ಬಂಟರ ಸಂಘ ಕಾವೂರು ಇದರ 24ನೇ ವಾರ್ಷಿಕ ಮಹಾಸಭೆಯು ಮಾಲಾಡಿ ಕೋರ್ಟ್ ನ ಬಂಟರ ಭವನ ಕಾವೂರು ಕಟ್ಟಡದಲ್ಲಿ ಸಂಘದ ಅಧ್ಯಕ್ಷ ಆನಂದ್ ಶೆಟ್ಟಿ ಅಡ್ಯಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮುಖ್ಯ ಅತಿಥಿಯಾಗಿದ್ದರು.

ಶಾಸಕ ಡಾ. ಭರತ್ ಶೆಟ್ಟಿ ವೈ. ಮಾತನಾಡಿ, ಮಾಲಾಡಿ ಕೋರ್ಟ್ ನಲ್ಲಿ ಕಾವೂರು ಬಂಟರ ಭವನ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ಹಲವು ಮಂದಿ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಎಲ್ಲರ ಸಹಕಾರದ ಅಗತ್ಯವಿದ್ದು, ತಾನು ಈ ನಿಟ್ಟಿನಲ್ಲಿ ಸಹಕರಿಸುವುದಾಗಿ ಭರವಸೆ ನೀಡಿದರು. 25ನೇ ವರ್ಷದ ಮಹಾಸಭೆಯೊಳಗೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವಂತಾಗಲಿ. ಪ್ರತಿಯೊಬ್ಬರೂ ಸಮಾಜವನ್ನು ಕಟ್ಟಿ ಬೆಳೆಸುವ ಕೆಲಸ ಮಾಡಬೇಕು ಎಂದರು.
ಹುಬ್ಬಳ್ಳಿ ದಾರವಾಡ ಬಂಟರ ಸಂಘದ ಕಾರ್ಯದರ್ಶಿ ಪ್ರದೀಪ್ ಟಿ ಪಕ್ಕಳ, ಬಂಟರ ಸಂಘ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ರವಿರಾಜ್ ಶೆಟ್ಟಿ ನಿಟ್ಟೆ, ಬಂಟರ ಸಂಘ ಬಂಟ್ವಾಳ ಅಧ್ಯಕ್ಷ ಜಗನ್ನಾಥ ಚೌಟ, ಸುರತ್ಕಲ್ ಬಂಟರ ಸಂಘ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ, ಕಾವೂರು ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ಶೆಟ್ಟಿ ಸರಪಾಡಿ, ಕಟ್ಟಡ ಸಮಿತಿ ಅಧ್ಯಕ್ಷ ಸುಧಾಕರ್ ಶೆಟ್ಟಿ ಮುಗ್ರೋಡಿ, ಆರ್ಥಿಕ ಸಮಿತಿ ಸಂಚಾಲಕ ವಿಠ್ಠಲ್ ಆಳ್ವ, ಉಪಾಧ್ಯಕ್ಷೆ ಗಿರಿಜಾತೆ ಆರ್ ಭಂಡಾರಿ, ತುಕಾರಾಂ ಶೆಟ್ಟಿ ತೋಡ್ಲ, ವಾಮನ ಶೆಟ್ಟಿ ಉರುಂದಾಡಿ, ಸದಾಶಿವ ಶೆಟ್ಟಿ ಬೊಲ್ಪುಗುಡ್ಡೆ, ಕಾರ್ಯದರ್ಶಿ ಅವಿನಾಶ್ ನಾಯ್ಕ್, ಚಂದ್ರರಾಜ್ ಶೆಟ್ಟಿ, ಗಣೇಶ್ ಮಲ್ಲಿ, ದಿವಾಕರ್ ಶೆಟ್ಟಿ, ಕಟ್ಟಡ ಸಮಿತಿ ಕೋಶಾಧಿಕಾರಿ ಶಂಭು ಶೆಟ್ಟಿ, ಹರೀಶ್ ಶೆಟ್ಟಿ ಶಿಲ್ಪಾ, ಪ್ರಸಾದ್ ರೈ ಕಾವೂರು, ಮನೋಜ್ ಚಂದ್ರ ಶೆಟ್ಟಿ, ಮೂಲ್ಕಿ ಕರುಣಾಕರ ಶೆಟ್ಟಿ, ಕಮಲಾಕ್ಷ ಶೆಟ್ಟಿ, ಮಹಾಬಲ ಶೆಟ್ಟಿ, ಲೋಕೇಶ್ ಭಂಡಾರಿ, ಪ್ರಕಾಶ್ ಶೆಟ್ಟಿ, ವಿಠ್ಠಲ್ ಶೆಟ್ಟಿ, ರತ್ನಾಕರ ಶೆಟ್ಟಿ, ಮಹಿಳಾ ವೇದಿಕೆ ಕಾರ್ಯದರ್ಶಿ ರೇಖಾ ಶೆಟ್ಟಿ, ಕೋಶಾಧಿಕಾರಿ ಶ್ಯಾಮಲಾ ಡಿ. ಶೆಟ್ಟಿ, ಹರುಷ ಶೆಟ್ಟಿ ಇದ್ದರು.
ಕೋಶಾಧಿಕಾರಿ ಲಕ್ಷ್ಮೀನಾರಾಯಣ ಶೆಟ್ಟಿ ವರದಿ ವಾಚನ ಮತ್ತು ಲೆಕ್ಕಪತ್ರ ಮಂಡಿಸಿದರು. 75ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾದ ದಿನೇಶ್ ಕುಮಾರ್ ಶೆಟ್ಟಿ ವಾಚಿಸಿದರು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ 90 ಶೇಕಡಾಕ್ಕಿಂತ ಅಧಿಕ ಅಂಕ ಗಳಿಸಿದ 9 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಿಎ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಮತ್ತು ಕರಾಟೆಯಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.
ಕಟ್ಟಡ ಸಮಿತಿ ಕಾರ್ಯದರ್ಶಿ ಸುಧಾಕರ್ ಆಳ್ವ ಸ್ವಾಗತಿಸಿದರು. ಮಹಿಳಾ ಸಂಘದ ಅಧ್ಯಕ್ಷೆ ಸುಜಯಾ ಶೆಟ್ಟಿ ವಂದಿಸಿ, ಡಾ. ಪ್ರಿಯಾ ಹರೀಶ್ ನಿರೂಪಿಸಿದರು. ಬಂಟರ ಮಹಿಳಾ ಸಂಘದಿಂದ ಭಜನೆ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.