ಬಾಂಬೇ ಬಂಟ್ಸ್ ಅಸೋಸಿಯೇಷನ್ ನ ಸಮಾಜ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ವೈದ್ಯರ ಸಮಾಲೋಚನಾ ಕಾರ್ಯಕ್ರಮ ಜುಲೈ 26ರಂದು ಶನಿವಾರ ಸಂಜೆ 5:00 ಗಂಟೆಗೆ ನವಿ ಮುಂಬಯಿ ಜೂಯಿ ನಗರದ ಬಂಟ್ಸ್ ಸೆಂಟರ್ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದ ಭಾರತಿ ಡಾ. ವೈ ಶಿವಾನಂದ ಶೆಟ್ಟಿ ವೇದಿಕೆಯಲ್ಲಿ (ಪ್ರಾಯೋಜಕರು, ಡಾ. ವೈ ಶಿವಾನಂದ ಶೆಟ್ಟಿ) ಅಸೋಸಿಯೇಷನ್ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಲಿದೆ.

ನಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುವ ಪ್ರಮುಖ ಆರೋಗ್ಯ ಕಾಳಜಿಗಳ ಕುರಿತು ಪ್ರಸಿದ್ಧ ವೈದ್ಯಕೀಯ ವೃತ್ತಿಪರರಿಂದ, ತಜ್ಞರಿಂದ ಭಾಷಣಗಳೊಂದಿಗೆ ಮಾಹಿತಿಯುಕ್ತ ವಿಚಾರ ಸಂಕೀರ್ಣವು ಜಾಗೃತಿ ಮೂಡಿಸುವುದು, ತಡೆಗಟ್ಟುವ ಆರೈಕೆಯನ್ನು ಪ್ರೋತ್ಸಾಹಿಸುವುದು ಮತ್ತು ಆರೋಗ್ಯಕರ ಭವಿಷ್ಯದತ್ತ ಆರೋಗ್ಯ ರಕ್ಷಣೆ, ಜೀವನ ಶೈಲಿ ರೋಗಗಳು, ಸಾಮಾನ್ಯ ಕ್ಯಾನ್ಸರ್ ಮತ್ತು ಮೂಳೆ ಚಿಕಿತ್ಸಾ ಆರೋಗ್ಯ ಪೂರ್ಣ ಮಾಹಿತಿಗಳನ್ನು ತಜ್ಞ ವೈದ್ಯರು ನೀಡಲಿದ್ದಾರೆ.ಮುಂಬಯಿಯ ಪ್ರಸಿದ್ಧ ವೈದ್ಯರುಗಳಾದ ಡಾ. ಸತ್ಯಪ್ರಕಾಶ ಶೆಟ್ಟಿ ಎಂಬಿ, ಡಿಸಿಎಚ್ (ಮುಂಬಯಿ), ಡಾ. ಸಂಗೀತಾ ಎಸ್. ಶೆಟ್ಟಿ ಎಂ.ಡಿ, ಡಿಜಿಓ (ಮುಂಬೈ), ಡಾ. ಶಿರೀಶ್ ಶೆಟ್ಟಿ ಎಂಎಸ್, ಎಂಸಿಎಚ್, ಡಾ. ಸುನೀಲ್ ಎಚ್. ಶೆಟ್ಟಿ ಎಂ.ಎಸ್, (ಆರ್ಥೋ), ಡಾ. ಅಶ್ವಿತಾ ಶೆಟ್ಟಿ, ಬಿಡಿಎಸ್, ಎಂಡಿಎಸ್, ಇವರೆಲ್ಲರೂ ಪಾಲ್ಗೊಂಡು ಸಮಾಜ ಬಾಂಧವರಿಗೆ ಆರೋಗ್ಯದ ಬಗ್ಗೆ ವೈದ್ಯಕೀಯ ಮಾಹಿತಿ ನೀಡಲಿರುವರು.
ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಐಕಳ ಕಿಶೋರ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಶೇಖರ್ ಆರ್. ಶೆಟ್ಟಿ, ಗೌರವ ಕೋಶಾಧಿಕಾರಿ ಸಿ.ಎ ವಿಶ್ವನಾಥ್ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿ ಜಯರಾಜ್ ರೈ, ಜೊತೆ ಕೋಶಾಧಿಕಾರಿ ಸಿ.ಎ ದಿವಾಕರ್ ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರತೀಕ್ ಪಿ ಶೆಟ್ಟಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಜಯ ಸಿ ಶೆಟ್ಟಿ, ಟ್ರಸ್ಟಿಗಳು, ಮಾಜಿ ಅಧ್ಯಕ್ಷರು, ವಿವಿಧ ಉಪ ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.