿಯವರು, ಸಮಾಜದ ಋಣವನ್ನು ತೀರಿಸುವ ಕೆಲಸ ನಮ್ಮಿಂದಾದಾಗ ಬದುಕು ಸಾರ್ಥಕ. ಅಂತಹ ಮಾದರಿಗಳನ್ನು ತೋರಿಸುತ್ತಿರುವ ಜ್ಞಾನಸುಧಾದ ಕಾರ್ಯ ಆದರ್ಶನೀಯ. ಜ್ಞಾನಸುಧಾ ಜ್ಞಾನದ ಭಂಡಾರವಾಗಿದೆ. ಇಲ್ಲಿನ ಕಾರ್ಯ ರಾಷ್ಟ್ರಕ್ಕೆ ಮಾದರಿ. ಡಾ.ಸುಧಾಕರ್ ಶೆಟ್ಟಿಯವರಿಂದ ಶಿಕ್ಷಣದ ಕ್ರಾಂತಿ ನಡೆಯುತ್ತಿದೆ ಎಂದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ತಾಂತ್ರಿಕ ಶಿಕ್ಷಣದ ನಿರ್ದೇಶಕರಾದ ಶ್ರೀ…
ವಿದ್ಯಾಗಿರಿ: ‘ಸರ್ಟಿಫಿಕೆಟ್‌ಗಿಂತ ಸಂಸ್ಕಾರ ಮುಖ್ಯ. ಶಿಕ್ಷಣವು ಸಂಸ್ಕಾರಭರಿತ ಮನಸ್ಸನ್ನು ಕಟ್ಟುವ ಪ್ರಕ್ರಿಯೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಹೇಳಿದರು.ಆಳ್ವಾಸ್ ಮುಂಡ್ರೆದೆಗುತ್ತು ಕೆ ಅಮರನಾಥ ಶೆಟ್ಟಿ ಕೃಷಿಸಿರಿ ವೇದಿಕೆಯಲ್ಲಿ ಗುರುವಾರ ನಡೆದ ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಶಾಲೆಗಳ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾವಂತರಾದವರೇ ಸಮಾಜಘಾತುಕ ಕಾರ್ಯಗಳಲ್ಲಿ ತೊಡಗಿಕೊಂಡರೆ ಅಂತಹ ವಿದ್ಯೆಗೆ ಏನು ಬೆಲೆ? ಮಾನವೀಯ ಸಂವೇದನೆಯನ್ನುAಟು ಮಾಡುವ ಶಿಕ್ಷಣ ನಮಗೆ ಬೇಕಾಗಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಂತಹ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ನಾವು ಅಕ್ಷರಸ್ಥರಾದರೆ ಸಾಲದು. ನಾವು ವಿದ್ಯಾಂತರಾಗಬೇಕು. ಅಕ್ಷರಸ್ಥರೆಲ್ಲರೂ ವಿದ್ಯಾವಂತರಾಗಲು ಸಾಧ್ಯವಿಲ್ಲ. ಸಂಸ್ಕಾರ ಭರಿತ ಅಕ್ಷರಸ್ಥ ಮಾತ್ರ ವಿದ್ಯಾವಂತ. ಅಕ್ಷರ ಕಲಿತ ವ್ಯಕ್ತಿ ದುಷ್ಟನೂ, ಭ್ರಷ್ಟನೂ ಆಗಬಹುದು. ಆದರೆ ಸಂಸ್ಕಾರ ಕಲಿತ ವ್ಯಕ್ತಿ ಎಂದಿಗೂ ದುಷ್ಟ, ಭ್ರಷ್ಟ ಆಗಲಾರ. ಅಕ್ಷರಸ್ಥರಿಗೂ ವಿದ್ಯಾವಂತರಿಗೂ ಇರುವ ವ್ಯತ್ಯಾಸವನ್ನು ನಾವು ತಿಳಿದುಕೊಳ್ಳಬೇಕು…
ಕಾರ್ಕಳ : ಐ.ಸಿ.ಎ.ಐ ನಡೆಸಿದ 2024ರ ನವೆಂಬರ್ – ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಹಳೆವಿದ್ಯಾರ್ಥಿಗಳಾದ, ಕಾರ್ಕಳ ಕಾಬೆಟ್ಟು ನಿವಾಸಿ ವಿಶ್ವನಾಥ ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿಗಳ ಸುಪುತ್ರನಾದ ಸೋಮನಾಥ್ ವಿ. ಶೆಟ್ಟಿ, ಜಾರ್ಕಳದ ಮೋಹನ್ ಕಿಣಿ ಮತ್ತು ಶುಭಾ ಕಿಣಿ ದಂಪತಿಗಳ ಸುಪುತ್ರಿಯಾದ ಸ್ವಾತಿ ಕಿಣಿ ಮತ್ತು ಬೈಲೂರು ರಮೇಶ್ ಶೆಟ್ಟಿ ಮತ್ತು ಶಾಲಿನಿ ಶೆಟ್ಟಿ ದಂಪತಿಗಳ ಸುಪುತ್ರಿಯಾದ ರಕ್ಷಾ ಶೆಟ್ಟಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಇವರ ಸಾಧನೆಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಹಾಗೂ ಜ್ಞಾನಸುಧಾ ಪರಿವಾರವು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿರುತ್ತಾರೆ.
