ಕಲಾಪ್ರಕಾಶ ಪ್ರತಿಷ್ಠಾನ (ರಿ.) ಮುಂಬಯಿ ಇವರ ಸಂಯೋಜನೆಯಲ್ಲಿ ಪ್ರಶಸ್ತಿ ವಿಜೇತ ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ ಕಾಟಿಪಳ್ಳ ಕಲಾವಿದರು ಅಭಿನಯಿಸುವ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಪೂರ್ಣಿಮಾ ಯತೀಶ್ ರೈ ನಿರ್ದೇಶನದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ಜುಲೈ 26 ರಂದು ಹೊಟೇಲ್ ಗ್ಯಾಲಕ್ಸಿ ನಾಲಾಸೋಪಾರ (ಪ) ಇಲ್ಲಿ ನಡೆಯಿತು. ಯಕ್ಷಗಾನದ ಮಧ್ಯಂತರದಲ್ಲಿ ತಂಡದ ನಿರ್ದೇಶಕಿ ಸುಮಾರು ಒಂದು ಸಾವಿರಕ್ಕೂ ಮಿಕ್ಕಿ ಮಹಿಷಾಸುರ ಪಾತ್ರದಲ್ಲಿ ಸಂಭ್ರಮಿಸಿದ ಪೂರ್ಣಿಮಾ ಯತೀಶ್ ರೈ, ತೆಂಕುತಿಟ್ಟಿನ ಹಿರಿಯ ಚೆಂಡೆ ವಾದಕ ಸುಬ್ರಹ್ಮಣ್ಯ ಭಟ್ ದೇಲಂತ ಮಜಲು ಹಾಗೂ ಕಟೀಲು ಮೇಳದ ಭಾಗವತ ಸತೀಶ್ ಬೊಂದೆಲ್ ಇವರನ್ನು ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತುಳುಕೂಟ ಫೌಂಡೇಶನ್ ನಾಲಾಸೋಪಾರ ಅಧ್ಯಕ್ಷ ಶಶಿಧರ ಕೆ ಶೆಟ್ಟಿ ಇನ್ನಂಜೆ ಮಾತನಾಡುತ್ತಾ, ಕಲೆ ಮತ್ತು ಕಲಾವಿದರಿಗೆ ನಿರಂತರವಾಗಿ ಈ ಪರಿಸರದ ಎಲ್ಲಾ ಕಲಾಪೋಷಕರು ಸಹಕಾರವನ್ನು ನೀಡುತ್ತಾ ಬಂದವರು. ಪ್ರಕಾಶ್ ಶೆಟ್ಟಿ ಅವರು ಊರಿನಿಂದ ನಾಟಕ, ಯಕ್ಷಗಾನ ತಂಡಗಳನ್ನು ಮುಂಬೈಗೆ ಬರಮಾಡಿಸಿ ಅವರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಇಂತಹ ಸಂಘಟಕರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಸಾಯಿ ತಾಲೂಕಿನಲ್ಲಿ ಮೂರು ಯಕ್ಷಗಾನ ಶಿಬಿರಗಳಿವೆ. ಆ ಮೂಲಕ ಮಕ್ಕಳು ಮತ್ತು ಯಕ್ಷಗಾನ ಆಸಕ್ತರು ಯಕ್ಷಗಾನವನ್ನು ಅಭ್ಯಾಸ ಮಾಡುವ ಅವಕಾಶ ಲಭಿಸಿದೆ ಎಂದು ನುಡಿದರು.
ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ವಸಾಯಿ ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಎನ್ ಶೆಟ್ಟಿ ಕೊಡ್ಲಾಡಿ, ಸುರೇಶ್ ಶೆಟ್ಟಿ ಕೊಪ್ಪ (ಪಾಲುದಾರರು, ಹೋಟೆಲ್ ಲೇ ವಿವಾಂತ ವಿರಾರ್), ದೇವೇಂದ್ರ ಬಿ ಬುನ್ನನ್ (ಅಧ್ಯಕ್ಷರು, ವಸಾಯಿ ಕರ್ನಾಟಕ ಸಂಘ), ಸದಾಶಿವ ಎ ಕರ್ಕೇರ (ಅಧ್ಯಕ್ಷರು, ವಿರಾರ್ ನಾಲಾಸೋಪಾರ ಕರ್ನಾಟಕ ಸಂಸ್ಥೆ), ಓ.ಪಿ ಪೂಜಾರಿ (ಗೌ ಪ್ರ ಕಾರ್ಯದರ್ಶಿ, ಶ್ರೀ ಗುರುನಾರಾಯಣ ಸೇವಾ ಸಮಿತಿ ವಸಾಯಿ), ಕರುಣಾಕರ ಜಿ ಅಮೀನ್ (ಕಾರ್ಯಾಧ್ಯಕ್ಷರು, ಬಿಲ್ಲವರ ಎಸೋಸಿಯೇಶನ್ ವಸಾಯಿ ಸ್ಥಳೀಯ ಕಚೇರಿ), ಮೋಹನ್ ಬಿ ಶೆಟ್ಟಿ (ಹೋಟೆಲ್ ಸರೋವರ್, ನಾಲಾಸೋಪಾರ), ಜಗನ್ನಾಥ್ ಡಿ ಶೆಟ್ಟಿ ಪಳ್ಳಿ (ಕಾರ್ಯದರ್ಶಿ, ಬಂಟರ ಸಂಘ ಮುಂಬಯಿ ವಸಾಯಿ ದಹಾಣು ಪ್ರಾದೇಶಿಕ ಸಮಿತಿ), ದಯಾನಂದ್ ಬೊಂಟ್ರ (ಉದ್ಯಮಿ, ಕಲಾ ಪೋಷಕರು), ಉಷಾ ಶ್ರೀಧರ ಶೆಟ್ಟಿ (ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ, ವಸಾಯಿ ಕರ್ನಾಟಕ ಸಂಘ), ಮೋಹಿನಿ ಸಂಜೀವ ಮಲ್ಪೆ (ಮಾಜಿ ಕಾರ್ಯಾಧ್ಯಕ್ಷೆ ಮಹಿಳಾ ವಿಭಾಗ, ವಸಾಯಿ ಕರ್ನಾಟಕ ಸಂಘ), ಸತೀಶ್ ಶೆಟ್ಟಿ ಅಡ್ವೆ ನಂದಿಕೂರು (ರೋಯಲ್ ಮಾರ್ಕೆಟಿಂಗ್) ಇವರುಗಳು ಪಾಲ್ಗೊಂಡಿದ್ದರು.
ತಂಡದ ನಿರ್ದೇಶಕಿ ಪೂರ್ಣಿಮಾ ಯತೀಶ್ ರೈ ಮಾತನಾಡಿ, ಈ ನಗರದಲ್ಲಿ ತಮ್ಮ ಯಕ್ಷಗಾನವನ್ನು ಪ್ರದರ್ಶಿಸಲು ಅವಕಾಶ ಲಭಿಸಿದೆ. ಇದಕ್ಕೆ ಮುಖ್ಯವಾಗಿ ಮುಂಬೈಯ ದಾನಿಗಳು ಕಾರಣರಾಗಿದ್ದಾರೆ. ಅವರ ಕಲಾ ಪ್ರೋತ್ಸಾಹ ನಮಗೆ ಸ್ಪೂರ್ತಿಯಾಗಿದೆ ಎಂದು ನುಡಿದರು. ಅತಿಥಿಗಳಿಗೆ ತಂಡದ ಮುಂಬೈ ಸಂಚಾಲಕ ಪ್ರಕಾಶ್ ಎಂ ಶೆಟ್ಟಿ ಸುರತ್ಕಲ್ ಮತ್ತು ಪೂರ್ಣಿಮಾ ರೈ ಗೌರವಿಸಿದರು. ಕಾರ್ಯಕ್ರಮವನ್ನು ಸಂಘಟಕ ವಿಜಯ್ ಶೆಟ್ಟಿ ಕುತ್ತೆತ್ತೂರು ನಿರೂಪಿಸಿದರು. ಪ್ರವೀಣ್ ಶೆಟ್ಟಿ ಕಣಂಜಾರು, ಸುಪ್ರೀತ್ ಶೆಟ್ಟಿ ನೀರೆ ಸಹಕರಿಸಿದರು.
ಚಿತ್ರ, ವರದಿ : ದಿನೇಶ್ ಕುಲಾಲ್