ಬಂಟರ ಸಂಘ ಫರಂಗಿಪೇಟೆ ವಲಯದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮತ್ತು ಆಟಿದ ಗಮ್ಮತ್ ಕಾರ್ಯಕ್ರಮ ಬಂಟವಾಳದ ಬಂಟರ ಭವನದ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಜುಲೈ 27 ರಂದು ಜರಗಿತು. ಮಾಜಿ ಸಚಿವ ಬಿ ರಮಾನಾಥ ರೈಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬಂಟ ಸಮುದಾಯ ಇತರ ಸಮುದಾಯದವರನ್ನು ಗೌರವಿಸುವ ಸಮಾಜ. ಅದಕ್ಕಾಗಿಯೇ ನಮಗೆ ಇತರ ಸಮಾಜದವರು ಕೂಡಾ ನಾಯಕತ್ವವನ್ನು ನೀಡುತ್ತಾರೆ. ನಾವಾಗಿಯೇ ನಾಯಕತ್ವವನ್ನು ಪಡೆದಿರುವುದಲ್ಲ. ಇತರರು ನಮಗೆ ನೀಡಿರುವುದೆಂದು ಹೇಳಿದರು. ವಿಶ್ವನಾಥ ಶೆಟ್ಟಿ ಕೊಟ್ಟಿಂಜ ಗುತ್ತು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಂಟ ಸಮುದಾಯ ಸಾಹಸಿ ಪ್ರವೃತ್ತಿಯವರು. ಎಲ್ಲಾ ರಂಗಗಳಲ್ಲಿಯೂ ಬಂಟರು ತನ್ನ ವಿಶೇಷ ಛಾಪು ಮೂಡಿಸಿದ್ದಾರೆ ಎಂದು ಶಶಿ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಬರೋಡ ಇದರ ಸಿಎಂಡಿ ಶಶಿಧರ ಶೆಟ್ಟಿ ಬರೋಡರವರು ಭಾಗವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ನಿಟ್ಟೆ ಗುತ್ತು ರವಿರಾಜ್ ಶೆಟ್ಟಿ, ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷರಾದ ಜಗನ್ನಾಥ ಚೌಟ ಮಾಣಿ ಬದಿಗುಡ್ಡೆ, ನೂತನ ಪ್ರಧಾನ ಕಾರ್ಯದರ್ಶಿ ಸದಾನಂದ ಆಳ್ವ ಕಂಪ, ನೂತನ ಉಪಾಧ್ಯಕ್ಷರಾದ ಐತಪ್ಪ ಆಳ್ವ ಸುಜೀರು ಗುತ್ತು, ತುಳು ಅಕಾಡೆಮಿ ಮಾಜಿ ಸದಸ್ಯೆ ವಿಜಯ ಶೆಟ್ಟಿ ಸಾಲೆತೂರು, ಬಂಟರ ಸಂಘ ಫರಂಗಿಪೇಟೆ ವಲಯದ ಗೌರವಾಧ್ಯಕ್ಷರಾದ ಸುಂದರ ಶೆಟ್ಟಿ ಕಲ್ಲತಡಮೆ, ಅಧ್ಯಕ್ಷರಾದ ದೇವದಾಸ್ ಶೆಟ್ಟಿ ಕೊಡ್ಮಣ್, ಕಾರ್ಯದರ್ಶಿ ಗಿರೀಶ್ ಶೆಟ್ಟಿ ಕುಂಪನಮಜಲು, ಕೋಶಾಧಿಕಾರಿ ಪ್ರತಾಪ್ ಆಳ್ವ ಸುಜೀರು ಗುತ್ತು ಉಪಸ್ಥಿತರಿದ್ದರು.
ನೂತನ ಸಮಿತಿಗೆ ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಕೊಟ್ಟಿಂಜ ಗುತ್ತು, ಕಾರ್ಯದರ್ಶಿಯಾಗಿ ಹರಿಶ್ಚಂದ್ರ ಆಳ್ವ, ಕೋಶಾಧಿಕಾರಿಯಾಗಿ ಕೃಷ್ಣ ಶೆಟ್ಟಿ ತುಂಬೆ ದೇಮುಂಡೆ, ಜತೆ ಕಾರ್ಯದರ್ಶಿಯಾಗಿ ದೇವದಾಸ್ ಶೆಟ್ಟಿ ತುಪ್ಪೆಕಲ್ಲು, ಸಂಘಟನಾ ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಕೊಟ್ಟಿಂಜ ಪದಗ್ರಹಣ ಸ್ವೀಕರಿಸಿದರು. ಮಹಿಳಾ ವಿಭಾಗದ ಅಧ್ಯಕ್ಷೆ ದೀಕ್ಷಾ ಎನ್ ಆಳ್ವ, ಕಾರ್ಯದರ್ಶಿ ಪವಿತಾ ರೈ ಉಪಸ್ಥಿತರಿದ್ದರು. ನೂತನ ಗೌರವಾಧ್ಯಕ್ಷರಾದ ನವೀನ್ ಶೆಟ್ಟಿ ಮುಂಡಾಜೆ ಗುತ್ತು ಇವರು ಪ್ರಾಸ್ತಾವಿಕ ಭಾಷಣದೊಂದಿಗೆ ಸ್ವಾಗತಿಸಿದರು. ಹರಿಶ್ಚಂದ್ರ ಆಳ್ವ ವಂದಿಸಿದರು. ಸುಮಾ ಎನ್ ಶೆಟ್ಟಿ ಮುಂಡಾಜೆಗುತ್ತು ನಿರೂಪಿಸಿದರು. ನಾಗರತ್ನ ರೈ ಸಹಕರಿಸಿದರು.
ಚಿತ್ರ, ವರದಿ : ದಿನೇಶ್ ಶೆಟ್ಟಿ ಕೊಟ್ಟಿಂಜ