2019 ರಿಂದ ಆಯೋಜಿಸಿಕೊಂಡು ಬಂದಿರುವ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಯೋಜನೆಯ “ನೆರವು” ಸಹಾಯಹಸ್ತ ಪ್ರದಾನ ಕಾರ್ಯಕ್ರಮ ಬುಧವಾರ ಸಂಜೆ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತನಾಡಿದ ಎಂ.ಆರ್.ಜಿ ಗ್ರೂಪ್ ಛೇರ್ಮನ್ ಡಾ| ಕೆ.ಪ್ರಕಾಶ್ ಶೆಟ್ಟಿ ಅವರು, “ನನ್ನ 60ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಸಮಾಜಕ್ಕೆ ನನ್ನಿಂದ ಕಿಂಚಿತ್ತು ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಂದಿನಿಂದ ಸತತವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಇಂದು ನನ್ನ ಬಾಳಿನಲ್ಲಿ ಅತ್ಯಂತ ಖುಷಿಯ ದಿನ. ನನ್ನ ಈ ಕಾರ್ಯಕ್ಕೆ ನನ್ನ ಪತ್ನಿ, ಮಗ, ಸೊಸೆ ಸಹಿತ ಕುಟುಂಬದ ಸದಸ್ಯರು ಸಹಕಾರ ನೀಡುತ್ತಿದ್ದಾರೆ. ಮೊದಲ ವರ್ಷದಲ್ಲಿ 1 ಕೋಟಿ 25 ಲಕ್ಷ ರೂ. ನೆರವು ನೀಡಿದ್ದು, ಅದು ಇಂದು 6 ಕೋಟಿ ರೂ. ಗಡಿಯನ್ನು ದಾಟಿದೆ. ಇಂದು ಇಲ್ಲಿ ಸಮಾರಂಭ ನಡೆಸಿ ನೆರವು ನೀಡುವ ಉದ್ದೇಶ ಇಷ್ಟೇ. ಇಂತಹ ಕಾರ್ಯಕ್ರಮ ಇಂದು…
ಡ್ರಗ್ಸ್ ಜಾಲ ಚಕ್ರವ್ಯೂಹ ಇದ್ದಂತೆ. ಇದರಿಂದ ಹೊರಬರುವುದು ಕಷ್ಟ ಈ ಬಗ್ಗೆ ಯೋಚಿಸಲೂ ಬೇಡಿ. ಮಾದಕ ವಸ್ತುಗಳು ನಿಮ್ಮ ಗುರಿ ಸಂತೋಷವನ್ನೇ ಕೊಲ್ಲುತ್ತವೆ. ಹೀಗೆ ಯುವ ಸಮುದಾಯಕ್ಕೆ ಎಚ್ಚರಿಕೆ ನೀಡಿದವರು ವೈದ್ಯರು, ಶಿಕ್ಷಣ ತಜ್ಞರು, ನೌಕರರ ವಲಯದ ಪರಿಣಿತರು, ಉದ್ಯಮಿಗಳು. ವಿಜಯ ಕರ್ನಾಟಕ ದಿನಪತ್ರಿಕೆ, ಧಾರವಾಡ ಜಿಲ್ಲಾ ನೌಕರರ ಸಂಘದ ಸಹಯೋಗದೊಂದಿಗೆ ನೌಕರ ಭವನದಲ್ಲಿ ಆಯೋಜಿಸಿದ್ದ ಮಾದಕ ವಸ್ತು ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ವೈದ್ಯರು, ಶಿಕ್ಷಣ ತಜ್ಞರು ತಾವು ಕಂಡ ಕೆಲ ಅನುಭವಗಳ ಚಿತ್ರಣ ತೆರೆದಿಡುವ ಜತೆಗೆ ಹೇಗೆ ಮಾರಕವಾಗಿದೆ ಎಂಬುದನ್ನು ಔಚಿತ್ಯಪೂರ್ಣವಾಗಿ ತೆರೆದಿಟ್ಟರು. ನೂರಾರು ಸಂಖ್ಯೆಯಲ್ಲಿ ಸೇರಿದ ವಿದ್ಯಾರ್ಥಿಗಳು ಆಸಕ್ತಿಯಿಂದ, ತದೇಕ ಚಿತ್ತದಿಂದ ಎಲ್ಲರ ಭಾಷಣಗಳನ್ನೂ ಕೇಳಿದರು. ಡ್ರಗ್ಸ್ ವ್ಯಸನಿಗಳ ಬದುಕು ಹಾಳಾಗಿರುವ ವಾಸ್ತವತೆಯನ್ನು ಬಿಚ್ಚಿಟ್ಟ ಪಂಜುರ್ಲಿ ಹೋಟೆಲ್ಸ್ ಸಮೂಹದ ಸಂಸ್ಥಾಪಕ ರಾಜೇಂದ್ರ ಶೆಟ್ಟಿ ನಾನು ಮುಂಬಯಿಯಲ್ಲಿ ಚಾ ಮಾರುತ್ತಿದ್ದಾಗ ಅದೆಷ್ಟೋ ಜನ ಡ್ರಗ್ಸ್ ನಿಂದಲೇ ವೈಯಕ್ತಿಕ ನೆಮ್ಮದಿ, ಕೆಲವರು ಕುಟುಂಬ, ಕೆಲವರು ಜೀವ ಕಳೆದುಕೊಂಡಿದ್ದಾರೆ. ಮಾದಕ ವಸ್ತು, ದೇಶಕ್ಕೆ…
ಉತ್ತರದ ಹಂಪಿ, ಪಟ್ಟದಕಲ್ಲು, ಬೇಲೂರು ಹಳೇಬೀಡು, ಅಜಂತ ಎಲ್ಲೋರ ಹರಪ್ಪ ಮೊಹಂಜದಾರೊ ಮುಂತಾದ ಸ್ಥಳಗಳು ಗತಕಾಲದ ಕಲೆಯ ಶಿಲಾಲಯಗಳು ನಿತ್ಯ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಹಾಗೆಯೇ ತುಳುನಾಡಿನ ಉಡುಪಿ ಜಿಲ್ಲೆಯ ತೌಳವ ರಾಜಧಾನಿ ಬಾರ್ಕೂರು, ನೀಲಾವರ, ಬಸ್ರೂರು, ಚೌಳಿಕೇರಿ, ಕತ್ತಲೆ ಬಸದಿ, ಸೂರಾಲು ಮಣ್ಣಿನ ಅರಮನೆ ಇತ್ಯಾದಿ ನೂರಾರು ಸ್ಥಳಗಳಲ್ಲಿ ಪುರಾತನ ಶಿಲಾಶಾಸನ ಕಲ್ಲುಗಳಿವೆ. ಇಲ್ಲಿ ಪ್ರಸ್ತಾಪಿಸುತ್ತಿರುವ ದುಃಖದ ಸಂಗತಿ ಎಂದರೆ, ಕೆಲವು ದೇವಾಲಯದ ಸಮೀಪ ಇರಿಸಲಾದ ಶಾಸನ ಕಲ್ಲುಗಳನ್ನು ಸ್ವಲ್ಪ ಮಟ್ಟಿನಲ್ಲಿ ಅಚ್ಚುಕಟ್ಟುತನದಲ್ಲಿ ಇರಿಸಲಾಗಿದೆ. ಆದರೆ ಉಳಿದ ಹೆಚ್ಚಿನ ಪೌರಾಣಿಕ ಸ್ಥಳಗಳಲ್ಲಿ ಶಾಸನ ಕಲ್ಲುಗಳು ಅನಾಥವಾಗಿ ಬಿದ್ದುಕೊಂಡಿರುವುದನ್ನು ಕಾಣಬಹುದು. ಆದರೆ ಎಲ್ಲಿಯೂ ಆ ಶಾಸನ ಕಲ್ಲಿನ ವಿವರವನ್ನು ತಿಳಿಸುವ ಭಾಗ್ಯವಿಲ್ಲ. ಅದರಲ್ಲೂ ನೀಲಾವರ ಶ್ರೀ ಮಹಿಷಮರ್ದಿನಿ ಕ್ಷೇತ್ರದ ಹೊರಾವರಣ ಸೀತಾ ನದಿಯ ಪ್ರಶಾಂತ ತಾಣದ ದಡದಲ್ಲಿ ಸಾಲಾಗಿ 8 ಶಾಸನ ಕಲ್ಲುಗಳಿವೆ. ಕೆಲವು ಐದಾರು ಅಡಿ ಎತ್ತರ ಮೂರು ಅಡಿ ಅಗಲವಿದೆ. ಬಾರ್ಕೂರಿನ ಚೌಳಿಕೇರಿ ಶ್ರೀ ಮಹಾಗಣಪತಿ ದೇವಾಲಯ ಶಿಲೆಗಳ…